Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದರ್ಶನ್‌ಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡ ಜೈಲಾಧಿಕಾರಿಗಳು: ಜೈಲಿನ ಈ 5 ನಿಯಮ ದರ್ಶನ್‌ಗಾಗಿ ಮರೆತ ಭ್ರಷ್ಟರು
ಹಣವಿದ್ದರೆ ನಮ್ಮ ದೇಶದಲ್ಲಿ ಏನು ಮಾಡಿದರು ನಡೆಯುತ್ತೆ ಎಂಬ ಟೀಕೆಗೆ ಪುಷ್ಠಿ ನೀಡುವಂತಿದೆ ನಟ ದರ್ಶನ್ ಕೇಸ್ . ಇದೀಗ ಬಿಡುಗಡೆಯಾಗಿರುವ ಜೈಲ್‌ಯೊಳಗಿನ ವೀಡಿಯೋ, ಫೋಟೋ ನೋಡುಗರನ್ನು ದಿಗ್ಭ್ರೆಮೆಗೊಳಿಸುತ್ತೆ. ಓಹೋ ದುಡ್ಡಿದ್ದರೆ ಸಾಕು ಜೈಲ್‌ನಲ್ಲಿಯೂ ರಾಜ ಮರ್ಯಾದೆ ಸಿಗುತ್ತೆ , ನಮ್ಮ ವ್ಯವಸ್ಥೆ ಕರಾಳ ವ್ಯವಸ್ಥೆಯನ್ನು ಎತ್ತಿ ತೋರಿಸುವಂತಿದೆ, ನಾಚಿಕೆಯಾಗಬೇಕು ರಕ್ಷಕರ ವೇಷ ತೊಟ್ಟ ಭಕ್ಷಕರಿಗೆ.

ಕರ್ನಾಟಕದ ಆಚೆಯೂ ಸದ್ದು ಮಾಡುತ್ತಿದೆ ನಟ ದರ್ಶನ್ ವೀಡಿಯೋ ಹಾಗೂ ಫೋಟೋ
ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್‌ಗೆ ಸಿಗುತ್ತಿರುವ ರಾಜ ಮರ್ಯಾದೆ ನೋಡಿದರೆ ಅರೆ ದುಡ್ಡಿದ್ದರೆ ಜೈಲ್‌ಗೆ ಹೋದರೆ ರೆಸಾರ್ಟ್‌ಗೆ ಹೋಗಿ ಇರುವಂತೆ ಜಾಲಿಯಾಗಿ ತಿಂದು ಉಂಡು ಇರಬಹುದು ಎಂಬ ತಪ್ಪು ಸಂದೇಶವನ್ನು ಸಮಾಜಕ್ಕೆ ಹೇಳುತ್ತಿದೆ ಆ ಫೋಟೋ ಸಾಕ್ಷಿ.
ರೌಂಡ್ ಚೇರ್ ಹಾಕಿ ಸಿನಿಮಾದಲ್ಲಿ ಕಾಣುವಂತೆ ಒಂದು ಕೈಯಲ್ಲಿ ಸಿಗರೇಟ್, ಒಂದು ಕೈಯಲ್ಲಿ ಕಾಫಿ ಮಗ್ ಹಿಡಿದು ಬಿಂದಾಸ್ ಆಗಿ ಇತರ ಕುಖ್ಯಾತ ರೌಡಿಗಳ ಜೊತೆ ಮಾತನಾಡುತ್ತಿರುವ ಫೋಟೋ ಇದೀಗ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಪೊಲೀಸ್ ವ್ಯವಸ್ಥೆಯನ್ನು ಸಂಶಯದಿಂದ ನೋಡುವಂತೆ ಮಾಡಿದೆ.
