Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಈ ಅಘೋರಿ ನುಡಿದ ಭವಿಷ್ಯ ಕೇಳಿದ್ರೆ ಕೈ ಕಾಲು ನಡುಗುತ್ತೆ..! ಕುಂಭಮೇಳದ ಬಾಬಾ ಹೇಳಿದ್ದೇನು?
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳವು ಹಲವು ವಿಚಾರಗಳ ಕಾರಣದಿಂದಾಗಿ ಫೇಮಸ್ ಆಗುತ್ತಿದೆ. ವಿಶ್ವದಾದ್ಯಂತ ಖ್ಯಾತಿ ಪಡೆದಿರುವ ಈ ಕುಂಭಮೇಳ ಈ ಬಾರಿ ವಿಚಿತ್ರ ಕಾರಣದಿಂದಲೇ ಸುದ್ದಿಯಾಗುತ್ತಿದೆ. ಅದರಲ್ಲೂ ಕುಂಭಮೇಳದಲ್ಲಿ ಈ ಬಾರಿ ಕಾಣಿಸಿಕೊಂಡಿರುವ ಅಘೋರಿಗಳು ಗಮನಸೆಳೆದಿದ್ದಾರೆ. ಹಾಗೆ ಈ ಅಘೋರಿಗಳ ನೋಡಲೆಂದೇ ದೇಶದ ಮೂಲೆ ಮೂಲೆಯಿಂದ ಭಕ್ತರು ಅಲ್ಲಿಗೆ ತರಳುತ್ತಾರೆ.
ಹಾಗೆ ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ವಿದೇಶದಿಂದಲೂ ಬಾಬಾಗಳು ಬರುತ್ತಾರೆ. ಹೀಗಾಗಿ ಈ ಜಾಗ ಇಂದಿಗೂ ಪವಿತ್ರ ಎಂದು ಪರಿಗಣಿಸಲಾಗಿದೆ. ಆದ್ರೆ ಪ್ರಯಾಗ್‌ರಾಜ್‌ನಲ್ಲಿ ಅಘೋರಿಯೊಬ್ಬರು ನುಡಿದಿರುವ ಭವಿಷ್ಯ ಈಗ ಎಲ್ಲರಲ್ಲು ನಡುಕ ಹುಟ್ಟಿಸಿದೆ. ಹಿಮಾಲಯ ತಪ್ಪಲಿನಿಂದ ಬಂದಿರುವ ಅಘೋರಿಗಳು ಈ ಬಾರಿ ನುಡಿದಿರುವ ಭವಿಷ್ಯ ಎಲ್ಲರಲ್ಲೂ ಭಯ ಬೀಳಿಸಿದೆ.

ಈ ಅಘೋರಿ ಹತ್ತಾರು ವರ್ಷಗಳಿಂದ ಕೇವಲ ಕುಂಭಮೇಳಕ್ಕೆ ಮಾತ್ರ ಆಗಮಿಸುತ್ತಾರೆ, ಹಿಮಾಲಯದ ಚಳಿಯಲ್ಲಿ ತಪಸ್ವಿಗಳಾಗಿರುವ ಅವರು ಈಗ ಭಯ ಬೀಳಿಸುವಂತಹ ಭವಿಷ್ಯ ನುಡಿದಿದ್ದಾರೆ. ಹಿಮಾಲಯದ ತುತ್ತತುದಿಯಲ್ಲಿರುವ ಸಿದ್ದಾಶ್ರಮದಲ್ಲಿ ನೆಲೆಸಿರುವ ಅವರು ಕುಂಭಮೇಳದ ಸಮಯದಲ್ಲಿ ಪ್ರತಿ ವರ್ಷ ಭವಿಷ್ಯ ನುಡಿಯುತ್ತಾರೆ. ಆದ್ರೆ ಈ ಬಾರಿ ನುಡಿದ ಭವಿಷ್ಯ ಬೆಚ್ಚಿ ಬೀಳಿಸಿದೆ.
