Latest Updates
-
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ
ಬೆಂಗಳೂರು ಮಹಿಳೆಯರಿಗೆ ಸುರಕ್ಷಿತವಲ್ಲ ಅನ್ನೋರು ಈ ಯುವತಿ ಕಥೆ ಕೇಳಬೇಕು..!!
ಮಹಾನಗರಿ ಬೆಂಗಳೂರು ನಿತ್ಯ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತೆ. ಕೆಲವೊಮ್ಮೆ ಮಳೆ, ಟ್ರಾಫಿಕ್, ಪ್ರವಾಹ, ಚಳಿ ಹೀಗೆ ಒಂದಲ್ಲಾ ಒಂದು ವಿಚಾರಕ್ಕೆ ಆಗಾಗ ಸುದ್ದಿಯಾಗುತ್ತೆ. ಇತ್ತೀಚಿಗೆ ಹೆಚ್ಚಾಗಿ ಸುದ್ದಿಯಾಗುತ್ತಿರುವುದು ರೋಡ್‌ರೇಂಜ್ ಹಾಗೂ ಹಿಂದಿ ಭಾಷಿಕರ ನಡುವಿನ ಗಲಾಟೆಗಳಿಂದಾಗಿ. ಹೀಗಾಗಿಯೇ ಬೆಂಗಳೂರು ಮಹಿಳೆಯರಿಗೆ ಸುರಕ್ಷಿತ ನಗರವಲ್ಲ ಎಂಬ ವಾದ ಹುಟ್ಟುಕೊಂಡಿದೆ.
ಕೆಲವೊಮ್ಮೆ ಬೆಂಗಳೂರಿನಲ್ಲಿ ಅನ್ಯ ಭಾಷಿಕರು ಸುರಕ್ಷಿತವಾದ ಭಾವನೆ ಕಳೆದುಕೊಳ್ಳುತ್ತಾರೆ. ಹೊರಗಿನವರಂತೆ ಅವರನ್ನು ಟ್ರೀಟ್ ಮಾಡಲಾಗುತ್ತಿದೆ ಎಂಬ ದೂರು ಕೂಡ ಇದೆ. ಇದಕ್ಕೆ ಪೂರಕವಾಗುವ ಕೆಲವು ಘಟನೆಗಳನ್ನು ಕೂಡ ನಾವು ಸಾಮಾಜಿಕ ಜಾಲತಾಣದಲ್ಲಿ ಆಗಾಗ ನೋಡುತ್ತಿರುತ್ತೇವೆ. ಆದ್ರೆ ಇತ್ತೀಚಿಗೆ ನಡೆದಿರುವ ಈ ಘಟನೆ ಈ ಎಲ್ಲಾ ದೂರುಗಳು, ಬೆಂಗಳೂರು ಕುರಿತ ಪರಭಾಷಿಕರ ನಿಲುವನ್ನು ಬದಲಾಯಿಸುವಂತೆ ಮಾಡುತ್ತಿದೆ.

ಬೆಂಗಳೂರಲ್ಲಿ ಮಹಿಳೆ ರಾತ್ರಿ ಸಮಯ ಹೊರಬರುವುದು ಈಗ ಸುರಕ್ಷಿತ ಕೆಲಸವಾಗಿ ಉಳಿದಲ್ಲ ಎಂದು ದೂರುತ್ತಾರೆ, ಆದ್ರೆ ಇಲ್ಲೊಬ್ಬ ಯುವತಿ ರಾತ್ರಿ ಸಮಯದಲ್ಲಿ ತನ್ನ ಮೊಬೈಲ್ ಸ್ವಿಚ್ ಆಫ್ ಆಗಿದ್ದರು ಆಕೆಗೆ ಬೆಂಗಳೂರು ಜನ ಹೇಗೆ ಮನೆ ತಲುಪಲು ಸಹಾಯ ಮಾಡಿದರು ಎಂಬುದಾಗಿ ಹಂಚಿಕೊಂಡಿದ್ದಾಳೆ. ಹಾಗೆ ಈ ಸಿಟಿ ಎಷ್ಟು ಸುರಕ್ಷಿತ ಎಂಬುದನ್ನು ವಿವರಿಸಿದ್ದಾಳೆ.
