Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ 5 ರಾಶಿಯವರು ಖಂಡಿತ ಸೇಡು ತೀರಿಸಿಕೊಳ್ತಾರೆ !
ಪ್ರೀತಿ, ಅಸೂಯೆ, ಹೊಟ್ಟೆಕಿಚ್ಚಿನ ರೀತಿಯಲ್ಲಿಯೇ ಸೇಡು ಕೂಡ ಮನುಷ್ಯನ ಒಂದು ಜೀವನದ ಭಾಗವೇ ಆಗಿ ಬಿಟ್ಟಿದೆ. ಕೆಲವು ವ್ಯಕ್ತಿಗಳು ಒಬ್ಬರ ಮೇಲೆ ಸೇಡು ತೀರಿಸಿಕೊಳ್ಬೇಕು ಅಂತ ಹಾತೊರೆಯುತ್ತಿರುತ್ತಾರೆ. ಬೇರೆಯವರಿಂದ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ತಪ್ಪು ನಡೆದಿರುತ್ತದೆ. ಹೀಗಾಗಿ ಅದಕ್ಕೆ ಹೇಗಾದ್ರೂ ಮಾಡಿ ಅವರ ಮೇಲೆ ಸೇಡು ತೀರಿಸಿಕೊಳ್ಳಲೇಬೇಕು ಅಂತ ಬಕ ಪಕ್ಷಿಯ ಹಾಗೆ ಕಾಯುತ್ತಿರುತ್ತಾರೆ.

ಕೆಲವರು ಇದನ್ನೆಲ್ಲಾ ಮನಸ್ಸಿನಲ್ಲಿ ಇಟ್ಟುಕೊಳ್ಳೋದಿಲ್ಲ. ಆದರೆ ಇನ್ನೂ ಕೆಲವರು ಒಬ್ಬರ ಮೇಲೆ ಸೇಡು ತೀರಿಸಿಕೊಳ್ಳೋವರೆಗೆ ಸುಮ್ಮನೆ ಅಂತೂ ಇರೋದಿಲ್ಲ. ಅಷ್ಟಕ್ಕೂ ಯಾವ ರಾಶಿಯವರು ಒಬ್ಬರ ಮೇಲೆ ಸೇಡು ತೀರಿಸಿಕೊಳ್ಳೋದಕ್ಕೆ ಕಾಯುತ್ತಿರುತ್ತಾರೆ ಅನ್ನೋದನ್ನು ತಿಳೀಯೋಣ.
ವೃಶ್ಚಿಕ ರಾಶಿ
ಈ ರಾಶಿಯವರು ಸೇಡನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಭಾವನಾತ್ಮಕ ಸ್ವಭಾವದವರು ಆಗಿರೋದ್ರಿಂದ ಒಬ್ಬರ ಮೇಲೆ ಸೇಡು ತೀರಿಸಿಕೊಳ್ಳದೇ ಸುಮ್ಮನಿರೋರಲ್ಲ. ಬೇರೆ ಯಾರಿಂದಾದರೂ ತಮಗೆ ತೊಂದರೆಯಾದರೆ ಪ್ರತೀಕಾರ ತೆಗೆದುಕೊಳ್ಳದೇ ಇವರು ಸುಮ್ಮನೇ ಇರೋದಿಲ್ಲ. ತಮಗಾದ ನೋವಿಗೆ ಪ್ರತಿಕಾರ ತೆಗೆದುಕೊಳ್ಳಲು ಒಂದು ಪರಿಪೂರ್ಣ ಸಮಯಕ್ಕಾಗಿ ಕಾಯುತ್ತಿರುತ್ತಾರೆ. ಅವರ ಕೇಂದ್ರೀಕೃತ ಮತ್ತು ದೃಢನಿಶ್ಚಯದ ವ್ಯಕ್ತಿತ್ವದಿಂದಾಗಿ ಅವರು ಎಂದಿಗೂ ಬೇರೆಯವರು ಮಾಡಿದ ದ್ರೋಹವನ್ನು ಮರೆಯುವುದಿಲ್ಲ.
