ಆರ್ಥಿಕ ಸಂಕಷ್ಟ, ವೃತ್ತಿ ಜೀವನದ ಸಮಸ್ಯೆ ಪರಿಹಾರಕ್ಕೆ ಆಂಜನೇಯನ ಈ 7 ಮಂತ್ರಗಳನ್ನು ಪಠಿಸಿ ಸಾಕು!

ಆಂಜನೇಯನನ್ನು ನಿತ್ಯ ಭಕ್ತಿಯಿಂದ ಪೂಜಿಸಿದ್ರೆ ನಮಗೆ ಯಾವ ರೀತಿ ಕಷ್ಟಗಳು ಬರೋದಿಲ್ಲ. ಸಪ್ತ ಚಿರಂಜೀವಿಗಳಲ್ಲಿ ಆಂಜನೇಯನೂ ಕೂಡ ಒಬ್ಬನಾಗಿರೋದ್ರಿಂದ ಈಗಲೂ ಕೂಡ ಆಂಜನೇಯ ಭಕ್ತರ ರಕ್ಷಣೆಗಾಗಿ ಭೂಲೋಕದಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆಯಿದೆ. ಅಂಜನಿ ಹಾಗೂ ಮಾರುತಿಯ ಮಗನಾಗಿರುವ ಆಂಜನೇಯನು ವಾನರ ಸೈನ್ಯದ ಅಧಿಪತಿ.

ಅಷ್ಟೇ ಅಲ್ಲದೇ, ಶ್ರೀರಾಮನ ಪರಮ ಭಕ್ತನಾಗಿರುವ ಆಂಜನೇಯನನ್ನು ಈ ಮಂತ್ರಗಳ ಮೂಲಕ ನಿತ್ಯ ಪೂಜಿಸಿದ್ರೆ ಸಂಕಷ್ಟಗಳೆಲ್ಲಾ ದೂರವಾಗುತ್ತೆ ಅನ್ನೋ ನಂಬಿಕೆಯಿದೆ. ಅಷ್ಟಕ್ಕು ಆಂಜನೇಯನನ್ನು ಪೂಜಿಸುವಾಗ ಹೇಳಬೇಕಾದ ಆ 7 ಮಂತ್ರಗಳು ಯಾವುದು ಅನ್ನೋದನ್ನು ತಿಳಿಯೋಣ.

7 Powerful Lord Hanuman Mantras to Seek His Blessings and Protection in Kannada

1. ಹನುಮಾನ್ ಮೂಲ ಮಂತ್ರ

ಓಂ ಹನುಮಂತೇ ನಮಃ
ಉಪಯೋಗ : ಹನುಮಾನ್ ಮೂಲ ಮಂತ್ರವು ಜನರ ಜೀವನದಲ್ಲಿ ಎದುರಾಗುವ ಅಡೆತಡೆಗಳು ಮತ್ತು ಸಮಸ್ಯೆಗಳನ್ನು ಜಯಿಸಲು ಸಹಾಯ ಮಾಡುತ್ತಂತೆ. ಯಾರು ತುಂಬಾನೇ ಸಂಕಷ್ಟದಲ್ಲಿದ್ದಾರೋ ಅವರು ಈ ಮಂತ್ರವನ್ನು ಪಠಿಸುವ ಮೂಲಕ ತಮ್ಮೆಲ್ಲಾ ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸಬಹುದು. ಇನ್ನೂ ಈ ಮಂತ್ರ ಪಠಿಸೋದ್ರಿಂದ ದೈಹಿಕವಾಗಿ ಕೂಡ ನಿಮಗೆ ಅನೇಕ ಲಾಭಗಳಿದೆ. ಅದೇನಂದ್ರೆ ನಿಮ್ಮ ತ್ರಾಣ ಹೆಚ್ಚಾಗುವುದು ಮಾತ್ರವಲ್ಲದೇ ನಿಮಗೆ ಶಕ್ತಿ ದೊರೆಯುತ್ತಂತೆ.

