Latest Updates
-
ಕ್ರಿಕೆಟ್ ಮ್ಯಾಚ್ ನೋಡುವಾಗ ದಂಪತಿಗಳ ನಡುವೆ ಜಗಳವೇ? ಶಾಂತಿ ಕಾಪಾಡಿಕೊಳ್ಳಲು ಇಲ್ಲಿದೆ ಸಮಾಧಾನದ ಸೂತ್ರ! -
ಕೇರಳದಲ್ಲಿ ಭಾರೀ ಮಳೆ: ನಿಮ್ಮ ಮನೆಯನ್ನು ತೇವಾಂಶ ಮತ್ತು ಬೂಸಿನಿಂದ ರಕ್ಷಿಸಲು ಇಲ್ಲಿವೆ ಸರಳ ಮನೆಮದ್ದುಗಳು! -
ಬೆಂಗಳೂರಿನಲ್ಲಿ ನೀರಿನ ಕಟ್ಟುನಿಟ್ಟಿನ ನಿಯಮ: ದಂಡ ತಪ್ಪಿಸಲು ನೀವು ಮಾಡಬೇಕಾದ ಬದಲಾವಣೆಗಳೇನು? -
ಪುಣೆ ರೈಲು ಪ್ರಯಾಣಿಕರೇ ಎಚ್ಚರ! 9 ಗಂಟೆಗಳ ಮೆಗಾ ಬ್ಲಾಕ್: ನಿಮ್ಮ ಪ್ರಯಾಣಕ್ಕೆ ಪರ್ಯಾಯ ಮಾರ್ಗಗಳಿವು -
ಕರಾವಳಿ ಮಳೆಯಲ್ಲಿ ಸಂಗಾತಿಯೊಂದಿಗೆ ಡೇಟ್ ನೈಟ್: ಕೇವಲ 500 ರೂಪಾಯಿಯಲ್ಲಿ ಮಳೆಗಾಲದ ಸಂಜೆಯನ್ನು ರೊಮ್ಯಾಂಟಿಕ್ ಆಗಿ ಕಳೆಯಿರಿ! -
ಮಳೆಗಾಲದ ತೇವಾಂಶಕ್ಕೆ ಬೇಸತ್ತಿದ್ದೀರಾ? ಅಮೆಜಾನ್ ಪ್ರೈಮ್ ಡೇ 2026ರಲ್ಲಿ ಸಿಗಲಿದೆ ಸ್ಮಾರ್ಟ್ ಪರಿಹಾರ! -
ಟೊಮೆಟೊ ಬೆಲೆ ಏರಿಕೆ: ಅಡುಗೆಯಲ್ಲಿ ರುಚಿ ಕೆಡದಂತೆ ಬಜೆಟ್ನಲ್ಲಿ ಅಡುಗೆ ಮಾಡುವುದು ಹೇಗೆ? -
ಮುಂಬೈನಲ್ಲಿ ರೆಡ್ ಅಲರ್ಟ್: ಶಾಲೆಗಳಿಗೆ ರಜೆ ಘೋಷಣೆ, ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆಗಾಗಿ ಪೋಷಕರು ಮಾಡಬೇಕಾದ್ದೇನು? -
ದೆಹಲಿಯ ಮಳೆಗಾಲದ ಸೆಖೆ: ಮನೆಯಲ್ಲೇ 10 ನಿಮಿಷದ ಈ ವ್ಯಾಯಾಮ ಮಾಡಿದರೆ ಕಾಲು ನೋವು ಮಾಯ! -