ವೃಷಭ ರಾಶಿ
ವೃಷಭ ರಾಶಿಯವರು ನೋಡೋದಕ್ಕೆ ತುಂಬಾನೇ ಶಾಂತವಾಗಿ ಇರುತ್ತಾರೆ. ವೃಷಭ ರಾಶಿಯ ವ್ಯಕ್ತಿಗಳು ತಮ್ಮ ತಾಳ್ಮೆಗೆ ಹೆಸರುವಾಸಿಯಾಗಿದ್ದಾರೆ. ಆದರೆ ಯಾರಾದಾದರೂ ಮೇಲೆ ಸೇಡು ತೀರಿಸಿಕೊಳ್ಳಬೇಕು ಅಂತ ನಿರ್ಧರಿಸಿದ್ರೆ ಅದನ್ನು ಪೂರ್ತಿ ಮಾಡದೇ ಬಿಡುವವರಲ್ಲ. ಒಂದು ಸರಿಯಾದ ಸಂದರ್ಭ ನೋಡಿ ತಮ್ಮ ಪ್ರತೀಕಾರ ತೀರಿಸಿಕೊಳ್ಳುತ್ತಾರೆ. ಇವರ ಮೊಂಡುತನದ ಸ್ವಭಾವವು ನ್ಯಾಯವನ್ನು ಒದಗಿಸುವವರೆಗೆ ಸುಮ್ಮನೆ ಕೂರುವವರಲ್ಲ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತಮ್ಮ ಪೋಷಣೆ ಮತ್ತು ಕಾಳಜಿಯ ಗುಣಗಳಿಗೆ ಹೆಸರುವಾಸಿಯಾಗಿದ್ದರೂ ಬೇರೆಯವರಿಂದ ತಮಗೆ ನೋವಾದರೆ ಸುಮ್ಮನೆ ಕುಳಿತುಕೊಳ್ಳುವವರಲ್ಲ. ಸೇಡು ತೀರಿಸಿಕೊಳ್ಳೋದಕ್ಕೆ ಒಂದು ಸರಿಯಾದ ಸಮಯಕ್ಕೆ ಕಾಯುತ್ತಾ ಇರುತ್ತಾರೆ. ಸರಿಯಾದ ಸಮಯಕ್ಕಾಗಿ ಕಾದು ತಮಗಾದ ನೋವಿಗೆ ಉತ್ತರ ಕೊಡದೇ ಇರುವವರಲ್ಲ. ತಮಗಾದ ನೋವಿಗೆ ಪ್ರತಿಕಾರವೇ ಮದ್ದು ಅಂತ ಅಂದುಕೊಳ್ಳುವವರು ಈ ರಾಶಿಯವರು.
ಸಿಂಹ ರಾಶಿ
ಸಿಂಹ ರಾಶಿಯವರು ತಮ್ಮನ್ನು ತಾವು ಪ್ರೀತಿಸುತ್ತಾರೆ. ಹೀಗಾಗಿ ತಮ್ಮ ಮನಸ್ಸಿಗೆ ನೋವುಂಟು ಮಾಡಿದವರನ್ನು ಹಾಗೆಯೇ ಸುಮ್ಮನೇ ಬಿಡುವವರಲ್ಲ. ಸೇಡು ತೀರಿಸಿಕೊಳ್ಳಬೇಕೆಂದು ಏಕಾ ಏಕಿ ಒಬ್ಬರ ಮೇಲೆ ಹಾರಿ ಬೀಳುವವರಲ್ಲ. ತುಂಬಾ ದಿನಗಳ ಕಾಲ ತಂತ್ರವನ್ನು ಹೆಣೆದು ಒಂದು ದಿನ ಕಾದು ಹೊಡೆಯುತ್ತಾರೆ. ಈ ರಾಶಿಯವರು ಪ್ರತಿಯೊಂದು ವಿಚಾರವನ್ನೂ ಪ್ರತಿಕಾರದಿಂದಲೇ ನೋಡುತ್ತಾರೆ.
ಮೇಷ ರಾಶಿ
ಮೇಷ ರಾಶಿಯವರು ಯಾವಾಗಲೂ ತಮ್ಮ ಹಠಾತ್ ಪ್ರವೃತ್ತಿಗೆ ಹೆಸರುವಾಸಿಯಾಗಿರುತ್ತಾರೆ. ಇವರು ತಂತ್ರಗಾರಿಕೆಯನ್ನು ಹೆಣೆಯೋದ್ರಲ್ಲಿ ಸಮಯ ವ್ಯರ್ಥ ಮಾಡುವವರಲ್ಲ. ಆದರೆ ಸೇಡು ತೀರಿಸಿಕೊಳ್ಳಲು ತಲೆ ಕೆಡಿಸಿಕೊಳ್ಳುತ್ತಾರೆ. ಇವರಲ್ಲಿರುವ ಸ್ಪರ್ಧಾತ್ಮಕ ಮನೋಭಾವವು ಒಂದು ಅಂಶವನ್ನು ಸಾಬೀತುಪಡಿಸಲು ಅವರನ್ನು ಪ್ರೇರೇಪಿಸುತ್ತದೆ. ಮನಸ್ಸಿಗೆ ಆದ ನೋವನ್ನು ಮೇಷ ರಾಶಿಯವರು ಅಷ್ಟು ಸುಲಭವಾಗಿ ಮರೆಯೋದಿಲ್ಲ.



Click it and Unblock the Notifications
