Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪೌರತ್ವ ಪಡೆದು ಮೊದಲ ಬಾರಿ ಮತ ಹಾಕಿದ ನಟ ಅಕ್ಷಯ್! ಕೆನಡಾ ಪೌರತ್ವ ಪಡೆದಿದ್ದೇಕೆ..?
ಬಾಲಿವುಡ್ ಸೂಪರ್ ಸ್ಟಾರ್ ಕಿಲಾಡಿ ಎಂದೇ ಖ್ಯಾತರಾಗಿರುವ ನಟ ಅಕ್ಷಯ್ ಕುಮಾರ್ ಯಾರಿಗೆ ತಾನೆ ಗೊತ್ತಿಲ್ಲಾ ಹೇಳಿ. ಅವರು ದಶಕಗಳಿಂದಲೂ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದಾರೆ. ಭಾರತ ಅಷ್ಟೇ ಅಲ್ಲ ವಿದೇಶದಲ್ಲಿ ಅವರ ಅಭಿಮಾನಿಗಳ ಬಳಗವಿದೆ.
ಆದರೆ ಅವರು ಆಗಾಗ ಪೌರತ್ವ ಸಂಬಂಧ ಸುದ್ದಿಯಾಗುತ್ತಿರುತ್ತಾರೆ. ಅವರು ಕೆನಡಾದ ಪೌರತ್ವ ಪಡೆದಿದ್ದಾರೆ ಎಂದು ಅವರ ಪೌರತ್ವ ಕೆನಡಾದಲ್ಲಿದೆ ಎಂದು ಯಾವಾಗಲು ಅವರ ಕುರಿತು ಟೀಕೆಗಳು ಕೇಳಿಬರುತ್ತಿದ್ದವು. ಆದರೆ ಅವರು ಕಳೆದ ವರ್ಷ ಭಾರತದ ಪೌರತ್ವ ಪಡೆದಿದ್ದಾರೆ. ಹೀಗಾಗಿ ಈ ಬಾರಿ ಅವರು ಮೊದಲ ಬಾರಿಗೆ ಮತದಾನ ಸಹ ಮಾಡಿದ್ದಾರೆ.

ಅವರು ಕೆನಡಾದ ಪಾಸ್‌ಪೋರ್ಟ್ ಹೊಂದಿದ್ದ ಕಾರಣಕ್ಕೆ ಈ ಹಿಂದೆ ಕೆನಡಾ ಕುಮಾರ್ ಎಂದು ಟ್ರೋಲ್‌ಗೆ ಒಳಗಾಗಿದ್ದರು. ಈಗ 2024 ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಮತ ಚಲಾಯಿಸಿದ್ದಾರೆ. ಅವರು ಮತ ಚಲಾಯಿಸುತ್ತಿದ್ದಂತೆ, ಸುದ್ದಿಗಾರರೊಂದಿಗೆ ಮಾತನಾಡಿದರು ಮತ್ತು ಭಾರತದ ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಮನವಿ ಮಾಡಿದರು.
ನನ್ನ ಭಾರತವು ಅಭಿವೃದ್ಧಿ ಹೊಂದಬೇಕು ಮತ್ತು ಸದೃಢವಾಗಿರಬೇಕು ಎಂದು ನಾನು ಬಯಸುತ್ತೇನೆ. ನಾನು ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಮತ ಹಾಕಿದ್ದೇನೆ. ಅವರು ಸರಿ ಎಂದು ಭಾವಿಸುವದಕ್ಕೆ ಮತ ಚಲಾಯಿಸಬೇಕು. ಜನರು ತಮಗೆ ಸರಿ ಎನಿಸಿದ್ದಕ್ಕೆ ಮತ ಹಾಕಬೇಕು... ಮತದಾರರು ಮತದಾನ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾನು ಬೆಳಿಗ್ಗೆ 7 ಗಂಟೆಗೆ ಇಲ್ಲಿದ್ದೆ, ಮತಗಟ್ಟೆ ತೆರೆದಾಗ ನಾನು ಒಳಗೆ ಸುಮಾರು 500-600 ಜನರನ್ನು ನೋಡಿದೆ ಎಂದಿದ್ದಾರೆ.
ಅಕ್ಷಯ್ ಕೆನಡಾದ ಪಾಸ್‌ಪೋರ್ಟ್ ಹೊಂದಿದ್ದೇಕೆ?