ಉತ್ತರ ಭಾರತದಿಂದ ಇಂಟರ್ನ್‌ಶಿಪ್‌ಗೆಂದು ಬೆಂಗಳೂರಿಗೆ ಬಂದಿದ್ದ ಯುವತಿ ರಾತ್ರಿ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದಳು, ಆಕೆ ಇಂದಿರಾನಗರದಿಂದ ಹೆಚ್‌ಎಸ್ಆರ್ ಲೇಔಟ್‌ಗೆ ತೆರಳವೇಕಿತ್ತು. ಇದಕ್ಕಾಗಿ ಯೂಲು (YULU) ಬೈಕ್ ಬುಕ್ ಮಾಡಿದ್ದಾಳೆ. ಆದ್ರೆ ಆಕೆಯ ಮೊಬೈಲ್ 40 ಪರ್ಸೆಂಟ್ ಬ್ಯಾಟರಿ ಇದ್ದರೂ ಕೂಡ ಸಿಗ್ನಲ್‌ನಲ್ಲಿ ಸ್ವಿಚ್ ಆಫ್ ಆಗಿದೆ. ಆಕೆ ಎಷ್ಟೇ ಪ್ರಯತ್ನ ಮಾಡಿದರು ಮತ್ತೆ ಮೊಬೈಲ್ ಆನ್ ಆಗಲೇ ಇಲ್ಲ.
ಬೆಂಗಳೂರಿನಲ್ಲಿ ಅದ್ರಲ್ಲೂ ಹೊಸಬರು ಮೊಬೈಲ್ ಇಲ್ಲದೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳುವುದು ಅಸಾಧ್ಯ. ಅಲ್ಲದೆ ಭಯ ಹೆಚ್ಚಾಗುವಂತೆ ಮಾಡುತ್ತೆ, ಈ ಯೂಲು ಬೈಕ್ ಬಂದ್ ಮಾಡಲು ಮೊಬೈಲ್ ಆನ್ ಆಗಿರುವುದು ಮುಖ್ಯವಾಗುತ್ತೆ. ಹಾಗೆ ಆಕೆ ಮನೆ ತಲುಪಲು ಮ್ಯಾಪ್ ನೋಡಬೇಕಿರುತ್ತೆ.
ಈ ಆತಂಕದ ನಡುವೆ ಆಕೆ ಸಿಗ್ನಲ್‌ನಲ್ಲಿದ್ದ ಹಿರಿಯ ವ್ಯಕ್ತಿಯ ಬಳಿ ಹೆಎಸ್‌ಆರ್ ಲೇಔಟ್‌ಗೆ ಹೇಗೆ ಹೋಗಬೇಕು ಎಂದು ಕೇಳಿದ್ದಾಳೆ. ಹಾಗೆ ಮೊಬೈಲ್ ಚಾರ್ಜ್ ಮಾಡಲು ನಿಮ್ಮ ಸ್ಕೂಟರ್‌ನಲ್ಲಿ ಪಿನ್ ಇದೆಯೇ ಎಂಬುದಾಗಿ ಕೇಳಿ ಮೊಬೈಲ್ ನೀಡಿದ್ದಾಳೆ. ಆ ವ್ಯಕ್ತಿ ತನ್ನ ಸ್ಕೂಟರ್‌ನಲ್ಲಿದ್ದ ಚಾರ್ಜರ್‌ನಿಂದ ಮೊಬೈಲ್ ಚಾರ್ಜ್ ಮಾಡಲು ಪ್ರಯತ್ನಿಸಿದಾಗ ಅದು ಸಾಧ್ಯವಾಗಲಿಲ್ಲ. ಈ ವೇಳೆ ಸಿಗ್ನಲ್ ಸಹ ಬಿಟ್ಟಿದೆ. ನಂತರ ಆಕೆ ಮುಂದೆ ಹೋಗಿ ನಿಂತಿದ್ದಾಳೆ. ಆ ವ್ಯಕ್ತಿ ತನ್ನ ಸ್ಕೂಟರ್ ನಿಲ್ಲಿಸಿ ಆಕೆಯ ಬಳಿ ಬಂದು ತನ್ನ ಬಳಿ ಇದ್ದ ಚಾರ್ಜರ್ ಆಕೆಗೆ ನೀಡಿ ಆಫಿಸ್ ಅಡ್ರೆಸ್ ಕೇಳಿ ನಾಳೆ ಬಂದು ವಾಪಾಸ್ ಪಡೆಯುತ್ತೇನೆ. ಎಲ್ಲಿಯಾದರು ಚಾರ್ಜ್ ಮಾಡಿಕೊಳ್ಳಿ ಎಂದು ಚಾರ್ಜರ್ ನೀಡಿ ಅಲ್ಲಿಂದ ತೆರಳಿದ್ದಾನೆ.
