Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ಒಂದು ಪಾನಿಪುರಿಗಾಗಿ ಕಿರಿಕ್! ಒಂಭತ್ತು ಜನ ಅರೆಸ್ಟ್.. ಎಲ್ಲಿ, ಏನಿದು ಘಟನೆ?
'ಪಾನಿಪುರಿ' ಹೆಸರೇ ಬಾಯಲ್ಲಿ ನೀರೂರಿಸುತ್ತದೆ! ಪಾನಿಪುರಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪಾನಿಪುರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಇದೇ ಪಾನಿಪುರಿ (Pani Puri) ಇದೀಗ ಕಿರಿಕ್ ತಂದಿಟ್ಟಿದೆ. ಒಂದು ಪಾನಿಪುರಿಗಾಗಿ ನಡೆದ ಜಗಳದಿಂದ ಒಂಭತ್ತು ಮಂದಿ ಅರೆಸ್ಟ್ ಆಗಿದ್ದಾರೆ. ಹೌದು, ಚಿಕ್ಕ ಮಕ್ಕಳಿಂದಿಡಿದು ದೊಡ್ಡವರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುವುದು ಪಾನಿಪುರಿ. ಕಡಿಮೆ ದುಡ್ಡಲ್ಲಿ ಸಿಗುವ ಮತ್ತು ನಾಲಿಗೆ ರುಚಿ ತಣಿಸುವ ಪಾನಿಪುರಿ ಬಹುತೇಕರ ಫೇವರಿಟ್. ಅದರಂತೆ, ಬೀಚ್‌ಗೆ ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗರು ಮತ್ತು ಅಂಗಡಿಯವರಿಗೂ ಒಂದು ಪಾನಿಪುರಿಗಾಗಿ ಕಿರಿಕ್ ಆಗಿದೆ. ಈ ವಿಚಿತ್ರ ಘಟನೆ ಉಡುಪಿಯ (udupi) ಮಲ್ಪೆ ಬೀಚ್ ಬಳಿ ನಡೆದಿದೆ.
ಹೌದು, ಅವರೆಲ್ಲರೂ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಿಂದ ಪ್ರವಾಸಿಗರು. ಮಂಗಳವಾರ (ಜೂನ್ 10) ರಾತ್ರಿ 8.30ರ ಸುಮಾರಿಗೆ ಉಡುಪಿಯ ಮಲ್ಪೆ ಬೀಚ್ (malpe beach) ಬಳಿ ಬಂದಿದ್ದರು. ಈ ವೇಳೆ ಪಾನಿಪುರಿ ತಿನ್ನವಬಯಕೆಯಾಗಿದೆ. ಹೀಗಾಗಿ, ಅಲ್ಲಿದ್ದ ಉತ್ತರ ಪ್ರದೇಶ ಮೂಲದವರ ಅಂಗಡಿಗೆ ತೆರಳಿದ್ದರು. ಈ ವೇಳೆ ಹೆಚ್ಚುವರಿಯಾಗಿ ಪಾನಿಪುರಿ ನೀಡುವ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ. ಬಳಿಕ ಇದು ತಾರಕಕ್ಕೇರಿದೆ. ಮಂಡ್ಯ ಜಿಲ್ಲೆಯ ಪ್ರವಾಸಿಗರು ಮತ್ತು ಪಾನಿಪುರಿ ಅಂಗಡಿಯವರ ಮಧ್ಯೆ ಶುರುವಾದ ಗಲಾಟೆ, ಎರಡೂ ಕಡೆಯಿಂದ ಹಲ್ಲೆಯ ಹಂತಕ್ಕೆ ತಲುಪಿದೆ. ಇದೀಗ, ಒಂಭತ್ತು ಜನ ಅರೆಸ್ಟ್ ಆಗಿದ್ದಾರೆ.

ಕೇಸ್ ಮತ್ತು ಕೌಂಟರ್ ಕೇಸ್
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಎರಡು ಪ್ರಕರಣಗಳು ಕೇಸ್ ಮತ್ತು ಕೌಂಟರ್ ಕೇಸ್ ಆಗಿವೆ. ಸುದೀಪ, ಸಂಪತ್, ಪುನೀತ, ಮಹೇಶ, ಕನ್ನ ವೈ.ಜಿ. ಮತ್ತು ಅರವಿಂದ ಎಂಬುವವರು ಮೊದಲ ಪ್ರಕರಣದ ಆರೋಪಿಗಳಾಗಿದ್ದಾರೆ. ರಮೇಶ, ಮೋನು, ವಿನೋದ್ ಎಂಬಾರು ಎರಡನೇ ಪ್ರಕರಣದ ಆರೋಪಿಗಳಾಗಿದ್ದಾರೆ. ಇದೀಗ ಇವರನ್ನು ಪೊಲೀಸರು ಅರೆಸ್ಟ್ (ದಸ್ತಗಿರಿ) ಮಾಡಿದ್ದಾರೆ.
ಯಾವ ಪ್ರಕರಣಗಳು ದಾಖಲು?
