Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ದೇವಾಲಯಕ್ಕೆ ಆನೆ ಕೊಡುಗೆ ನೀಡಿದ ನಟಿ ಪ್ರಿಯಾಮಣಿ..! ಆದ್ರೆ ಇಲ್ಲೊಂದು ಅಚ್ಚರಿ ಕಾದಿದೆ..!
ಹಿಂದೂ ದೇವಾಲಯಗಳಲ್ಲಿ ಆನೆಗಳು ಇರುವುದು ಸಾಮಾನ್ಯ. ಆನೆಗಳನ್ನು ಸಹ ಪೂಜ್ಯನೀಯ ಭಾವನೆಯಿಂದ ನೋಡಲಾಗುತ್ತದೆ. ಅವುಗಳಿಗೂ ಪೂಜೆ ನೆರವೇರುವುದು ಹಿಂದೂ ಧರ್ಮದ ಆಚರಣೆಗಳಲ್ಲಿ ಅಡಗಿದೆ. ಆದರೆ ದೇವಾಲಯದಲ್ಲಿ ಆನೆ ಸಾಕುವುದಕ್ಕೆ ವಿರೋಧ ಉಂಟಾಗಿತ್ತು. ಆನೆಗಳನ್ನು ದೇವಾಲಯಕ್ಕೆ ತರುವ ಮುನ್ನ ಅವುಗಳಿಗೆ ಬುದ್ಧ ಕಲಿಸುವ ನೆಪದಲ್ಲಿ ಹಿಂಸೆ ನೀಡಲಾಗುತ್ತದೆ ಎಂಬುದು ವಾದವಾಗಿತ್ತು.
ಇದರಿಂದ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಇಂಡಿಯಾ ಆನೆ ಸಾಕುವುದನ್ನು ಹಾಗೂ ಅದರ ಮೇಲಿನ ಹಿಂಸೆಯನ್ನು ಖಂಡಿಸುತ್ತಾ ಬಂದಿತ್ತು. ಆದರೆ ಈದೀಗ ದೇವಾಲಯಕ್ಕೆ ಮೆಕಾನಿಕಲ್ ಆನೆ ಬಂದಿದ್ದು, ನಟಿ ಪ್ರಿಯಾಮಣಿ ಈ ಆನೆಯನ್ನು ದೇವಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಹಾಗಾದರೆ ಎಲ್ಲಿಯ ದೇವಾಲಯ? ಏನಿದು ಮೆಕಾನಿಕಲ್ ಆನೆ? ಕೊಡುಗೆ ನೀಡಿದ್ದೇಕೆ ಎಂಬ ಕುರಿತು ತಿಳಿಯೋಣ. ಕೇರಳದ ಅತ್ಯಂತ ಪುರಾತನ ದೇವಾಲಯವು ಜೀವಂತ ಆನೆಯ ಬದಲು ಅದೇ ಗಾತ್ರದ ಯಾಂತ್ರಿಕ ಆನೆಯನ್ನು ದೇವಾಲಯದ ಕಾರ್ಯಗಳಿಗೆ ಬಳಸುವ ಮೂಲಕ ಗಮನ ಸೆಳೆದಿದೆ.
ನಟಿ ಪ್ರಿಯಾಮಣಿ, ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾ ಜೊತೆ ಸೇರಿ ಈ ಆನೆಯನ್ನು ದೇವಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಭಾನುವಾರ ನಡೆದ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಆನೆಯನ್ನು ಸ್ವಾಗತಿಸಲಾಗಿದೆ. ಆನೆ ಸಹ ಜೀವಂತ ಆನೆಯಂತೆಯೇ ಕಿವಿ ಆಡಿಸುವುದು, ಸೊಂಡಿಲು ಎತ್ತುವುದನ್ನು ಸಹ ನಾವು ನೋಡಬಹುದು.
ತೃಕ್ಕಾಯಿಲ್ ಮಹಾದೇವ ದೇವಸ್ಥಾನಕ್ಕೆ ಸೇರಿತು ಆನೆ
ಕೊಚ್ಚಿಯಲ್ಲಿ ನೆಲೆಯಾಗಿರುವ ಅತ್ಯಂತ ಹಳೆಯ ಹಾಗೂ ಪ್ರಸಿದ್ಧ ದೇವಾಲಯವಾಗಿರುವ ತೃಕ್ಕಾಯಿಲ್ ಮಹಾದೇವ ದೇವಸ್ಥಾನವು ತನ್ನ ಆಚರಣೆಗಳಿಂದ ಸುದ್ದಿಯಾಗುತ್ತದೆ. ನಿತ್ಯ ಈ ದೇವಾಲಯಕ್ಕೆ ಸಾವಿರಾರು ಮಂದಿ ಆಗಮಿಸುತ್ತಾರೆ. ಆದರೆ ದೇವಾಲಯದ ಕಾರ್ಯಗಳಲ್ಲಿ ಆನೆಯಿಲ್ಲ ಎಂಬ ಕೊರಗು ಆ ದೇವಾಲಯಕ್ಕೆ ಇತ್ತು. ಇದೇ ಸಮಯದಲ್ಲಿ ಪೇಟಾ ಸಂಸ್ಥೆ ಹಾಗೂ ನಟಿ ಪ್ರಿಯಾಮಣಿ ಈ ದೇವಾಲಯಕ್ಕೆ ಕೃತಕ ಆನೆ ಕೊಡುಗೆ ನೀಡಲು ಮುಂದಾದರು.
