Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ವಿಶ್ವದ ಏಳು ನದಿಗಳಲ್ಲಿ ಚಿನ್ನ ದೊರೆಯುತ್ತದೆ, ಮೂರು ನದಿ ಭಾರತದಲ್ಲಿದೆ
ಚಿನ್ನ ಗಣಿಯಲ್ಲಿ ಸಿಗುತ್ತದೆ ಎಂಬುವುದು ಗೊತ್ತು, ಆದರೆ ವಿಶ್ವದಲ್ಲಿ ಕೆಲ ನದಿಗಳಿವೆ, ಆ ನದಿಗಳು ಕೂಡ ಚಿನ್ನವನ್ನು ಉತ್ಪತ್ತಿ ಮಾಡುತ್ತದೆ, ಅದರಲ್ಲಿ ಮೂರು ನದಿ ನಮ್ಮ ಭಾರತದಲ್ಲಿದೆ, ಚಿನ್ನ ಸಿಗುವ ಆ ನದಿಗಳಾವುವು ಎಂದು ನೋಡೋಣ:

ಮಿಶೋರಿ ನದಿ
19ನೇ ಶತಮಾನದಲ್ಲಿ ಈ ನದಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಯ್ತು, ಈ ನದಿಯಲ್ಲಿ ಚಿನ್ನಗಳು ಮಾತ್ರವಲ್ಲ ಬೆಲೆ ಬಾಳುವ ಹರಳುಗಳು ಪತ್ತೆಯಾಗಿದ್ದೆವು.
ಬಿಗ್ ಹೋಲ್ ರಿವರ್
ಈ ನದಿಯಲ್ಲಿ 1864ರಲ್ಲಿ ಚಿನ್ನ ಪತ್ತೆಯಾಗಿತ್ತು. ಈ ನದಿಯಲ್ಲಿ $5 ಮಿಲಿಯನ್ ಚಿನ್ನ ತೆಗೆಯಲಾಗಿತ್ತು.
ಸುವರ್ಣರೇಖಾ ನದಿ
ಈ ನದಿಯ ಹೆಸರೇ ಚಿನ್ನ ಎಂದು ಹೇಳುತ್ತದೆ, ಸುವರ್ಣ ಎಂದರೆ ಚಿನ್ನ, ಈ ನದಿ ಭಾರತದ ಜಾರ್ಖಂಡ್‌ನಲ್ಲಿದೆ. ಶತಕದಿಂದ ಈ ನದಿಯಲ್ಲಿ ಚಿನ್ನ ತೆಗೆಯಲಾಗುತ್ತಿದೆ. ಇಲ್ಲಿಯ ಸ್ಥಳೀಯರಿಗೆ ನದಿಯಲ್ಲಿ ಹೊಳೆಯುವ ಚಿಕ್ಕ ವಸ್ತುಗಳು ಸಿಕ್ಕು ಅದನ್ನು ಪರೀಕ್ಷಿಸಿದಾಗ ಚಿನ್ನ ಎಂಬುವುದು ತಿಳಿಯುತ್ತದೆ, ನದಿಯಲ್ಲಿ ಸಿಗುತ್ತಿದ್ದ ಚಿನ್ನ ಇಲ್ಲಿಯ ನಿವಾಸಿಗಲ ಹೊಟ್ಟೆ ತುಂಬಿಸಲು ಸಹಾಯ ಮಾಡುತ್ತಿತ್ತಂತೆ.
ಯುಬ ನದಿ
ಇದು ಕ್ಯಾಲಿಫೋರ್ನಿಯಾದಲ್ಲಿದೆ, 1850ರಲ್ಲಿ ಇಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಯ್ತು, ಕ್ಯಾಲಿಫೋರ್ನಿಯಾದ ಚಿನ್ನದ ಸಂಪತ್ತಿನಲ್ಲಿ ಈ ನದಿಯ ಪಾತ್ರ ಹೆಚ್ಚಿದೆ.
