Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತದ ಶೇ.80ರಷ್ಟು ಉದ್ಯೋಗಕ್ಕೆ ಎಐ ಕತ್ತರಿ! ದುಬೈ ಉದ್ಯಮಿಯ ಶಾಕಿಂಗ್ ಭವಿಷ್ಯ
ಪ್ರತಿಯೊಂದು ವಲಯವು ಈಗ ಎಐ (ಆರ್ಟಿಫುಶಿಯಲ್ ಇಂಟೆಲಿಜೆನ್ಸ್) ಮೂಲಕ ವೇಗ ಪಡೆದುಕೊಳ್ಳುತ್ತಿದೆ. ಮಾನವರ ಕೆಲಸವನ್ನು ಸುಲಭವಾಗಿಸುವ ಈ ತಂತ್ರಾಂಶವು ಹಲವು ಕಡೆಗಳಲ್ಲಿ ಮಾನವರ ಬದಲು ತಾವೆ ಆ ಕರ್ತವ್ಯ ಮಾಡುತ್ತಿವೆ. ಹೀಗಾಗಿ ವಿಶ್ವದ ಹಲವು ಕಡೆಗಳಲ್ಲಿ ಕೆಲಸ ಕಳೆದುಕೊಳ್ಳುತ್ತಿರುವ ಮಂದಿಯ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚಿಗೆ ದೈತ್ಯ ಕಂಪನಿ ಅಮೆಜಾನ್ ಸಹ ಉದ್ಯೋಗ ಕಡಿತದ ಶಾಕ್ ನೀಡಿತ್ತು.
ಕೋವಿಡ್ ಬಳಿಕ ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗಿಗಳ ಮನೆಗೆ ಕಳುಹಿಸುತ್ತಿವೆ. ಇತ್ತೀಚಿಗೆ ಎಐ ನೆಪದಲ್ಲಿ ಸಾವಿರಾರು ಮಂದಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಹಲವು ಸಣ್ಣ ಪುಟ್ಟ ದೇಶಗಳಿಂದ ಹಿಡಿದು ದೊಡ್ಡ ದೇಶಗಳು ಸಹ ಈ ತಲೆನೋವಿಗೆ ಒಳಗಾಗಿವೆ. ಈಗ ಭಾರತವೂ ಸಹ ಎಐ ಹೊಡೆತಕ್ಕೆ ಸಿಲುಕುವ ಮುನ್ಸೂಚನೆ ಸಿಕ್ಕಿದೆ.

ದುಬೈನ ಉದ್ಯಮಿ ಹುಸೇನ್ ಸಜ್ವಾನಿ ಜಾಗತಿಕ ಉದ್ಯೋಗದ ಕುರಿತಾದ ಭವಿಷ್ಯ ಈಗ ಭಾರತೀಯರಲ್ಲಿ ಆಘಾತ ತಂದಿದೆ. ಕೃತಕ ಬುದ್ದಿಮತ್ತೆಯು ಭಾರತೀಯರ ಶೇ.80 ರಷ್ಟು ಉದ್ಯೋಗವನ್ನು ನಾಶ ಮಾಡಲಿದೆ ಎಂದಿದ್ದಾರೆ. ಈ ಎರಡು ವಲಯದಲ್ಲಿ ಶೇ. 80 ಭಾಗದಷ್ಟು ಜನರು ಮನೆಗೆ ತೆರಳುತ್ತಾರೆ. ಆ ಜಾಗವನ್ನು ಎಐ ಆಕ್ರಮಿಸಿಕೊಳ್ಳಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ (WEF) 2026 ರಲ್ಲಿ ಸಜ್ವಾನಿ ಅವರು ಈ ಹೇಳಿಕೆ ನೀಡಿದ್ದಾರೆ. ಭಾರತದ ಬೃಹತ್ ಹೊರಗುತ್ತಿಗೆ ವಲಯದಲ್ಲಿ AI ಅಂತರರಾಷ್ಟ್ರೀಯ ಕಾರ್ಮಿಕ ಮಾರುಕಟ್ಟೆಗಳನ್ನು ಹೇಗೆ ಮರುರೂಪಿಸಬಹುದು ಎಂಬುದರ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ. ಏಕೆಂದರೆ ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊರಗುತ್ತಿಗೆಯನ್ನು ನಿರ್ವಹಿಸುವ ಪ್ರಮುಖ ದೇಶ. ದೇಶೀಯ ಕಂಪನಿಗಳು ಈಗ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಮಾಡುವಷ್ಟು ದೊಡ್ಡದಾಗಿ ಬೆಳೆದಿವೆ. ಮಾತ್ರವಲ್ಲ ಲಕ್ಷಾಂತರ ಮಂದಿ ಉದ್ಯೋಗ ಮಾಡುತ್ತಿರುವ ವಲಯವಾಗಿದೆ.
