Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದೃಷ್ಟಿ ಇಲ್ಲದಿದ್ದರೂ ಶೇ.96 ಅಂಕ ಪಡೆದ ವಿಶೇಷ ಚೇತನ ಹುಡುಗಿ..! ಇದಲ್ಲವೇ ಸಾಧನೆ..!
ಸಾಧಿಸುವ ಚಲವಿದ್ದರೆ ಎಂತಹ ಕಠಿಣ ಗುರಿಯನ್ನು ತಲುಪಬಹುದು ಎಂದು ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಹಾಗೆ ಓದಿ ಸಾಧನೆ ಮಾಡಲು ಸಹ ಚಲ ಗುರಿ ಇರಬೇಕು. ನಿರ್ದಿಷ್ಟ ಗುರಿ, ಚಲ ಇದ್ದು ಹೋಗುವ ದಾರಿ ಸರಿಯಾಗಿದ್ದರೆ ಎಂತಹ ಕಠಿಣ ಸವಾಲನ್ನೂ ಲೀಲಾಜಾಲವಾಗಿ ಮುಟ್ಟಬಹುದು.
ಇನ್ನು ಇತ್ತೀಚಿಗೆ ಸಿಬಿಎಸ್‌ಇ ಬೋರ್ಡ್ ಫಲಿತಾಂಶ ಹೊರಬಿದ್ದು ಹಲವರು ಪ್ರಥಮ ಸ್ಥಾನಗಳ ಪಡೆದ ಸಾಧನೆ ಮಾಡಿದ್ದಾರೆ. ಆದ್ರೆ ಕೆಲವರು ಈ ಪರೀಕ್ಷಯಲ್ಲಿ ತಮ್ಮ ವೈಕಲ್ಯದ ನಡುವೆಯೂ ಸಾಧನೆ ಮಾಡಿದ್ದಾರೆ. ಅದರಲ್ಲಿ ಈ ವಂಶಿಕಾ ಎಂಬ ಹುಡುಗಿಯ ಹೋರಾಟದ ಕಥೆ ಈಗ ಎಲ್ಲರಿಗೂ ಸ್ಫೂರ್ತಿಯಾಗಿದೆ.

ವಂಶಿಕಾ ಕಣ್ಣಿನ ದೃಷ್ಟಿ ಇಲ್ಲದಿದ್ದರೂ ಪರೀಕ್ಷೆಯಲ್ಲಿ ಶೇ.96 ರಷ್ಟು ಅಂಕ ಪಡೆದು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾಳೆ. ಆಕೆಯ ಈ ಸಾಧನೆಗೆ ವೈಲಕ್ಯ ಅಡ್ಡಿಯಾಗದೆ ಆಕೆಯ ಗುರಿ ತಲುಪಿದ್ದಾಳೆ. 15 ವರ್ಷದ ವಂಶಿಕಾ ತನ್ನ ವೈಲಕ್ಯ ಮೆಟ್ಟಿನಿಂತು ಪರೀಕ್ಷೆಯಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾಳೆ.
ವಂಶಿಕಾ ಚಂಡೀಗಢದ ಸೆಕ್ಟರ್ 26 ನಲ್ಲಿರುವ ಇನ್ಸ್ಟಿಟ್ಯೂಟ್ ಫಾರ್ ದಿ ಬ್ಲೈಂಡ್‌ಗೆ ಹಾಜರಾಗಿದ್ದಾರೆ. ಆಕೆಯ ತಂದೆ ಸೋನು ಪಾಲ್ ಕೂಲಿ ಕೆಲಸ ಮಾಡುತ್ತಿದ್ದರೆ, ತಾಯಿ ಅನಿತಾ ಗೃಹಿಣಿಯಾಗಿದ್ದಾರೆ. ಆರ್ಥಿಕ ಸವಾಲುಗಳ ನಡುವೆಯೂ ಆಕೆ ಕಠಿಣ ಅಭ್ಯಾಸ ನಡೆಸಿ ಈ ಸಾಧನೆ ಮಾಡಿರುವುದು ಪೋಷಕರಲ್ಲಿ ಸಂತಸ ಮೂಡಿಸಿದೆ. ಜೊತೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಆಕೆ ಸ್ಪೂರ್ತಿಯ ಚಿಲುಮೆಯಾಗಿದ್ದಾಳೆ.
