Latest Updates
-
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ!
ಜಾತಕದಲ್ಲಿನ ಚಂದ್ರ-ರಾಹು-ಕೇತು ದೋಷಕ್ಕೆ ಏನು ಮಾಡಬೇಕು? ಇಲ್ಲಿದೆ ಸುಲಭದ ಪರಿಹಾರ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ, ಚಂದ್ರ, ಗುರು, ಮಂಗಳ, ಶನಿ, ಬುಧ, ಶುಕ್ರ, ರಾಹು ಮತ್ತು ಕೇತುಗಳನ್ನು ನವಗ್ರಹ ಎಂದು ಪರಿಗಣಿಸಲಾಗುತ್ತದೆ. ಈ ನವಗ್ರಹಗಳ ಸ್ಥಾನ ಮತ್ತು ಚಲನೆಯು ನಮ್ಮ ಜೀವನದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುವುದು ನೋಡಬಹುದು. ಈ ನವಗ್ರಹ ದೋಷದಿಂದಾಗಿ ವ್ಯಕ್ತಿಯೊಬ್ಬರ ಜೀವನದಲ್ಲಿ ಹಲವು ರೀತಿಯ ಅಡಚಣೆಗಳು, ಅಡ್ಡಿ ಆತಂಕಗಳು ಸಮಸ್ಯೆಗಳು ಎದುರಾಗುವುದು ನೋಡಬಹುದು.
ಹಾಗೆ ಈ ನವಗ್ರಹ ದೋಷದಿಂದಾಗಿ ವ್ಯಕ್ತಿಯ ಜೀವನದಲ್ಲಿ ಸಂಕಷ್ಟಗಳು, ಸಮಸ್ಯೆಗಳಿಂದ ಆತ ಮತ್ತಷ್ಟು ಅಡ್ಡ ಪರಿಣಾಮ ಎದುರಿಸುತ್ತಾನೆ. ಗ್ರಹಗಳ ದೋಷವನ್ನು ಹೋಗಲಾಡಿಸಲು ಜ್ಯೋತಿಷ್ಯದಲ್ಲಿ ಹಲವಾರು ಪರಿಹಾರಗಳಿವೆ. ನಿಮ್ಮ ಜಾತಕದಲ್ಲಿ ನವ ಗ್ರಹದೋಷಗಳಿದ್ದರೆ ಅದನ್ನು ಕೂಡ ಕೆಲವು ಪರಿಹಾರ ಮಾಡುವ ಮೂಲಕ ಆ ದೋಷದಿಂದ ಮುಕ್ತರಾಗಬಹುದು.

ನವಗ್ರಹ ದೋಷವೆಂದರೆ ಕೇವಲ ಒಂದು ಗ್ರಹದ ದೋಷವಲ್ಲ. ಇದು ಜಾತಕದ ಕಾರಣದಿಂದಾಗಿ ನಿರ್ದಿಷ್ಟ ಸಮಯದ ವರೆಗೂ ಕಾಡುವಂತಹ ಗ್ರಹದ ಚಲನೆಯಿಂದ, ಸ್ಥಾನದಿಂದ ಉಂಟಾಗುವಂತಹ ದೋಷವಾಗಿರಲಿದೆ. ಈ ದೋಷ ನಿವಾರಣೆಯಾಗಿ ನಾವಿಂದು ಯಾವ ಪರಿಹಾರಗಳ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಜಾತಕದಲ್ಲಿ ಚಂದ್ರ ದೋಷವಿದ್ದರೆ ಅಂತವರು ಹುಣ್ಣಿಮೆಯ ದಿನ ರಾತ್ರಿ ಚಂದ್ರ ದೇವರಿಗೆ ನೀರನ್ನು ಅರ್ಪಿಸಬೇಕು. ಇದರೊಂದಿಗೆ ಚಂದ್ರದೋಷ ನಿವಾರಣೆಗೆ ಅಕ್ಕಿ, ಸಕ್ಕರೆ, ಹಾಲು ಮುಂತಾದ ಬಿಳಿ ಪದಾರ್ಥಗಳನ್ನು ದಾನ ಮಾಡಬೇಕು ಎಂದು ಹೇಳಲಾಗುತ್ತೆ. ಅದ್ರಲ್ಲೂ ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆ ಚಂದ್ರ ದೋಷ ನಿವಾರಣೆಗೆ ಬಹಳ ಪ್ರಾಶಸ್ತ್ಯ ದಿನ ಎಂದು ಕೂಡ ಹೇಳಲಾಗಿದೆ.
ಅದರಂತೆ ನಾಳೆ ಹುಣ್ಣಿಮೆಯ ದಿನ ನೀವು ಚಂದ್ರ ದೋಷ ನಿವಾರಣೆ ಮಾಡಿಕೊಳ್ಳಲು ಬಹಳ ಉತ್ತಮ ಸಮಯ ಆಗಿದೆ. ಹಾಗೆ ಚಂದ್ರ ದೋಷ ಹೊಂದಿರುವವರು ಸೋಮವಾರದಂದು ಬಿಳಿ ವಸ್ತು ದಾನ ಮಾಡಬಾರದು ಹೆಚ್ಚಾಗಿ ಹಾಲು, ಸಕ್ಕರೆ, ಬಿಳಿ ವಸ್ತ್ರ, ಮೊಸರು, ಮುಂತಾದ ವಸ್ತು ದಾನವಾಗಿ ನೀಡುವುದನ್ನು ತಪ್ಪಿಸಬೇಕು.