2. ಹನುಮಾನ್ ಮಂತ್ರ

ಹ್ಯಾಂಗ್ ಹನುಮತೆ ರುದ್ರಾತ್ಮಕಾಯ ಹ್ಯಾಂಗ್ ಫಟ್
ಉಪಯೋಗ : ಹನುಮಾನ್ ಮಂತ್ರದಲ್ಲಿ ಸಾಕಷ್ಟು ಶಕ್ತಿ ಇದ್ದು, ಈ ಮಂತ್ರವನ್ನು ಯಾರೂ ಸಮರ್ಪಣಾ ಭಾವದಿಂದ ಪಠಿಸುತ್ತಾರೆಯೋ ಅವರು ಅಸಾಧಾರಣ ಶಕ್ತಿಶಾಲಿಗಳಾಗುತ್ತಾರಂತೆ. ಹೀಗಾಗಿ ನಿತ್ಯ ಈ ಮಂತ್ರವನ್ನು ಪಠಣೆ ಮಾಡಬೇಕು.

3. ಹನುಮಾನ್ ಗಾಯತ್ರಿ ಮಂತ್ರ

ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ । ತನ್ನೋ ಹನುಮತ್ ಪ್ರಚೋದಯಾತ್ ॥
ಉಪಯೋಗ : ಈ ಮಂತ್ರ ಪಠಿಸೋದ್ರಿಂದ ನಿಮಗೆ ರಕ್ಷಣೆ ದೊರೆಯುತ್ತದೆ. ಇದರಿಂದ ನೀವು ನಿಮ್ಮ ಕೆಲಸವನ್ನು ಆತ್ಮವಿಶ್ವಾಸದಿಂದ ಸಾಧಿಸಲು ಕೂಡ ಸಹಾಯ ಮಾಡುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ಸಂಭವನೀಯ ಅಪಾಯಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ, ನಿಮ್ಮನ್ನು ಆ ಆಂಜನೇಯ ನಿರ್ಭೀತ, ಧೈರ್ಯ ಮತ್ತು ಬಲಶಾಲಿಯನ್ನಾಗಿ ಮಾಡುತ್ತಾನೆ.

4. ಆಂಜನೇಯ ಮಂತ್ರ

ಓಂ ಶ್ರೀ ವಜ್ರದೇಹಾಯ ರಾಮಭಕ್ತಾಯ ವಾಯುಪುತ್ರಾಯ ನಮೋಸ್ತುತೇ
ಉಪಯೋಗ : ನೀವು ಹೊಸ ಉದ್ಯೋಗ ಅಥವಾ ನಿಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಲು ಕಷ್ಟ ಪಡುತ್ತಿದ್ದರೆ ಅಂತಹ ಸಂದರ್ಭದಲ್ಲಿ ನೀವು ಈ ಮಂತ್ರವನ್ನು ಸಾಧ್ಯವಾದಷ್ಟು ಜಪಿಸಬೇಕು. ಈ ಮಂತ್ರವು ಒಬ್ಬರ ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ. ಮತ್ತು ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ. ಇನ್ನೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಸಹ ಈ ಮಂತ್ರವನ್ನು ಪಠಿಸಬಹುದು. ಈ ಮಂತ್ರವನ್ನು ದಿನಕ್ಕೆ 11 ಬಾರಿ ಜಪಿಸಬೇಕು. ವಿಶೇಷವಾಗಿ ಗುರುವಾರ ಈ ಮಂತ್ರ ಪಠಿಸಿದ್ರೆ ಒಳ್ಳೆಯದಾಗುತ್ತಂತೆ.

