Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪ್ರಮಾಣ ವಚನ ಸ್ವೀಕಾರದ ನಡುವೆ ವಿಚಿತ್ರ ಪ್ರಾಣಿ ಪತ್ತೆ..! ವಿಡಿಯೋ ವೈರಲ್
ಲೋಕಸಭೆ ಚುನಾವಣೆ ಫಲಿತಾಂಶ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸತತ 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದಲ್ಲದೆ ನಿನ್ನೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮೋದಿ ಕ್ಯಾಬಿನೆಟ್ ಸೇರುವ ಮಂತ್ರಿಗಳು ಪ್ರಮಾಣ ವಚನ ಸಹ ಸ್ವೀಕರಿಸಿದ್ದಾರೆ. ಈಗಾಗಲೇ ಎನ್‌ಡಿಎ ಮೈತ್ರಿಕೂಟದ ಜೊತೆ ಸೇರಿ ಸರ್ಕಾರ ರಚಿಸಿರುವ ಬಿಜೆಪಿ ಸತತ 3ನೇ ಬಾರಿ ಪ್ರಧಾನಿ ಪಟ್ಟ ಅಲಂಕರಿಸಿದೆ.
ಆದರೆ ನಿನ್ನೆ ರಾಷ್ಟ್ರಪತಿ ಭವನದಲ್ಲಿ ನಡೆದ ಈ ಪ್ರಮಾಣ ವಚನ ಕಾರ್ಯಕ್ರಮ ಅಚ್ಚರಿಗೆ ಕಾರಣವಾಗಿದೆ. ಈ ಕಾರ್ಯಕ್ರಮದ ನಡುವೆ ವಿಚಿತ್ರ ಪ್ರಾಣಿಯೊಂದು ಪತ್ತೆಯಾಗಿದ್ದು, ನೋಡುಗರು ಅಚ್ಚರಿಗೆ ಒಳಗಾಗಿದ್ದಾರೆ. ವಿದೇಶಿ ಮುಖ್ಯಸ್ಥರು ಮತ್ತು ಇತರ ಗಣ್ಯರು, ಕೈಗಾರಿಕೋದ್ಯಮಿಗಳು ಮತ್ತು ಚಲನಚಿತ್ರ ತಾರೆಯರು ಸೇರಿದಂತೆ 8,000 ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಆದರೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದರಲ್ಲು ವಿಚಿತ್ರ ರೀತಿಯ ಪ್ರಾಣಿಯೊಂದು ಪತ್ತೆಯಾಗಿದ್ದು, ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಬಿಜೆಪಿ ಸಂಸದ ದುರ್ಗಾ ದಾಸ್ ಪ್ರಮಾಣ ವಚನೆ ಸ್ವೀಕರಿಸಿದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಳಿಕ ಎದ್ದು ಬಂದಾಗ ಅವರ ಹಿಂದೆ ವಿಚಿತ್ರ ಪ್ರಾಣಿಯೊಂದು ತೆರಳುತ್ತಿರುವುದು ನೋಡಬಹುದು.
ಆದರೆ ಅಲ್ಲಿದ್ದವರಿಗೆ ಇದರ ಮೇಲೆ ಅಷ್ಟೊಂದು ಗಮನ ಹರಿದಿಲ್ಲ. ಆದರೆ ವಿಡಿಯೋ ನೀಡಿದ ವೀಕ್ಷಕರ ನಿಖರವಾಗಿ ಅದನ್ನು ಗುರುತಿಸುವಂತಿದೆ. ಒಂದು ಕಬ್ಬದ ಅಡ್ಡಲಾಗಿ ಆ ವಿಚಿತ್ರ ಪ್ರಾಣಿ ಸಾಗಿದ್ದು, ಯಾವ ಪ್ರಾಣಿ ಎಂಬುದು ಅಸ್ಪಷ್ಟವಾಗಿದೆ. ಆದ್ರೆ ಕೆಲವರು ಇದನ್ನು ಬೆಕ್ಕು ಎಂದು ಪತ್ತೆ ಕೆಲವರು ಚಿರತೆ ಆಗಿರಬಹುದು ಎಂದು ಶಂಕಿಸಿದ್ದಾರೆ.
