Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
2024 ಮಾರ್ಚ್ 20ಕ್ಕೆ ಅಮಲಕಿ ಏಕಾದಶಿ: ಈ ದಿನ ನೆಲ್ಲಿಕಾಯಿ ಗಿಡ ಪೂಜಿಸುವುದೇಕೆ? ಈ ಏಕಾದಶಿಯ ಮಹತ್ವವೇನು?
ಪ್ರತಿ ತಿಂಗಳು ಎರಡು ಏಕಾದಶಿ ಬರುತ್ತದೆ, ವರ್ಷದಲ್ಲಿ 24 ಏಕಾದಶಿ. ಈ ಏಕಾದಶಿ ಶ್ರೀ ವಿಷ್ಣುವಿಗೆ ಮೀಸಲಾದ ವಿಶೇಷ ದಿನ, ಆದರೆ ಪ್ರತಿಯೊಂದು ಏಕಾದಶಿಯನ್ನು ಭಿನ್ನವಾಗಿ ಆಚರಿಸಲಾಗುವುದು ಹಾಗೂ ಈ ಏಕಾದಶಿ ಅದರದ್ದೇ ಆದ ಮಹತ್ವ ಹೊಂದಿದೆ. ಈ ಮಾರ್ಚ್ 20ಕ್ಕೆ ಅಮಲಕಿ ಏಕಾದಶಿಯನ್ನು ಆಚರಿಸಲಾಗುವುದು.
ಈ ಅಮಲಕಿ ಏಕಾದಶಿಯಂದು ನೆಲ್ಲಿಕಾಯಿ ಗಿಡಕ್ಕೆ ತುಂಬಾನೇ ಮಹತ್ವ ನೀಡಲಾಗಿದೆ, ಪೂಜಾ ಸಮಯ, ಪೂಜಾ ವಿಧಿ ಹಾಗೂ ಅಮಲಕಿ ಏಕಾದಶಿಯ ಮಹತ್ವವವೇನು ಎಂದು ನೋಡೋಣ ಬನ್ನಿ:

ಅಮಲಕಿ ಏಕಾದಶಿ
ದಿನಾಂಕ: ಮಾರ್ಚ್ 20
ಏಕಾದಶಿ ತಿಥಿ ಪ್ರಾರಂಭ: ಮಾರ್ಚ್ 19 ರಾತ್ರಿ 12:21
ಏಕಾದಶಿ ತಿಥಿ ಮುಕ್ತಾಯ: ಮಾರ್ಚ್ 21 ಮುಂಜಾನೆ 02:22ರವರೆಗೆ
ಪಾರಣ ಸಮಯ: ಮಾರ್ಚ್ 21, ಬೆಳಗ್ಗೆ 08:58ರ ನಂತರ
ಅಮಲಕಿ ಏಕಾದಶಿಯಂದು ನೆಲ್ಲಿಕಾಯಿ ಗಿಡಕ್ಕೆ ಪೂಜೆ
ಅಮಲಕಿ ಏಕಾದಶಿಯಂದು ನೆಲ್ಲಿಕಾಯಿ ಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ದಿನ ನೆಲ್ಲಿಕಾಯಿ ಗಿಡವನ್ನು ಮನೆ ತಂದು ನೆಟ್ಟು ಅಥವಾ ಮನೆಯಲ್ಲಿರುವ ನೆಲ್ಲಿಕಾಯಿ ಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುವುದು.
ಅಮಲಕಿ ಏಕಾದಶಿಯಂದು ನೆಲ್ಲಿಕಾಯಿ ಪೂಜಿಸುವುದು ಏಕೆ?
ನೆಲ್ಲಿಕಾಯಿ ಗಿಡವು ಶ್ರೀ ವಿಷ್ಣುವಿಗೆ ಪ್ರಿಯವಾದ ಗಿಡ, ಈ ಗಿಡದಲ್ಲಿ ಮಹಾಲಕ್ಷ್ಮಿ ಹಾಗೂ ಶ್ರೀ ವಿಷ್ಣು ನೆಲೆಸಿರುತ್ತಾರೆ ಎಂದು ಹೇಳಲಾಗುವುದು. ಹಾಗಾಗಿ ಅಮಲಕಿ ಏಕಾದಶಿಯಂದು ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು.
ಸಂತಾನ ಭಾಗ್ಯ ದೊರೆಯುವುದು
ಅಮಲಕಿ ಏಕಾದಶಿಯ ಮಹತ್ವವೆಂದರೆ ದಂಪತಿ ಸಂತಾನ ಭಾಗ್ಯಕ್ಕಾಗಿ ಉಪವಾಸವಿದ್ದು ಈ ಏಕಾದಶಿಯನ್ನು ಆಚರಿಸಲಾಗುವುದು. ಈ ಏಕಾದಶಿ ಆಚರಿಸುವುದರಿಂದ ಸಂತಾ ಭಾಗ್ಯ ಲಭಿಸುವುದು ಎಂದು ನಂಬಲಾಗಿದೆ. ಈ ದಿನ ಯಾರು ಶ್ರೀ ವಿಷ್ಣುವನ್ನು ಪೂಜಿಸುತ್ತಾರೆ ಅವರಿಗೆ ಪುಣ್ಯ ಕ್ಷೇತ್ರಗಳಿಗೆ ಹೋದಾಗ ಸಿಗುವ, ಯಜ್ಞ -ಯಾಗ ಮಾಡಿದಾಗ ಸಿಗುವ ಪುಣ್ಯ ಸಿಗಲಿದೆ.
