Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
Ahmedabad Plane Crash: ವಿಮಾನ ದುರಂತ ವಾರಕ್ಕೂ ಮುನ್ನವೇ ಊಹಿಸಿದ್ದ ಜ್ಯೋತಿಷಿ: ಪೋಸ್ಟ್ ವೈರಲ್!
Ahmedabad Plane Crash: ಅಹಮದಾಬಾದ್‌ನಲ್ಲಿ ನಡೆದಿರುವ ವಿಮಾನ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ಏರುತ್ತಲೇ ಇದೆ. ಆದ್ರೆ ಈ ಘಟನೆಯನ್ನು ಜ್ಯೋತಿಷಿಯೊಬ್ಬರು ಮೊದಲೇ ಊಹಿಸಿದ್ದರು ಎಂಬುದು ನಿಮಗೆ ಗೊತ್ತಾ. ಈ ದುರಂತ ಭಾರತದಲ್ಲಿ ನಡೆಯಲಿದೆ ಎಂದು ಮೊದಲೇ ಊಹಿಸಿದ್ದರು. ಅದರಂತೆ ಅವರು ನುಡಿದಿರುವ ಭವಿಷ್ಯ ಈಗ ನಿಜವಾಗಿರುವುದು ಎಲ್ಲರಿಗೂ ಆಘಾತ ತಂದಿದೆ.
ಎಕ್ಸ್‌ನಲ್ಲಿ @AstroSharmistha ಹ್ಯಾಂಡಲ್ ಬಳಸುವ ಜ್ಯೋತಿಷಿ ಶರ್ಮಿಷ್ಠ, ಜೂನ್ 5 ರಂದು ಸಂಭಾವ್ಯ ವಿಮಾನ ಅಪಘಾತ ಸೇರಿದಂತೆ ಸಂಭಾವ್ಯ ವಾಯುಯಾನ ಘಟನೆಗಳ ಬಗ್ಗೆ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ಬೆನ್ನಲ್ಲೇ ಈಗ ಏರ್ ಇಂಡಿಯಾ ವಿಮಾನ ಪತನಗೊಂಡಿರುವುದು ಅವರ ಪೋಸ್ಟ್ ವೈರಲ್ ಆಗುವಂತೆ ಮಾಡಿದೆ. ಅದರಲ್ಲೂ ಎಲ್ಲರಿಗೂ ಶಾಕ್ ನೀಡಿದೆ.

ಶರ್ಮಿಷ್ಠ ಅವರು ಜ್ಯೋತಿಷಿಯಾಗಿದ್ದು 2024ರಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದರು. 2025ರ ವರ್ಷವು ವಿಮಾನಯಾನ ವಲಯಕ್ಕೆ ಉತ್ತಮವಾಗಿದೆ. ಆದರೆ ವಿಮಾನ ಅಪಘಾತದಂತಹ ಸುದ್ದಿಗಳು ನಮಗೆ ಆಘಾತ ತರಬಹುದು. ಏಕೆಂದರೆ ಮೃಗಶಿರ ನಕ್ಷತ್ರದಲ್ಲಿ ಹಾಗೂ ಆರ್ಧ್ರ ನಕ್ಷತ್ರದಲ್ಲಿ ಗುರುವಿನ ಸ್ಥಾನ ಪಲ್ಲಟವನ್ನು ಅವರು ಉಲ್ಲೇಖಿಸಿದ್ದರು.
ಸದ್ಯ ಈಗ ನಡೆದಿರುವ ಈ ಘಟನೆಯೊಂದಿಗೆ ಅವರ ಟ್ವೀಟ್ ಕೂಡ ಬಹಳ ವೈರಲ್ ಆಗುತ್ತಿದೆ. ಅದರಲ್ಲೂ ಅವರ ಪೋಸ್ಟ್ ನೋಡಿದ ಮಂದಿ ಆಘಾತಕ್ಕೆ ಒಳಗಾಗಿದ್ದಾರೆ. ಆದ್ರೆ ಕೆಲವರು ಇದು ಕಾಕತಾಳಿಯ ಎಂದು ಹೇಳಿದರೆ ಮತ್ತೆ ಕೆಲವರು ಇದನ್ನು ಅಚ್ಚರಿ ಎಂದು ಕರೆದಿದ್ದಾರೆ. ಶರ್ಮಿಷ್ಠಾ ಅವರು ಹೈದರಾಬಾದ್‌ನಲ್ಲಿ ಟಾಟಾದ ರಫೇಲ್ ವಿಮಾನ ನಿರ್ಮಾಣ ಯೋಜನೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮ ಸೇರಿದಂತೆ ಇಸ್ರೋದ ಬಾಹ್ಯಾಕಾಶ ಎಂಜಿನಿಯರಿಂಗ್‌ನಲ್ಲಿನ ಪ್ರಗತಿಯನ್ನು ಉಲ್ಲೇಖಿಸಿದ್ದರು.
