Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ನೊಂದವರ ಭರವಸೆಯಾಗಿದ್ದ ಹೋರಾಟಗಾರ ಅನಂತ ಸುಬ್ಬರಾವ್; ಯಾರು ಈ ಕಾಮ್ರೆಡ್?
ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ನಿನ್ನೆ ರಾಜ್ಯದ ಸಾರಿಗೆ ನೌಕರರು ರಾಜ್ಯವ್ಯಾಪಿ ಮುಷ್ಕರಕ್ಕೆ ಮುಂದಾಗಿದ್ದರು. ಈ ಮುಷ್ಕರದ ಮುಂದಾಳತ್ವ ವಹಿಸಿದ್ದು ಅನಂತ ಸುಬ್ಬರಾವ್. ಆದ್ರೆ ಈ ಮುಷ್ಕರಕ್ಕೆ ಕರೆ ಕೊಟ್ಟ ಕೆಲವೇ ಗಂಟೆಯಲ್ಲಿ ಅವರು ನಿಧನರಾಗಿದ್ದಾರೆ. ಹೀಗಾಗಿ ಈ ಮುಷ್ಕರ ಕೂಡ ಮುಂದೆ ಹೋಗಿದೆ. ಆದ್ರೆ ಇಡೀ ಸರ್ಕಾರವನ್ನೇ ಬೆಚ್ಚಿಬೀಳಿಸುವಂತಹ ಮುಷ್ಕರ, ಹೋರಾಟ, ಆಂದೋಲನಗಳ ಮುಂದಾಳತ್ವ ವಹಿಸುತ್ತಿದ್ದ ಈ ಅನಂತ ಸುಬ್ಬರಾವ್ ಯಾರು? ಅವರ ಹೋರಾಟದ ಹಾದಿ ಕುರಿತು ನಿಮಗೆ ಗೊತ್ತಾ?
ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಜನಿಸಿದ ಅನಂತ ಸುಬ್ಬರಾವ್ ಕಮ್ಯುನಿಸ್ಟ್ ನಾಯಕ ಆಗಿದ್ದಾರೆ. ಅವರು ಸಾರಿಗೆ ನೌಕರರ ಪರವಾಗಿ ಧ್ವನಿಯಾಗಿ ಮುಷ್ಕರಕ್ಕೆ ಕರೆ ಕೊಟ್ಟ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಹಠಾತ್ ನಿಧನವು ಹಲವರಿಗೆ ಆಘಾತ ತಂದಿತ್ತು. ಸಿಎಂ ಸಿದ್ದರಾಮಯ್ಯ ಸಹ ಅವರ ನಿಧನದ ಸುದ್ದಿ ಕೇಳಿ ಸಂತಾಪ ಸೂಚಿಸಿದ್ದಾರೆ.

85 ವರ್ಷದ ಅನಂತ ಸುಬ್ಬರಾವ್ ಸರ್ಕಾರದ ಹಲವು ನೀತಿಗಳ ವಿರುದ್ಧ, ಸೌರ್ಜನ್ಯ, ಅನ್ಯಾಯದ ವಿರುದ್ಧ ದಶಕದಿಂದಲೂ ಧ್ವನಿ ಎತ್ತುತ್ತಿದ್ದ ವ್ಯಕ್ತಿ. ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿ ಅನಂತ್ ಸುಬ್ಬರಾವ್ ಕೆಲಸ ಮಾಡುತ್ತಿದ್ದರು. ಹತ್ತಾರು ಮುಷ್ಕರಗಳು, ಹೋರಾಟಗಳಲ್ಲಿ ಅವರು ಮುಂದಾಳತ್ವ ವಹಿಸುತ್ತಿದ್ದರು. ಹೋರಾಟ ಹೇಗಿರಬೇಕು? ಬೇಡಿಕೆಗಳು ಯಾವುದಿರಬೇಕು ಎಂಬುದನ್ನು ನಿರ್ಧರಿಸುವ ಕಾರ್ಯಗಳಲ್ಲಿ ಅವರು ಪ್ರಮುಖರು.
ಅಷ್ಟೇ ಅಲ್ಲ ಸರ್ಕಾರಕ್ಕೆ ಯಾವ ರೀತಿ ಬಿಸಿ ಮುಟ್ಟಿಸಬೇಕು? ಹೋರಾಟ ಹೇಗಿದ್ದರೆ ಸರ್ಕಾರಕ್ಕೆ ಮನದಟ್ಟಾಗಲಿದೆ ಎಂಬಂತಹ ವಿಚಾರದಲ್ಲಿ ಅವರು ಪ್ರಮುಖ ನಿರ್ಧಾರಗಳ ತೆಗದುಕೊಳ್ಳುತ್ತಿದ್ದರು. ಅನಂತ್ ಸುಬ್ಬರಾವ್ ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನವರು. ಆರಂಭದಲ್ಲಿ ಅವರು ಜೀವವಿಮಾ ಸಂಸ್ಥೆಯಲ್ಲಿ ಸಾಮಾನ್ಯ ನೌಕರಿ ಗಿಟ್ಟಿಸಿದ್ದರು.
