Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮಳೆ ಸುರಿಸುವಂತೆ ಕೋರಿ ಇಂದ್ರ ದೇವನಿಗೆ ಪತ್ರ ಬರೆದ ವಕೀಲ..!
ದೇಶದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಮುಂಗಾರು ಮಳೆ ಆರಂಭಗೊಂಡಿದೆ. ಆದರೆ ಉತ್ತರ ಭಾರತದಲ್ಲಿ ಮಾತ್ರ ತಾಪಮಾನ ಏರಿಕೆಯಾಗಿದ್ದು, ಅಲ್ಲಿನ ಜನರು ಬಿಸಿಲಿನ ಝಳಕ್ಕೆ ತತ್ತರಿಸಿ ಹೋಗಿದ್ದಾರೆ. ವಿಪರೀತ ತಾಪಮಾನ ಏರಿಕೆ ಅಲ್ಲಿನ ಜನರ ಜೀವ ಹಿಂಡುತ್ತಿದೆ. ಅಲ್ಲದೆ ಮನೆಯಿಂದ ಅವರು ಹೊರ ಬರಲು ಆಗದ ಸ್ಥಿತಿಗೆ ತಲುಪಿದ್ದಾರೆ.
ದೆಹಲಿ, ಉತ್ತರ ಪ್ರದೇಶದಲ್ಲಿ ಮಳೆ ಬಂದರೆ ಸಾಕಪ್ಪ ಎಂದು ಜನರು ದೇವರ ಪ್ರಾರ್ಥಿಸುತ್ತಿದ್ದಾರೆ. ಏಕೆಂದರೆ ಬಿಸಿಲಿನಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಅಲ್ಲದೆ ಬಿಸಿಲಿನಿಂದ ಜನರು ಕುಸಿದು ಬೀಳುತ್ತಿರುವ ಪ್ರಕರಣಗಳು ಸಹ ವರದಿಯಾಗುತ್ತಿವೆ.

ಇತ್ತ ಸಕಾಲಕ್ಕೆ ಮಳೆ ಬಾರದೆ ಇದ್ದರೆ ಜನರು ಮಳೆಗಾಗಿ ಕಪ್ಪೆಗಳ ಮದುವೆ ಮಾಡುವುದು ಇಲ್ಲದೆ ಕತ್ತೆಗಳ ಮದುವೆ ಹೀಗೆ ನೂರಾರು ಸಂಪ್ರದಾಯ ಆಚರಿಸಿಕೊಂಡು ಬಂದಿದ್ದಾರೆ. ಅದರಲ್ಲೂ ಹಳ್ಳಿಗಳಲ್ಲಿ ಇಂತವ ವಾಡಿಕೆ ಇದೆ. ಈ ರೀತಿ ಮಾಡುವುದರಿಂದ ಮಳೆಯಾಗಲಿದೆ ಎಂಬುದು ಅವರ ನಂಬಿಕೆಯಾಗಿದೆ.
ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಮಳೆಯಾಗಲಿ ಎಂದು ಮಾಡಿದ ಕಾರ್ಯ ಈಗ ಸಿಕ್ಕಾಪಟ್ಟೆ ಸುದ್ದಿಯಾಗುವ ಜೊತೆಗೆ ಅಚ್ಚರಿಗೂ ಕಾರಣವಾಗಿದೆ. ಆತ ಬಿಸಿಲಿನ ಝಲ ತಾಳಲಾಗದೆ ಮಳೆಯಾಗಲಿ ಎಂದು ದೇವರನ್ನು ಪಾರ್ಥಿಸಿ ಇಂದ್ರ ದೇವನಿಗೆ ಪತ್ರ ಬರೆದಿದ್ದಾನೆ.
ಉತ್ತರ ಪ್ರದೇಶ ಕಾನ್ಪುರದ ಬಿಲ್ಹೌರ್‌ನ ವಕೀಲ ಅತುಲ್ ಸನ್ವಾರೆ ಎಂಬುವವರು ಭಗವಾನ್ ಇಂದ್ರನಿಗೆ ಪತ್ರ ಬರೆದಿದ್ದಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ಇಂದ್ರ ಹಿಂದೂ ಧರ್ಮದಲ್ಲಿ ಮಳೆ ಮತ್ತು ಗಾಳಿಯ ತರುವಂತಹ ದೇವರಂತೆ.
