Latest Updates
-
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ!
ಗರುಡ ಪುರಾಣ: ಬದುಕಿನಲ್ಲಿ ಶಾಂತಿ, ನೆಮ್ಮದಿ ಇಲ್ವಾ ? ಹಾಗಾದ್ರೆ ಹೀಗೆ ಮಾಡಿ
ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ತುಂಬಾನೇ ಮುಖ್ಯ. ನಮ್ಮ ಜೀವನದಲ್ಲಿ ನಮಗೆ ಶಾಂತಿ, ನೆಮ್ಮದಿ ಬೇಕಂದ್ರೆ ನಮ್ಮ ಆಲೋಚನೆಗಳು ಕೂಡ ಒಳ್ಳೆಯದಾಗಿರಬೇಕು. ಯಾವೆಲ್ಲಾ ಕೆಲಸಗಳು ನಮ್ಮಲ್ಲಿ ಒಳ್ಳೆಯ ಆಲೋಚನೆಗಳನ್ನು ತರಬಹುದು. ಗರುಡ ಪುರಾಣ ಈ ಬಗ್ಗೆ ಏನು ಹೇಳುತ್ತೆ ಅನ್ನೋದನ್ನ ತಿಳಿದುಕೊಳ್ಳೋಣ.
ಜೀವನ ತುಂಬಾನೇ ಚಿಕ್ಕದು. ಜೀವನದ ಈ ಸಣ್ಣ ಪಯಣದಲ್ಲಿ ನಾವು ಹೇಗೆ ಬದುಕಿ ಬಾಳುತ್ತೇವೆ ಅನ್ನೋದು ಮುಖ್ಯವಾಗುತ್ತದೆ. ಯಾಕಂದ್ರೆ ನೀವು ಈ ಬದುಕಿನಲ್ಲಿ ಏನೇ ಮಾಡಿದ್ರು ಕೂಡ ಅದಕ್ಕೆಲ್ಲಾ ಕರ್ಮ ಅನ್ನೋದು ಖಂಡಿತ ಉತ್ತರ ಕೊಡುತ್ತೆ. ಜೀವನದಲ್ಲಿ ಎಷ್ಟೇ ಕಷ್ಟಗಳು ಬರಬಹುದು. ಆದರೆ ಅದನ್ನೆಲ್ಲಾ ಎದುರಿಸಿದಾಗ ಮಾತ್ರ ನಿಮಗೆ ಯಶಸ್ಸು ಒಲಿಯೋದಕ್ಕೆ ಸಾಧ್ಯ.

ಪ್ರತಿಯೊಬ್ಬ ವ್ಯಕ್ತಿ ಶ್ರೀಮಂತನಾಗಬೇಕು ಅಂತ ಅಂದುಕೊಳ್ಳೋದು ಸಹಜ. ಆದರೆ ಕೆಲವೊಂದು ಸಾರಿ ಎಷ್ಟೇ ದುಡ್ಡಿದ್ದರೂ ಕೂಡ ಶಾಂತಿ, ನೆಮ್ಮದಿಯನ್ನು ಗಳಿಸೋದಕ್ಕೆ ಸಾಧ್ಯವಿಲ್ಲ. ಆದ್ರೆ ಗರುಡ ಪುರಾಣದಲ್ಲಿ ಉಲ್ಲೇಖವಾಗಿರುವ ಈ ನೀತಿಗಳನ್ನು ಪಾಲಿಸಿದ್ರೆ ಖಂಡಿತ ನೀವು ಜೀವನದಲ್ಲಿ ಸಂತೋಷವಾಗಿರುತ್ತೀರಿ.