ಎಐ 10 ಅಥವಾ 100 ಪಟ್ಟು ಈ ಜಗತ್ತನ್ನು ಬದಲಾಯಿಸಲು ಮುಂದಾಗಿದೆ. ಅದನ್ನು ಸ್ವೀಕರಿಸದೆ ನಿರಾಕರಿಸುವ ದೇಶಗಳು ಹಿಂದೆ ಬೀಳುವ ಸಾಧ್ಯತೆಯೂ ಇದೆ. ಹೊರಗುತ್ತಿಗೆ ಕಾರ್ಮಿಕರ ಮೇಲೆ ಹೆಚ್ಚು ಅವಲಂಬಿತವಾಗಿರುವ ದೇಶಗಳು ಇದರ ಅಪಾಯ ಹೆಚ್ಚಾಗಿ ಅನುಭವಿಸಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಭಾರತವು ಇಡೀ ವಿಶ್ವದ ಪ್ರಮುಖ ದೇಶಗಳಿಗೆ, ಕಂಪನಿಳಿಗೆ ಐಟಿ ಸೇವೆಗಳು, ವ್ಯವಹಾರ ಪ್ರಕ್ರಿಯೆ ಹೊರಗುತ್ತಿಗೆ (BPO), ಕಾಲ್ ಸೆಂಟರ್‌ಗಳು ಮತ್ತು ಬ್ಯಾಕ್-ಆಫೀಸ್ ಕಾರ್ಯಗಳಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಹೊಂದಿದೆ. ಅದ್ರಲ್ಲೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ 12,200 ಉದ್ಯೋಗಿಗಳನ್ನು ಕಡಿತಗೊಳಿಸುವ ನಿರ್ಧಾರವು ಮುಂಬರುವ ದೊಡ್ಡ ಉದ್ಯೋಗ ನಷ್ಟದ ಆರಂಭವೆಂದು ಪರಿಗಣಿಸಲಾಗಿದೆ. AI ಶೇಕಡ 80 ರಷ್ಟು ಅಕೌಂಟೆಂಟ್ ಉದ್ಯೋಗಗಳು, ನರ್ಸ್ ಸೇರಿ ಹಲವು ಈ ರೀತಿಯ ಕೆಲಸಗಳನ್ನು ಕಳೆದುಕೊಳ್ಳಬೇಕಾಗುತ್ತದೆ.
ಭಾರತದಲ್ಲೇ 500ಕ್ಕೂ ಹೆಚ್ಚು ಉದ್ಯೋಗ ಕಡಿತಕ್ಕೆ ಅಮೆಜಾನ್ ತಯಾರಿ
ವಿಶ್ವದ ದೊಡ್ಡ ಕಂಪನಿ ಅಮೆಜಾನ್ ಬರೋಬ್ಬರಿ 15 ಸಾವಿರ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ. ಆದ್ರೆ ಅಧಿಕೃತವಾಗಿ ಇನ್ನು ಯಾವುದೇ ವರದಿಯನ್ನು ಕಂಪನಿ ಪ್ರಕಟಿಸಿಲ್ಲ. ಹಾಗೆ ಇದರಲ್ಲಿ ಭಾರತದಲ್ಲೇ 500ಕ್ಕೂ ಹೆಚ್ಚು ಮಂದಿಯನ್ನು ಕೆಲಸದಿಂದ ವಜಾ ಮಾಡಲಿದೆ ಎನ್ನಲಾಗಿದೆ. ಅಮೆಜಾನ್ ತನ್ನ ಜಾಗತಿಕ ಕಾರ್ಯಚಟುವಟಿಕೆಗಳನ್ನು ಸುಗಮಗೊಳಿಸಲು ಮತ್ತು AI ಸೇರಿದಂತೆ ದೀರ್ಘಕಾಲ ಆದ್ಯತೆಗಳಿಗೆ ಸಂಪನ್ಮೂಲಗಳನ್ನು ಮರುಹಂಚಿಕೆ ಮಾಡಲು ಉದ್ಯೋಗಗಳನ್ನು ಕಡಿತಗೊಳಿಸುತ್ತಿದೆ. ಕಳೆದ ನವೆಂಬರ್‌ನಲ್ಲಿ ಭಾರತದಲ್ಲಿ 1,500 ಉದ್ಯೋಗಗಳು ವಜಾಗೊಳಿಸಿತ್ತು. ಸದ್ಯ ಇನ್ನು ಮುಂದೆ ಮತ್ತಷ್ಟು ಉದ್ಯೋಗ ಕಡಿತದ ಸುದ್ದಿಗಳು ಕೇಳಿಬರುವ ಸೂಚನೆ ಸಹ ಇದೆ.



Click it and Unblock the Notifications