5. ಮನೋಜವನ ಮರುತ್ತುಲ್ವೇಗಂ ಮಂತ್ರ

ಮನೋಜವಂ ಮರುತತುಲ್ಯವೇಗಂ ಜಿತೇನ್ದ್ರಿಯಂ ಬುದ್ಧಿಮತಂ ವರಿಷ್ಠಮ್ । ವತಾತ್ಮಜಂ ವಾನರಯುತಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ||
ಉಪಯೋಗ : ಈ ಮಂತ್ರವನ್ನು ಯಾರು ಪಠಿಸುತ್ತಾರೆಯೋ ಅವರ ಜೀವನದಲ್ಲಿ ಧೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತಂತೆ. ಒಳ್ಳೆಯ ಉದ್ದೇಶ ಮತ್ತು ಶುದ್ಧ ಹೃದಯದಿಂದ ಈ ಮಂತ್ರವನ್ನು ಪಠಿಸುವವರು ಭಗವಾನ್ ಹನುಮಂತನ ಆಶೀರ್ವಾದವನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೇ, ಅವರ ಜೀವನದಲ್ಲಿ ಸಮೃದ್ಧಿ ಮತ್ತು ಸಂಪತ್ತಿನ ಬಯಕೆಯನ್ನು ಕೂಡ ಆಂಜನೇಯ ಪೂರೈಸುತ್ತಾನೆ. ಅಷ್ಟೇ ಅಲ್ಲ, ನಿತ್ಯ ಮಂತ್ರವನ್ನು ಪಠಿಸೋದ್ರಿಂದ ನಿಮ್ಮ ಜೀವನದಲ್ಲಿ ನಕಾರಾತ್ಮಕತೆ ಮತ್ತು ಭಯವನ್ನು ನಿವಾರಿಸಲು ಸಾಧ್ಯವಾಗುತ್ತದೆ.

6. ಭಕ್ತ ಹನುಮಾನ್ ಮಂತ್ರ

ಅಂಜನೀ-ಗರ್ಭ ಸಂಭೂತ ಕಪಿಇ-[ಐ]ಇಂದ್ರ ಸಸಿವೋ[ಅ-ಉ]ತ್ತಮ | ರಾಮ-ಪ್ರಿಯಾ ನಮಸ್-ತುಭ್ಯಂ ಹನುಮಾನ್ ರಾಕ್ಷ ಸರ್ವದಾ ||
ಉಪಯೋಗ : ಈ ಮಂತ್ರವನ್ನು ಪಠಿಸುವುದರಿಂದ ಭಗವಾನ್ ಹನುಮಂತನ ಆಶೀರ್ವಾದ ಪಡೆಯಲು ಸಹಾಯವಾಗುತ್ತದೆ. ಈ ಮಂತ್ರವು ನಿಮ್ಮ ಜೀವನದಲ್ಲಿ ಸಮೃದ್ಧಿ, ಸಂಪತ್ತು, ಸಕಾರಾತ್ಮಕತೆ ಮತ್ತು ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ ನಿತ್ಯ ಯಾರು ಈ ಮಂತ್ರ ಪಠಿಸುತ್ತಾರೆಯೋ ಅವರ ಜೀವನದಿಂದ ಭಯ ಮತ್ತು ಆತಂಕವನ್ನು ದೂರ ಮಾಡಲು ಸಹಾಯ ಮಾಡುತ್ತದೆ.

7. ಹನುಮಾನ್ ಬೀಜ ಮಂತ್ರ

ಔಂ ಐಂ ಭ್ರೀಂ ಹನುಮತೇ ಶ್ರೀ ರಾಮ್ ದೂತಾಯ ನಮಃ
ಉಪಯೋಗ : ಈ ಮಂತ್ರವನ್ನು ಭಕ್ತಿಯನ್ನು ನಿತ್ಯವು ಪಠಿಸುತ್ತಾರೆಯೋ ಅವರು ಸದಾ ಆಂಜನೇಯನ ಕೃಪೆಗೆ ಪಾತ್ರರಾಗುತ್ತಾರಂತೆ. ಜೀವನದಲ್ಲಿ ಯಾವುದೇ ಕಷ್ಟಗಳು ಬಾರದಂತೆ ಆಂಜನೇಯ ನಿಮಗೆ ರಕ್ಷಣೆಯನ್ನು ನೀಡುತ್ತಾನಂತೆ, .

ಈ ಏಳು ಮಂತ್ರಗಳನ್ನು ನಿತ್ಯ ಪಠಿಸೋದ್ರಿಂದ ಸಕಲ ಸಂಕಷ್ಟಗಳನ್ನು ದೂರ ಮಾಡೋದು ಅಷ್ಟೇ ಅಲ್ಲದೇ, ಆಂಜನೇಯ ಸದಾ ನಿಮ್ಮನ್ನು ರಕ್ಷಣೆ ಮಾಡುತ್ತಾನೆ.

English summary

7 Powerful Lord Hanuman Mantras to Seek His Blessings and Protection in Kannada

These are the 7 Powerful Lord Hanuman Mantras to Seek His Blessings and Protection. Read more.
Story first published: Saturday, July 8, 2023, 11:07 [IST]
X
Desktop Bottom Promotion