Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮೇ 15ಕ್ಕೆ ಅಪರಾ ಏಕಾದಶಿ: ಈ ಏಕಾದಶಿ ಆಚರಣೆ ಮಾಡಿದರೆ ಸಿಗುವ ಮಹತ್ವದ ಫಲವೇನು ಗೊತ್ತೇ?
ಹಿಂದೂ ಕ್ಯಾಲೆಂಡರ್ ಪ್ರಕಾರ ಅಪರಾ ಏಕಾದಶಿ ಮೇ-ಜೂನ್ ನಡುವೆ ಬರುತ್ತದೆ. ಈ ವರ್ಷ ಮೇ 15ರಂದು ಅಪರಾ ಏಕಾದಶಿ ಆಚರಿಸಲಾಗುವುದು. ಜ್ಯೇಷ್ಠ ಮಾಸದ ಕೃಷ್ಣಪಕ್ಷದಲ್ಲಿ ಬರುವ ಏಕಾದಶಿಯನ್ನು ಅಪರಾ ಏಕಾದಶಿಯೆಂದು ಕರೆಯಲಾಗುವುದು.
ಅಪರಾ ಏಕಾದಶಿ ಮಹತ್ವವೇನು? ಪೂಜೆಗೆ ಶುಭಮುಹೂರ್ತ ಯಾವಾಗ? ಪಾರಣ ಸಮಯ ಯಾವಾಗ ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:
ಅಪರಾ ಏಕಾದಶಿ ದಿನಾಂಕ, ತಿಥಿ, ಶುಭಮುಹೂರ್ತ
ದಿನಾಂಕ ಮೇ 15
ತಿಥಿ ಪ್ರಾರಂಭ: ಮೇ 14 ರಾತ್ರಿ 02:46ರಿಂದ
ತಿಥಿ ಮುಕ್ತಾಯ: ಮೇ 15 ರಾತ್ರಿ 01:03ಕ್ಕೆ
ಪಾರಣ ಸಮಯ: ಮೇ 16 ಬೆಳಗ್ಗೆ 06:41ರಿಂದ 08:13ರವರೆಗೆ

ಅಪರ ಏಕಾದಶಿ ಉಪವಾಸದ ಪೂಜಾ ವಿಧಾನ
ಅಪರ ಏಕಾದಶಿಯಂದು ಉಪವಾಸ ಮಾಡುವುದರಿಂದ ಜನರು ಪಾಪಗಳಿಂದ ಮುಕ್ತಿ ಹೊಂದುತ್ತಾರೆ ಮತ್ತು ಭಾವಸಾಗರವನ್ನು ದಾಟುತ್ತಾರೆ. ಈ ಉಪವಾಸದ ಪೂಜಾ ವಿಧಾನ ಹೀಗಿದೆ:
*ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಬೇಕು
* ನಂತರ ಮಡಿ ಬಟ್ಟೆ ಧರಿಸಬೇಕು
* ನಂತರ ದೇವರ ಕೋಣೆ ಸ್ವಚ್ಛ ಮಾಡಿ, ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ
* ದೇವರಿಗೆ ಹಣ್ಣುಗಳು, ನೈವೇದ್ಯ ಅರ್ಪಿಸಿ.
* ಶ್ರೀವಿಷ್ಣುವಿನ ಪೂಜೆಯಲ್ಲಿ ತುಳಸಿ ಇರಲೇಬೇಕು.
* ಓಂ ನಮೋ ಭಗವತೀ ವಾಸುದೇವಾಯ ಮಂತ್ರ ಪಠಿಸಿ.
ಈ ದಿನ ಅಪರಾ ಏಕಾದಶಿ ಕತೆಯನ್ನು ಓದಿ.
* ಅಪರಾ ಏಕಾದಶಿಯ ಒಂದು ದಿನ ಮೊದಲು ಅಂದರೆ ದಶಮಿಯ ದಿನ ಸೂರ್ಯಾಸ್ತದ ನಂತರ ಆಹಾರ ಸೇವಿಸಬಾರದು. ರಾತ್ರಿ ದೇವರ ಧ್ಯಾನ ಮಾಡುತ್ತಾ ಮಲಗಬೇಕು.
*ಉಪವಾಸವನ್ನು ಮಾಡುವವರು ಮೋಸ, ಕೆಟ್ಟ ಕೆಲಸ ಮಾತನಾಡಬಾರದು. ಈ ದಿನ ಅನ್ನ ತಿನ್ನುವಂತಿಲ್ಲ, ಸುಳ್ಳು ಹೇಳುವಂತಿಲ್ಲ.