ಕ್ಲೋಂಡಿಕೆ ನದಿ
ಈ ನದಿ ಕೆನಡಾದಲ್ಲಿ ಇದೆ. ಈ ನದಿಯಲ್ಲಿ ಚಿನ್ನವಿದೆ ಎಂದು 1890ರಲ್ಲಿ ಪತ್ತೆಯಾಯ್ತು, ವಿಶ್ವದ ಪ್ರಮುಖ ಚಿನ್ನದ ನಿಕ್ಷೇಪದಲ್ಲಿ ಇದು ಕೂಡ ಒಂದಾಗಿತ್ತು, ಇಲ್ಲಿ ಪತ್ತೆಯಾದ ಚಿನ್ನ ದೇಶದ ಸಂಪತ್ತು ಹೆಚ್ಚಿಸುವಲ್ಲಿ ಸಹಾಯ ಮಾಡಿತು.
ಬ್ರಹ್ಮಪುತ್ರ ನದಿ
ಹೌದು ಭಾರತದ ಪುಣ್ಯ ನದಿಯಲ್ಲಿ ಒಂದಾಗಿರುವ ಬ್ರಹ್ಮಪುತ್ರದಲ್ಲಿಯೂ ಚಿನ್ನವಿದೆ. ಈ ನದಿಯ ದಡದಲ್ಲಿರುವ ಮರಳಿನಲ್ಲಿ ಚಿನ್ನ ಕಂಡು ಬರುತ್ತಿತ್ತು ಎಂದು ಹೇಳಲಾಗಿದೆ. ಅಲ್ಲಿಯ ಸ್ಥಳೀಯರು ಇದನ್ನು ಹೆಕ್ಕಿ ತೆಗೆದುಕೊಂಡು ಜೀವನ ನಡೆಸುತ್ತಿದ್ದರು ಎಂದು ಹೇಳಲಾಗುವುದು.
ದಾಮೋದರಾ ನದಿ
ಈ ನದಿ ಕೂಡ ಪಶ್ಚಿಮ ಬಂಗಾಳದ ಜಾರ್ಖಂಡ್‌ನಲ್ಲಿದೆ, ನೂರಾರು ವರ್ಷಗಳ ಹಿಂದೆಯೇ ಜನರು ಈ ನದಿಯಿಂದ ಚಿನ್ನವನ್ನು ಆಯ್ದು ತೆಗೆದುಕೊಳ್ಳುತ್ತಿದ್ದರು. ಈ ಚಿನ್ನ ಹೊಟ್ಟೆಪಾಡು ತುಂಬಿಸಿಕೊಳ್ಳಲು ಸಹಾಯ ಮಾಡುತ್ತದೆ.
ನದಿಯಲ್ಲಿ ಚಿನ್ನವನ್ನು ಹೇಗೆ ತೆಗೆಯಲಾಗುವುದು?
ನದಿಯಲ್ಲಿ ಚಿನ್ನವನ್ನು ತೆಗೆಯಲು ಹಿಂದಿನ ಹಲವು ವಿಧಾನಗಳನ್ನು ಬಳಸಿ ತೆಗೆಯುತ್ತಿದ್ದರು. ಮರಳಿನಿಂದ ಆಯ್ದು ತೆಗೆದುಕೊಳ್ಳಲಾಗುವುದು. ಈಜು ಬರುವವರು ನದಿ ಅಡಿಯಿಂದ ತೆಗೆಯಲಾಗುವುದು. ಈ ಚಿನ್ನ ಎಲ್ಲರಿಗೆ ಸಿಗುವುದಿಲ್ಲ, ಅದೃಷ್ಟ ಇರುವವರಿಗೆ ಮಾತ್ರ ಚಿನ್ನ ಸಿಗುವುದು ಎಂದು ಹೇಳಲಾಗುವುದು, ಈ ನದಿಯಲ್ಲಿ ಈಗಲೂ ಚಿನ್ನಕ್ಕಾಗಿ ಹುಡುಕಾಟ ನಡೆಯುತ್ತಲೇ ಇದೆ.



Click it and Unblock the Notifications
