Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಪಘಾತ 'ದೇವರ ಕೃತ್ಯ'ವಲ್ಲ: ಸಂತ್ರಸ್ತ ಕುಟುಂಬಕ್ಕೆ ₹20 ಲಕ್ಷ ಪರಿಹಾರ ನೀಡಲು ಕೋರ್ಟ್ ತೀರ್ಪು
ನೀವು ಹಿಂದಿಯ 'ಓ ಮೈ ಗಾಡ್' ಮತ್ತು ಕನ್ನಡದಲ್ಲಿ ತೆರೆಕಂಡಿದ್ದ 'ಮುಕುಂದ ಮುರಾರಿ' ಸಿನಿಮಾ ನೋಡಿದ್ದೀರಾ..? ಯಾಕಂದ್ರೆ ಇಲ್ಲಿ ಹೇಳ ಹೊರಟಿರೋ ಈ ಸುದ್ದಿ ನಿಮಗೆ ಸುಲಭವಾಗಿ ಅರ್ಥವಾಗಬೇಕಾದ್ರೆ ಈ ಸಿನಿಮಾ ನೋಡಿದ್ರೆ ಬಹುಬೇಗ ತಿಳಿಯುತ್ತೆ. ಆ ಸಿನಿಮಾದಲ್ಲಿ ದೇವರ ಫೋಟೋ ಮೂರ್ತಿ ಮಾರುತ್ತಿದ್ದವನ ಅಂಗಡಿ ಭೂಕಂಪನವಾಗಿ ಕುಸಿದು ಬಿದ್ದ ಘಟನೆ ನಡೆದಿರುತ್ತದೆ.
ಆದರೆ ಇನ್ಸೂರೆನ್ಸ್ ಕಂಪನಿ ಇದನ್ನು ಆಕ್ಟ್ ಆಫ್ ಗಾಡ್ ಎಂದು ಘೋಷಿಸಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸುವುದನ್ನು ನಾವು ನೋಡಿರಬಹುದು. ಆಕ್ಟ್ ಆಫ್ ಗಾಡ್ ಎಂದರೆ ದೇವರ ಕೃತ್ಯ ಎಂದಾಗುತ್ತದೆ. ಅಂದರೆ ಈ ಭೂಕಂಪನ ಸಂಭವಿಸಿದ್ದು ದೇವರ ಕೃತ್ಯ ಹೀಗಾಗಿ ವಿಮಾ ಹಣ ನೀಡಲು ಬರುವುದಿಲ್ಲ ಎಂಬುದು ಅಲ್ಲಿನ ವಾದವಾಗಿರುತ್ತೆ.

ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಕಾರು ಮತ್ತು ಬಸ್ ನಡುವಿನ ಅಪಘಾತ ದೇವರ ಕೃತ್ಯ ಇಲ್ಲಿ ಪರಿಹಾರ ಹಣ ನೀಡಲು ಸಾಧ್ಯವಿಲ್ಲ ಎಂದು ಕಂಪನಿ ನಿರಾಕರಿಸಿದ್ದ ಘಟನೆ ನಡೆದಿತ್ತು. ಹಾಗಾದ್ರೆ ಏನಿದು ಘಟನೆ ಬಳಿಕ ಏನಾಯಿತು, ಪರಿಹಾರ ಸಿಕ್ಕತಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
1997ರಲ್ಲಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಕಳೆದ ವಾರದ ಹಿಂದೆ ತೀರ್ಪು ಬಂದಿದೆ. ಆದ್ರೆ ಮುಂಬೈ ಮೋಟಾರ್ ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್‌ಗೆ ಮುಖಭಂಗವಾಗಿದ್ದು, ಕಾರಿನಲ್ಲಿದ್ದ ಸಂತ್ರಸ್ತರಿಗೆ ಪರಿಹಾರ ಹಣ ನೀಡುವಂತೆ ಮುಂಬೈ ಹೈಕೋರ್ಟ್ ತೀರ್ಪು ನೀಡಿದೆ. ಜೊತೆಗೆ ಅಪಘಾತವಾಗುವುದು ದೇವರ ಕೃತ್ಯವಲ್ಲ ಎಂದು ತಿಳಿಸಿದೆ.
ಆಗಿದ್ದೇನು?