ಅಮಲಕಿ ಏಕಾದಶಿಯ ಪೂಜಾ ವಿಧಿಗಳೇನು?
- ಅಮಲಕಿ ಏಕಾದಶಿಯಂದು ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ, ಪೂಜೆಗೆ ಸಿದ್ಧತೆಗಳನ್ನು ಮಾಡಿ ಉಪವಾಸಕ್ಕೆ ಸಂಕಲ್ಪ ಮಾಡಬೇಕು.
- ನಂತರ ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ
- ನೆಲ್ಲಿಕಾಯಿ ಹಾಗೂ ತುಳಸಿ ಗಿಡವನ್ನು ಹೂವುಗಳಿಂದ ಅಲಂಕರಿಸಿ, ಶ್ರೀ ವಿಷ್ಣುವಿನ ಫೋಟೋ ಬಳಿ ನೆಲ್ಲಿಕಾಯಿ ಇರುವ ಕೊಂಬೆಗಳನ್ನು ಅರ್ಪಿಸಲಾಗುವುದುನೆಲ್ಲಿಕಾಯಿ ಗಿಡದ ಕೆಳಗಡೆ ಕಲಶ ಸ್ಥಾಪಿಸಿ
- ಈ ದಿನ ನೈವೇದ್ಯ ಮಾಡಿದ ಮೇಲೆ ಅದರಲ್ಲಿ ನೆಲ್ಲಿಕಾಯಿ ಇಟ್ಟು ದೇವರಿಗೆ ಅರ್ಪಿಸಿ
- ಶ್ರೀ ವಿಷ್ಣು ಜೊತೆಗೆ ಲಕ್ಷ್ಮಿಗೂ ಪೂಜೆ ಸಲ್ಲಿಸಿ, ಸಂಜೆ ಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಿ
- ದೇವರಿಗೆ ಇಟ್ಟ ನೈವೇದ್ಯವನ್ನು ಬಡವರಿಗೆ ದಾನ ಮಾಡಿ.
- ನಂತರ ಪಾರಣ ಸಮಯದಲ್ಲಿ ಸ್ವಲ್ಪ ಪ್ರಸಾದ ಬಾಯಿಗೆ ಹಾಕಿ ಉಪವಾಸ ಮುರಿಯಿರಿ.
- ಈ ದಿನ ಬಡವರಿಗೆ ನಿಮ್ಮ ಶಕ್ತಿಗೆ ಅನುಸಾರ ದಾನ ಮಾಡಿ.
ವಿಷ್ಣು ಮಂತ್ರ
ಓಂ ನಮೋ ಭಗವತೇ ವಾಸುದೇವಾಯ
ಅರ್ಥ: ಓ ವಾಸುದೇವನೇ ನಿನಗೆ ನನ್ನ ಪ್ರಣಾಮಗಳು
ವಿಷ್ಣು ಗಾಯತ್ರಿ ಮಂತ್ರ:
ಓಂ ನಾರಾಯಣಯೇ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್
ಮುಕ್ತಿ ಮಂತ್ರ:
ಓಂ ಭಗವತೇ ವಾಸುದೇವಾಯ ನಮಃ
ಈ ಮಂತ್ರ ಪಠಣೆ ಮಾಡುವುದರಿಂದ ಒಬ್ಬರ ಜೀವನದ ಅಡೆತಡೆಗಳು ದೂರಾಗುತ್ತದೆ.
ವಿಷ್ಣು ಶಾಂತಾಕಾರಂ ಮಂತ್ರ:
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ವಿಶ್ವಧಾರಂ ಗಗನಸದ್ರಿಶಂ,
ಮೇಘವರ್ಣಂ ಶುಭಾಂಗಂ ಲಕ್ಷ್ಮಿಂಕಾತಂ ಕಮಲಾನಯನಂ,
ಯೋಗಿಭಿರ್ಧ್ಯಾನಗಮ್ಯಂ ವಂದೇ ವಿಷ್ಣುಂ ಭವಭಯಹರಂ, ಸರ್ವಲೋಕೈಕನಾಥಂ
ವಿಷ್ಣು ಮಂಗಳಂ ಮಂತ್ರ:
ಮಂಗಳಂ ಭಗವಾನ್ ವಿಷ್ಣು, ಮಂಗಳಂ ಗರುಡಾಧ್ವಜಾ |
ಮಂಗಳಂ ಪುಂಡರೀಕಾಕ್ಷಾ, ಮಂಗಳಂ ತನ್ನೋಂ ಹರಿಹೀ ||



Click it and Unblock the Notifications