ವಾಟ್ಸಾಪ್ ಹೊಸ ಫೀಚರ್ಗೆ ಬ್ರೇಕ್: ನಿಮ್ಮ ಪ್ರೈವೆಸಿ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ವರ್ಕ್ ಪ್ರೆಷರ್‌ನಿಂದಾಗಿ ಮಗಳ ಸಾವು:ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಅನ್ನಾ ತಾಯಿ ಮಗಳ ಬಾಸ್‌ಗೆ ಬರೆದ ಪತ್ರ
ಅನ್ನಾ ಸೆಬಾಸ್ಟಿನ್ ಪೆರಯಿಲ್, ವಯಸ್ಸ 26, ಸಿಎ ಮುಗಿಸಿ ವೃತ್ತಿ ಬದುಕಿನಲ್ಲಿ ಉನ್ನತಬ ಹಂತಕ್ಕೆ ತಲುಪಬೇಕೆಂದು ಕನಸು ಕಂಡಿದ್ದಳು, ಹಾಗಾಗಿಯೇ ಪ್ರೆಷರ್ ಆಗಿ ಸೇರಿದ ಕಡೆ ಕೆಲಸದ ಒತ್ತಡ ತುಂಬಾ ಇದ್ದರೂ ಅವರು ಕೊಟ್ಟ ಕೆಲಸವನ್ನು ರಾತ್ರಿಯಿಡೀ ಕುಳಿತು ಮಾಡಿ ಮುಗಿಸುತ್ತಿದ್ದಳು, ಹೀಗೆ ಕೆಲಸ ಒತ್ತಡದ ಕಾರಣದಿಂದಾಗಿ ನನ್ನ ಮಗಳು ಸಾವಿನ್ನಪ್ಪಿದ್ದಾಳೆ ಎಂದು ಅನ್ನಾ ತಾಯಿ ಆಕೆ ಕೆಲಸ ಮಾಡುತ್ತಿದ್ದ Ernst & Young (EY) ಸಿಇಒಗೆ ಪತ್ರ ಬರೆದಿದ್ದು ಆ ಪತ್ರ ತುಂಬಾನೇ ಸದ್ದು ಮಾಡುತ್ತಿದೆ.

ಕಳೆದ ವಾರವಷ್ಟೇ ಮಗಳ ಕಾನ್ವೇಷನ್ ಪಡೆಯಲು ಹೆಮ್ಮೆಯಿಂದ ಹೋಗಿದ್ದರು ಪೋಷಕರು
ತಾವು ದುಡಿದು ಮಕ್ಕಳಿಗೆ ಮಾಡುವುದು ಬೇರೆ, ಆದರೆ ಮಕ್ಕಳು ದುಡಿಯಲಾರಂಭಿಸಿ ಅವರೇ ಪ್ರಯಾಣದ ಖರ್ಚು ಭರಿಸಿ ನಮ್ಮನ್ನು ಕರೆಸಿಕೊಳ್ಳುವಾಗ ಪೋಷಕರಿಗೆ ಅದೇನೋ ಹೆಮ್ಮೆ. ಮಕ್ಕಳಿಗೂ ಅಷ್ಟೇ ತಾವು ದುಡಿದ ಹಣವನ್ನು ಫೊಷಕರಿಗೆ ಖರ್ಷು ಮಾಡುವಾಗ ಒಂಥರಾ ಖುಷಿ. ಇಲ್ಲಿಯೂ ಅಷ್ಟೇ ಅನ್ನಾ ಕಾನ್ವಕೇಷನ್‌ಗೆ ಅಪ್ಪ-ಾಮ್ಮನಿಗೆ ತಾನೇ ಟಿಕೆಟ್ ಬುಕ್ ಮಾಡಿ ಕರೆಸಿದ್ದಳು, ಆವಾಗಲೇ ಸ್ವಲ್ಪ ಎದೆ ನೋವಾಗುತ್ತಿದೆ ಎಂದು ಹೇಳಿದ್ದಳು, ಆಸ್ಪತ್ರೆಗೆ ಹೋಗಿ ಇಸಿಜಿ ತೆಗೆಸಿದಾಗ ಇಸಿಜಿ ನಾರ್ಮಲ್ ಅಂತ ಬಂತು.
