Latest Updates
-
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು!
4 ನೇ ಶ್ರಾವಣ ಸೋಮವಾರದಂದು ಶಿವನಿಗೆ ಪೂಜೆ ಸಲ್ಲಿಸುವಾಗ ಈ ತಪ್ಪುಗಳು ಆಗದಿರಲಿ!
ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವವಿದೆ. ಈ ದಿನ ಶಿವನ ಆರಾಧನೆ, ಉಪವಾಸ, ಪೂಜೆ-ಪುನಸ್ಕಾರ ಇತ್ಯಾದಿಗಳನ್ನು ನೆರವೇರಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಶಿವನು ತನ್ನ ಇಡೀ ಕುಟುಂಬದೊಂದಿಗೆ ಭೂಮಿಯನ್ನು ಸುತ್ತುತ್ತಾನೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಈ ಸಮಯದಲ್ಲಿ ಪೂಜೆ ಮಾಡುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಇದೆ.

ಬರೋಬ್ಬರಿ 19 ವರ್ಷಗಳ ನಂತರ ಈ ವರ್ಷ ಸುಮಾರು ಎರಡು ತಿಂಗಳ ಅವಧಿ ನಾವು ಶ್ರಾವಣ ಮಾಸವನ್ನು ಎದುರಿಸಲಿದ್ದೇವೆ.. ಇಲ್ಲಿಯವರೆಗೆ ಮೂರು ಶ್ರಾವಣ ಸೋಮವಾರಗಳು ಕಳೆದಿದ್ದು, ಆಗಸ್ಟ್ 14ರಂದು ನಾಲ್ಕನೇ ಶ್ರಾವಣ ಸೋಮವಾರವನ್ನು ಆಚರಣೆ ಮಾಡಲಿದ್ದೇವೆ. ಈ ದಿನ ವಿಶೇಷ ಪೂಜೆ ನೆರವೇರಿಸುವುದರಿಂದ ಶಿವನಿಗೆ ಸಲ್ಲುತ್ತೆ ಎನ್ನುವ ನಂಬಿಕೆಯಿದೆ. ಅಷ್ಟಕ್ಕು ನಾಲ್ಕನೇ ಸೋಮವಾರದಂದು ಮಹಾದೇವನ ಪೂಜೆ ಹೇಗಿರಬೇಕು? ಯಾವ ರೀತಿ ಪೂಜೆ-ಪುನಸ್ಕಾರಗಳನ್ನು ಸಲ್ಲಿಕೆ ಮಾಡಬೇಕು ಅನ್ನೋದನ್ನು ತಿಳಿಯೋಣ.
ನಾಲ್ಕನೇ ಶ್ರಾವಣ ಸೋಮವಾರದಂದು ಮೂರು ಮಂಗಳಕರ ಯೋಗ ರೂಪುಗೊಳ್ಳಲಿದೆ!
ನಾಲ್ಕನೇ ಸೋಮವಾರವು ಪೂಜೆ ಮತ್ತು ಉಪವಾಸವನ್ನು ಆಚರಣೆ ಮಾಡಲು ಬಹಳ ಮಂಗಳಕರವಾಗಿರುತ್ತದೆ. ಈ ದಿನ ಮೂರು ಮಂಗಳಕರ ಯೋಗಗಳು ರೂಪುಗೊಳ್ಳುತ್ತವೆ. ಈ ಸಮಯದಲ್ಲಿ ಪೂಜೆಯನ್ನು ಮಾಡೋದ್ರಿಂದ ಶುಭ ಫಲಿತಾಂಶಗಳನ್ನು ಪಡೆಯಬಹುದು ಅಂತ ಹೇಳಲಾಗುತ್ತದೆ. ನಾಲ್ಕನೇ ಶ್ರಾವಣ ಸೋಮವಾರದಂದು ರವಿ ಯೋಗ, ಪ್ರೀತಿ ಯೋಗ ಮತ್ತು ವಿಷ್ಕಂಭ ಯೋಗ ರೂಪುಗೊಳ್ಳುತ್ತದೆ. ಈ ಸಮಯದಲ್ಲಿ ನಿಮ್ಮ ಇಷ್ಟಾರ್ಥಗಳೆಲ್ಲಾ ಸಿದ್ಧಿಯಾಗುತ್ತೆ ಎಂದು ನಂಬಲಾಗಿದೆ.