1997ರಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದ ಮಾರುತಿ ಕಾರು ಹಾಗೂ ಮುಂಬೈ ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿತ್ತು, ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದರು, ಚಾಲಕ ಗಂಭಿರವಾಗಿ ಗಾಯಗೊಂಡು 5 ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದರು.
ಆದರೆ ಈ ರಸ್ತೆ ಅಪಘಾತವು ದೇವರ ಕೃತ್ಯವಾಗಿದ್ದು ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಮುಂಬೈ ಮೋಟಾರ್ ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್ ಸೂಚಿಸಿತ್ತು. ಮೃತರು ಹಾಗೂ ಗಾಯಗೊಂಡವರ ಸಂಬಂಧಿಕರ ಮನವಿಯನ್ನು ತಿರಸ್ಕರಿಸಲಾಗಿತ್ತು. ಆದರೆ ಕುಟುಂಬಸ್ಥರು ಮಂಬೈ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
1997ರಲ್ಲಿ ಮಾರುತಿ ಕಾರು ಮತ್ತು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಂತ್ರಸ್ತರಿಗೆ ಪರಿಹಾರವನ್ನು ನಿರಾಕರಿಸಿದ MACT ತೀರ್ಪನ್ನು ತಳ್ಳಿಹಾಕುವ ಸಂದರ್ಭದಲ್ಲಿ ನ್ಯಾಯಮೂರ್ತಿ ಎಎಸ್ ಚಂದೂರ್ಕರ್ ಮತ್ತು ನ್ಯಾಯಮೂರ್ತಿ ಜಿತೇಂದ್ರ ಜೈನ್ ಅವರ ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠವು ಈ ಅಭಿಪ್ರಾಯವನ್ನು ನೀಡಿದೆ.
ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಡೆಪ್ಯೂಟಿ ಫೈನಾನ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಶೇಜ್‌ಪಾಲ್ ಅವರು ಆರಂಭದಲ್ಲಿ 1 ಕೋಟಿ ರೂಪಾಯಿ ಪರಿಹಾರವನ್ನು ಕೋರಿ MACT (ಮುಂಬೈ ಮೋಟಾರ್ ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್ ) ಅನ್ನು ಸಂಪರ್ಕಿಸಿದ್ದರು, ನಂತರ ಅದನ್ನು 10 ಕೋಟಿಗೆ ಈ ಪರಿಹಾರದ ಮೊತ್ತ ಹೆಚ್ಚಿಸಲಾಯಿತು.
ದೇವರ ಕೃತ್ಯ
ಆದಾಗ್ಯೂ, 2005 ರಲ್ಲಿ MACT ಈ ಮನವಿಯನ್ನು ತಿರಸ್ಕರಿಸಿತು ಮತ್ತು ಇದರಲ್ಲಿ ಭಾಗಿಯಾಗಿರುವ ಇಬ್ಬರು ಚಾಲಕರಲ್ಲಿ ಯಾರೊಬ್ಬರೂ ತಪ್ಪಿಲ್ಲದ ಕಾರಣ, ಅಪಘಾತವು 'ದೇವರ ಕಾರ್ಯ' ಎಂದು ಪರಿಗಣಿಸಿತು. ಇದರಲ್ಲಿ ಇಬ್ಬರು ಚಾಲಕರ ತಪ್ಪೂ ಇದೆ, ಹೀಗಾಗಿ ಇದೊಂದು ದೇವರ ಕೃತ್ಯ ಹೀಗಾಗಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದಿತ್ತು.
ಇಬ್ಬರೂ ಚಾಲಕರ ತಪ್ಪು
ಈ ಅಪಘಾತಕ್ಕೆ ಇಬ್ಬರು ಚಾಲಕರು ಕಾರಣ ಎಂದು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಮತ್ತು ಎಂಎಸ್‌ಆರ್‌ಟಿಸಿಗೆ ನ್ಯಾಯಾಲಯ ಸೂಚಿಸಿತ್ತು. ಇದರಲ್ಲಿ 20.17 ಲಕ್ಷ ರೂಪಾಯಿ ಶೆಜ್‌ಪಾಲ್ ಅವರ ಕುಟುಂಬ ಸದಸ್ಯರಿಗೆ ನೀಡುವಂತೆ ಕೋರ್ಟ್ ತೀರ್ಪು ನೀಡಿತು.



Click it and Unblock the Notifications
