Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಉಜಿರೆಯ ಸುರ್ಯ ಸದಾಶಿವ ರುದ್ರ ದೇವಾಸ್ಥಾನಕ್ಕೆ ಯಶ್, ರಾಧಿಕಾ ಭೇಟಿ: ಈ ದೇವಾಲಯದ ಪವಾಡದ ಬಗ್ಗೆ ಗೊತ್ತೆ?
ನಟ ಯಶ್ ಪತ್ನಿ ಹಾಗು ಮಕ್ಕಳ ಜೊತೆ ಉಜಿರೆ ಸುರ್ಯ ಸದಾಶಿವ ರುದ್ರ ದೇವಾಸ್ಥಾನಕ್ಕೆ ಭೇಟಿ ನೀಡಿದ್ದು ಈ ವೀಡಿಯೋ ಮತ್ತು ಫೋಟೋ ತುಂಬಾನೇ ವೈರಲ್ ಆಗುತ್ತಿದೆ. ಈ ದೇವಾಲಯದ ಬಗ್ಗೆ ಹೆಚ್ಚಿನವರಿಗೆ ಗೊತ್ತಿರಲ್ಲ, ಗೊತ್ತಾದರೆ ಖಂಡಿತ ಈ ದೇವಾಲಯಕ್ಕೆ ಭೇಟಿ ನೀಡಿಯೇ ನೀಡುತ್ತಾರೆ ಅಂಥ ಪವಾಡ ಕ್ಷೇತ್ರವಿದು.

ಧರ್ಮಸ್ಥಳಕ್ಕೆ ಬರುವಾಗ ಸಮೀಪದ ಈ ದೇವಾಲಯಕ್ಕೂ ಭೇಟಿ ನೀಡಬಹುದು
ಈಗ ನಟ ಯಶ್ ಹೋಗಿದ್ದಾರೆ ಎಂದಾಗ ಈ ದೇವಾಲಯ ಎಲ್ಲಿದೆ ಎಂದು ಸರ್ಚ್ ಮಾಡಬಹುದು, ಬೆಂಗಳೂರಿನ ತುಂಬಾ ಜನರು ಪ್ರತಿವರ್ಷ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಾರೆ, ಈ ದೇವಾಲಯದ ಬಗ್ಗೆ ಅಷ್ಟಾಗಿ ಗೊತ್ತಿರದ ಕಾರಣ ಹಾಗೆಯೇ ಹಿಂತಿರುಗುತ್ತಾರೆ, ಇನ್ನು ಕೆಲವರು ಧರ್ಮಸ್ಥಳಕ್ಕೆ ಬಂದು ಮಂಜುನಾಥನ ದರ್ಶನ ಪಡೆದು ನಂತರ ಕನ್ಯಾಡಿಯ ಶ್ರೀರಾಮನ ದೇವಾಲಯ , ಉಜಿರೆಯ ಸದಾಶಿವ ರುದ್ರ ದೇವಾಲಯಕ್ಕೆ ಭೇಟಿ ನೀಡುತ್ತಾರೆ. 10-15 ವರ್ಷಗಳ ಹಿಂದೆ ಈ ದೇವಾಲಯಕ್ಕೆ ಸುತ್ತ ಮತ್ತಲಿನ ಗ್ರಾಮದವರು ಬರುತ್ತಿದ್ದರು ಹೊರಗಿನವರಿಗೆ ಅಷ್ಟಾಗಿ ಗೊತ್ತಿರದ ಕಾರಣ ಭಕ್ತರ ಸಂಖ್ಯೆ ಕಡಿಮೆ ಇತ್ತು, ಆದರೆ ಇಗ ಅಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಮಣ್ಣಿನ ಹರಿಕೆ ಇಲ್ಲಿಯ ವಿಶೇಷತೆ
ಈ ದೇವಾಲಯಕ್ಕೆ ಬಂದು ಅಥವಾ ನಾವು ಇದ್ದಲ್ಲಿಯೇ ದೇವರನ್ನು ನೆನೆದು ಹರಿಕೆ ಹೊತ್ತರೆ ಆ ಹರಿಕೆ ನೆರವೇರಿದ ಬಳಿಕವಷ್ಟೇ ಬಂದು ಮಣ್ಣಿನ ಹರಿಕೆಯನ್ನು ನೀಡಬೇಕು, ಆರೋಗ್ಯ ಸರಿಯಾಗಲು, ಸಂತಾನ ಭಾಗ್ಯಕ್ಕೆ, ಮದುವೆಯಾಗಲು, ಮನೆ ಕಟ್ಟಲು ಹೀಗೆ ಅನೇಕ ಉದ್ದೇಶಗಳಿಂದ ಹರಿಕೆ ಕಟ್ಟಿಕೊಳ್ಳುತ್ತಾರೆ. ಭಕ್ತಿಯಿಂದ ಇಲ್ಲಿಯ ದೇವರನ್ನು ಬೇಡಿಕೊಂಡರೆ ಖಂಡಿತ ಅದು ಈಡೇರುತ್ತದೆ ಎಂಬುವುದಕ್ಕೆ ಅಲ್ಲಿರುವ ರಾಶಿ ಮಣ್ಣಿನ ಹರಿಕೆಗಳೇ ಸಾಕ್ಷಿ.
