Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ 5 ಲಕ್ಷಣಗಳು ನಿಮ್ಮಲ್ಲಿ ಇದ್ದಿದ್ದೇ ಆದರೆ ಹಣ ಮಾಡಲು ನಿಮಗೆ ಸಾಧ್ಯವೇ ಆಗುವುದಿಲ್ಲ
ದುಡ್ಡು ಮಾಡಬೇಕು ಎಂಬುವುದು ಎಲ್ಲರ ಬಯಕೆ, ಗುರಿಯಾಗಿರುತ್ತದೆ, ಆದರೆ ಕೆಲವರಿಗಷ್ಟೇ ದುಡ್ಡು ಮಾಡಲು ಸಾಧ್ಯವಾಗುವುದು ಏಕೆ? ಏಕೆ ಕೆಲವರಿಗೆ ಎಷ್ಟೇ ಕಷ್ಟಪಟ್ಟರು ಶ್ರೀಮಂತರಾಗಲು ಸಾಧ್ಯವೇ ಆಗುವುದಿಲ್ಲ ಏಕೆ? ಈ ಎಲ್ಲಾ ಪ್ರಶ್ನೆಗಳು ಹಲವು ಬಾರಿ ನಮ್ಮಲ್ಲಿಯೂ ಬಂದಿರುತ್ತದೆ ಅಲ್ವಾ?
ಅವರು ಅದೃಷ್ಟವಂತರು, ಅವರಿಗೆ ಲಕ್ಷ್ಮಿ ಕೃಪೆ ಎಂದೆಲ್ಲಾ ಸಬೂಬು ಹೇಳುತ್ತೇವೆ, ಅವರು ಕಷ್ಟಪಟ್ಟು ದುಡ್ಡು ಮಾಡುತ್ತಿಲ್ಲ ಎಂದು ಕೈಗೆ ಸಿಗದ ದ್ರಾಕ್ಷಿ ಹುಳಿ ಎಂಬಂತೆ ವರ್ತಿಸುತ್ತೇವೆ, ಏಕೆ ನಮಗೆ ದುಡ್ಡು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನೋಡುವುದಾದರೆ....
ದುಡ್ಡಿನ ಬಗ್ಗೆ ಗುರಿ ಇರಲ್ಲ
ಹೌದು ಜೀವನದ ಬಗ್ಗೆ ಗುರಿ ಇರಬೇಕು ಅಂತಾರೆ, ದುಡ್ಡಿನ ಬಗ್ಗೆ ಕೂಡ ಗುರಿ ಹೊಂದಿರಬೇಕು, ನನ್ನ ಸಂಪಾದನೆ ಇಷ್ಟು ನಾನು ನನ್ನ ಸಂಪಾದನೆಯಲ್ಲಿ ಇಷ್ಟು ಅಮೌಂಟ್ ಅನ್ನು ಈ ಕಾರ್ಯಕ್ಕೆ ಇಟ್ಟೇ ಇಡುತ್ತೇನೆ, ಇದರಿಂದ ನನಗೆ ಹಣ ಲಾಭವಾಗುತ್ತೆ ಎಂಬ ಗುರಿ ಇರಲ್ಲ, ಹಾಗಾಗಿ ನಾವು ಗಳಿಸಿದ ಹಣವೆಲ್ಲಾ ಖರ್ಚಾಗುವುದು ಕೈ ಬರಿದಾಗುವುದು.
ನೀವು ಶ್ರೀಮಂತಾರಗಬೇಕೆಂದು ಬಯಸಿದ್ದರೆ ನೀವು ಹಣದ ವಿಷಯದಲ್ಲಿ ಒಂದು ನಿರ್ದಿಷ್ಟ ಗುರಿ ಇಡಬೇಕು. ನಿಮ್ಮ ಸಾಮರ್ಥ್ಯವೇನು ಎಂದು ನಿಮಗೆ ಗೊತ್ತಿರುತ್ತದೆ, ಎಷ್ಟು ದುಡಿಯಬಹುದು ಎಂಬುವುದು ಗೊತ್ತಿರುತ್ತದೆ, ಅದಕ್ಕೆ ತಕ್ಕವೆಂಬಂತೆ ಗುರಿ ಇಡಿ.

ನನಗೆ ಬೇಕು, ನನಗೆ ಇಷ್ಟವಾಯ್ತು ಎಂದು ಖರೀದಿಸುವುದನ್ನು ಮೊದಲು ಬಿಡಿ
ನಮ್ಮ ಸಾಮರ್ಥ್ಯಕ್ಕೆ ಮೀರಿ ಇಷ್ಟವಾಯ್ತು ಎಂದು ಸಾಲ ಮಾಡಿ ವಸ್ತು ಖರೀದಿಸುವುದು, ಅದು ಮೊಬೈಲ್ ಆಗಿರಬಹುದು, ಗಾಡಿಯಾಗಿರಬಹುದು, ಮನೆಯಾಗಿರಬಹುದು. ನಾವು ನಮಗೆ ಇಷ್ಟ, ಬೇರೆಯವರ ಹತ್ರ ಇದೆ ನನಗೂ ಬೇಕು ಎಂದು ಖರೀದಿಸಲು ಹೋದರೆ ಖಂಡಿತ ಯಶಸ್ಸು ಪಡೆಯಲು ಸಾಧ್ಯವಾಗಲ್ಲ. ಅದರ ಬದಲಿಗೆ ನನ್ನ ಹತ್ರ ಇದೆ, ನನ್ನ ಆಯ್ಕೆ ಇದು ಎಂದು ಖರೀದಿಸುವಂತಾಗಬೇಕು.
