ಪುರಿ ಜಗನ್ನಾಥ ದೇವಾಲಯದ ಖಜಾನೆ 46 ವರ್ಷದ ಬಳಿಕ ಹೊರಕ್ಕೆ..!

ನೀವು ಪುರಿ ಜಗನ್ನಾಥ ದೇವಾಲಯದ ಕುರಿತು ಕೇಳಿರಬಹುದು. ಈ ದೇವಾಲಯದ ಖಜಾನೆ ಬರೋಬ್ಬರಿ 46 ವರ್ಷದ ಬಳಿಕ ಇಂದು ತೆರೆಯಲಾಗಿದೆ. ಪುರಿಯ ಪ್ರಸಿದ್ಧ ಜಗನ್ನಾಥ ದೇವಾಲಯದ ರತ್ನ ಭಂಡಾರ್ (ನಿಧಿ) ನಾಲ್ಕು ದಶಕಗಳ ಬಳಿಕ ಇಂದು ತರೆದಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸರ್ಕಾರವು ರಚಿಸಿರುವ ಉನ್ನತ ಮಟ್ಟದ ಸಮಿತಿಯು ಒಳಗೆ ಸಂಗ್ರಹವಾಗಿರುವ ಬೆಲೆಬಾಳುವ ವಸ್ತುಗಳ ದಾಸ್ತಾನು ಮಾಡಿದೆ.

ಮಧ್ಯಾಹ್ನ 1:28 ಕ್ಕೆ ದೇವಾಲಯದ ನೆಲಮಾಳಿಗೆಯಲ್ಲಿದ್ದ ಕೊಠಡಿಯ ಬಾಗಿಲು ತೆರೆಯಲಾಗಿತ್ತು ಎಂದು ಒಡಿಶಾ ಮುಖ್ಯಮಂತ್ರಿ ಕಚೇರಿ ಇದನ್ನು ಖಚಿತಪಡಿಸಿದೆ. ಈ ವೇಳೆ ಸರ್ಕಾರಿ ಪ್ರತಿನಿಧಿಗಳು, ಎಎಸ್‌ಐ ಅಧಿಕಾರಿಗಳು, ಶ್ರೀ ಗಜಪತಿ ಮಹಾರಾಜರ ಪ್ರತಿನಿಧಿ ಸೇರಿದಂತೆ 11 ಮಂದಿ ಉಗ್ರಾಣದಲ್ಲಿ ಉಪಸ್ಥಿತರಿದ್ದರು.

Ancient Treasury of Jagannath Temple Unsealed After Four Decades

ಅಧಿಕಾರಿಗಳ ಪ್ರಕಾರ, ರತ್ನ ಭಂಡಾರ್‌ನಲ್ಲಿರುವ ಬೆಲೆಬಾಳುವ ವಸ್ತುಗಳ ಡಿಜಿಟಲ್ ಪಟ್ಟಿಯನ್ನು ಸರ್ಕಾರ ಮಾಡುತ್ತದೆ, ಅದು ಅವುಗಳ ತೂಕ ಮತ್ತು ನಿರ್ಮಾಣದಂತಹ ವಿವರಗಳನ್ನು ಹೊಂದಿರುತ್ತದೆ. ಒಂದು ಪೆಟ್ಟಿಗೆಯನ್ನು ಎತ್ತಲು 8 ರಿಂದ 10 ಜನರು ಬೇಕಾದರು. ಅಷ್ಟೊಂದು ದೊಡ್ಡದಾದ ಪೆಟ್ಟಿಗೆಗಳಾಗಿದ್ದವು.

ಈ ಪೆಟ್ಟಿಗೆಯನ್ನು ಮರದಿಂದ ಮಾಡಲಾಗಿತ್ತು. ಇದರ ಒಳಗೆ ಚಿನ್ನ, ಬೆಳ್ಳಿ, ವಜ್ರದ ಆಭರಣಗಳ ಸಂಗ್ರಹಿಸಲಾಗಿದೆ. ದೇವಾಲಯದ ಖಜಾನೆಯನ್ನು ಕೊನೆಯದಾಗಿ 46 ವರ್ಷಗಳ ಹಿಂದೆ 1978 ರಲ್ಲಿ ಅಧಿಕೃತವಾಗಿ ತೆರೆಯಲಾಯಿತು.

ರತ್ನ ಭಂಡಾರವನ್ನು ಪ್ರವೇಶಿಸಿದ ಜನರಲ್ಲಿ ನಾಲ್ಕು ದೇವಾಲಯದ ಸೇವಕರು -- ಪಟ್ಜೋಶಿ ಮೊಹಾಪಾತ್ರ, ಭಂಡಾರ್ ಮೆಕಾಪ್, ಚಡೌಕರಣಾ ಮತ್ತು ದೆಯುಲಿಕರನ್ ಸಹ ಸೇರಿದ್ದಾರೆ. ರತ್ನ ಭಂಡಾರವು ಒಡಹುಟ್ಟಿದ ದೇವತೆಗಳ ಅಮೂಲ್ಯ ಆಭರಣಗಳನ್ನು ಹೊಂದಿದೆ -- ಜಗನ್ನಾಥ, ಸುಭದ್ರ ಮತ್ತು ಬಲಭದ್ರ -- ಶತಮಾನಗಳಿಂದ ಭಕ್ತರು ಮತ್ತು ಹಿಂದಿನ ರಾಜರು ದಾನ ಮಾಡಿದ್ದಾರೆ. ಆದರೆ ವಾರ್ಷಿಕ ರಥಯಾತ್ರೆಯ ಸಂದರ್ಭದಲ್ಲಿ ಒಂದು ಕೊಠಡಿಯಲ್ಲಿರುವ ಚಿನ್ನಾಭರಣಗಳನ್ನು ಬಳಸಲಾಗುತ್ತದೆ. ಆದರೆ ಮತ್ತೊಂದು ಕೊಠಡಿಯನ್ನು ತೆರೆಯದೆ 46 ವರ್ಷ ಕಳೆದಿದೆ.