ನಾಲ್ಕನೇ ಶ್ರಾವಣ ಸೋಮವಾರ ರುದ್ರಾಭಿಷೇಕ ಯಾವಾಗ ಮಾಡಬೇಕು?
ಆಗಸ್ಟ್ 14ರಂದು ನಾಲ್ಕನೇ ಶ್ರಾವಣ ಸೋಮವಾರದಂದು ಭಗವಾನ್ ಶಿವನಿಗೆ ರುದ್ರಾಭಿಷೇಕವನ್ನು ಮಾಡುವುದರಿಂದ ಶುಭವಾಗುತ್ತೆ ಎಂದು ಹೇಳಲಾಗುತ್ತದೆ. ಇವುಗಳಲ್ಲಿ ರುದ್ರಾಭಿಷೇಕಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಅದಕ್ಕಾಗಿಯೇ ನಾಲ್ಕನೇ ಶ್ರಾವಣ ಸೋಮವಾರದಂದು ರುದ್ರಾಭಿಷೇಕವನ್ನು ಮಾಡಬಯಸುವವರು ಬೆಳಿಗ್ಗೆ 07:26 ರೊಳಗೆ ಮಾಡಿ ಮುಗಿಸಬೇಕು ಅಂತ ಹೇಳಲಾಗುತ್ತದೆ.
ನಾಲ್ಕನೇ ಶ್ರಾವಣ ಸೋಮವಾರ ಈ ರೀತಿ ಪೂಜೆ ಮಾಡಿ!
ಈ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ. ಇದರ ನಂತರ ಉಪವಾಸ ಕೈಗೊಳ್ಳಿ. ಶುಭ ಸಮಯದಲ್ಲಿ ಶಿವನ ದೇವಾಲಯಕ್ಕೆ ಹೋಗಿ. ಅಥವಾ ಸಾಧ್ಯವಾದರೆ ನಿಮ್ಮ ಸ್ವಂತ ಪೂಜಾ ಸ್ಥಳದಲ್ಲಿ ಶಿವಲಿಂಗವನ್ನು ಕ್ರಮಬದ್ಧವಾಗಿ ಪೂಜಿಸಿ. ಗಂಗಾಜಲ ಅಥವಾ ಹಾಲಿನೊಂದಿಗೆ ಶಿವಲಿಂಗದ ಮೇಲೆ ಅಭಿಷೇಕ ಮಾಡಿ. ಶ್ರೀಗಂಧ, ಅಕ್ಷತೆ, ಬಿಳಿ ಹೂವುಗಳು, ಬಿಲ್ವಪತ್ರೆ, ಶಮಿ ಎಲೆಗಳು, ಧಾತುರ, ಭಸ್ಮ ಇತ್ಯಾದಿಗಳನ್ನು ಅರ್ಪಿಸಿ. ಜೇನುತುಪ್ಪ, ಹಣ್ಣುಗಳು, ಸಿಹಿತಿಂಡಿಗಳು, ಸಕ್ಕರೆಯನ್ನು ಅರ್ಪಸಿ. ಇನ್ನೂ ಧೂಪ-ದೀಪಗಳನ್ನು ಮತ್ತು ತುಪ್ಪದ ದೀಪವನ್ನು ಬೆಳಗಿಸಿ. ಶಿವನಿಗೆ ಸಂಬಂಧಿಸಿದ ಕಥೆ-ಪುರಾಣಗಳನ್ನು ಓದಿ ಆರತಿಯನ್ನು ಬೆಳಗಿರಿ.
ಈ ರೀತಿ ಭಕ್ತಿಯಿಂದ ಪೂಜಿಸಿದ್ರೆ ಖಂಡಿತ ಮಹಾದೇವನು ನಿಮ್ಮ ಬಾಳಿನಲ್ಲಿ ಎಲ್ಲವೂ ಒಳ್ಳೆಯದಾಗುವಂತೆ ಆಶೀರ್ವಾದ ಮಾಡುತ್ತಾನೆ.
ಸೂಚನೆ : ಈ ಮಾಹಿತಿ ಇಂಟರ್ನೆಟ್ ಆಧಾರಿತವಾಗಿದ್ದು, ಬೋಲ್ಡ್ ಸ್ಕೈ ಕನ್ನಡ ಇದಕ್ಕೆ ಜವಾಬ್ದಾರರಾಗಿ ಇರೋದಿಲ್ಲ. ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ ಪೂಜೆ ಸಲ್ಲಿಸಿದರೆ ಉತ್ತಮ.



Click it and Unblock the Notifications