ಪೊಲೀಸ್ ಮೇಲೆ ಬಂದಿದ್ದ ನಂಬಿಕೆ ಮತ್ತೆ ಅಳಿಸುತ್ತಿದೆ ದರ್ಶನ್ ಕೇಸ್‌ನಲ್ಲಿ
ದುಡ್ಡಿದ್ದರೆ ಎಂಥ ಹೇಯ ಕೃತ್ಯ ಮಾಡಿದರೂ ತಪ್ಪಿಸಿಕೊಳ್ಳಬಹುದು ಎಂದು ಜನರು ವ್ಯವಸ್ಥೆಯ ವಿರುದ್ಧ ಟೀಕೆ ಮಾಡುತ್ತಲೇ ಇರುತ್ತಾರೆ, ಆದರೆ ಅದನ್ನು ಸುಳ್ಳು ಮಾಡಿದ್ದು ಪ್ರಜ್ವಲ್ ರೇವಣ್ಣ ಹಾಗೂ ದರ್ಶನ್ ಕೇಸ್. ದರ್ಶನ್‌ನ ಅರೆಸ್ಟ್ ಮಾಡಿದಾಗ ತಪ್ಪು ಮಾಡಿದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಹೊಸ ಭರವಸೆ ಮೂಡಿತ್ತು, ಆದರೆ ಈಗ ವ್ಯವಸ್ಥೆ ನೋಡಿದರೆ ನಾಯಿ ಬಾಲ ಡೊಂಕೇ .... ಒಳ್ಳೆಯವರು, ವೃತ್ತಿ ನಿಷ್ಠೆ ಇರುವವರು ಇಲಾಖೆಯಲ್ಲಿ ಕಡಿಮೆ ಇದ್ದಾರೆ ಲಂಚಬಾಕರು ಹೆಚ್ಚಿದ್ದಾರೆ ಎಂಬುವುದು ಸಾಬೀತಾಗಿದೆ. ಪೊಲೀಸರು ಬಿಡದಿದ್ದರೆ ಖೈದಿಗಳು ಇಷ್ಟೊಂದು ರಾಜಾರೋಷವಾಗಿ ಇರಲು ಹೇಗೆ ತಾನೆ ಸಾಧ್ಯ?
ಜೈಲ್‌ನಲ್ಲಿ ಈ ನಿಯಮಗಳಿವೆ (ಗಮನಿಸಿ: ಈ ನಿಯಮಗಳು ದರ್ಶನ್ ಕೇಸ್‌ನಲ್ಲಿ ಅನ್ವಯಿಸಿಲ್ಲ, ದರ್ಶನ್‌ಗೆ ಮಾತ್ರ ಫುಲ್ ರಾಜ ಮರ್ಯಾದೆ!)
1.ಜೈಲ್‌ನಲ್ಲಿ ಆರೋಪಿಗಳನ್ನು, ಅಪರಾಧಿಗಳನ್ನು ಭೇಟಿ ಮಾಡಲು ವಾರದಲ್ಲಿ ಎರಡು ಬಾರಿ ಅವಕಾಶ( ಆದರೆ ದರ್ಶನ್‌ನ , ಪವಿತ್ರಾ ಗೌಡರನ್ನು ನೋಡಲು ದಿನಾ ಒಬ್ಬರಲ್ಲ ಒಬ್ಬರು ಹೋಗುತ್ತಿದ್ದನ್ನು ಮೀಡಿಯಾಗಳು ಕವರ್ ಮಾಡಿವೆ)
ಕುಟುಂಬದವರನ್ನು ಹೊರತುಪಡಿಸಿ ಅವರ ಪರ ವಕೀಲರಿಗೆ ಭೇಟಿಯಾಗುವ ಸಾಧ್ಯತೆ ಇದೆ.
2. ಜೈಲ್‌ಯೊಳಗಡೆ ಇರುವ ವ್ಯಕ್ತಿಗೆ ಆಹಾರ ಕೊಂಡೊಯ್ಯುವಂತಿಲ್ಲ, ಹಣ್ಣುಗಳ್ನು ನೀಡಬಹುದು, ಬಿರಿಯಾನಿ, ಕಾಬಾಬ್ ಅಂತ ತಂದು ಕೊಡಲು ಯಾವುದೇ ಹೊರಗಿನ ಆಹಾರ ತಂದುಕೊಡುವಂತಿಲ್ಲ, ಹಣ್ಣುಗಳನ್ನು ನೀಡಬಹುದು.
3. ದಿಂಬು, ಬೆಡ್‌ಶೀ್, ಚಾಪೆ ಬಿಟ್ಟರೆ ಬೇರೆ ಲಕ್ಷುರಿ ವ್ಯವಸ್ಥೆ ಇರಲ್ಲ, ದರ್ಶನ್‌ಗೆ ಬೆಡ್ ಹಾಕಿದ್ದಾರೆ, ಅಷ್ಟು ಮಾತ್ರವಲ್ಲ ಅವರ ರೂಮ್‌ಗೆ ಬೇರೆ ರೌಡಿಗಳು ನ ಬಂದು ವೀಡಿಯೋ ಕಾಲ್ ಮಾಡಿ ಹರಟೆ ಹೊಡೆಯಬಹುದು, ಎಂಥ ಅವ್ಯವಸ್ಥೆ!
