Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ಅಲ್ಲು ಅರ್ಜುನ್ ವಿರುದ್ಧ ಒಂದೇ ವರ್ಷದಲ್ಲಿ 2 ಕೇಸ್..! 10 ವರ್ಷ ಶಿಕ್ಷೆಯಾಗುತ್ತಾ?
ಪುಷ್ಪಾ 2 ಸಿನಿಮಾ ಯಶಸ್ಸಿನಲ್ಲಿರುವ ನಟ ಅಲ್ಲು ಅರ್ಜುನ್‌ಗೆ ಇಂದು ಪೊಲೀಸರು ಶಾಕ್ ನೀಡಿದ್ದರು. ಮಧ್ಯಾಹ್ನದ ವೇಳೆಗೆ ಪೋಲೀಸರು ಅವರನ್ನು ಬಂಧಿಸಿರುವುದು ಇಡೀ ಚಿತ್ರರಂಗ ಮಾತ್ರವಲ್ಲದೆ ದೇಶದಾದ್ಯಂತ ಸುದ್ದಿಯಾಗಿದೆ. ದೇಶದಲ್ಲೆಡೆ ಅಭಿಮಾನಿ ಬಳಗ ಹೊಂದಿರುವ ಅವರು, ಬಂಧನದ ಸುದ್ದಿ ಹೊರಬೀಳುತ್ತಿದ್ದಂತೆ ಎಲ್ಲರಲ್ಲೂ ಆಘಾತ ಮೂಡಿಸಿತ್ತು.
ಅಲ್ಲು ಅರ್ಜುನ್ ಸದ್ಯಕ್ಕೆ ಪಾನ್ ಇಂಡಿಯಾದಲ್ಲಿ ಯಶಸ್ವಿ ನಾಯಕ ನಟರಾಗಿ ಗುರುತಿಸಿಕೊಂಡಿದ್ದಾರೆ. ಪುಷ್ಪಾ 2 ಸಿನಿಮಾ ಬಿಡುಗಡೆಯಾಗಿ ಸಾವಿರ ಕೋಟಿಗೂ ಅಧಿಕ ಹಣ ಲೂಟಿ ಮಾಡಿದೆ. ಈಗಲೂ ಹಲವು ಚಿತ್ರಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇತ್ತ ನಟ ಅಲ್ಲು ಅರ್ಜುನ್ ಬಂಧನ ಈಗ ಅಭಿಮಾನಿಗಳಲ್ಲಿ ಆತಂಕ ಹುಟ್ಟಲು ಕಾರಣವಾಗಿದೆ.

ನಟನ ಬಂಧನಕ್ಕೆ ಕಾರಣವೇನು?
ಪುಷ್ಪಾ 2 ಸಿನಿಮಾ ಬಿಡುಗಡೆಯಾದ ದಿನ ಅಭಿಮಾನಿಗಳ ಸುನಾಮಿಯೇ ಎದ್ದಿತ್ತು. ಬಿಡುಗಡೆಯಾದ ದಿನ ಅವರು ಸಂಧ್ಯಾ ಚಿತ್ರಮಂದಿರಕ್ಕೆ ದಿಢೀರ್ ಭೇಟಿ ನೀಡಿದ್ದರು. ಈ ನಡುವೆ ತಮ್ಮ ನೆಚ್ಚಿನ ನಟನ ನೋಡಲು ಅಭಿಮಾನಿಗಳ ನೂಕುನುಗ್ಗಲು ಆರಂಭವಾಗಿತ್ತು. ಈ ಘಟನೆ ಕಾಲ್ತುಳಿತಕ್ಕೆ ಕಾರಣವಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಹಾಗೆ ಮಹಿಳೆಯ ಪುತ್ರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಈ ಘಟನೆ ಅಲ್ಲಿ ಗೊಂದಲಕ್ಕೆ ಕಾರಣವಾಗಿತ್ತಲ್ಲದೆ ಜನರನ್ನು ತಡೆಯಲು ಪೊಲೀಸರು ಹರ ಸಾಹಸಪಟ್ಟಿದ್ದರು. ಬಳಿಕ ನಟ ಅಲ್ಲು ಅರ್ಜುನ್ ಮೃತ ಮಹಿಳೆಯ ಕುಟುಂಬಸ್ಥರಿಗೆ 20 ಲಕ್ಷ ರೂಪಾಯಿ ಪರಿಹಾರ ಕೂಡ ನೀಡಿದ್ದರು, ಆದರೆ ಈ ಘಟನೆ ಸಂಬಂಧ ಅಲ್ಲು ಅರ್ಜುನ್ ಸೇರಿ ನಾಲ್ವರ ವಿರುದ್ಧ ಚಿಕ್ಕಡಪಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು, ಆದರೆ ಅಲ್ಲು ಅರ್ಜುನ್ ಈ ನೋಟಿಸ್‌ಗೆ ಉತ್ತರಿಸದ ಕಾರಣ ಇಂದು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಇದಕ್ಕೂ ಮೊದಲು ಸಹ ಬಿದ್ದಿತ್ತು ಪ್ರಕರಣ
