Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
6 ಬಾರಿ ಹಾವು ಕಚ್ಚಿದರೂ ಬದುಕುಳಿದ ಮಹಿಳೆ..! ಹಾವು ಕಚ್ಚಿದಾಗ ಆಕೆ ಮಾಡಿದ್ದೇನು?
ಭೂಮಿ ಮೇಲೆ ಅತ್ಯಂತ ವಿಷಕಾರಿ ಪ್ರಾಣಿ ಯಾವುದು ಅಂದ್ರೆ ಥಟ್ ಅಂತ ನೆನಪಿಗೆ ಬರೋದು ಹಾವುಗಳು. ಹೀಗಾಗಿಯೇ ಹಾವುಗಳಂದ್ರೆ ಎಂತವರ ಎದೆಯಲ್ಲೂ ನಡುಕ ಹುಟ್ಟಿಸುತ್ತೆ. ಕೆಲವರಂತು ಹಾವುಗಳ ನೋಡಿದ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಆದರೆ ಹಾವಿನ ಸಂಗದಲ್ಲೇ ಬದುಕುವವರೂ ಇದ್ದಾರೆ.
ಹಾವುಗಳನ್ನು ಹಿಡಿಯುವುದು ರಕ್ಷಿಸುವುದು ಅವರ ಕಾರ್ಯವಾಗಿರುತ್ತೆ. ಇನ್ನು ಹಾವುಗಳಲ್ಲಿ ಕೆಲವು ಜಾತಿ ಹಾವುಗಳು ವಿಷಕಾರಿ ಅಲ್ಲ. ಆದ್ರೆ ಕೆಲವು ವಿಷಕಾರಿ ಹಾವುಗಳು ಕಚ್ಚಿದ ಕ್ಷಣದಲ್ಲೇ ನಮಗೆ ಸಾವು ಸಂಭವಿಸಬಹುದು. ಇನ್ನು ಹಾವು ಕಡಿತಕ್ಕೆ ಸೂಕ್ತ ಚಿಕಿತ್ಸೆ ಇಲ್ಲದೆಯೇ ಸಾವಿಗೀಡಾಗುವವರ ಸಂಖ್ಯೆ ಕಡಿಮೆ ಏನಿಲ್ಲ.

ದೇಶದಲ್ಲಿ ಹಾವಿ ಕಡಿತದಿಂದ ಸಾವಿಗೀಡಾಗುವವರ ಸಂಖ್ಯೆ ಲಕ್ಷಕ್ಕೂ ಅಧಿಕ ಅಂದರೆ ಹಾವಿನ ಕುರಿತ ಭಯ ಮತ್ತಷ್ಟು ಹೆಚ್ಚಾಗುತ್ತದೆ. ಆದ್ರೆ ಇಲ್ಲೊಂದು ಘಟನೆಯಲ್ಲಿ ಮಹಿಳೆಯೊಬ್ಬರು ಅಚ್ಚರಿ ಎಂಬಂತೆ ಹಾವು ಕಡಿತದಿಂದ ಪಾರಾಗಿದ್ದಾರೆ. ಅದು ಒಂದೆರಡು ಬಾರಿಯಲ್ಲ ಬರೋಬ್ಬರಿ 6 ಬಾರಿ ಹಾವು ಕಡಿದರೂ ಬದುಕುಳಿದಿದ್ದಾರೆ.
ಈ ಘಟನೆ ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದಿದೆ. ಬಹೋರಿಬಂದ್ ತಹಸಿಲ್‌ನ ಗುಣ ಬಾಚಯ್ಯ ಗ್ರಾಮದ ನಿವಾಸಿ ಪೂಜಾ ವ್ಯಾಸ್ ಆರು ವರ್ಷಗಳಲ್ಲಿ ಆರು ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಆದಷ್ಟು ಬೇಗ ಚಿಕಿತ್ಸೆ ಪಡೆಯುವುದೊಂದೇ ದಾರಿ. ಭಾರತದ ಕೆಲವು ದೂರದ ಪ್ರದೇಶಗಳಲ್ಲಿ ಆ ಸೌಲಭ್ಯವೂ ಇಲ್ಲ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದರೆ, ಹಾವು ಕಡಿತದಿಂದ ಬದುಕುಳಿಯುವುದು ಸುಲಭ.