ಈ ಖಜಾನೆಯಲ್ಲಿ ಏನೆಲ್ಲಾ ಇದೆ?

ಈ ದೇವಾಲಯದ ಕೊಠಡಿಯಲ್ಲಿ ಭಾರೀ ಪ್ರಮಾಣದ ಆಭರಣಗಳಿವೆ ಎಂದು ನಂಬಲಾಗಿದೆ. ಚಿನ್ನದ ವಿಗ್ರಹಗಳು, ನಾಣ್ಯಗಳು ದೇವರ ಆಭರಣ, ಬೆಲೆ ಬಾಳುವ ವಸ್ತುಗಳು, ಭಗವಾನ್ ಜಗನ್ನಾಥ್, ಭಗವಾನ್ ಬಲಭದ್ರ ಹಾಗೂ ಸುಭದ್ರಾ ದೇವತೆಯ ಅಮೂಲ್ಯ ಆಭರಣಗಳು ಇವೆ ಎನ್ನಲಾಗಿದೆ. ಈ ದೇವಾಲಯಕ್ಕೆ ರಾಜ ಮಹರಾಜರು ಕಾಣಿಕೆಯಾಗಿ ವಜ್ರಾಭರಣ, ಬೆಳ್ಳಿ, ಬಂಗಾರದ ಮೂರ್ತಿಗಳು ಸೇರಿದಂತೆ ಕೊಡುಗೆಯಾಗಿ ಗಟ್ಟಿ ಬಂಗಾರವನ್ನು ನೀಡುತ್ತಿದ್ದರಂತೆ.

ಇದಿಷ್ಟೆ ಅಲ್ಲ ಪುರಿ ಜಗನ್ನಾಥ ದೇವಾಲಯ ಹಲವು ಅಚ್ಚರಿಗಳ ತನ್ನಲ್ಲಿಟ್ಟುಕೊಂಡಿದೆ. ದೇವಾಲಯದ ರಚನೆ ಸಹ ಒಂದು ದೊಡ್ಡ ಅಚ್ಚರಿ. ಏಕೆಂದರೆ ಈ ದೇವಾಲಯದ ಮೇಲೆ ಯಾವುದೇ ನೆರಳು ಬೀಳುವುದಿಲ್ಲ. ಅಲ್ಲದೆ ದೇವಾಲಯದ ಮೇಲೆ ಗಾಳಿಗೆ ವಿರುದ್ಧವಾಗಿ ಬಾವುಟ ಹಾರುವುದು, ದೇವಾಲಯದ ಮೇಲಿರುವ ಸುದರ್ಶನ ಚಕ್ರ ಸಹ ಈಗಿನ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸವಾಲು ಒಡ್ಡುತ್ತದೆ. ಈಗ ಪುರಿ ಜಗನ್ನಾಥ ದೇವಾಲಯವು ಹೆಚ್ಚು ಭಕ್ತರು ಹಾಗೂ ದೇಶದ ಪ್ರಮುಖ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿದೆ.

ಕಳೆದು ಹೋಗಿತ್ತು ಕೀಲಿಕೈ

ಈ ಹಿಂದೆ ಈ ಕೊಠಡಿ ಭಾಗಿಲು ತೆರೆಯಲು ಮುಂದಾದಾಗ ಈ ಕೊಠಡಿಯ ಕೀಲಿ ಕೈ ಕಾಣೆಯಾಗಿದ್ದ ವಿಚಾರ ಬಹಳ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಭಾರಿ ವಿವಾದ ಹುಟ್ಟುಹಾಕಿತ್ತು. ಆದರೆ 2018ರಲ್ಲಿ ಅಂದಿನ ಡಿಸಿ ಅವರ ಕಚೇರಿಯಲ್ಲಿ ನಕಲಿ ಕೀ ಎಂಬ ಲಕೋಟೆಯೊಂದು ಪತ್ತೆಯಾಗಿ ಭಾರೀ ಗದ್ದಲ ಸೃಷ್ಟಿಯಾಗಿತ್ತು. ಈ ಕೀ ಹುಡುಕಾಟ ಸಂಬಂಧ ನ್ಯಾಯಾಂಗ ತನಿಖೆಗೂ ಆದೇಶಿಸಲಾಗಿತ್ತು. ಸದ್ಯ ಈಗ ಬಾಗಿಲು ತೆಗೆದು ಒಳಗಿದ್ದ ಖಜಾನೆ ಹೊರಗೆ ತೆಗೆಯಲಾಗಿದೆ. ಸದ್ಯದಲ್ಲೇ ಅಲ್ಲಿದ್ದ ಆಭರಣಗಳು ಸೇರಿ ಖಜಾನೆಯ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಲಿದೆ.

English summary

Ancient Treasury of Jagannath Temple Unsealed After Four Decades

The treasury of Puri Jagannath Temple was opened today after exactly 46 years. The Ratna Bhandar (treasure) of the famous Jagannath Temple of Puri has been brought today after four decades, which is the cause of everyone's curiosity.
X
Desktop Bottom Promotion