ಅಲ್ಲು ಅರ್ಜುನ್ ಇದೇ ಮೊದಲ ಬಾರಿಗೆ ಪೊಲೀಸ್ ಪ್ರಕರಣದಲ್ಲಿ ಭಾಗಿಯಾಗಿಲ್ಲ ಬದಲಿಗೆ. ಈ ಮೊದಲು ಇತ್ತೀಚಿಗೆ ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಕೂಡ ಅವರ ಮೇಲಿತ್ತು. ಮೇ ನಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ನಂದ್ಯಾಲ ಕ್ಷೇತ್ರದ ವೈಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಶಿಲ್ಪಾ ರವಿ ಚಂದ್ರ ಕಿಶೋರ್ ರೆಡ್ಡಿ ಅವರ ನಿವಾಸಕ್ಕೆ ಅಲ್ಲು ಅರ್ಜುನ್ ಭೇಟಿ ನೀಡಿದ್ದರು. ಈ ವೇಳೆ ಅವರ ಅಭಿಮಾನಿಗಳು ನಿವಾಸ ಎದುರು ಜಮಾಯಿಸಿದ್ದರು. ಆ ಸಮಯದಲ್ಲಿ 144 ಸೆಕ್ಷನ್ ಕೂಡ ಜಾರಿಯಲ್ಲಿದ್ದ ಕಾರಣ ಅವರು ಈ ನಿಯಮ ಉಲ್ಲಂಘಟನೆ ಆರೋಪಕ್ಕೆ ಒಳಗಾದರು. ಹಾಗೆ ಈ ಪ್ರಕರಣವನ್ನು ಆಂಧ್ರ ಪ್ರದೇಶ ಹೈಕೋರ್ಟ್ ವಿಚಾರಣೆ ಕೂಡ ನಡೆಸಿ ಅರ್ಜಿ ವಜಾ ಮಾಡಿತ್ತು.
ಈಗ ಮತ್ತೊಂದು ಪ್ರಕರಣದಲ್ಲಿ ಅಲ್ಲು ಅರ್ಜುನ್ ಬಂಧನವಾಗಿದೆ. ಅಲ್ಲು ಅರ್ಜುನ್ ಈಗಾಗಲೇ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿ ವಿಚಾರಣೆ ಇನ್ನು ನಡೆಯುವುದು ಬಾಕಿ ಉಳಿದಿರುವಾಗಲೇ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದಾರೆ. ಅವರು ರೂಮ್‌ನಲ್ಲಿದ್ದಾಗ ಪೊಲೀಸರು ಮನೆಯೊಳಗೆ ಬಂದು ಜೀಪ್‌ಗೆ ಹತ್ತಿಸಿಕೊಂಡು ಹೋಗಿದ್ದಾರೆ.
ಅಲ್ಲು ಅರ್ಜುನ್ ವಿರುದ್ಧ ಈ ಪ್ರಕರಣದಲ್ಲಿ 105, 118 (1) ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಸೆಕ್ಷನ್ 105 ಒಬ್ಬ ವ್ಯಕ್ತಿಯ ಸಾವಿಗೆ ಆರೋಪಿ ಕಾರಣವಾಗಿರುವುದು ಸಾಬೀತಾದರೆ, ಸಾವಿನ ಉದ್ದೇಶ ಇಟ್ಟುಕೊಂಡು ಕೆಲಸ ಮಾಡಿದರೆ, ಗರಿಷ್ಠ 10 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗುತ್ತದೆ. ಸದ್ಯ ಅಲ್ಲು ಅರ್ಜುನ್ ಪ್ರಕರಣದಲ್ಲೂ ಈ ಸೆಕ್ಷನ್ ಹಾಕಲಾಗಿದೆ.



Click it and Unblock the Notifications