ವೇದ ಹಾಗೂ ಪುರಾಣಗಳನ್ನು ತಪ್ಪದೇ ಪಾಲಿಸಿ
ವೇದ ಪುರಾಣಗಳು ನಮಗೆ ಉತ್ತಮ ಜೀವನ ನಡೆಸೋದಕ್ಕೆ ದಾರಿಯನ್ನು ತೋರಿಸಿದೆ. ಗರುಡ ಪುರಾಣದ ಪ್ರಕಾರ ಯಾವ ವ್ಯಕ್ತಿ ಪ್ರತಿದಿನ ಮನೆಯಲ್ಲಿ ವೇದ, ಪುರಾಣಗಳನ್ನು ಓದುತ್ತಾನೆ ಅವನ ಜ್ಞಾನ ಹೆಚ್ಚಾಗುತ್ತಾ ಹೋಗುತ್ತದೆ. ಆ ವ್ಯಕ್ತಿ ಜೀವನದಲ್ಲಿ ಎದುರಾಗೋ ಪ್ರತಿಯೊಂದು ಕಷ್ಟಗಳನ್ನು ಎದುರಿಸುತ್ತಾನೆ. ಇದು ಕಾರಣವಾಗಿದ್ದು ವೇದ ಹಾಗೂ ಪುರಾಣಗಳಿಂದ. ಈ ಪವಿತ್ರ ಪುಸ್ತಕಗಳೇ ನಿಮಗೆ ಯಶಸ್ಸಿನ ಹಾದಿಯನ್ನು ತೋರಿಸುತ್ತದೆ. ಇದರಿಂದ ಜೀವನದಲ್ಲಿ ನೀವು ತುಂಬಾನೇ ಖುಷಿಯಾಗಿ ಇರಬಹುದು.
ಲಕ್ಷ್ಮೀಯ ಆಶೀರ್ವಾದ
ಪ್ರತಿಯೊಬ್ಬರ ಮೇಲೆ ಲಕ್ಷ್ಮೀಯ ಕೃಪಾಕಟಾಕ್ಷ ಇರಲೇಬೇಕು. ಯಾಕಂದ್ರೆ ಸಂಪತ್ತಿನ ಅಧಿದೇವತೆ ಲಕ್ಷ್ಮೀ. ಆದರೆ ಲಕ್ಷ್ಮೀಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದರೆ ಕೆಲವೊಂದು ನೀತಿಗಳನ್ನು ನಾವು ಪಾಲಿಸಲೇಬೇಕು. ಅವುಗಳೆಂದರೆ ಸ್ನಾನದ ನಂತರವೇ ಆಹಾರವನ್ನು ತಯಾರು ಮಾಡಬೇಕು. ಪ್ರತಿದಿನ ನಾವು ತಯಾರಿಸಿದ ಮೊದಲ ಆಹಾರವನ್ನು ಪಕ್ಷಿಗೆ ಹಾಗೂ ಕೊನೆಯ ಆಹಾರವನ್ನು ನಾಯಿಗೆ ನೀಡಬೇಕು. ಮನೆಯಲ್ಲಿ ರಾಶಿ ರಾಶಿ ಹಣವಾಗಲಿ, ಧಾನ್ಯವನ್ನಾಗಲಿ ಕೂಡಿಡಲೇಬಾರದು. ಮನೆಯವರ ಜೊತೆಗೆ ಜಗಳ ಮಾಡಬಾರದು. ಎಲ್ಲರೊಂದಿಗೆ ಸಂತೋಷದಿಂದ ಕಾಲ ಕಳೆಯಬೇಕು. ಇಂತಹ ಮನೆಯು ಲಕ್ಷ್ಮೀಗೆ ಪ್ರಿಯವಾಗಿರುತ್ತದೆ ಹಾಗೂ ಆಕೆ ಅಲ್ಲಿ ಇರಲು ಇಷ್ಟಪಡುತ್ತಾಳೆ.