ನೌಕರರಾಗಿದ್ದಾಗಲೇ ಮಾರ್ಕ್ಸ್‌ವಾದಿ ಸಿದ್ಧಾಂತವನ್ನು ಒಪ್ಪಿಕೊಂಡಿದ್ದರು. ಶೋಷಿತರು, ಧಮನಿತರ ಧ್ವನಿಯಾಗುವ ಕನಸು ಕಂಡಿದ್ದರು. ಅದರಂತೆ ಎಲ್ಲಿಯೇ ಅನ್ಯಾಯ ನಡೆದರು ಅದನ್ನು ಪ್ರಶ್ನಿಸುವ ಅವರ ಪರವಾಗಿ ನಿಲ್ಲುವ ಮೂಲಕ ತಮ್ಮದೆ ಆದ ಹೆಸರು ಮಾಡಿದರು. ಇದರ ನಡುವೆ ಅವರು ಸಾರಿಗೆ ನೌಕರರ ಮುಷ್ಕರದಲ್ಲಿ ಅವರ ಹಕ್ಕುಗಳಿಗೆ ಹೋರಾಡಲು ಮುಂದಾದರು.
ಇದೇ ಸಮಯದಲ್ಲಿ ಅವರಿಗೆ ಈ ನೌಕರರನ್ನು ಸಂಘಟಿಸಬೇಕು ಎಂಬ ಉದ್ದೇಶದಿಂದ ಇಡೀ ರಾಜ್ಯ ಸುತ್ತಾಡಲು ಮುಂದಾದರು. ಬಳಿಕ ಅಸಂಘಟಿತರಾಗಿದ್ದ ನೌಕರರನ್ನು ಸಂಘಟಿಸಿದರು. ಅವರದ್ದೇ ಆದ ಸಂಘಟನೆ ಕಟ್ಟಿಕೊಂಡರು. ಈ ಸಂಘಟನೆಯ ಮೂಲಕ ನೌಕರರ ಸಮಸ್ಯೆಗಳನ್ನು ಸರ್ಕಾರದ ಮುಂದೆ ಇಡಲು ಮುಂದಾದರು. ಬಳಿಕ ಸಾರಿಗೆ ನೌಕರರ ಸಂಘದ ಮುಖಂಡರಾದರು.
ಇದಾದ ಬಳಿಕ ಹಲವು ಬಾರಿ ಸಾರಿಗೆ ನೌಕರರ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಹೋರಾಟದ ಹಾದಿ ತುಳಿದಿದ್ದಾರೆ. ಹಲವು ಬಾರಿ ಯಶಸ್ವಿ ಮುಷ್ಕರಗಳನ್ನು ನಡೆಸಿದ್ದಾರೆ. ನೌಕರರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ. ಆದ್ರೆ ಈಗ ಮುಷ್ಕರಕ್ಕೆ ಕರೆ ನೀಡಿ ಅವರೇ ನಿಧನರಾಗಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಮುಖಂಡರೂ ಆಗಿದ್ದ ಅವರು ನಾಲ್ಕು ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರು ಚಲೋಗೆ ಕರೆ ನೀಡಿದ್ದರು. ಜ.28ರ ಸಂಜೆ ಶೇಷಾದ್ರಿಪುರ ರಸ್ತೆಯಲ್ಲಿರುವ ಸಂಘಟನೆಯ ಕಚೇರಿಯಲ್ಲಿ ಸೇರಿ ಮತ್ತೊಂದು ಸುತ್ತಿನ ಚರ್ಚೆ ನಡೆಸಲು ನಿರ್ಧರಿಸಿದ್ದರು. ಸಭೆಗೆ ತೆರಳುವ ಮುನ್ನವೇ ಉಸಿರಾಟದ ಸಮಸ್ಯೆ ಎದುರಾಗಿತ್ತು. ತಕ್ಷಣ ಅವರನ್ನು ವಿಜಯನಗರದ ಗ್ಲೋಬಲ್ ಆಸ್ಪತ್ರೆಗೆ ರವಾನಿಸಲಾಗಿತ್ತು, ಆದ್ರೆ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಘೋಷಿಸಲಾಯಿತು.



Click it and Unblock the Notifications











