Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಪುಣೆಯ ಡ್ಯಾಮ್‌ನಲ್ಲಿ ಕೊಚ್ಚಿ ಹೋದ ಮಕ್ಕಳು: ಪೋಷಕರು ಮಾಡಿದ ಈ ತಪ್ಪೇ ಅನಾಹುತಕ್ಕೆ ಕಾರಣವಾಯ್ತು
ರಣ ಭೀಕರ ಮಳೆಗೆ ಮಹಾರಾಷ್ಟ್ರ ತತ್ತರಿಸಿದೆ. ಬುಶಿ ಡ್ಯಾಮ್ ಪಕ್ಕದ ಜಲಪಾತವನ್ನು ಕಣ್ತುಂಬಿಕೊಂಡು ಬರಲು ಖುಷಿಯಿಂದ ಹೋದ ಒಂದೇ ಕುಟುಂಬ 5 ಮಂದಿ ನೀರಿನಲ್ಲಿ ಕೊಚ್ಚಿ ಹೋಗುವ ವೀಡಿಯೋ ವೈರಲ್ ಆಗಿದ್ದು ಆ ವೀಡಿಯೋ ಎದೆ ನಡಗಿಸುವಂತಿದೆ.

ಮಳೆಗಾಲದಲ್ಲಿ ಪ್ರವಾಸಿಗರನ್ನು ಸೆಳೆಯುವ ಭುಶಿ ಡ್ಯಾಮ್ ಮಳೆಗಾಲದಲ್ಲಿ ದಿನನಿತ್ಯ ನೂರಾರು ಪ್ರವಾಸಿಗರು ಬರ್ತಾರೆ, ಹೀಗೆ ಜಲಪಾತದ ಸೌಂದರ್ಯವನ್ನು ನೋಡಲು ಹೋದವರು ಬಾರದ ಲೋಕಕ್ಕೆ ಹೋಗಿರುವುದು ನಿಜಕ್ಕೂ ಸ್ವತಃ ತಂದುಕೊಂಡ ದುರಂತವೇ ಸರಿ. ನೀರಿನ ರಭಸಕ್ಕೆ ಮಹಿಳೆ, ನಾಲ್ಕು ಮಕ್ಕಳು ಕೊಚ್ಚಿ ಹೋಗಿದ್ದಾರೆ.
A woman with 4 kids of a family drowned in waterfall at Lonavala Bhushi Dam, Maharashtra.
— Gary Pike World cup वाले 🇮🇳 (@PikeWala) June 30, 2024
2 bodies have been recovered 3 bodies still missing.
Be careful while visiting waterfalls and dams.#Bhushi #Dam #Lonavala #Drowning pic.twitter.com/6v7HDoAri7
ಮಳೆ ನೀರು ಹೆಚ್ಚುತ್ತಿದ್ದರೂ ನೀರಿನಲ್ಲಿ ಆಟ ಆಡಿದ್ದೇ ದುರಂತಕ್ಕೆ ಕಾರಣವಾಯ್ತು
ಆ ಕುಟುಂಬ ನೀರಿನಲ್ಲಿ ಆಟ ಆಡುತ್ತಿತ್ತು, ನೀರಿನ ಮಟ್ಟ ಹೆಚ್ಚುತ್ತಿತ್ತು, ಆದರೆ ಲಕ್ಷ್ಯ ಕೊಡಲಿಲ್ಲ, ನೋಡ ನೋಡುತ್ತಿದ್ದಂತೆ ನೀರಿನ ರಭಸ ಹೆಚ್ಚಾಗಿದೆ, ಎಲ್ಲರೂ ಒಬ್ಬೊಬ್ಬರನ್ನು ಹಿಡಿದುಕೊಂಡು ಪ್ರಾಣ ರಕ್ಷಣೆಗೆ ಕೂಗುತ್ತಾರೆ, ಅಲ್ಲಿ ಯಾವುದೇ ನುರಿತ ರಕ್ಷಣಾ ಸಿಬ್ಬಂದಿಗಳು ಇರಲಿಲ್ಲ, ಅಲ್ಲಿದ್ದವರು ತಾವು ಏನಾದರೂ ಮಾಡಿ ಅವರನ್ನು ರಕ್ಷಣೆ ಮಾಡಬಹುದಾ ಎಂದು ನೋಡುತ್ತಾರೆ, ಎಲ್ಲರೂ ಒಬ್ಬೊರನ್ನೊಬ್ಬರು ಗಟ್ಟಿಯಾಗಿ ಹಿಡಿದುಕೊಂಡು ನಿಲ್ಲುವಂತೆ ಸೂಚಿಸುತ್ತಾರೆ, ಅದರೆ ನೀರಿನ ರಭಸಕ್ಕೆ 5 ಮಂದಿ ಕೊಚ್ಚಿ ಹೋಗುತ್ತಾರೆ.
ಅಷ್ಟು ಚಿಕ್ಕ ಮಕ್ಕಳ ಜೊತೆ ನೀರಿನಲ್ಲಿ ಚೆಲ್ಲಾಟ ಆಡಲು ಹೋಗಿದ್ದೇ ಅಪಾಯಕ್ಕೆ ಪ್ರಮುಖ ಕಾರಣವಾಗಿದೆ
ನೀರಿನಲ್ಲಿ 13 ವರ್ಷ, 8 ವರ್ಷ, 9 ವರ್ಷ, 4 ವರ್ಷ ಇಷ್ಟು ಚಿಕ್ಕ ಮಕ್ಕಳನ್ನು ಹಿಡಿದು ಹೋದಾಗ ದೂರ ನಿಂತು ಪ್ರಕೃತಿ ಸೌಂದರ್ಯ ಸವಿಯಬೇಕು, ಆದರೆ ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ಮುಂದೆ ನಡೆಯಬಹುದಾದ ಅನಾಹುತದ ಕಲ್ಪನೆಯೂ ಮಾಡದೆ ಹೋಗಿರುವುದೇ ಕರುಳು ಹಿಂಡುವ ಈ ದುರಂತಕ್ಕೆ ಪ್ರಮುಖ ಕಾರಣ.