ಅದಾಗಿ ಸ್ವಲ್ಪ ದಿನಗಳಲ್ಲಿ ಆಕೆಗೆ ಮತ್ತೆ ಎದೆನೋವು ಕಾಣಿಸಿಕೊಂಡಿತು, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡರೆ ಸರಿಯಾದೀತು ಎಂದು ಭಾವಿಸಿದಳು, ಆದರೆ ನೋವು ಕಡಿಮೆಯಾಗದೆ ಇದ್ದಾಗ ಆಕೆಯ ರೂಮ್‌ಮೇಟ್‌ಗೆ ತಿಳಿಸುತ್ತಾಳೆ, ಅವರು ಕೂಡಲೇ ಆಕೆಯ ತಾಯಿಗೆ ಕರೆ ಮಾಡುತ್ತಾರೆ, ಇದನ್ನು ಕೇಳಿ ತಾಯಿಗೂ ಗಾಬರಿ ಕೂಡಲೇ ಅನ್ನಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂತ ಕೇಳುತ್ತಾಳೆ, ಆದರೆ ಅಷ್ಟರಲ್ಲಿಯೇ ಅನ್ನಾಕುಸಿದು ಬಿದ್ದಳು, ಅವಳಿಗೆ ಸಿಪಿಆರ್ ನೀಡಲಾಯ್ತು, ಆಂಬ್ಯೂಲೆನ್ಸ್‌ಗೆ ಕರೆ ಮಾಡಲಾಯ್ತು, ವೈದ್ಯರು ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ತೀಲಿಸಿದರು.
ಮಗಳ ಸಾವಿನ ಬಳಿಕ 3 ಪೇಜ್‌ನ ಲೆಟರ್ ಬರೆದ ಅನ್ನಾ ತಾಯಿ
ನನ್ನ ಮಗಳು ಅತಿಯಾದ ಕೆಲಸದ ಒತ್ತಡದಿಂದಾಗಿ ಸಾವನ್ನಪ್ಪಿದ್ದಾಳೆ, ಅವಳನ್ನು ಮಧ್ಯರಾತ್ರಿಯವರೆಗೂ ಅವಳ ಮ್ಯಾನೇಜರ್ ದುಡಿಸುತ್ತಿದ್ದರು, ಅವಳಿಗೆ ಆ ಕೆಲಸದ ಒತ್ತಡ ತೆಗೆದುಕೊಳ್ಳಲು ಕಷ್ಟವಾಗುತ್ತಿದೆ ಎಂದು ಅವಳೇ ನನ್ನ ಬಳಿ ಹಲವು ಬಾರಿ ಹೇಳಿಕೊಂಡಿದ್ದಳು, ಕೆಲಸ ಬಿಡುವ ಬಗ್ಗೆ ಕೂಡ ಆಲೋಚನೆ ಮಾಡಲಾಗಿತ್ತು. ಅವಳ ಆರೋಗ್ಯವನ್ನು ಪರಿಗಣಿಸುತ್ತಿರಲಿಲ್ಲ, ಅವಳು ಕೆಲಸ ಮಾಡಿ ಮುಗಿಸುವಾಗ ರಾತ್ರಿ 10 ಗಂಟೆ ದಾಟುತ್ತಿತ್ತು, ಕೆಲವೊಮ್ಮೆ ಮಧ್ಯರಾತ್ರಿ ಕಳೆದ ಮೇಲೂ ಕೆಲಸ ಮಾಡುತ್ತಿದ್ದಳು, ಅತಿಯಾದ ಕೆಲಸದ ಒತ್ತಡವೇ ನನ್ನ ಮಗಳ ಪ್ರಾಣಕ್ಕೆ ಕಂಟಕವಾಯ್ತು ಎಂದು ಆ ತಾಯಿ ಆ ಪತ್ರದಲ್ಲಿ ಹೇಳಿದ್ದಾರೆ.
ಅನ್ನಾ ಅಂತ್ಯಸಂಸ್ಕಾರಕ್ಕೆ ಕಂಪನಿಯಿಂದ ಒಬ್ಬರೂ ಬಂದಿರಲಿಲ್ಲ
ಅಲ್ಲದೆ ಅನ್ನಾ ಅಂತ್ಯ ಸಂಸ್ಕಾರಕ್ಕೆ ಆ ಕಂಪನಿಯಿಂದ ಒಬ್ಬರೂ ಕೂಡ ಬಂದಿರಲಿಲ್ಲ, ಇದರ ಬಗ್ಗೆ ಆ ಕಂಪನಿ ವಿರುದ್ಧ ಟೀಕೆಗಳ ಸುರುಮಳೆಯಾದಾಗ ಆಕೆಯ ಅಂತ್ಯಸಂಸ್ಕಾರಕ್ಕೆ ಹೋಗದೆ ಇರುವುದಕ್ಕೆ ಪಶ್ಚಾತಾಪವಿದೆ ಎಂದು ಇವೈ ಇಂಡಿಯಾ ಚೇರ್‌ಮೆನ್ ರಾಜೀವ್ ಮೆಮಾನಿ ಹೇಳಿಕೆ ನೀಡಿದ್ದಾರೆ.