ಅದು ಚಿರತೆಯೇ? ಸಾಮಾನ್ಯ ಬೆಕ್ಕು? ಅಥವಾ ನಾಯಿ? ರಾಷ್ಟ್ರಪತಿ ಭವನದಲ್ಲಿ ಯಾವ ಪ್ರಾಣಿಯು ಸಾಂದರ್ಭಿಕವಾಗಿ ಅಡ್ಡಾಡುತ್ತಿರುವುದನ್ನು ಕಂಡು ಜನರು ಒಂದೊಂದು ರೀತಿ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಪ್ರಾಣಿ ಸಂಚರಿಸಲು ಸಾಧ್ಯವೇ ಇಲ್ಲ ಎನ್ನುವುದು ಹಲವರ ವಾದವಾಗಿದೆ. ಅದು ಸತ್ಯವೂ ಹೌದು. ಏಕೆಂದರೆ ಹೊರಗಿನಿಂದ ಯಾರಾದರು ಒಳ ಬರಬೇಕು ಎಂದರೆ ಮುಖ್ಯ ದ್ವಾರ ದಾಡಿಕೊಂಡೇ ಬರಬೇಕು. ಆದರೆ ಮುಖ್ಯ ದ್ವಾರದಲ್ಲಿ ಸೆಕ್ಯೂರಿಟಿ ತುಂಬಾನಿ ಸ್ಟ್ರಾಂಗ್ ಆಗಿರಲಿದೆ. ಹೀಗಾಗಿ ಅಲ್ಲಿಂದ ಬರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ.
ಮತ್ತೆ ಕೆಲವರು ಇದೊಂದು ಎಡಿಟ್ ಮಾಡಲಾದ ವಿಡಿಯೋ ಎನ್ನುತ್ತಿದ್ದಾರೆ. ಆ ಪ್ರಾಣಿ ಓಡಾಡುವುದು ಕ್ಯಮರಾ ಕಣ್ಣಿಗೆ ಮಾತ್ರ ಬೀಳಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಸಾವಿರಾರು ಮಂದಿ ಸೇರಿದ್ದರು ಒಬ್ಬರಲ್ಲ ಒಬ್ಬರಿಗೆ ಅದು ಯಾವ ಪ್ರಾಣಿ ಎಂಬುದು ತಿಳಿಯಲೇಬೇಕಿತ್ತು ಎಂದಿದ್ದಾರೆ. ಮತ್ತೆ ಕೆಲವರು ಇದು ದೊಡ್ಡ ಗಾತ್ರದ ಬೆಕ್ಕು ರಾಜಭವನದ ಪ್ರಾಣಿ ಆಗಿರಬಹುದು ಎಂದು ಶಂಕಿಸಿದ್ದಾರೆ. ಅಲ್ಲದೆ ಪ್ರಮಾಣ ವಚನದಲ್ಲಿ ಭಾಗಿಯಾದರೆ ಒಂದು ಖಾತೆ ಸಿಗಬಹುದು ಎಂಬ ಆಲೋಚನೆಯಲ್ಲಿ ಬಂದಿರಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಆದರೆ ಈ ವಿಡಿಯೋ ಕುರಿತಂತೆ ರಾಜ ಭವನ ಸಿಬ್ಬಂದಿ ಯಾವ ಸ್ಪಷ್ಟನೆಯನ್ನೂ ಈವರೆಗೆ ನೀಡಿಲ್ಲ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, 30 ಕ್ಯಾಬಿನೆಟ್ ಮಂತ್ರಿಗಳು, 36 ರಾಜ್ಯ ಸಚಿವರು (MoS) ಮತ್ತು ಸ್ವತಂತ್ರ ಉಸ್ತುವಾರಿ ಹೊಂದಿರುವ ಐದು MoS ಸೇರಿದಂತೆ 72-ಸದಸ್ಯರ ಮಂತ್ರಿ ಮಂಡಳಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಮತ್ತು ಎಸ್ ಜೈಶಂಕರ್, ಹೆಚ್.ಡಿ ಕುಮಾರಸ್ವಾಮಿ ಅವರಂತಹ ಪ್ರಮುಖರು ಸಂಪುಟ ಸಚಿವರಾಗಿ ಮುಂದುವರಿದಿದ್ದಾರೆ. ಆದರೆ ಅವರಿಗೆ ಖಾತೆ ಹಂಚಿಕೆ ಇನ್ನೂ ನಡೆಯಬೇಕಿದೆ.



Click it and Unblock the Notifications