ಈ ಗಲಾಟೆ ಸಂಬಂಧ ದೂರು ಮತ್ತು ಪ್ರತಿದೂರು ದಾಖಲಾಗಿದೆ. ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2025 ಕಲಂ: 189(2), 191(2), 191(3), 115(2), 118(1), 352, 351 (2) 3 190 BNS 2 72/2025, ಕಲಂ: 189(2),191(2), 191(3), 115(2), 118(1), 352, 351 (2) ಜೊತೆಗೆ 190 BNS ರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದು ಒಂದು ಪಾನಿಪುರಿಗಾಗಿ ನಡೆದ ಕಿರಿಕ್ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಘಟನೆ ನಡೆದಿದ್ದು ಹೇಗೆ?
ಮಲ್ಪೆ ಬೀಚ್‌ಗೆ ಬಂದಿದ್ದ ಪ್ರವಾಸಿಗರು, ರಾತ್ರಿ 8.30ರ ಸುಮಾರಿಗೆ ಸ್ಥಳೀಯ ಪಾನಿಪುರಿ ಅಂಗಡಿಗೆ ತೆರಳಿದ್ದರು. ಸುದೀಪ, ಸಂಪತ್, ಪುನೀತ್, ಮಹೇಶ, ಕನ್ನ ವೈ.ಜಿ. ಮತ್ತು ಅರವಿಂದ ಎಂಬಾತರು 6 ಪಾನಿಪೂರಿ ತಿಂದರು. ಅದರ ದುಡ್ಡು ಕೊಡದೆ ಹೆಚ್ಚುವರಿ ಪಾನಿಪುರಿ ನೀಡುವಂತೆ ಕೇಳಿದರು. ಇದಕ್ಕೆ ಅಂಗಡಿಯವರು ಒಪ್ಪದಿದ್ದಾಗ, ಪ್ರವಾಸಿಗರು ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ತೆರಳಿದ್ದರು. 10 ನಿಮಿಷಗಳ ಬಳಿಕ ಪುನಃ ಬಂದ ಅವರಲ್ಲಿ ಬಳಿ ಅಂಗಡಿಯವರು ಹಣ ಕೊಡವಂತೆ ಕೇಳಿದ್ದರು. ಇದೇ ವೇಳೆ ಪಕ್ಕದಲ್ಲೇ ಅಂಗಡಿ ಇಟ್ಟುಕೊಂಡಿರುವ ರಮೇಶ್ ಮತ್ತು ವಿನೋದ್ ಎಂಬುವವರ ಮೇಲೆಯೂ ಈ ಪ್ರವಾಸಿಗರು ಹಲ್ಲೆ ಮಾಡಿದ್ದಾರೆ. ಈ ವೇಳೆ ಜನ ಸೇರುತ್ತಿರುವುದನ್ನು ಕಂಡು ವಾಪಸ್ ತೆರಳಿದ್ದಾರೆ ಎಂದು ಅಂಗಡಿ ಮಾಲೀಕ ಮೋನು ಸಾಹು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರವಾಸಿಗರ ಪ್ರತಿದೂರಿನಲ್ಲಿ ಏನಿದೆ?
ಪ್ರವಾಸಿಗರಾದ ಮಂಡ್ಯದ ಸುದೀಪ್ ಅವರು ಅಂಗಡಿ ಮಾಲೀಕರ ಮೇಲೆ ಪ್ರತಿದೂರು ನೀಡಿದ್ದಾರೆ. ನಾವು ಪಾನಿಪುರಿ (panipuri) ತಿಂದೆವು. ನಮ್ಮ ಜೊತೆ ಇದ್ದ ಸಂಪತ್, ಹೆಚ್ಚುವರಿಯಾಗಿ ಒಂದು ಪಾನಿಪುರಿಯನ್ನು ಕೇಳಿದಾಗ ಅಂಗಡಿಯಲ್ಲಿದ್ದ ವ್ಯಕ್ತಿ ಕೊಡಲು ಬರುವುದಿಲ್ಲ ಎಂದು ಹೇಳಿದರು. ಆಗ ಸಂಪತ್ ಮತ್ತು ಅಂಗಡಿಯವನಿಗೂ ಜಗಳವಾಗಯಿತು. ಅಲ್ಲಿಗೆ ಬಂದ ರಮೇಶ್ ಎಂಬ ವ್ಯಕ್ತಿ ಬ್ಯಾಟಿನಿಂದ ನಮ್ಮ ಜೊತೆಗಿದ್ದ ಅರವಿಂದನ ಎದೆ ಮತ್ತು ಬೆನ್ನಿಗೆ ಹೊಡೆದನು. ಬಿಡಿಸಲು ಹೋದ ನನ್ನ ಮೇಲೆಯೂ ಹಲ್ಲೆ ಮಾಡಿದ್ದಾನೆ. ನನ್ನ ತಲೆಗೆ ತೀವ್ರ ಗಾಯವಾದ ಕಾರಣ ಕೂಡಲೇ ಚಿಕಿತ್ಸೆ ಪಡೆಯಲಾಗಿತ್ತು. ಜಗಳದ ಸಮಯದಲ್ಲಿ ಹೊಡೆದವರು ಮತ್ತು ಬೈದವರು ಮೋನು, ರಮೇಶ ಮತ್ತು ವಿನೋದ ಎಂದು ಸುದೀಪ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಠಾಣೆಯಲ್ಲಿ ಈ ಎರಡು ಪ್ರಕರಣ ದಾಖಲಾಗಿದೆ.



Click it and Unblock the Notifications