ಅಂಗಾರಕ ಯೋಗದಲ್ಲಿ ದುರಂತ
ಜ್ಯೋತಿಷ್ಯಶಾಸ್ತ್ರದಲ್ಲಿ ರಾಹುವನ್ನು ಕೆಡುಕಿನ ಗ್ರಹ ಎಂದು ಪರಿಗಣಿಸಲಾಗಿದೆ. ಇನ್ನು ಈಗ ಮಂಗಳ ಮತ್ತು ಕೇತುಗಳ ಸಂಯೋಗವಾದಾಗಲೆಲ್ಲಾ ಅಂಗಾರಕ ಯೋಗವು ರೂಪುಗೊಳ್ಳುತ್ತದೆ ಎಂದು ಜ್ಯೋತಿಷಿ ದೀಪಕ್ ದುಬೆ ಹೇಳಿದ್ದಾರೆ. ಈ ಸಮಯದಲ್ಲಿ ಬೆಂಕಿ ಅವಘಡ, ನೋವು, ಪ್ರಾಣ ಹಾನಿಯ ಬಲವಾದ ಸಾಧ್ಯತೆ ಇರಲಿದೆ ಎಂದಿದ್ದಾರೆ.
ಪಂಡಿತ್ ದೀಪಕ್ ದುಬೆ ಅವರು ಮಂಗಳ ಮತ್ತು ಕೇತುಗಳ ಸಂಯೋಗದಿಂದ ಅಂಗಾರಕ ಯೋಗವು ರೂಪುಗೊಳ್ಳುತ್ತದೆ ಎಂದು ಹೇಳಿದರು. ಅಂಗಾರಕ ಪದದಿಂದ ಅದು ಬೆಂಕಿಯ ಅರ್ಥ ಎಂದು ಸ್ಪಷ್ಟವಾಗುತ್ತದೆ. ಇಂತಹ ಸಮಯದಲ್ಲಿ ಬೆಂಕಿ ಅವಘಡ ಹೆಚ್ಚು. ಅದರಲ್ಲೂ ಅಂಗಾರಕ ಯೋಗವು ಸಿಂಹ ರಾಶಿಯಲ್ಲಿದ್ದರೆ, ಅದು ತುಂಬಾ ಅಪಾಯಕಾರಿ ಎಂದು ದೀಪಕ್ ದುಬೆ ಹೇಳಿದರು. ಅಂಗಾರಕ ಯೋಗವು ಪ್ರಸ್ತುತ ಸಿಂಹ ರಾಶಿಯಲ್ಲಿದೆ ಮತ್ತು ಮಂಗಳವು ಕೇತು ನಕ್ಷತ್ರಪುಂಜದಲ್ಲಿದೆ. ಅದೇ ಸಮಯದಲ್ಲಿ ಮಂಗಳ ಮತ್ತು ಶನಿಯ ನಡುವೆ ಖಡಾಷ್ಟಕ ಯೋಗವೂ ಇದೆ. ಈ ಎಲ್ಲಾ ಅಂಶಗಳು ಅವಘಡಗಳ ಸೂಚಕ ಎಂದು ಅವರು ಹೇಳಿದ್ದಾರೆ. ಈ ಅಂಗಾರಕ ಯೋಗವು ಜೂನ್ 7ರಿಂದ ಆರಂಭಗೊಂಡಿದೆ. ಈ ಯೋಗದಲ್ಲಿ ದೊಡ್ಡ ಅವಘಡ ನಡೆಯಲಿದೆ ಎಂದು ಮೊದಲೇ ಊಹಿಸಲಾಗಿತ್ತು.



Click it and Unblock the Notifications