ಕಾನ್ಪುರಕ್ಕೆ ಶಾಖದಿಂದ ಬಿಡುವು ನೀಡುವಂತೆ ವಕೀಲರು ಪತ್ರದಲ್ಲಿ ದೇವರನ್ನು ಕೋರಿದ್ದಾರೆ. ಕಳೆದ ಹಲವು ದಿನಗಳಿಂದ ಕಾನ್ಪುರ ಬಿಸಿಲಿನ ತಾಪವನ್ನು ಅನುಭವಿಸುತ್ತಿದೆ, ಇದರಿಂದಾಗಿ ಜನರು ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಅತುಲ್ ಬರೆದಿದ್ದಾರೆ.
ಕಾನ್ಪುರದಲ್ಲಿ ಬರೋಬ್ಬರಿ 45 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ತಾಮಪಾನ ದಾಖಲಾಗುತ್ತದೆ. ಹೀಗಾಗಿ ತಾಪಮಾನದಿಂದ ಮನುಷ್ಯರನ್ನು ರಕ್ಷಿಸು ಎಂದು ಇಂದ್ರನಿಗೆ ಪತ್ರ ಬರೆಯಲಾಗಿದೆ.
ಸ್ವರ್ಗದ ಅಧಿಪತಿ ಎಂದು ಪರಿಗಣಿಸಲ್ಪಟ್ಟಿರುವ ಇಂದ್ರದೇವ ಮಹಾರಾಜ್ ಅವರ ಹೆಸರಿನಲ್ಲಿ ವಂದನೆಯೊಂದಿಗೆ ಪತ್ರವು ಪ್ರಾರಂಭವಾಗುತ್ತವೆ. ಜೂನ್‌ನ ಉರಿಯುತ್ತಿರುವ ಶಾಖವು ಜೀವಿಗಳಿಗೆ ಆಘಾತವನ್ನುಂಟು ಮಾಡಿದೆ ಮತ್ತು ಅವುಗಳು ತಮ್ಮ ಪ್ರಾಣವನ್ನೂ ಕಳೆದುಕೊಳ್ಳುತ್ತಿವೆ, ಹೀಗಾಗಿ ಬೇಗನೆ ಮಳೆ ಸುರಿಸು.
ಪ್ರಾಣಿಗಳು ಮತ್ತು ಮನುಷ್ಯರನ್ನು ರಕ್ಷಿಸಲು ಭಾರೀ ಮಳೆಯು ಬಹಳ ಮುಖ್ಯ ಎಂದು ನಿಮಗೆ ವಿನಮ್ರ ವಿನಂತಿ ಎಂದು ಅತುಲ್ ಪತ್ರದಲ್ಲಿ ಬರೆದಿದ್ದಾರೆ. ಜೊತೆಗೆ ಬಾರೀ ಮಳೆಯಾಗುವಾಗ ಆಲಿಕಲ್ಲು ಬೀಳಬಾರದು ಎಂದು ಮನವಿ ಮಾಡಿದ್ದಾರೆ.
ಸದ್ಯ ಅವರು ಬರೆದಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜೊತೆಗೆ ಹಲವರು ಹಲವು ರೀತಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ರೀತಿಯ ಪತ್ರ ಬರೆದಿರುವ ವಕೀಲರ ಕುರಿತು ಹಲವು ರೀತಿ ಕಾಮೆಂಟ್ ಹರಿದುಬಂದಿದೆ.
ನೀವು ಪತ್ರ ಬರೆಯುವಾಗ ಯಾವ ಅಡ್ರೆಸ್ ಬರೆದಿದ್ದೀರಿ ತೋರಿಸಿ, ಸರಿ ಅಡ್ರೆಸ್ ಬರೆದರೆ ಖಂಡಿತ ಮಳೆ ಬರುತ್ತದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಈ ರೀತಿ ಪತ್ರ ಬರೆಯುವ ಬದಲು ಮರ ನೆಡುವ ಆಲೋಚನೆ ಮಾಡಿದ್ದರೆ ತಾನಾಗಿಯೇ ಮಳೆ ಬರುತ್ತಿತ್ತು ಎಂದಿದ್ದಾರೆ.
ಅಲ್ಲದೆ ಈ ಪತ್ರ ಇಂದ್ರನಿಗೆ ತಲುಪಿಲಿದೆ ಎಂದು ನಂಬುವುದು ಹೇಗೆ? ಮಳೆ ಬಂದರೆ ಇಂದ್ರನಿಂದ ಬಂದಿದೆ ಎಂದು ನಾವು ತಿಳಿಯಬೇಕು ಬಾರದೆ ಇದ್ದರೆ ಈ ಪತ್ರ ದೇವಲೋಕ ತಲುಪಿಲ್ಲ ಎಂದರ್ಥ ಎಂದು ಮತ್ತೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.



Click it and Unblock the Notifications
