Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಮೇ ತಿಂಗಳಿನಲ್ಲಿ ಅಕ್ಷಯ ತೃತೀಯ ಯಾವಾಗ? ಪೂಜಾ ಸಮಯ ಹಾಗೂ ಪಠಿಸಬೇಕಾದ ಮಂತ್ರಗಳು
ಅಕ್ಷಯ ತೃತೀಯ ಅಂದರೆ ತುಂಬಾನೇ ಶುಭ ದಿನ, ಹಾಗಾಗಿ ವರ್ಷಕ್ಕೊಮ್ಮೆ ಬರುವ ಈ ದಿನವನ್ನು ಕಾಯುತ್ತಿರುತ್ತಾರೆ. ಈ ದಿನದಂದು ಚಿನ್ನ, ಬೆಳ್ಳಿ, ವಜ್ರ, ಹಳದಿ ಬಣ್ಣದ ಧಾನ್ಯಗಳು ಹೀಗೆ ಕೆಲ ವಸ್ತುಗಳನ್ನು ಮನೆಗೆ ತಂದರೆ ತುಂಬಾನೇ ಶುಭ ಎಂದು ಹೇಳಲಾಗುವುದು.
ಈ ವರ್ಷ ಅಕ್ಷಯ ತೃತೀಯ ಮೇ ತಿಂಗಳಿನ ಯಾವ ದಿನಾಂಕದಂದು ಬಂದಿದೆ, ಅಕ್ಷಯ ತೃತೀಯದಂದು ಪೂಜೆಗೆ ಶುಭ ಸಮಯ ಯಾವಾಗ? ಎಂಬೆಲ್ಲಾ ಮಾಹಿತಿ ನೋಡೋಣ ಬನ್ನಿ:

ಅಕ್ಷಯ ತೃತೀಯ ಮಹತ್ವ
ಅಕ್ಷಯ ಪಾತ್ರೆ ಬಗ್ಗೆ ಕೇಳಿರುತ್ತೀರಾ, ಅಕ್ಷಯ ಅಂದರೆ ಕೊನೆಯಾಗದ್ದು ಎಂದಿಗೂ ಖಾಲಿಯಾಗಲ್ಲ ಎಂದರ್ಥ, ಹಾಗಾಗಿ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇಯ ದಿನದಂದು ಅಕ್ಷಯ ತೃತೀಯ ದಿನ ಮನೆಯ ಸಮೃದ್ಧಿ ಹೆಚ್ಚಿಸುವ ವಸ್ತುಗಳನ್ನು ತರಲಾಗುವುದು. ಈ ದಿನ ಆಭರಣ ಖರೀದಿ ಮಾಡುವುದರಿಂದ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ ಎಂಬ ನಂಬಿಕೆ, ಲಕ್ಷ್ಮಿ ಕೃಪೆ ಸದಾ ನಮ್ಮ ಮೇಲಿರುತ್ತದೆ ಎಂದು ಈ ದಿನದಂದು ಚಿನ್ನ-ಬೆಳ್ಳಿಯನ್ನು ಖರೀದಿಸುತ್ತಾರೆ. ಈ ದಿನ ಏನು ಮಾಡುತ್ತೇವೋ ಅದರ ಫಲ ಹೆಚ್ಚಾಗುವುದು ಎಂಬ ನಂಬಿಕೆ.
ಈ ದಿನ ವಿವಾಹವಾದರೆ ತುಂಬಾನೇ ಶುಭ ಎಂದು ಹೇಳಲಾಗುವುದು
ಅಕ್ಷಯ ತೃತೀಯದಂದು ಮದುವೆಯಾದರೆ ದಾಂಪತ್ಯ ಜೀವನ ತುಂಬಾನೇ ಅನೂನ್ಯವಾಗಿರುತ್ತದೆ ಎಂಬ ನಂಬಿಕೆ. ಹಾಗಾಗಿ ತುಂಬಾ ಜನರು ತಮ್ಮ ಮಕ್ಕಳಿಗೆ ಈ ದಿನದಂದು ಮದುವೆ ಮಾಡಲು ಬಯಸುತ್ತಾರೆ. ಈ ದಿನದಂದು ಗಂಗೆ ಭೂಮಿಗೆ ಬಂದಳು ಎಂದು ಪೌರಾಣಿಕ ಕತೆಯಿದೆ. ಅಲ್ಲದೆ ಪರಶುರಾಮ ಹುಟ್ಟಿದ್ದು ಕೂಡ ಇದೇ ದಿನ.