ಕೆನಡಾದ ಪಾಸ್‌ಪೋರ್ಟ್ ಹೊಂದಿದ್ದ ಅಕ್ಷಯ್ ಕುಮಾರ್ ಬಹಳಷ್ಟು ಟ್ರೋಲ್‌ಗೆ ಒಳಗಾಗಿದ್ದರು. ಎಷ್ಟರಮಟ್ಟಿಗೆಂದರೆ, ಅವರು ಭಾರತೀಯರನ್ನು ತೊರೆದು ಕೆನಡಾದಲ್ಲಿ ಪೂರ್ಣ ಸಮಯ ನೆಲೆಸಲು ಯೋಚಿಸಿದ್ದರು. ಜೊತೆಗೆ ಒಂದರ ಹಿಂದೆ ಒಂದರಂತೆ ಸಿನಿಮಾಗಳು ಸೋಲುತ್ತಿದ್ದವು. ಹೀಗಾಗಿ ಅವರು ಭಾರತ ತೊರೆಯುವ ಆಲೋಚನೆ ಮಾಡಿದ್ದರು. ಆದರೆ ಇತ್ತೀಚಿಗೆ 2 ಚಿತ್ರಗಳ ಯಶಸ್ಸಿನ ಬಳಿಕ ಅವರು ಮತ್ತೆ ಭಾರತದಲ್ಲೇ ಉಳಿಯುವ ಇಚ್ಛೆ ತೋರಿಸಿದರು. ಈಗ ಭಾರತದ ಪೌರತ್ವ ಪಡೆದಿದ್ದು, ಮೊದಲ ಬಾರಿಗೆ ಮತ ಚಲಾಯಿಸಿದ್ದಾರೆ.
"ಕೆಲವು ವರ್ಷಗಳ ಹಿಂದೆ, ನನ್ನ ಚಲನಚಿತ್ರಗಳು ಕೆಲಸ ಮಾಡಲಿಲ್ಲ. ಸುಮಾರು 14-15 ಚಲನಚಿತ್ರಗಳು ಸೋತವು ಆದ್ದರಿಂದ ನಾನು ಬಹುಶಃ ಬೇರೆಡೆಗೆ ಹೋಗಿ ಅಲ್ಲಿ ಕೆಲಸ ಮಾಡಬೇಕೆಂದು ಯೋಚಿಸಿದ್ದೆ. ಬಹಳಷ್ಟು ಜನರು ಕೆಲಸಕ್ಕಾಗಿ ಅಲ್ಲಿಗೆ (ಕೆನಡಾ) ತೆರಳುತ್ತಾರೆ, ಆದರೆ ಅವರು ಇನ್ನೂ ಭಾರತೀಯ. ಹಾಗಾಗಿ ಇಲ್ಲಿ ವಿಧಿಯ ನಿಯಮ ನನ್ನನ್ನು ಬೆಂಬಲಿಸದಿದ್ದರೆ ನಾನು ಅದರ ಬಗ್ಗೆ ಏನಾದರೂ ಮಾಡಬೇಕು ಎಂದು ಯೋಚಿಸಿದೆ ಎಂದಿದ್ದಾರೆ. ಹೀಗಾಗಿ ಅಲ್ಲಿಯ ಪೌರತ್ವ ಪಡೆಯಬೇಕಾಗಿತ್ತು ಎಂದಿದ್ದಾರೆ.
ಹೀಗಾಗಿ ಅವರು ಇದೇ ಮೊದಲ ಬಾರಿಗೆ ಭಾರತದಲ್ಲಿ ಮತ ಚಲಾಯಿಸಿದ್ದಾರೆ. ಒಂದು ವೇಳೆ ಅವರು ಕೆನಡಾ ಪೌರತ್ವ ಪಡೆದಿದ್ದರಿಂದ ಅಲ್ಲಿಗೆ ಹೋಗಿ ನೆಲೆಸಿದ್ದರೆ ಇಂದು ಮತಚಲಾವಣೆಗೆ ಅವಕಾಶ ಸಿಗುತ್ತಿರಲಿಲ್ಲ. ಭಾರತ ಕಾನೂನಿನ ಪ್ರಕಾರ ಏಕ ಪೌರತ್ವಕ್ಕೆ ಮಾತ್ರ ಅವಕಾಶವಿದೆ. ಈಗ ಅಕ್ಷಯ್ ಕುಮಾರ್ ಭಾರತೀಯ ಪೌರತ್ವ ಪಡೆದಿದ್ದು, ಭಾರತೀಯ ಪ್ರಜೆಯಾಗಿದ್ದಾರೆ. ಸದ್ಯ ಅವರ ಕುರಿತ ಟೀಕೆಗಳಿಗಂತು ಬ್ರೇಕ್ ಬಿದ್ದಂತಾಗಿದೆ.
ಅವರು 1990ರಲ್ಲಿ ಕೆನಡಾದ ಪೌರತ್ವ ಪಡೆದಿದ್ದರು. ಆದರೆ 2019ರಲ್ಲಿ ಪುನಃ ಭಾರತೀಯ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆ 2023ರಲ್ಲಿ ಅವರಿಗೆ ಭಾರತದ ಪೌರತ್ವ ನೀಡಲಾಗಿತ್ತು. ಈ ಪೌರತ್ವ ಪಡೆದ ಬಳಿಕ ಅವರು ಮಾಡಿದ ಮೊದಲ ಮತದಾನ ಇದಾಗಿದೆ.



Click it and Unblock the Notifications