ಮಂಗಳ ದೋಷವಿದ್ದರೆ ಏನು ಮಾಡಬೇಕು?
ಹಲವರಿಗೆ ಮಂಗಳನು ದುರ್ಬಲ ಸ್ಥಾನದಲ್ಲಿದ್ದಾಗ ಹಾಗೆ ಆತನಿಂದ ದೋಷ ಸ್ಥಾನದಲ್ಲಿ ಉಂಟಾಗುವ ಚಲನೆಯ ಪರಿಣಾಮ ಸಮಸ್ಯೆ ಕಾಡುತ್ತಿರುತ್ತದೆ. ಈ ಸಮಯದಲ್ಲಿ ಹಸುವಿಗೆ ನೀವು ಬೇಳೆ, ರೊಟ್ಟಿ, ಬೆಲ್ಲದಿಂದ ಮಾಡಿದ ಯಾವುದಾದರು ಪದಾರ್ಥವನ್ನು ತಿನ್ನಿಸಬೇಕಂತೆ. ಇದರಿಂದ ನಿಮ್ಮಲ್ಲಿನ ಮಂಗಳ ದೋಷ ನಿವಾರಣೆ ಸಾಧ್ಯವಾಗಲಿದೆ.
ಶನಿ ದೋಷವಿದ್ದರೆ ಏನು ಮಾಡಬೇಕು?
ನಿಮ್ಮ ಜಾತಕದ ಅನುಸಾರ ನಿಮ್ಮಲ್ಲಿ ಶನಿ ದೋಷವಿದ್ದರೆ ನೀವು ಸಾಸಿವೆ ಎಣ್ಣೆಯಿಂದ ಮಾಡಿರುವ ಅಥವಾ ಈ ಮೊದಲು ಮಾಡಿಟ್ಟಿರುವ ಚಪಾತಿಯನ್ನು ಸಾಸಿವೆ ಎಣ್ಣೆ ಸವರಿ ಹಸುವಿಗೆ ನೀಡಬೇಕಂತೆ. ಇದರಿಂದ ಶನಿ ದೋಷನಿವಾರಣೆಯಾಗಲಿದೆ. ಹಾಗೆ ಪ್ರತಿ ಶನಿವಾರ ಶನಿ ದೇವರ ದೇವಾಲಯದಲ್ಲಿ ಸಾಸಿವೆ ಎಣ್ಣೆಯಿಂದ ದೀಪ ಹಚ್ಚು ಕೆಲಸ ಮಾಡಬೇಕು ಎಂದು ಹೇಳಲಾಗಿದೆ.
ರಾಹು ಕೇತು ದೋಷ
ಒಂದು ವೇಳೆ ನವಗ್ರಹದಲ್ಲಿ ನಿಮಗೆ ರಾಹು ಕೇತುವಿನ ದೋಷ ಇದ್ದರೆ. ನೀವು ಹಸು, ನಾಯಿಗೆ ಆಹಾರ ನೀಡಬೇಕಂತೆ. ಶಿವನ ಆರಾಧನೆಯಿಂದಲೂ ರಾಹು-ಕೇತು ದೋಷದ ಪ್ರಭಾವ ಕಡಿಮೆಯಾಗುತ್ತದೆ. ಹಾಗಾಗಿ ಸೋಮವಾರದಂದು ಶಿವನಿಗೆ ಕಪ್ಪು ಎಳ್ಳು, ಬೇಲ್ಪತ್ರೆ ಅರ್ಪಿಸಬೇಕಂತೆ.
(ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು, ಜ್ಯೋತಿಷ್ಯ, ಪಂಚಾಂಗ, ಧಾರ್ಮಿಕ ಗ್ರಂಥಗಳು ಇತ್ಯಾದಿಗಳ ಆಧರಿಸಿದೆ. ಇಲ್ಲಿ ನೀಡಲಾದ ಮಾಹಿತಿ ಮತ್ತು ಸಂಗತಿಗಳ ನಿಖರತೆ, ಸಂಪೂರ್ಣತೆಗೆ ಬೋಲ್ಡ್ ಸ್ಕೈ ಕನ್ನಡ ಜವಾಬ್ದಾರಿಯಲ್ಲ. ಈ ಮೇಲಿನ ಯಾವುದೇ ವಿಷಯವನ್ನು ಅನುಸರಿಸುವ ಮೊದಲು ನಿರ್ದಿಷ್ಟ ಅಥವಾ ಸೂಕ್ತ ತಜ್ಞರ ಭೇಟಿಗೆ ಸಲಹೆ ನೀಡಲಾಗುತ್ತದೆ)



Click it and Unblock the Notifications