ಆಕೆ ಅಧ್ಯಯನ ಮಾಡುವಾಗ ಯಾರ ಸಹಾಯವನ್ನು ಪಡೆಯುತ್ತಿರಲಿಲ್ಲವಂತೆ. ಪ್ರತಿದಿನ ಸಂಜೆ 5 ರಿಂದ 8 ರವರೆಗೆ ಸ್ವಯಂ ಅಧ್ಯಯನಕ್ಕಾಗಿ ಮೂರು ಗಂಟೆಗಳ ಕಾಲ ಮೀಸಲಿಡುತ್ತಿದ್ದಳು. ಪರೀಕ್ಷೆಯ ಸಮಯದಲ್ಲಿ ಅವಳು ತನ್ನ ಅಧ್ಯಯನದ ಸಮಯವನ್ನು ರಾತ್ರಿ 11 ರವರೆಗೆ ವಿಸ್ತರಿಸಿದ್ದಳು. ಆಕೆಗೆ ಯುಪಿಎಸ್‌ಸಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದು ಐಎಎಸ್ ಆಗಿ ದೇಶ ಸೇವೆಗೆ ಮುಂದಾಗಬೇಕು ಎಂಬ ಮಹದಾಸೆಯಿದೆ.
ಸೆಕ್ಟರ್ 26 ರಲ್ಲಿನ ಇನ್ಸ್ಟಿಟ್ಯೂಟ್ ಫಾರ್ ಬ್ಲೈಂಡ್‌ನಿಂದ, ಒಟ್ಟು ಒಂಬತ್ತು ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳು 12 ನೇ ತರಗತಿ ಪರೀಕ್ಷೆಗೆ ಕುಳಿತಿದ್ದರು. ಜೊತೆಗೆ 10ನೇ ತರಗತಿ ಪರೀಕ್ಷೆಗೆ 16 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದರು. 12 ನೇ ತರಗತಿ ವಿಭಾಗದಲ್ಲಿ, ರಾಜೀವ್ ಶೇ. 88.6 ನೊಂದಿಗೆ ಟಾಪರ್ ಆಗಿ ಹೊರಹೊಮ್ಮಿದರು, 10 ನೇ ತರಗತಿಯ ವಿದ್ಯಾರ್ಥಿಗಳಲ್ಲಿ, ವಂಶಿಕಾ ಶೇ. 96 ರಷ್ಟು ಅಂಕ ಪಡೆದು ಮೊದಲ ಸ್ಥಾನ ಪಡೆದರು.
ವಂಶಿಕಾಳ ಈ ಸಾಧನೆಗೆ ಶಾಲೆ ಹಾಗೂ ಪೋಷಕರ ಸಂತಸ ಇಮ್ಮಡಿಯಾಗಿದೆ. ಆಕೆಯ ಕಠಿಣ ಶ್ರಮದ ಫಲ ಈಗ ಎಲ್ಲರ ಸಂತಸಕ್ಕೆ ಕಾರಣವಾಗಿದೆ. ದೃಷ್ಟಿ ಇಲ್ಲದಿದ್ದರೂ ಶೈಕ್ಷಣಿಕವಾಗಿ ಆಕೆಯ ಸಾಧನೆ ಕಂಡು ಜನರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು 12ನೇ ತರಗತಿಯ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಬಲಗೈ ಕಳೆದುಕೊಂಡಿದ್ದರೂ ಎಡಗೈನಲ್ಲಿ ಪರೀಕ್ಷೆ ಬರೆದು ಉತ್ತೀರ್ಣಳಾಗಿದ್ದಳು, ಮುಂಬೈನ ಗೋರೆಗಾಂವ್ ವೆಸ್ಟ್‌ನ ನಿವಾಸಿ ಅನಮ್ತಾ ಅಹ್ಮದ್ 9ನೇ ತರಗತಿಯಲ್ಲಿದ್ದಾಗ ನಡೆದಿದ್ದ ಒಂದು ದುರಂತ ಆಕೆ ಜೀವನ ಬದಲಾಯಿಸಿತ್ತು. ಈ ಅಪಘಾತದಲ್ಲಿ ಆಕೆಯ ಬಲಗೈ ಕಳೆದುಕೊಳ್ಳಬೇಕಾಯಿತು.
ಆದರೆ 10ನೇ ತರಗತಿಯ ಪರೀಕ್ಷೆಯನ್ನ ಆಕೆ ಎಡಗೈನಲ್ಲಿ ಬರೆದು ಇದರಲ್ಲಿ ಶೇ.92ರಷ್ಟು ಅಂಕಗಳಿಸಿ ಉತ್ತೀರ್ಣಳಾದಳು. ಹಿಂದಿಯಲ್ಲಿ ಶೇ.98 ರಷ್ಟು ಅಂಕಗಳಿಸಿ ಶಾಲೆಗೆ ಪ್ರಥಮ ಬಂದಳು. ಈ ಉದಾಹರಣೆಗಳು ಸಾವಿರಾರು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿವೆ. ಜೊತೆಗೆ ಎಲ್ಲಾ ಸೌಲಭ್ಯವಿದ್ದೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇವರು ಮಾರ್ಗದರ್ಶಿಗಳಾಗಿದ್ದಾರೆ.



Click it and Unblock the Notifications