ಅದೇ ರೀತಿ ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ಮಹಿಳೆಯೊಬ್ಬರಿಗೆ ಬರೋಬ್ಬರಿ 6 ಬಾರಿ ಹಾವು ಕಡಿದಿದೆ. ಆದರೆ ಆಕೆ ಪವಾಡ ವೆಂಬಂತೆ ಬದುಕುಳಿದಿದ್ದಾರೆ. ಅದು ಸಹ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತೆರಳಿದ ಕಾರಣದಿಂದಾಗಿ ಆಕೆ ಬದುಕುಳಿದಿರುವುದಾಗಿ ತಿಳಿದುಬಂದಿದೆ.
ಮೇ 10ರಂದು ಹಾವು ಕಚ್ಚಿದ್ದರಿಂದ ಪೂಜಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಮನೆ ಕೆಲಸ ಮಾಡುವಾಗ ಹಾವು ಕಚ್ಚಿತ್ತು. ಆಕೆಯ ಮನೆಯವರು ತಕ್ಷಣ ಕ್ರಮ ಕೈಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ಆಕೆಯನ್ನು ಬಹೋರಿಬಂದ್ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಹಾವು ಕಚ್ಚಿದಾಗ ಯಾವ ಪ್ರಥಮ ಚಿಕಿತ್ಸೆಯನ್ನೂ ಮಾಡದೆ ಜೊತೆಗೆ ಸಮಯ ವ್ಯರ್ಥ ಮಾಡದೆ ಆಕೆಯನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪಿದ್ದರಿಂದ ವೈದ್ಯರು ರಕ್ಷಿಸುವಲ್ಲಿ ಯಶಸ್ವಿಯಾದರು.
ಆಕೆ ಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ ಆಕೆಯ ಹೇಳಿದ ಪ್ರಕಾರ ಸುಮಾರು ಆರು ಬಾರು ಹಾವು ಕಚ್ಚಿದೆಯಂತೆ. ಕಳೆದ ಆರು ವರ್ಷಗಳಲ್ಲಿ ಸರಣಿಯಾಗಿ ಹಾವು ಕಡಿದಿದೆ.
ಇದೇ ರೀತಿಯ ಘಟನೆಯಲ್ಲಿ ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯ ಮಹಿಳೆಯೊಬ್ಬರು ಒಂದು ವರ್ಷದಲ್ಲಿ 13 ಬಾರಿ ಹಾವಿನಿಂದ ಕಚ್ಚಿಸಿಕೊಂಡು ಬದುಕುಳಿದಿದ್ದ ಘಟನೆ ನಡೆದಿತ್ತು.
6 ಬಾರಿಯೂ ಆಕೆ ಬದುಕುಳಿದಿದ್ದು ಹೇಗೆ?
ಅಚ್ಚರಿಯ ವಿಚಾರ ಎಂದರೆ ಹಾವು ಕಡಿತಕ್ಕೆ ಒಳಗಾದಗೆಲ್ಲಾ ಆಕೆ ತಕ್ಷಣ ಆಸ್ಪತ್ರೆಗೆ ಬಂದಿದ್ದಳಂತೆ. ಎಲ್ಲಿಯೂ ಸಮಯ ವ್ಯರ್ಥ ಮಾಡದೆ. ಯಾವ ಪ್ರಥಮ ಚಿಕಿತ್ಸೆಯೂ ಮಾಡದೆ ಆಸ್ಪತ್ರೆಗೆ ಬಂದಿದ್ದಳಂತೆ. ಆಸ್ಪತ್ರೆ ಸಹ ಆಕೆಯ ಮನೆಯಿಂದ ಸ್ವಲ್ಪವೇ ದೂರದಲ್ಲಿತ್ತು. ಇದರ ಜೊತೆ ಹಾವು ಕಚ್ಚಿದಾಗ ಹೆಚ್ಚು ಆತಂಕಕ್ಕೆ ಆಕೆ ಒಳಗಾಗದೆ ಆಸ್ಪತ್ರೆಗೆ ಬಂದಿರುವುದು ಆಕೆ ಜೀವ ಉಳಿಯುವಲ್ಲಿ ಪ್ರಮುಖ ಕಾರಣವಾಗಿದೆ ಎಂದು ವೈದ್ಯರು ಸಹ ಹೇಳಿದ್ದಾರೆ.
ಆಕೆಯ ಈ ಕಥೆ ಕೇಳಿದ ಸ್ಥಳೀಯರು ನಿಜಕ್ಕೂ ಅಚ್ಚರಿಗೆ ಒಳಗಾಗಿದ್ದಾರೆ 6 ಬಾರಿ ಹಾವು ಕಡಿತದಿಂದ ಆಕೆ ಬದುಕುಳಿದಿರುವುದು ನಿಜಕ್ಕೂ ಪವಾಡ ಎನ್ನುತ್ತಿದ್ದಾರೆ.



Click it and Unblock the Notifications