ಪೋಷಕರೇ ಜಾಗ್ರತೆ
ಮಳೆಗಾಲದಲ್ಲಿ ನೀವು ಜಲಪಾತ ವೀಕ್ಷಣೆ, ನದಿಯಲ್ಲಿ ನೀರು ಉಕ್ಕಿ ಹರಿಯುವುದನ್ನು ನೋಡುವಾಗ ಮಕ್ಕಳನ್ನು ಕರೆದುಕೊಂಡು ಹೋಗಲೇಬೇಡಿ, ಹೋಗುವುದಾದರೂ ಸರಕ್ಷತೆಯ ದೂರದಲ್ಲಿ ನಿಂತು ವೀಕ್ಷಿಸಿ ಹಿಂತಿರುಗಿ ಬನ್ನಿ. ಎಲ್ಲರೂ ನೀರಿನಲ್ಲಿ ಆಡುತ್ತಿದ್ದಾರೆ ಎಂದು ನೀವು ಮಕ್ಕಳ ಜೊತೆ ನೀರಿನಲ್ಲಿ ಆಡಲೇಬೇಡ, ಈ ಬಗ್ಗೆ ಜಾಗ್ರತೆ ವಹಿಸಲೇಬೇಕು. ಕೆಲವೊಂದು ಅನಾಹುತಗಳನ್ನು ತಡೆಯಲು ಮನುಷ್ಯರಿಗೆ ಸಾಧ್ಯವಾಗಲ್ಲ, ಇನ್ನೂ ಕೆಲವೊಂದು ಅನಾಹುತಗಳನ್ನು ನಮ್ಮ ನಿರ್ಲಕ್ಷ್ಯದಿಂದಾಗಿ ತಂದುಕೊಳ್ಳುತ್ತೇವೆ, ಹಾಗಾಗಿ ಜಾಗ್ರತೆವಹಿಸಿ.
ಪುಣೆಯಲ್ಲಿ ಮತ್ತೊಬ್ಬ ಯುವಕ ರೀಲ್ಸ್ ಹುಚ್ಚಿಗೆ ಬಲಿಯಾಗಿದ್ದಾನೆ
5 ಮಂದಿ ನೀರಿನಲ್ಲಿ ಕೊಚ್ಚಿ ಹೋದ ವೀಡಿಯೋ ನೋಡುವಾಗಲೇ ಎದೆ ನಡುಗುತ್ತದೆ, ಅದರ ಬೆನ್ನಲ್ಲೇ ಮತ್ತೊಬ್ಬ ಯುವಕ ತನ್ನ ನಿರ್ಲಕ್ಷ್ಯದ, ಹುಚ್ಚು ಸಾಹಸದ ಪರಿಣಾಮದಿಂದ ಜೀವ ಕಳೆದುಕೊಂಡಿದ್ದಾನೆ. ಈತ ವೀಕೆಂಡ್ ಟ್ರಿಪ್‌ಗೆ ಅಂತ ಹೋಗಿದ್ದ, ಇವನ ಟ್ರಿಪ್ ತಂಡದಲ್ಲಿ ಸುಮಾರು 32 ಜನರು ಇದ್ದರು. ಈತ ನೀರಿನಲ್ಲಿ ಸಾಹಸ ಮಾಡುವ ಪ್ರಯತ್ನ ಮಾಡಿದ್ದಾನೆ.
ಈ ತ ಧುಮ್ಮಿಕ್ಕುತ್ತಿದ್ದ ಜಲಪಾತದ ನೀರಿಗೆ ಹಾರಿದ್ದಾನೆ. ಈತನ ಸ್ನೇಹಿತರು ವೀಡಿಯೋ ಮಾಡುತ್ತಿದ್ದರು, ಆದರೆ ಆತನ ಲೆಕ್ಕಚಾರ ಕೈಕೊಡ್ತು ನೀರಿನ ರಭಸ ಅಧಿಕವಿರುವುದರಿಂದ ಆತ ಈಜಿ ಪಾರಾಗಲು ನೋಡಿದ್ದಾನೆ, ಅಲ್ಲಿದ್ದ ಬಂಡೆ ಹಿಡಿದಿದ್ದಾನೆ, ನೀರಿನ ರಭಸದಲ್ಲಿ ಅವನು ಕೊಚ್ಚಿ ಹೋಗಿದ್ದಾನೆ.
ಆದ್ದರಿಂದ ಈ ಸಮಯದಲ್ಲಿ ಅನಗ್ಯತ ಸಾಹಸ ಬೇಡ್ವೆ ಬೇಡ. ಜಲಪಾತ, ನದಿ ಕಡೆಗೆ ಹೋದಾಗ ಜಾಗ್ರತೆವಹಿಸಿ, ಆದಷ್ಟು ಸುರಕ್ಷಿತವಾಗಿರಿ, ರೀಲ್ಸ್ ಜೀವ ಉಳಿದರೆ ನಾಳೆಯೂ ಮಾಡಬಹುದು, ಆದ್ದರಿಂದ ರೀಲ್ಸ್ ಹುಚ್ಚಿಗೆ ಜೀವದ ಬಗ್ಗೆ ನಿರ್ಲಕ್ಷ್ಯಬೇಡ.



Click it and Unblock the Notifications