* ವಿಷ್ಣು ಸಹಸ್ರನಾಮವನ್ನು ಪಠಿಸಬೇಕು. ಏಕಾದಶಿಯಂದು ವಿಷ್ಣು ಸಹಸ್ರನಾಮವನ್ನು ಪಠಿಸುವ ವ್ಯಕ್ತಿಯು ವಿಷ್ಣುವಿನ ವಿಶೇಷ ಅನುಗ್ರಹವನ್ನು ಪಡೆಯುತ್ತಾನೆ.
ಅಪರಾ ಏಕಾದಶಿ ಉಪವಾಸದ ಮಹತ್ವ
ಪುರಾಣಗಳಲ್ಲಿ ಅಪಾರ ಏಕಾದಶಿಯ ಮಹತ್ವದ ಬಗ್ಗೆ ಹೇಳಲಾಗಿದೆ. ಧಾರ್ಮಿಕ ನಂಬಿಕೆ ಪ್ರಕಾರ ಈ ಏಕಾದಶಿ ಆಚರಿಸುವುದರಿಂದ ಪಿತೃದೋಷದಿಂದ ಮುಕ್ತಿ ಸಿಗುವುದು ಎಂದು ಹೇಳಲಾಗಿದೆ. ಗಂಗಾನದಿಯ ದಡದಲ್ಲಿ ಪೂರ್ವಜರಿಗೆ ಪಿಂಡವನ್ನು ಅರ್ಪಿಸುವುದರಿಂದ ಸಿಗುವ ಫಲ ಈ ಏಕಾದಶಿ ಆಚರಿಸುವುದರಿಂದ ಸಿಗಲಿದೆ. ದೇವಾಲಯಕ್ಕೆ ಹೋಗಿ ಹೋಮ, ಹವನಗಳನ್ನು ಮಾಡಿಸುವ ಫಲ ಈ ಏಕಾದಶಿ ಆಚರಣೆಯಿಂದ ಸಿಗುವುದು.
ಪೌರಾಣಿಕ ಕತೆ
ಪ್ರಾಚೀನ ಕಾಲದಲ್ಲಿ ಮಹಿಧ್ವಜ ಎಂಬ ಧರ್ಮನಿಷ್ಠ ರಾಜನಿದ್ದ. ಅವನ ಕಿರಿಯ ಸಹೋದರ ವಜ್ರಧ್ವಜನು ತನ್ನ ಅಣ್ಣನ ಮೇಲೆ ದ್ವೇಷ ಸಾಧಿಸಲು ಹೊಂಚು ಹಾಕುತ್ತಿದ್ದ. ಅವಕಾಶವಾದಿ ತಮ್ಮ ವಜ್ರಧ್ವಜನು ಅಣ್ಣನನ್ನು ಕೊಂದು ಅವನ ದೇಹವನ್ನು ಕಾಡಿನಲ್ಲಿಆಲದ ಮರದ ಕೆಳಗೆ ಹೂಳಿದನು. ಅಕಾಲಿಕ ಮರಣದಿಂದಾಗಿ, ರಾಜನ ಆತ್ಮವು ಪ್ರೇತವಾಗಿ ಆಲದ ಮರದಲ್ಲಿ ನೆಲೆಸಿತು. ಆ ಪ್ರೇತ ಜನರಿಗೆ ತೊಂದರೆಯನ್ನು ಕೊಡಲಾರಂಬಿಸಿತು. ಒಂದು ದಿನ ಋಷಿಯೊಬ್ಬರು ಅದೇ ದಾರಿಯಲ್ಲಿ ಹೋಗುವಾಗ ಪ್ರೇತ ಅವರಿಗೂ ತೊಂದರೆ ಕೊಡಲು ಮುಂದಾಗುತ್ತೆ, ಋಷಿಗೆ ತನ್ನ ದಿವ್ಯ ಶಕ್ತಿಯಿಂದ ನಡೆದ ಘಟನೆ ತಿಳಿದು, ಅಪರಾ ಏಕಾದಶಿಯಂದು ಉಪವಾಸವಿದ್ದು ಆ ಆತ್ಮಕ್ಕೆ ಮೋಕ್ಷ ಕೊಡಿಸುತ್ತಾರೆ.



Click it and Unblock the Notifications