ಸಿನಿಮಾ ರಿಲ್ ಸುರ್ಯ ಸದಾಶಿವ ರುದ್ರನಿಗೆ ಅರ್ಪಿಸಿದ ಯಶ್
ಮಣ್ಣಿನ ಸಿನಿಮಾ ರೀಲ್ ಅನ್ನು ಯಶ್ ಅವರು ಅರ್ಪಿಸಿದ್ದಾರೆ, ಬಹುಶಃ ಸಿನಿಮಾ ಕ್ಷೇತ್ರದಲ್ಲಿ ಯಶಸ್ಸು ಕೊಡಲು ಅವರು ಬೇಡಿಕೊಂಡಿದ್ದರಬಹುದು, ಯಶ್ ಈಗ್ ಪ್ಯಾನ್ ಇಂಡಿಯಾ ನಟ, ಕೆಜಿಎಪ್ ಯಾವ ಮಟ್ಟಿಗೆ ಸಕ್ಸಸ್ ತಂದು ಕೊಡ್ತು ಎಂಬುವುದನ್ನು ನೋಡಿದ್ದೇವೆ. ಯಶ್ ಯಶ್ವಸಿಗೆ ಈ ರುದ್ರನ ಆಶೀರ್ವಾದವೂ ಒಂದು ಕಾರಣವಾಗಿರಬಹುದು.
ಒಳ್ಳೆಯ ಮನಸ್ಸಿನಿಂದ ಪ್ರಾರ್ಥಿಸಿದರೆ ಖಂಡಿತ ನಮ್ಮ ಕೋರಿಕೆ ಆ ದೇವನಿಗೆ ತಲುಪುವುದು
ಯಾರು ಈ ಕ್ಷೇತ್ರಕ್ಕೆ ಬರುತ್ತಾರೋ ಅವರು ಭಕ್ತಿಯಿಂದ ಶುದ್ಧ ಮನಸ್ಸಿನಿಂದ ಪ್ರಾರ್ಥಿಸಬೇಕು, ಖಂಡಿತ ಪ್ರಾರ್ಥನೆಗೆ ಉತ್ತಮ ಪ್ರತಿಪಲ ಸಿಕ್ಕೇ ಸಿಗುವುದು. ಅಲ್ಲದೆ ಇಲ್ಲಿ ಮಣ್ಣಿನ ಅಕಾರಗಳನ್ನಷ್ಟೇ ಹರಿಕೆಯನ್ನಾಗಿ ಸ್ವೀಕರಿಸಲಾಗುವುದು. ಇಲ್ಲಿಗೆ ಬಂದು ಹರಿಕೆ ಅರ್ಪಿಸುವ ಪ್ರತಿಯೊಬ್ಬರಿಗೂ ಇಲ್ಲಿಯ ಪವಾಡಗಳ ಬಗ್ಗೆ ಹೇಳಲು ಒಂದೊಂದು ಕತೆ ಇರುತ್ತದೆ.
ಕೆಲವರು ಎಷ್ಟೇ ಪ್ರಯತ್ನ ಪಟ್ಟರೂ ಮನೆ ನಿರ್ಮಾನ ಪೂರ್ಣವಾಗುತ್ತಿರಲಿಲ್ಲ, ಇಲ್ಲಿ ಹರಿಕೆ ಹೊತ್ತ ಮೇಲೆ ಈಗಷ್ಟೇ ಗೃಹ ಪ್ರವೇಶ ಮಾಡಿದೆ ಎಂದರೆ , ಮತ್ತೊಬ್ಬರು ನಮಗೆ ಸಂತಾನ ಭಾಗ್ಯ ಸಿಕ್ಕಿದೆ, ಇನ್ನು ಕೆಲವರು ನಾವು ವೃತ್ತಿ ಬದುಕಿನಲ್ಲಿ ಯಶಸ್ವಿಯಾದೆವು ಎಂದು ಇಲ್ಲಿಯ ಶಕ್ತಿಯ ಬಗ್ಗೆ ಹೇಳುತ್ತಾರೆ.
ನೀವು ಈ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ ಎಂದರೆ ಇಂಥ ಅದ್ಭುತ ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಲು ಮರೆಯದಿರಿ.
ಬಸ್‌ನಲ್ಲಿ ಕ್ಷೇತ್ರ ದರ್ಶನಕ್ಕೆ ಬಂದವರು ಉಜಿರೆಗೆ ಬಸ್‌ನಲ್ಲಿ ಬಂದರೂ ಸಾಕು ಈ ಕ್ಷೇತ್ರಕ್ಕೆ ಕರೆದುಕೊಂಡು ಹೋಗಲು ಅನೇಕ ಆಟೋರಿಕ್ಷಾಗಳಿವೆ.



Click it and Unblock the Notifications











