Latest Updates
-
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ
₹32 ಕೋಟಿಗೆ ಈ ಪತ್ರ ಹರಾಜು..! ಇದರಲ್ಲಿ ಏನಿದೆ? ಈ ಪತ್ರ ಬರೆದಿದ್ದು ಯಾರು?
ಕೆಲವೊಮ್ಮೆ ಎಂತಹ ವಸ್ತುಗಳು ಹರಾಜುಗಳಲ್ಲಿ ಕೋಟಿ ಕೋಟಿ ರೂಪಾಯಿಗೆ ಖರೀದಿಸುವುದು ಹಾಗೂ ಅವುಗಳಿಗೆ ಬೆಲೆ ಕಟ್ಟುವುದು ನೋಡಿ ನಾವು ಅಚ್ಚರಿಗೆ ಒಳಗಾಗಿರುತ್ತೇವೆ. ಅವು ಒಂದೂ ರೂಪಾಯಿ ಬೆಲೆ ಬಾಳದಿದ್ದರೂ ಕೂಡ ಹರಾಜಿನಲ್ಲಿ ಕೋಟಿ ಕೋಟಿ ರಪಾಯಿ ನೀಡಿ ಅವುಗಳನ್ನು ಶ್ರೀಮಂತರು ಖರೀದಿಸುತ್ತಾರೆ.
ಕೆಲವೊಂದು ಹರಾಜು ಪ್ರಕ್ರಿಯೆ ಕೇವಲ ಅಂತಸ್ತು ತೋರ್ಪಡಿಸಲೆಂದೇ ಮಾಡಿರುತ್ತಾರೆ. ಮತ್ತೆ ಕೆಲವು ಅವರ ವೈಯಕ್ತಿಕ ಪ್ರತಿಷ್ಟೆಗಾಗಿ ನಡೆಸುತ್ತಾರೆ. ಈ ಹರಾಜು ಪ್ರಕ್ರಿಯೆಯಲ್ಲಿ ಕೆಲವೊಂದು ವಸ್ತುಗಳು ಯಾರು ಊಹಿಸದಷ್ಟು ದೊಡ್ಡ ಮೊತ್ತಕ್ಕೆ ಹರಾಜಾಗುವ ಮೂಲಕ ಅಚ್ಚರಿಗೆ ಕಾರಣವಾಗುತ್ತವೆ.

ಅದರಲ್ಲೂ ಕೆಲವೊಂದು ವಸ್ತುಗಳು ಅತ್ಯಂತ ಕಡಿಮೆ ಬೆಲೆಗೆ ಹರಾಜಾಗುತ್ತವೆ ಎಂದುಕೊಂಡಿದ್ದರೂ ಕೂಡ ಅವು ಅತ್ಯಧಿಕ ಬೆಲೆಗೆ ಮಾರಾಟವಾಗಿ ಎಲ್ಲರಲ್ಲೂ ಎಚ್ಚರಿಗೆ ಕಾರಣವಾಗುತ್ತವೆ. ಈಗಲು ಸಹ ಇಂತಹದ್ದೆ ಘಟನೆಯೊಂದು ನಡೆದಿದೆ. ನೀವು ಆಲ್ಬರ್ಟ್ ಐನ್‌ಸ್ಟೈನ್ ಹೆಸರು ಕೇಳಿರಬಹುದು, ಜಗತ್ತು ಕಂಡ ಅತ್ಯಂತ ಬುದ್ದಿಶಾಲಿ ವಿಜ್ಞಾನಿಯಾತ.
ನಾವಿಂದು ಅನುಸರಿಸುತ್ತಿರುವ ಹತ್ತು ಹಲವು ಸಿದ್ದಾಂತಗಳು, ಪ್ರಮೆಯಗಳ ಕೊಡುಗೆದಾರ ಆತ. ಆತ ಹೇಳಿದ್ದು ಇಂದಿಗೂ ಸತ್ಯ ಇಂದಿಗೂ ಅಮರವಾಗಿ ಉಳಿದುಬಿಟ್ಟಿವೆ. ಇಡೀ ಭೂ ಮಂಡಲವನ್ನೇ ನಾಶ ಪಡಿಸುವ ನ್ಯೂಕ್ಲಿಯರ್ ಬಾಂಬ್‌ಗಳಿಂದ ಹಿಡಿದು ಅತ್ಯಂತ ಸಣ್ಣ ಎಲೆಕ್ಟ್ರಿಕ್ ಉತ್ಪನ್ನಗಳ ತಯಾರಿಕೆಗೂ ಆತನ ಸಿದ್ದಾಂತವೇ ಕಾರಣ
ಇನ್ನು ನ್ಯೂಕ್ಲಿಯರ್ ಬಾಂಬ್‌ಗಳು ಎಷ್ಟು ಅಪಾಯಕಾರಿ ಎಂಬುದು ನಿಮಗೆ ಗೊತ್ತಿದೆ. ಈ ಬಾಂಬ್‌ಗಳಿಂದ ಇಡಿ ವಿಶ್ವವನ್ನೇ ನಾಶ ಮಾಡಬಹುದು. ಅಷ್ಟೊಂದು ಅಪಾಯಕಾರಿ ಬಾಂಬ್ ತಯಾರಿಕೆಯ ಹಿಂದೆ ಈತನ ಕೊಡುಗೆಯೂ ಇತ್ತು. ಆದರೆ ಆತನಿಗೆ ಅದರ ದುಷ್ಪರಿಣಾಮದ ಕುರಿತಾಗಿಯೂ ಅಷ್ಟೇ ಕಾಳಜಿ ಇತ್ತು.
ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್‌ಸ್ಟೈನ್, ಈ ಬಾಂಬ್‌ಗಳ ಅಪಾಯ ಕುರಿರು ಬರೆದಿದ್ದ ಪತ್ರ ಈಗ ಹರಾಜಿನಲ್ಲಿ ಬರೋಬ್ಬರಿ 32 ಕೊಟಿ ರೂಪಾಯಿಗೆ ಹರಾಜಾಗಿದೆ. ಪರಮಾಣು ಯುಗದಲ್ಲಿ ಪ್ರಮುಖ ಪಾತ್ರ ವಹಿಸಿದ ಖ್ಯಾತ ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್‌ಸ್ಟೈನ್ ಬರೆದ ಐತಿಹಾಸಿಕ ಪತ್ರವು ಕ್ರಿಸ್ಟಿ ಹರಾಜಿನಲ್ಲಿ $ 3.9 ಮಿಲಿಯನ್ (ಸುಮಾರು ರೂ 32 ಕೋಟಿ) ಗೆ ಮಾರಾಟವಾಯಿತು. ನ್ಯೂಯಾರ್ಕ್‌ನಲ್ಲಿರುವ ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್ ಲೈಬ್ರರಿಯ ಸಂಗ್ರಹದ ಭಾಗವಾಗಿರುವ ಮೂಲ ಪತ್ರವು ಇತಿಹಾಸವನ್ನು ರೂಪಿಸುವಲ್ಲಿ ಅಪಾರ ಮಹತ್ವವನ್ನು ಹೊಂದಿದೆ.
ಪ್ರಪಂಚದ ಮೊದಲ ಪರಮಾಣು ಬಾಂಬ್ ಅಭಿವೃದ್ಧಿಗೆ ಕಾರಣವಾಗುವ ಘಟನೆಗಳ ಸರಣಿಯನ್ನು ಹುಟ್ಟುಹಾಕಿತು - ಐನ್‌ಸ್ಟೈನ್ ನಂತರ ಅವರ ಒಂದು ದೊಡ್ಡ ತಪ್ಪು ಎಂದು ವಿಷಾದಿಸಿ 1939ರಲ್ಲಿ ಯುಎಸ್ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರ ಇಂದಿಗೂ ಜೋಪಾನವಾಗಿ ಇಡಲಾಗಿದ್ದು ಈಗ ಬರೋಬ್ಬರಿ 32 ಕೋಟಿ ರೂಪಾಯಿಗೆ ಹರಾಜಾಗಿದೆ.
ಈ ಪರಮಾಣು ಬಾಂಬ್‌ಗಳ ಕುರಿತು ಯಾರಿಗೂ ಒಂದಿಷ್ಟು ಮಾಹಿತಿ ತಿಳಿದಿರದ ಸಮಯದಲ್ಲಿ ಐನ್‌ಸ್ಟೈನ್ ಇಡೀ ಅಪಾಯದ ಕುರಿತು ವಿವರಿಸಿದ್ದರು, ಸುಲಭವಾಗಿ ವಾಉ ಮಾರ್ಗ ಜಲಮಾರ್ಗ, ಭೂ ಮಾರ್ಗದ ಸಹಾಯದಿಂದ ಇದನ್ನು ಹೊತ್ತೊಯ್ಯಬಹುದು ಆದರೆ ಇಡೀ ಮಾನವ ಕುಲ ಇದರಿಂದ ನಾಶವಾಗಬಹುದು ಎಂದು ಅವರು ಎಚ್ಚರಿಸಿದ್ದರು.
ಹೀಗಾಗಿ ಈ ಪತ್ರವನ್ನು " ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಪತ್ರಗಳಲ್ಲಿ ಒಂದೆಂದು ವಿವರಿಸಲಾಗಿದೆ" ಎಂದು ಕ್ರಿಸ್ಟೀಸ್‌ನ ಅಮೇರಿಕಾನಾ, ಪುಸ್ತಕಗಳು ಮತ್ತು ಹಸ್ತಪ್ರತಿಗಳ ಹಿರಿಯ ತಜ್ಞ ಪೀಟರ್ ಕ್ಲಾರ್ನೆಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ನ್ಯೂಕ್ಲಿಯರ್ ಬಾಂಬ್‌ಗಳಿಂದ ಮುಂದೆ ಸಂಭವಿಸಬಹುದಾದ ಘಟನೆಗಳ ಕುರಿತು ಐನ್‌ಸ್ಟೈನ್ ಆ ಪತ್ರದಲ್ಲಿ ಆತಂಕ ಹೊರಹಾಕಿದ್ದರು. ಹೀಗಾಗಿ ಈ ಪತ್ರ ಇಂದಿಗೂ ಪ್ರಸ್ತುತವಾಗಿದೆ. ಇಂದಿಗೂ ಪರಮಾಣು ಬಾಂಬ್‌ಗಳಿಂದ ಆತಂಕ ಇದ್ದೇ ಇದೆ.



Click it and Unblock the Notifications