ಅತಿಯಾದ ಮಾನಸಿಕ ಒತ್ತಡದಿಂದ ತಪ್ಪಿದ್ದಲ್ಲ ಆರೋಗ್ಯ ಸಮಸ್ಯೆ
ಇಂದು ಎಷ್ಟೋ ಜನರ ಆರೋಗ್ಯ ಸಮಸ್ಯೆಗೆ ಅತಿಯಾದ ಮಾನಸಿಕ ಒತ್ತಡವೇ ಕಾರಣವಾಗಿದೆ. ಈ ಕೆಲಸ ಬಿಟ್ಟರೆ ಬೇರೆ ಕಡೆ ಕೆಲಸ ಸಿಗದಿದ್ದರೆ ಎಂಬ ಭಯ ಅಥವಾ ಕಮಿಟ್‌ಮೆಂಟ್ ಎಂಬ ಭಯದಲ್ಲಿ ಉದ್ಯೋಗಿಗಳು ಕೆಲಸದಲ್ಲಿ ತುಂಬಾ ಒತ್ತಡವಿದ್ದರೂ ಕೆಲಸ ಮಾಡುತ್ತಾರೆ. ಕೆಲವು ಕಂಪನಿ ತಮ್ಮ ಲಾಭದ ಜೊತೆಗೆ ಉದ್ಯೋಗಿಗಳ ಆರೋಗ್ಯದ ಕಡೆಯೂ ಗಮನಹರಿಸಿದರೆ ಇನ್ನು ಕೆಲ ಕಂಪನಿ ಬರೀ ಟಾರ್ಗೆಟ್ ಕಡೆಯಷ್ಟೇ ಗಮನ ನೀಡುವುದು, ಹೀಗಾದಾಗ ಅದು ಆರೋಗ್ಯ, ಕುಟುಂಬ ಜೀವನದ ಮೇಲೆ ತುಂಬಾನೇ ಪರಿಣಾಮ ಬೀರುವುದು.
ಮಾನಸಿಕ ಒತ್ತಡವನ್ನು ಹೇಗೆ ನಿಭಾಯಿಸಬೇಕೆಂಬುವುದು ಗೊತ್ತಿರಬೇಕಾಗುತ್ತದೆ
ಯಾವುದೇ ಕೆಲಸತೆಗೆದುಕೊಂಡರೂ ಅಲ್ಲಿ ಕೆಲಸದ ಒತ್ತಡ ಇರಲಿದೆ, ಎಷ್ಟು ಒತ್ತಡ ತಡೆದುಕೊಳ್ಳಬೇಕು ಎಂಬುವುದು ಕೂಡ ಗೊತ್ತಿರಬೇಕು, ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಜೀವನಶೈಲಿಯಲ್ಲಿ ಬದುಲಾವಣೆ ಮಾಡಿಕೊಳ್ಳಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಮಾನಸಿಕ ಧೈರ್ಯ ಕಳೆದುಕೊಳ್ಳಬಾರದು, ಈ ಕೆಲಸ ಹೋದರೆ ಎಂಬ ಭಯವೇ ನಮ್ಮಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ಹಾಗಾಗಿ ನಾವು ದುಡಿಯುವುದು ನಮಗೋಸ್ಕರ, ನಮ್ಮ ಖುಷಿಗೋಸ್ಕರ ಎಂಬುವುದನ್ನು ಮರೆಯಬಾರದು, ಅಲ್ಲದೆ ಕೆಲಸದ ಒತ್ತಡವನ್ನು ಹೊರಹಾಕಲು ಯೋಗ, ಧ್ಯಾನ, ವ್ಯಾಯಾಮ ಇವೆಲ್ಲಾ ಸಹಕಾರಿಯಾಗಿದೆ.



Click it and Unblock the Notifications