ಸದ್ಯ ಈ ಕೃತಕ ಯಾಂತ್ರಿಕ ಆನೆಗೆ ಮಹಾದೇವ ಎಂದು ನಾಮಕರಣ ಮಾಡಲಾಗಿದೆ. ಇದನ್ನು ಮುಂಬರುವ ದೇವಾಲಯದ ಜಾತ್ರೆ, ಉತ್ಸವ ಸೇರಿದಂತೆ ಪೂಜಾ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳುವುದಾಗಿ ದೇವಾಲಯ ಆಡಳಿತ ಮಂಡಳಿ ತಿಳಿಸಿದೆ. ಸದ್ಯ ಆನೆಯನ್ನು ನೋಡಲು ಸಾವಿರಾರು ಮಂದಿ ದೇವಾಲಯದತ್ತ ಮುಖಮಾಡಿದ್ದಾರೆ. ಆನೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಸಂತಸ ಹಂಚಿಕೊಳ್ಳುತ್ತಿದ್ದಾರೆ.
ನಟಿ ಪ್ರಿಯಾಮಣಿ ಕಾರ್ಯಕ್ಕೆ ಮೆಚ್ಚುಗೆ
ಇತ್ತ ನಟಿ ಪ್ರಿಯಾಮಣಿ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ಹಿನ್ನೆಲೆ ಭಾರೀ ಮೆಚ್ಚುಗೆ ಕೇಳಿಬಂದಿದೆ. ಅವರು ದೇವಾಲಯದ ಕೋರಿಕೆಗೆ ಆನೆಯನ್ನು ಕೊಡುಗೆಯಾಗಿ ನೀಡಲು ಪೇಟಾದೊಂದಿಗೆ ಕೈ ಜೋಡಿಸಿದ್ದರು. ಪ್ರಿಯಾಮಣಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಸಿನಿಮಾದಲ್ಲಿಯೂ ನಟಿಸಿದ್ದು, ಹಿಂದಿಯಲ್ಲೂ ತಮ್ಮ ನಟನಾ ಕೌಶಲ್ಯ ತೋರಿಸಿದ್ದಾರೆ.
ಮೊದಲ ಯಾಂತ್ರಿಕ ಆನೆ ಕೇಳರದಲ್ಲಿದೆ
ಇದಕ್ಕೂ ಮೊದಲು ಕೇರಳದಲ್ಲಿ ಮೊಟ್ಟ ಮೊದಲ ಬಾರಿಗೆ ಕೃತಕ ಆನೆಯನ್ನು ಪರಿಚಯಿಸಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ಕೇರಳದ ತ್ರಿಶೂರ್‌ನಲ್ಲಿರುವ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನವು ತನ್ನ ಉತ್ಸವಕ್ಕೆ ಯಾಂತ್ರಿಕ ಆನೆಯನ್ನು ಪರಿಚಯಿಸಿದ ರಾಜ್ಯದ ಮೊದಲ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಆನೆ ಪರಿಚಯಿಸಿದ ಬಳಿಕ ದೇಶದ ಹಲವು ಭಾಗದಲ್ಲಿ ಕೃತಕ ಆನೆ ಸದ್ದು ಮಾಡಿತ್ತು. ಈಗಿರುವ ಜೀವಂತ ಆನೆಗಳ ಬದಲು ಕೃತಕ ಆನೆಗಳ ಬಳಸಬೇಕು ಎಂಬ ಕೂಗು ಹೆಚ್ಚಾಯಿತು. ಸದ್ಯ ಈಗ ಈ ಕೃತಕ ಆನೆಗಳು ಕೇರಳದ ದೇವಾಲಯದಲ್ಲಿವೆ, ಭವಿಷ್ಯದಲ್ಲಿ ಪೇಟಾ ಸಂಸ್ಥೆ ದೇಶದ ಪ್ರಮುಖ ದೇವಾಲಯದಲ್ಲಿ ಈ ಕೃತಕ ಆನೆಗಳ ಬಳಕೆ ಉತ್ತೇಜಿಸುವ ಗುರಿ ಹೊಂದಿದೆ.



Click it and Unblock the Notifications