Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಬಿಸಿಲಿನಲ್ಲಿ ಬಸವಳಿದಿದ್ದ ಆನೆಗೆ ನೀರು ನೀಡಿ ಹೀರೋ ಆದ ಯುವಕ..!
ಬೇಸಿಗೆಯ ಬಿಸಿ ಎಷ್ಟು ಭಯಂಕರವಾಗಿದೆ ಅಂದ್ರೆ ಮನೆಯಿಂದ ಹೊರಬರುವುದು ಕಷ್ಟವಾಗಿದೆ. ಬೇಸಿಗೆಯ ತಾಪಕ್ಕೆ ತಲೆ ಸುಡುತ್ತಿದ್ದರೆ ಕಾಲುಗಳು ಸಹ ಸುಡುವ ಅನುಭವವಾಗುತ್ತದೆ. ಜಗತ್ತಿನ ಎಲ್ಲಾ ಭಾಗದಲ್ಲು ತಾಪಮಾನ ಏರಿಕೆಯೇ ಬಹುದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ.
ಇನ್ನು ಈ ಬೇಸಿಗೆಯಲ್ಲಿ ಹೊರ ಬಂದರೆ ಬೆವರಿನ ಜೊತೆಗೆ ಬಹುಬೇಗ ನಾವು ನಿತ್ರಾಣರಾಗುತ್ತೇವೆ. ದೇಹದಲ್ಲಿರುವ ನೀರಿನ ಅಂಶ ಬಹುಬೇಗ ಕಡಿಮೆಯಾಗಿ ಹೆಚ್ಚು ನೀರು ಕುಡಿಯಬೇಕು ಎನಿಸುತ್ತೆ. ಜೊತೆಗೆ ಬೇಸಿಗೆಯಲ್ಲಿ ಕಡಿಮೆ ನೀರು ಕುಡಿದರೆ ಹಲವು ಅನಾರೋಗ್ಯ ಸಮಸ್ಯೆಗೂ ದಾರಿಯಾಗುತ್ತದೆ.

ಇದು ಮಾನವರ ಕಷ್ಟಗಳಾದರೆ ಪ್ರಾಣಿ, ಪಕ್ಷಿಗಳ ಕಷ್ಟವಂತೂ ಕೇಳೋದೆ ಬೇಡ. ಅವುಗಳ ನೀರಿನ ಮೂಲಗಳಾಗಿದ್ದ, ನದಿ, ಹಳ್ಳ-ಕೊಳ್ಳ, ಸಣ್ಣ ಝರಿಗಳು, ಕೆರೆಗಳು ಈಗ ನೀರಿಲ್ಲದೆ ಒಣಗುತ್ತಿವೆ. ಹೀಗಾಗಿ ಅವು ಆಹಾರ ಹುಡುಕುವ ಜೊತೆಗೆ ನೀರು ಹುಡುಕಲೆಂದೆ ಅಲೆದಾಡುವ ಪರಿಸ್ಥಿತಿ ಬಂದೊದಗಿದೆ. ಹೀಗಾಗಿಯೇ ನಿಮ್ಮ ಮನೆ ಬಳಿ ಅಥವಾ ಟೆರೆಸ್ ಮೇಲೆ ಒಂದು ಬಟ್ಟಲಲ್ಲಿ ನೀರು ಇಡುವಂತೆ ಹೇಳಲಾಗುತ್ತದೆ.
ಆದ್ರೆ ಇಲ್ಲೊಬ್ಬ ಯುವಕ ಬಿಸಿಲಿನಲ್ಲಿ ನಡೆದು ಸುಸ್ತಾಗಿದ್ದ ಆನೆಗೆ ತನ್ನ ಕ್ಯಾನ್ ನೀರು ನೀಡಿ ಎಲ್ಲರ ಗಮನ ಸೆಳೆದಿದ್ದಾನೆ. ಆತನ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಕೇಳಿಬಂದಿದೆ. ಹೌದು ರಸ್ತೆಯಲ್ಲಿ ಮಧ್ಯಾಹ್ನದ ಬಿಸಿಲಿನಲ್ಲಿ ನಡೆಯುವುದೇ ಕಷ್ಟ ಅದರಲ್ಲೂ ಆನೆ ತನ್ನ ಬೃಹತ್ ದೇಹ ಇಟ್ಟುಕೊಂಡು ರಸ್ತೆಯಲ್ಲಿ ನಡೆಯುವುದು ಅಂದ್ರೆ ಅದೇನು ತಮಾಷೆಯ ಮಾತಲ್ಲ.