ಕುಲ ದೇವತೆಯ ಆರಾಧನೆ ಮಾಡಿ
ಒಳ್ಳೆತನ ಹಾಗೂ ಕೆಟ್ಟತನ ನಮ್ಮ ಒಳಗಡೆ ಇರುತ್ತದೆ. ಬದುಕಿರುವಾಗ ನಾವು ಏನೇ ಮಾಡಿದರೂ ಕೂಡ ಕರ್ಮವನ್ನು ಎದುರಿಸಲೇಬೇಕಾಗುತ್ತದೆ. ಗರುಡ ಪುರಾಣದ ಪ್ರಕಾರ ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಆತ ನಮ್ಮೆಲ್ಲಾ ಕಷ್ಟಗಳನ್ನು ಪರಿಹರಿಸುತ್ತಾನೆ. ಅದೇ ರೀತಿ ನಮ್ಮ ಕುಲದೇವರನ್ನು ಪ್ರಾರ್ಥಿಸುವುದು ತುಂಬಾನೇ ಮುಖ್ಯ. ಕುಲದೇವರನ್ನು ಪ್ರಾರ್ಥನೆ ಮಾಡುವುದರಿಂದ ನಮ್ಮ ಸಂಕಷ್ಟಗಳೆಲ್ಲಾ ಬಗೆ ಹರಿಯುತ್ತದೆ. ಇಡೀ ಕುಟುಂಬವನ್ನು ನಮ್ಮ ಕುಲದೇವರು ಕಾಯುತ್ತಾರೆ. ಆಗ ನಮ್ಮ ಕುಟುಂಬದಲ್ಲಿ ಶಾಂತಿ, ಸಮೃದ್ಧಿ ನೆಲೆಸುತ್ತದೆ.
ಅನ್ನಪೂರ್ಣೆಯ ಕೃಪೆ
ಗರುಡ ಪುರಾಣದ ಪ್ರಕಾರ ನಾವು ಆಹಾರವನ್ನು ಸೇವಿಸುವ ಮೊದಲು ದೇವರಿಗೆ ನೈವೇದ್ಯವನ್ನು ನೀಡಬೇಕಂತೆ. ಈ ರೀತಿ ಮಾಡಿದರೆ ಅನ್ನಪೂರ್ಣೆಯ ಕೃಪೆಗೆ ಪಾತ್ರರಾಗಬಹುದು. ಇನ್ನೂ ಕೆಳಗೆ ಕುಳಿತುಕೊಂಡೆ ಊಟ ಮಾಡಬೇಕು. ಊಟಕ್ಕೂ ಮೊದಲು ಪ್ರಾರ್ಥನೆಯನ್ನು ಸಲ್ಲಿಸಬೇಕೆಂದು ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಯಾಗುತ್ತದೆ.
ದಾನದ ಪ್ರಾಮುಖ್ಯತೆ
ಮನುಷ್ಯನ ತನ್ನ ಬದುಕಿಗಾಗಿ ದುಡಿಯುತ್ತಾನೆ. ಗರುಡ ಪುರಾಣದ ಪ್ರಕಾರ ನಾವು ಎಷ್ಟೇ ಸಂಪಾದನೆ ಮಾಡಿದ್ರು ಕೂಡ ಅದರಲ್ಲಿ ಕೆಲವೇ ಕೆಲವು ಭಾಗವನ್ನು ದಾನಕ್ಕಾಗಿ ಮೀಸಲಿಡಬೇಕು. ಧನ, ಧಾನ್ಯ ಅಥವಾ ಆಹಾರ ಯಾವುದೇ ರೂಪದಲ್ಲಾದರೂ ಪರವಾಗಿಲ್ಲ. ಆದರೆ ಪ್ರತಿಯೊಬ್ಬ ವ್ಯಕ್ತಿ ದಾನ ಮಾಡಲೇಬೇಕು. ಆಗ ದೇವರ ಕೃಪೆಗೆ ಪಾತ್ರರಾಗಬಹುದು. ಹಾಗೂ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ನಲೆಸುತ್ತದೆ.
ಈ ಆಧುನಿಕ ಯುಗದಲ್ಲಿ ಜನ ಸ್ಮಾರ್ಟ್ ಫೋನ್‌ಗಳ ಹಿಂದೆ ಬಿದ್ದಿದ್ದಾರೆ. ಇದರ ಬದಲು ನಮ್ಮ ವೇದ, ಪುರಾಣಗಳ ಬಗ್ಗೆ ತಿಳಿದುಕೊಂಡರೆ ಖಂಡಿತ ಜೀವನದಲ್ಲಿ ನೆಮ್ಮದಿ, ಶಾಂತಿಯನ್ನು ಕಂಡುಕೊಳ್ಳಬಹುದು.



Click it and Unblock the Notifications