ಹಾಗಾಗಿ ಈ ದಿನವನ್ನು ಅತ್ಯಂತ ಶುಭ ದಿನವೆಂದು ಹೇಳಲಾಗುವುದು, ಈ ದಿನ ಮನೆಯಲ್ಲಿ ಯಾವುದೇ ಜಗಳವಾಡಬಾರದು ಎಲ್ಲರೂ ಖುಷಿ ಖುಷಿಯಿಂದ ಇರಬೇಕು, ಮನೆಗೆ ಹೊಸ ವಸ್ತುಗಳನ್ನು ತರಲು, ಏನಾದರೂ ಹೊಸ ಉದ್ಯಮ ಪ್ರಾರಂಭಿಸಲು ಈ ದಿನ ತುಂಬಾ ಉತ್ತಮವಾಗಿದೆ, ಈ ದಿನ ಹೂಡಿಕೆಗೂ ಒಳ್ಳೆಯದು, ಹೂಡಿಕೆ ಮಾಡುವುದರಿಂದ ದುಪ್ಪಟ್ಟು ಲಾಭ ಸಿಗುವುದು ಎಂದು ಹೇಳಲಾಗುವುದು.
ಅಕ್ಷಯ ತೃತೀಯ ದಿನಾಂಕ ಮೇ 10
ಅಕ್ಷಯ ತೃತೀಯ ಪೂಜಾ ಮುಹೂರ್ತ ಬೆಳಗ್ಗೆ 05:53ರಿಂದ ಮಧ್ಯಾಹ್ನ 12:18ರವರೆಗೆ ಇದೆ
ಅಕ್ಷಯ ತೃತೀಯ ಪ್ರಾರಂಭ ಬೆಳಗ್ಗೆ 04:17ರಿಂದ ಪ್ರಾರಂಭವಾಗಿ ಮೇ 11 ಮುಂಜಾನೆ 2:50ಕ್ಕೆ ಮುಕ್ತಾಯವಾಗಲಿದೆ.
ಈ ಸಮಯದಲ್ಲಿ ವಿಷ್ಣು, ಲಕ್ಷ್ಮಿಗೆ ತುಪ್ಪದ ದೀಪ ಹಚ್ಚಿ ಪೂಜೆ ಮಾಡಿ.
ಅಕ್ಷಯ ತೃತೀಯದಂದು ಈ ಮಂತ್ರ ಪಠಿಸಿ
ವಿಷ್ಣು ಮಂತ್ರ
ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧುಶ್ ಚ ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ
ತ್ವಮೇವ ತ್ವಮೇವ ಸರ್ವಂ ಮಮ ದೇವದೇವ
ಲಕ್ಷ್ಮಿ ಮಂತ್ರ
ಲಕ್ಷ್ಮೀ ಸ್ತ್ರೋತ್ರ ಸುಮನಸವಂದಿತ ಮಾಧವಿ
ಚಂದ್ರ ಸಹೋದರಿ ಹೇಮಮಯೀ
ಮುನಿಗಣ ಮಂಡಿತ ಮೋಕ್ಷ ಪ್ರದಾಯಿನಿ
ಮಂಜುಳಾ ಭಾಷಿಣಿ ವೇದನುತೆ ಪಂಕಜವಾಸಿನಿ
ದೇವಸುಪೂಜಿತ ಸದ್ಗುಣ ವರ್ಷಿಣಿ
ಸನ್ನಿಯುತೆ ಜಯ ಜಯ ಹೇ ಮಧುಸೂದನ ಕಾಮಿನಿ
ಕುಬೇರ ಮಂತ್ರ:
ಓಂ ಶ್ರೀಂ ಒಂ ಹ್ರೀಂ ಶ್ರೀಂ ಓಂ ಹ್ರೀಂ ಶ್ರೀಂ ಕ್ಲೀಮ್ ವಿತ್ತೆಶ್ವರಾಯ ನಮಃ
ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ
ಧನಧಾನ್ಯಾಧಿಪತಯೇ ಧನಧಾನ್ಯಸಮೃದ್ಧಿಂ ಮೇ ದೇಹಿ ದಾಪಯ ಸ್ವಾಹಾ
ಈ ಮೂರೂ ಮಂತ್ರಗಳನ್ನು ಪಠಿಸುವುದರಿಂದ ಏನಾದರೂ ಆರ್ಥಿಕ ಸಂಕಷ್ಟ ಇದ್ದರೆ ಅದು ದೂರಾಗುವುದು, ಸಮೃದ್ದಿ ಹೆಚ್ಚಾಗುವುದು , ಈ ಮಂತ್ರವನ್ನು ಪ್ರತಿದಿನ ಪಠಣೆ ಮಾಡಿದರೆ ಸಾಲದಿಂದ ಬೇಗನೆ ಮುಕ್ತರಾಗಬಹುದು.



Click it and Unblock the Notifications
