Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಆಗಸ್ಟ್ 29ಕ್ಕೆ ಅಜ ಏಕಾದಶಿ: ಪೂಜಾ ಸಮಯ, ಈ ದಿನ ಬಂದಿದೆ 2 ವಿಶೇಷ ಯೋಗ
ಇದೀಗ ಚಾತುರ್ಮಾಸ ನಡೆಯುತ್ತಿದೆ, ಶ್ರಾವಣ ಮಾಸದ ಕೊನೆಯ ಏಕಾದಶಿ ಅಜ ಏಕಾದಶಿ. ಈ ಅಜ ಏಕಾದಶಿಯ ಮಹತ್ವವೇನು? ಅಜ ಏಕಾದಶಿಯಂದು ಪೂಜೆಗೆ ಶುಭ ಮುಹೂರ್ತ ಯಾವಾಗ? ಈ ದಿನದ ಪೂಜಾ ವಿಧಿಗಳೇನು? ಈ ಏಕಾದಶಿ ಪೂಜೆ ಮಾಡುವುದರಿಂದ ಸಿಗುವ ಫಲವೇನು ಎಂದು ನೋಡೋಣ:

ಅಜ ಏಕಾದಶಿ ತಿಥಿ ಪ್ರಾರಂಭ: ಆಗಸ್ಟ್ 28 ರಾತ್ರಿ 01:19ಕ್ಕೆ ಶುರು
ಅಜ ಏಕಾದಶಿ ತಿಥಿ ಮುಕ್ತಾಯ: ಆಗಸ್ಟ್ 29 ರಾತ್ರಿ 01:37ಕ್ಕೆ
ಅಜ ಏಕಾದಶಿ ಪಾರಣ ಸಮಯ: ಆಗಸ್ಟ್ 30 ಬೆಳಗ್ಗೆ 07: 49ರಿಂದ 08:01ರವರೆಗೆ
ಅಜ ಏಕಾದಶಿಯ ಪೂಜಾ ವಿಧಿ
ಸೂರ್ಯೋದಯದ ಮೊದಲು ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ, ಉಪವಾಸ ಸಂಕಲ್ಪ ಕೈಗೊಳ್ಳಿ.
ನಂತರ ವಿಷ್ಣು ಮೂರ್ತಿಯನ್ನು ತೊಳೆದು ಸ್ವಚ್ಛಗೊಳಿಸಿ ವಸ್ತ್ರ ಹಾಗೂ ಹೂವುಗಳಿಂದ ಅಲಂಕರಿಸಿ.
ಶ್ರೀ ವಿಷ್ಣುವಿನ ಪೂಜೆಯಲ್ಲಿ ತುಳಸಿ ಇರಲೇಬೇಕು.
ಶ್ರೀ ವಿಷ್ಣುವಿನ ಮಂತ್ರಗಳನ್ನು ಪಠಿಸುತ್ತಾ ಪೂಜಿಸಬೇಕು.
ಈ ಬಾರಿ ಅಜ ಏಕಾದಶಿಯ ವಿಶೇಷವೆಂದರೆ ದಿನ 2 ಶುಭಯೋಗ ಏರ್ಪಡಲಿದ
ಗುರುವಾರ ಶ್ರೀ ವಿಷ್ಣುವಿನ ಆರಾಧನೆಗೆ ವಿಶೇಷವಾದ ದಿನ, ಈ ದಿನದಂದೇ ಏಕಾದಶಿ ಬಂದಿರುವುದು, ಈ ಏಕಾದಶಿ ಮತ್ತಷ್ಟು ವಿಶೇಷವಾಗಿದೆ, ಅಲ್ಲದೆ ಅಜ ಏಕಾದಶಿಯಂದು 2 ಯೋಗಗಳು ಏರ್ಪಡಲಿದೆ
ಸರ್ವಾರ್ಥ ಸಿದ್ಧಿ ಯೋಗ: ಈ ಯೋಗ 4:39ಕ್ಕೆ ಉಂಟಾಗಿ ಆಗಸ್ಟ್ 30 ಬೆಳಗ್ಗೆ 05:58ಕ್ಕೆ ಮುಕ್ತಾಯವಾಗುವುದು
ಅಲ್ಲದೆ ಆಗಸ್ಟ್ 29ರಂದು ಸಂಜೆ 6:18ಕ್ಕೆ ಸಿದ್ಧಿ ಯೋಗ ಉಂಟಾಗುವುದು
ಈ ಯೋಗದ ವಿಶೇಷತೆಯೇನು?
ಈ ಯೋಗದಂದು ಏನಾದರು ಶುಭ ಕಾರ್ಯಕ್ಕೆ ತುಂಬಾನೇ ಶುಭವಾಗಿದೆ. ಏನಾದರೂ ಶುಭ ಅರಂಭ ಮಾಡುವುದಾದರೆ ಈ ಘಳಿಗೆ ತುಂಬಾನೇ ಶುಭವಾಗಿದೆ.
ಈ ಏಕಾದಶಿಯ ಮಹತ್ವವೇನು?