ಬಳಿಕ ಚಾರ್ಜರ್ ಪಡೆದ ಯುವತಿ ಪಕ್ಕದಲ್ಲಿದ್ದ ದೋಸೆ ಶಾಪ್‌ಗೆ ಬಂದು ಅಲ್ಲಿದ್ದ ವ್ಯಕ್ತಿಯ ಬಳಿ ಮೊಬೈಲ್ ಚಾರ್ಜ್ ಮಾಡಲು ಮನವಿ ಮಾಡಿದ್ದಾಳೆ. ಆಕೆಯ ಪರಿಸ್ಥಿತಿ ಅರ್ಥ ಮಾಡಿಕೊಂಡಾತ ಚಾರ್ಜ್ ಮಾಡಿಕೊಡುವುದಾಗಿ ಹೇಳಿದ್ದಾನೆ. 15 ನಿಮಿಷ ಚಾರ್ಜ್ ಮಾಡಿದ ಬಳಿಕ ಮಿಬೈಲ್ ಸ್ವಿಚ್ ಆನ್ ಆಗಿದೆ. ಬಳಿಕ ಆಕೆ ತನ್ನ ಪಿಜಿ ತಲುಪಿ ಯೂಲು ರೈಡ್ ಎಂಡ್ ಮಾಡಿದ್ದಾಳೆ.
ಆಕೆ ಸುಮಾರು 15 ಕಿ. ಮೀ ಪ್ರಯಾಣಿಸಬೇಕಿತ್ತು. ಈ ಪ್ರಯಾಣ ಮೊಬೈಲ್ ಸ್ವಿಚ್ ಆಫ್ ಆಗಿದ್ದರೆ ದೊಡ್ಡ ಸಮಸ್ಯೆ ತರುತ್ತಿತ್ತು. ಆದ್ರೆ ಆಕೆ ಬೆಂಗಳೂರಿನಲ್ಲಿ ಸಿಕ್ಕಿರುವ ಸಹಾಯದ ಕುರಿತು ರೆಡ್‌ಇಟ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾಳೆ. ಈ ಪೋಸ್ಟ್ ನೋಡಿದ ಮಂದಿ ಬೆಂಗಳೂರು ಸುರಕ್ಷಿತವಲ್ಲ ಎಂಬ ದೂರು ಹೇಳುವವರು ಇದನ್ನು ನೋಡಬೇಕು ಎಂದಿದ್ದಾರೆ. ಹಾಗೆ ಹಿಂದಿ ಭಾಷಿಕರು ಕೂಡ, ಹೊಸದಾಗಿ ನಗರಕ್ಕೆ ಬಂದವರು ಕೂಡ ಸುಲಭವಾಗಿ ಬೆಂಗಳೂರಿನಲ್ಲಿ ಬದುಕಬಹುದು. ಆದ್ರೆ ಕೆಲವರಿಂದ ಈ ಹೆಸರು ಹಾಳಾಗಿದೆ ಎಂದು ಬರೆದುಕೊಂಡಿದ್ದಾರೆ.
ಸಿಗ್ನಲ್‌ನಲ್ಲಿ ಚಾರ್ಜರ್ ನೀಡಿದ ಹಿರಿಯ ವ್ಯಕ್ತಿ ಹಾಗೋ ಮೊಬೈಲ್ ಚಾರ್ಜ್ ಮಾಡಲು ಸ್ಥಳ ನೀಡಿದ ದೋಸೆ ಅಂಗಡಿಯ ವ್ಯಕ್ತಿಗೆ ಯುವತಿ ಧನ್ಯವಾದ ಹೇಳಿದ್ದಾಳೆ. ಹಾಗೆ ಬೆಂಗಳೂರು ನಾವಂದುಕೊಂಡಂತೆ ಅಲ್ಲ ಎಂದು ಹೊಗಳಿದ್ದಾಳೆ.



Click it and Unblock the Notifications