ಕಳೆದ 84 ವರ್ಷಗಳಲ್ಲಿ ಈ ನಾಗಾ ಸಾಧು 7 ಕುಂಭಮೇಳಗಳಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಅವರ ಭವಿಷ್ಯವಾಣಿ ಕೇಳಲು ಪ್ರತಿವರ್ಷ ಅಲ್ಲಿ ಭಕ್ತರು ನೆರೆಯುತ್ತಾರೆ. ಈ ಭಾರಿ ಅವರು ನುಡಿದಿರುವ ಭವಿಷ್ಯ ಕೇಳಿ ಶಾಕ್‌ಗೆ ಒಳಗಾಗಿದ್ದಾರೆ. ಹಾಗಾದ್ರೆ ಈ ಅಘೋರಿ ನುಡಿದ ಭವಿಷ್ಯ ಏನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಿಡುವಿಲ್ಲದ ಚಿತಾಗಾರ..ಕಪ್ಪಾಗಲಿದೆ ಆಕಾಶ..!
ಆ ಅಘೋರಿ ಈ ಭೂಮಿ ನಡೆಯಲಿರುವ ಅತ್ಯಂತ ಕರಾಳ ದಿನಗಳ ಕುರಿತು ಭವಿಷ್ಯ ನುಡಿದಿದ್ದಾರೆ. ಮುಂದಿನ ಕುಂಭಮೇಳಕ್ಕೆ ಬರುವ ಹೊತ್ತಿಗೆ ಹೆಣಗಳ ರಾಶಿ ನೋಡಲಿದ್ದಾರಂತೆ. ಬಿಡುವೇ ಇಲ್ಲದೆ ಚಿತಾಗಾರ ಉರಿಯುತ್ತಿರುತ್ತದೆಯಂತೆ. ಉಸಿರಾಡುವ ಗಾಳಿ ವಿಷವಾಗಲಿದೆಯಂತೆ, ಆಕಾಶ ಕೂಡ ಕಪ್ಪಾಗಲಿದೆ ಎಂದು ಅಘೋರಿ ಭವಿಷ್ಯ ನುಡಿದಿದ್ದಾರೆ. ಹಾಗೆ ಜನರ ಪಾಪ ತೊಳೆಯುವ ಗಂಗೆ ಅಳುತ್ತಾಳೆ ಎಂಬ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.
ಅವರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಬರುವ ಸಮಯದಲ್ಲಿ ಆಕಾಶದಲ್ಲಿ ಕಾಗೆಗಳು ಕರ್ಕಶ ಧ್ವನಿಯಲ್ಲಿ ಕೂಗುತ್ತಿದ್ದವಂತೆ. ಅವರು ಪವಿತ್ರ ಸ್ನಾನ ಮಾಡಿ ನದಿ ತಟದಲ್ಲಿ ಕಣ್ಮುಚ್ಚಿ ಕುಳಿತು ಈ ಭವಿಷ್ಯ ನುಡಿದ್ದಾರೆ. ಹಾಗೆ ನಗರಗಳು ಎರವಲು ಪಡೆದ ಭೂಮಿಯನ್ನು ಸಮುದ್ರ ದೇವತೆಗೆ ವಾಪಾಸು ನೀಡುವ ಕಾಲ ಬರಲಿದೆಯಂತೆ. ಅಂದರೆ ನಗರಗಳ ಸಮುದ್ರದಲ್ಲಿ ಮುಳುಗಲಿವೆ ಎಂಬುದು ಅದರ ಒಳಾರ್ಥವಾಗಿದೆ.
ಪರ್ವತಗಳ ಮೇಲಿನ ಹಿಮವು ಕಣ್ಮರೆಯಾಗುತ್ತದೆ. ಹಲವಾರು ಪ್ರಾಚೀನ ದೇವಾಲಯಗಳು ಮತ್ತೆ ಭೂಮಿ ಮೇಲೆದ್ದು ಬರುತ್ತವೆ. ನದಿಗಳು ಹೊಸ ಮಾರ್ಗ ಕಂಡುಕೊಳ್ಳಲಿದೆ. ಇಂದು ಯುದ್ಧಭೂಮಿ ಇರುವಲ್ಲಿ ಮುಂದೆ ಕುಂಭಮೇಳ ನಡೆಯಲಿದೆ ಎಂಬ ಭವಿಷ್ಯ ನುಡಿದಿದ್ದಾರೆ. ಅಂದರೆ ಗಂಗೆ ತ್ರಿವೇಣಿ ಸಂಗಮದ ರೂಪ ಬದಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಅಘೋರಿಗೆ ಈಗ 95 ವರ್ಷವಾಗಿದೆ, ಆತನ ಪ್ರಕಾರ ಇನ್ನು ಹಲವು ಕುಂಭಕ್ಕೆ ಆಗಮಿಸಲಿದ್ದಾರಂತೆ.



Click it and Unblock the Notifications