ಹೂಡಿಕೆಯೇ ಮಾಡದಿದ್ದರೆ
ಸಂಪತ್ತು ಬೇಕೆಂದರೆ ಹೂಡಿಕೆ ಮಾಡಬೇಕು, ಹೂಡಿಕೆಯೇ ಮಾಡದೆ ಸಂಪತ್ತು ಬೇಕೆಂದು ಬಯಸುವುದೇ ತಪ್ಪು. ಯಾರು ಶ್ರೀಮಂತರಗುತ್ತಾರೋ ಅವರು ದುಡಿದ ಶೇ. 20 ರಷ್ಟು ಮನೆಯ ಖರ್ಚು ಮಾಡುತ್ತಾರೆ, ಉಳಿದ ಹಣವನ್ನು ಹೂಡಿಕೆ ಮಾಡುತ್ತಾರೆ. ಆದರೆ ನಾವು ಏನು ಮಾಡುತ್ತೇವೆ ಶೇ. 80 ಏಕೆ ಶೇ. 100 ಖರ್ಚು ಮಾಡುತ್ತೇವೆ ಹೂಡಿಕೆ ಮಾಡುವುದಿಲ್ಲ ಹಾಗಾಗಿ ನಮ್ಮ ಬಳಿ ಹಣ ಉಳಿಯಲ್ಲ.
ಒಂದೇ ಹಣದ ಮೂಲ
ಹೌದು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಅದಷ್ಟೇ ನಮ್ಮ ಹಣದ ಮೂಲ ಎಂದಾದರೆ ನಾವು ಶ್ರೀಮಂತರಾಗುವುದು ಕಷ್ಟ, ಈ ಅಭ್ಯಾಸ ಬದಲಾಯಿಸಿಕೊಳ್ಳಿ, ಬದುಕು ಬದಲಾಗುವುದು. ಉದ್ಯೋಗದ ಜೊತೆಗೆ ಏನಾದರೂ ಚಿಕ್ಕ ಹೂಡಿಕೆ ಮಾಡಿ, ಚಿಕ್ಕ ವ್ಯಾಪಾರ ಮಾಡಿ ಇದರಿಂದ ಮತ್ತೊಂದು ಆರ್ಥಿಕ ಮೂಲ ಸಿಗುವುದು, ಹೀಗಾಗಿ ನಮ್ಮ ಕೈಯಲ್ಲಿ ಹಣ ಚೆನ್ನಾಗಿರುತ್ತದೆ.
ಕಂಫರ್ಟ್ ಜೋನ್‌ನಿಂದ ಹೊರ ಬರದೆ ಇರುವುದು
ಈ ಗುಣ ತುಂಬಾ ಜನರಲ್ಲಿ ಇರುತ್ತದೆ, ಒಂದು ಕೆಲಸದಲ್ಲಿ ಇರುತ್ತೇವೆ, ಅಲ್ಲಿ ಒಳ್ಳೆ ಸಂಬಂಧ ಬರ್ತಾ ಇರುತ್ತದೆ, ಅದು ಒಂಥರಾ ಕಂಫರ್ಟ್ ಝೋನ್ ಆಗಿರುತ್ತದೆ, ಹಾಗಾಗಿ ಅದರಲ್ಲಿಯೇ ಇರುವುದು, ಹೊಸ ಸಾಹಸಕ್ಕೆ ಕೈ ಹಾಕದೆ ಇರುವುದು. ಕಂಫರ್ಟ್ ಝೋನ್‌ನಿಂದ ಹೊರ ಬರದೆ ಶ್ರೀಮಂತರಾಗಲು ಸಾಧ್ಯವಿಲ್ಲ.
ಇನ್ನು ನಾವು ಹೊಸ ಸಾಹಸಕ್ಕೆ ಕೈ ಹಾಕುವಾಗ ಅದರ ಓನರ್ ಮಾತ್ರವಲ್ಲ ಆಳಾಗಿ ದುಡಿಯಲು ಸಿದ್ಧವಿರಬೇಕು. ಉದಾಹರಣೆಗೆ ನೀವು ಒಂದು ಹೋಟೆಲ್ ಬ್ಯುಸ್‌ನೆಸ್ ಮಾಡ್ತಾ ಇದ್ದೀರಿ ಎಂದಾದರೆ ಅಲ್ಲಿ ಜನ ಸಿಗದಿದ್ದರೆ ಪ್ಲೇಟ್ ತೊಳೆದು, ಕಸ ಹೊಡೆಯಲು ಸಿದ್ಧವಿರಬೇಕು, ಕುಕ್ ಕೈ ಕೊಟ್ಟರೆ ಅಡುಗೆ ಮಾಡಲು ಗೊತ್ತಿರಬೇಕು, ಆವಾಗ ಮಾತ್ರ ಆ ಉದ್ಯಮದಲ್ಲಿ ಸಕ್ಸಸ್ ಆಗಲು ಸಾಧ್ಯ...
ಈಗ ಹೇಳಿ ಶ್ರೀಮಂತರಾಗಲು ಗುರಿ ಸೆಟ್ ಮಾಡಿದ್ದೀರಾ?.......



Click it and Unblock the Notifications