ಆನೆಗಳು ಒಮ್ಮೆ ಲೀಟರ್ ಲೀಟರ್ ನೀರು ಕುಡಿಯುತ್ತವೆ. ಇಲ್ಲಿ ಬಿಸಿಲಿನಲ್ಲಿ ತೆರಳುತ್ತಿದ್ದ ಆನೆಯನ್ನು ಕಂಡ ಯುವಕ ತಾನು ಹೊತ್ತೊಯ್ಯುತ್ತಿದ್ದ ವಾಹನದಿಂದ ವಾಟರ್ ಕ್ಯಾನ್ ಇಳಿಸಿ ಆನೆಗೆ ಕುಡಿಯಲು ನೀಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆತನ ಕಾರ್ಯ ಕಂಡ ಜನತೆ ನಿಜವಾದ ಹೀರೋಗಳೆಂದರೆ ಇವರೇ ಎಂದು ಕೊಂಡಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ರಸ್ತೆಯಲ್ಲಿ ಆನೆಯೊಂದು ಬರುತ್ತಿದ್ದರೆ ಅದರ ಸುತ್ತ ಇಬ್ಬರು ಮಾವುತರು ಇರುವುದನ್ನು ಕಾಣಬಹುದು. ಈ ವೇಳೆ ಯುವಕನೊಬ್ಬ ಓಡಿ ಬಂದು ಆನೆಗೆ ವಾಟರ್ ಕ್ಯಾನ್‌ನಿಂದ ನೀರು ಕೊಡುತ್ತಿದ್ದಾನೆ. ಆತ ಮನೆ ಮನೆಗೆ ಅಥವಾ ಅಂಗಡಿಗಳಿಗೆ ನೀರು ಕ್ಯಾನ್‌ನಲ್ಲಿ ವಾಟರ್ ಸರಬರಾಜು ಮಾಡುವವನು ಎನಿಸುತ್ತಿದೆ.
ಆತ ಆನೆಯನ್ನು ಕಂಡು ವಾಟರ್ ಕ್ಯಾನ್‌ನ ಮುಚ್ಚಳ ತೆಗೆದು ಆನೆಯ ಸೊಂಡಿಲಿಗೆ ನೀರು ಹಾಕುತ್ತಿದ್ದಾನೆ. ಆನೆ ಇಡಿ ಕ್ಯಾನ್ ನೀರು ಕುಡಿಯುತ್ತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು.
ಸದ್ಯ ಈ ವಿಡಿಯೋ 2 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ. ಎಕ್ಸ್ (ಟ್ವಿಟರ್) ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇಂತಹ ಯುವಕರನ್ನು ಮತ್ತಷ್ಟು ಪ್ರೋತ್ಸಾಹಿಸಬೇಕಿದೆ ಎಂಬ ಮಾತುಗಳು ಕೇಳಿಬಂದಿದೆ. ಆನೆಗೆ ನೀರು ಬೇಕು ಎಂದು ಕೇಳಲು ಸಾಧ್ಯವಿಲ್ಲ, ಜೊತೆಗೆ ನೀರು ಹುಡುಕಿಕೊಂಡು ಹೋಗಿ ಕುಡಿಯಲು ಸಹ ಆಗುವುದಿಲ್ಲ. ಆತ ಈ ಕಷ್ಟ ಅರ್ಥ ಮಾಡಿಕೊಂಡು ನೀರು ನೀಡಿ ಪುಣ್ಯ ಕಟ್ಟಿಕೊಂಡಿದ್ದಾನೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ಮತ್ತಷ್ಟು ಮಂದಿಗೆ ಸ್ಪರ್ತಿಯಾದರೆ ಬೇಸಿಗೆಯಲ್ಲಿ ನೀರಿನಿಂದ ಬಸವಳಿದ ಪ್ರಾಣಿಗಳು ನೀರು ಕುಡಿದು ತಮ್ಮ ದಾಹ ತೀರಿಸಿಕೊಳ್ಳುತ್ತವೆ. ಇದು ಇಡೀ ಪ್ರಪಂಚದ ದೃಷ್ಟಿಕೋನ ಬದಲಾಯಿಸಬಹುದು. ಒಂದಿಷ್ಟು ಜನ ತಮ್ಮ ಮನೆಯ ಪ್ರಾಣಿಗಳು ಅಲ್ಲದೆ ಬೀದಿ ನಾಯಿಗಳು, ಕಾಡು ಪ್ರಾಣಿಗಳು ಸೇರಿ ಎಲ್ಲಾ ಪ್ರಾಣಿಗಳ ಕುರಿತು ಸಹಾನುಭೂತಿ ಹೊಂದುತ್ತಾರೆ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.



Click it and Unblock the Notifications