4. ವಿಐಪಿ ಆರೋಪಿಗಳನ್ನು ಇತರ ಅರೋಪಿಗಳು, ಅಪರಾಧಿಗಳು ಭೇಟಿ ಮಾಡುವಂತಿಲ್ಲ (ಆದರೆ ದರ್ಶನ್‌ಗೆ ಟೇಬಲ್ ಮೀಟಿಂಗ್‌ಗೆ ವ್ಯವಸ್ಥೆ ಇದೆ)
ವಿಐಪಿ ಸೆಲ್‌ನಲ್ಲಿ ಭದ್ರತೆಗೆ ಹಿಂತಿರುವ ಪೊಲೀಸ್‌ನವರ ಬಲಿ ಕೂಡ ಹರಟೆ ಹೊಡೆಯುವಂತಿಲ್ಲ, ಆದರೆ ದರ್ಶನ್‌ಗೆ ವಿಐಪಿ ಶೆಲ್ ಅಂತ ನೀಡಿದ್ದಾರೆ ಆದರೆ ಅವರು ಅಲ್ಲಿ ಅವರಿಗೆ ಇಷ್ಟ ಬಂದಂತೆ ಇರಬಹುದು ಎಂಬುವುದನ್ನು ಆ ಫೋಟೋ, ವೀಡಿಯೋಗಳೇ ಹೇಳುತ್ತೆ
5. ಬ್ಯಾರಕ್ ಹೊರಗೆ ಹಾಗೂ ಜೈಲಿನೊಳಗೆ ಕರ್ಚಿಯಲ್ಲಿ ಕೂರುವಂತಿಲ್ಲ, ಅಲ್ಲಿ ಟೀ ಕಪ್ ವ್ಯವಸ್ಥೆ ಇರಲ್ಲ, ಸ್ಟೀಲ್ ಲೋಟ ನೀಡಲಾಗುವುದು, ಆದರೆ ಈಗ ನೋಡುತ್ತಿರುವುದು ಏನು?
ಕರ್ತವ್ಯಕ್ಕೆ ಲೋಪ ಮಾಡುವವರು ಸಸ್ಪೆಂಡ್ ಮಾಡಿದರೆ ಸಾಲದು ಅವರನ್ನು ಶಾಶ್ವತವಾಗಿ ಕೆಲಸದಿಂದ ತೆಗೆಯಬೇಕು, ಅವಾಗ ಮಾತ್ರ ಇಂಥ ಅರಾಜಕತೆ ನಿಲ್ಲುತ್ತೆ, ಇಂಥ ಭ್ರಷ್ಟರ ದರ್ಪ ರೋಡ್‌ಸೈಡ್ ಮೇಲೆ ಹೊಟ್ಟೆ ಪಾಡಿಗಾಗಿ ಚಿಕ್ಕ-ಪುಟ್ಟ ವ್ಯಾಪಾರಿಗಳ ಮೇಲೆ, ನ್ಯಾಯ ಕೇಳುವ ಬಡವರ ಮೇಲಷ್ಟೇ...
ದರ್ಶನ್‌ಗೆ ಮನೆಯೂಟಕ್ಕೆ ಅರ್ಜಿ ಹಾಕುವ ನಾಟಕದ ಅವಶ್ಯಕತೆ ಇತ್ತೇ?
ಜೈಲ್‌ನೊಳಗಡೆ ಕೂಡ ನಟನೆ, ಅಬ್ಬಾಬ್ಬ ಮನೆಯೂಟಕ್ಕೆ ಬೇಡಿಕೆ, ಇಷ್ಟೆಲ್ಲಾ ರಾಜಮರ್ಯಾದೆ ಸಿಗುತ್ತಿರಬೇಕಾದರೆ ಅವರಿಗೆ ಬೇಕಾದ ಆಹಾರ ಸಿಗುತ್ತಿಲ್ಲ ಎಂದರೆ ನಂಬಿದರೆ ಅವನಷ್ಟು ಮೂರ್ಖ ಮತ್ತೊಬ್ಬನಿಲ್ಲ....
ಆದರೆ ಒಂದು ಮಾತಂತೂ ನಿಜ ಸತ್ಯ ಯಾವತ್ತಿದ್ದರೂ ಹೊರಬರುತ್ತೆ ಎಂಬುವುದು ಮಾತ್ರ ಸುಳ್ಳಲ್ಲ...



Click it and Unblock the Notifications