ಅಜ ಏಕಾದಶಿ ಆಚರಣೆ ಮಾಡುವುದರಿಂದ ಭೂತ-ಪ್ರೇತದ ಭಯದಿಂದ ಮುಕ್ತರಾಗುತ್ತಾರೆ ಎಂದು ಹೇಳಲಾಗುವುದು. ಈ ಏಕಾದಶಿಯನ್ನು ಮಾಡಿದರೆ ಅಶ್ವಮೇಧ ಯಾಗ ಮಾಡಿದರೆ ಸಿಗುವ ಪುಣ್ಯ ಸಿಗುವುದು ಎಂದು ನಂಬಲಾಗಿದೆ.
ಅಜ ಏಕಾದಶಿಯ ವ್ರತ ಕತೆ
ಅಜ ಏಕಾದಶಿ ಆಚರಣೆ ಮಾಡುವುದರಿಂದ ಸತ್ಯ ಹರಿಶ್ಚಂದ್ರ ತನ್ನ ಕಷ್ಟಗಳಿಂದ ಮುಕ್ತನಾಗುತ್ತಾನೆ ಎಂದು ಪೌರಾಣಿಕ ಕತೆ ಹೇಳುತ್ತದೆ. ಸತ್ಯಯುಗದಲ್ಲಿ ಸತ್ಯಹರಿಶ್ಚಂದ್ರ ಸತ್ಯವೇ ಉಸಿರು ಎಂದು ನಂಬಿದ್ದ ಆತನನ್ನು ಪರೀಕ್ಷಿಸಿಲು ದೇವತರೆಗಳು ಮುಂದಾಗುತ್ತಾರೆ. ಮಿಶ್ವಾಮಿತ್ರ ಋಷಿಗೆ ತಾನು ಕೊಟ್ಟ ಮಾತು ಉಳಿಸಿಕೊಳ್ಳಲು ಇಡೀ ರಾಜ್ಯ ಹಾಗೂ ಹೆಂಡತಿ ಮಗನನ್ನು ದಾನ ಮಾಡಿ ಸ್ಮಶಾನದಲ್ಲಿ ಚಾಂಡಾಲನಾಗಿ ಕೆಲಸ ಮಾಡುತ್ತಾನೆ, ಅಲ್ಲಿಯೂ ಪರೀಕ್ಷೆ ತಪ್ಪಲಿಲ್ಲ, ಹರಿಶ್ಚಂದ್ರನ ಪತ್ನಿ ತೀರಿ ಹೋದ ತನ್ನ ಮಗನನ್ನು ಎತ್ತಿಕೊಂಡು ಸ್ಮಶಾನಕ್ಕೆ ಬರುತ್ತಾಳೆ, ಆದರೆ ಚಾಂಡಾಲನಾಗಿದ್ದ ಸತ್ಯಹರಿಶ್ಚಂದ್ರ ಹಣ ನೀಡದೆ ಅಂತ್ಯಕ್ರಿಯೆ ಮಾಡಲು ಅನುಮತಿ ನೀಡುವುದಿಲ್ಲ. ರಾಜನ ಸತ್ಯಕ್ಕೆ ಮೆಚ್ಚಿ ಅವನ ಮಗನಿಗೆ ಪುರ್ನಜನ್ಮ ನೀಡಿ ರಾಜ್ಯವನ್ನು ಮರಳಿಸುತ್ತಾರೆ. ರಾಜ ಎಲ್ಲಾವನ್ನು ಕಳೆದುಕೊಂಡಿದ್ದಾಗ ಋಷಿಯೊಬ್ಬರು ಅಜ ಏಕಾದಶಿ ಬಗ್ಗೆ ತಿಳಿಸಿರುತ್ತಾರೆ. ಹರಿಶ್ಚಂದ್ರನು ಅದನ್ನು ನಿಷ್ಠಯಿಂದ ಪಾಲಿಸಿದ್ದರಿಂದ ಎಲ್ಲಾ ಕಷ್ಟಗಳನ್ನು ಎದುರಿಸಲು ಸಾಧ್ಯವಾಯ್ತು ಎಂದು ಪೌರಾಣಿಕ ಕತೆಯಲ್ಲಿ ಹೇಳಲಾಗಿದೆ.
ವಿಷ್ಣು ಮೂಲ ಮಂತ್ರ
ಓಂ ನಮೋ ನಾರಾಯಣಾಯ
ವಿಷ್ಣು ಭಗವತೇ ವಾಸುದೇವ ಮಂತ್ರ
ಓಂ ನಮೋ ಭಗವತೇ ವಾಸುದೇವಾಯ
ವಿಷ್ಣು ಗಾಯತ್ರಿ ಮಂತ್ರ
ಓಂ ಶ್ರೀ ವೈಷ್ಣವೇ ಚ
ವಿದಾಮಹೇ ವಾಸುದೇವಾಯ ಧೀಮಹಿ
ತನ್ನೊ ವಿಷ್ಣು ಪ್ರಚೋದಯಾತ್
ವಿಷ್ಣು ಸಂಕಷ್ಟಹರ ಮಂತ್ರ
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಂ
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭೃದ್ಯಾನಗಮ್ಯಂ
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ
ಮಂಗಳಂ ಭಗವಾನ್ ವಿಷ್ಣು ಮಂತ್ರ
ಮಂಗಳಂ ಭಗವಾನ್ ವಿಷ್ಣು ಮಂಗಳಂ ಗರುಡಾಧ್ವಜಾ ಮಂಗಳಂ ಪುಂಡರೀಕಾಕ್ಷಾ ಮಂಗಳಂ ತನ್ನೋಂ ಹರಿಹೀ



Click it and Unblock the Notifications
