Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಅನಂತ ಪದ್ಮಸ್ವಾಮಿ ದೇವಾಲಯದ ಪ್ರಾಂಗಣಕ್ಕೆ ಬಂದ ಮೊಸಳೆ: ಬಬಿಯಾ ಮರುಜನ್ಮವೆತ್ತಿ ಬಂದಿದೆ ಎನ್ನುತ್ತಿರುವ ಭಕ್ತರು
ಕೇರಳದ ಅನಂತ ಪದ್ನನಾಭ ದೇವಾಲಯದ ಹಲವು ವಿಶೇಷತೆಗಳಲ್ಲೊಂದು ಅಲ್ಲಿದ್ದ ಸಸ್ಯಾಹಾರಿ ಮೊಸಳೆ, ಅದಕ್ಕೆ ಬಬಿಯಾ ಎಂದು ಹೆಸರಿಡಲಾಗಿತ್ತು. ಈ ಬಬಿಯ 70 ವರ್ಷಕ್ಕೂ ಅಧಿಕ ಸಮಯ ಬದುಕಿತ್ತು. ಬಬಿಯಾ ವಿಷ್ಣುವಿನಲ್ಲಿ ಐಕ್ಯವಾದ ಮೇಲೆ ಕಳೆದ ವರ್ಷ ಮತ್ತೊಂದು ಮರಿ ಮೊಸಳೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು, ಆದರೆ ಅದು ಹೆಚ್ಚಿನವರ ಕಣ್ಣಿಗೆ ಬಿದ್ದಿರಲಿಲ್ಲ, ಆದರೆ ಜೂನ್ 14ರಂದು ಮೊಸಳೆ ದೇವಾಲಯ ಪ್ರಾಂಗಣ ಪ್ರವೇಶಿಸಿ ಅಚ್ಚರಿ ಮೂಡಿಸಿದೆ.

ಈ ಮೊಸಳೆ ದೇವಾಲಯದ ಗರ್ಭಗುಡಿಯ ಸಮೀಪ ಬಂದು ವಿಶ್ರಾಂತಿ ಪಡೆದಿದೆ. ಈ ಮೊಸಳೆ ಬಂದಾಗ ಯಾರೂ ಗಮನಿಸಿರಲಿಲ್ಲ, ಏಕೆಂದರೆ ಅಷ್ಟೊತ್ತಿಗೆ ದೇಗುಲದ ನಡೆ ಮುಚ್ಚಿತ್ತು, ಸಮಜೆ ಕ್ಷೇತ್ರದ ಅರ್ಚಕರು ಪೂಜೆಗೆ ಬಂದಾಗ ಈ ಭವ್ಯ ದೃಶ್ಯ ಕಂಡು ಬಂದಿದೆ, ಅವರು ಅದನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ, ಇದೀಗ ಆ ವೀಡಿಯೋ ವೈರಲ್ ಆಗಿದೆ.
ಬಬಿಯಾ ಕಣ್ಮರೆಯಾಗಿ ಸರಿಯಾಗಿ ಇಂದು ವರ್ಷಕ್ಕೆ ಕಾಣಿಸಿಕೊಂಡಿದ್ದ ಬಬಿಯಾ 3
ಬಿಬಿಯಾ ವಿಷ್ಣುವಿನಲ್ಲಿ ಐಕ್ಯವಾದಾಗ ದೇವಾಲಯದ ಅರ್ಚಕರು, ಅಲ್ಲಿಗೆ ಬರುತ್ತಿದ್ದ ಕಣ್ಣೀರು ಹಾಕಿ ಬಬಿಯಾಗೆ ವಿಧಿ ವಿಧಾನಗಳ ಮೂಲಕ ಮಣ್ಣು ಮಾಡಿದ್ದರು. ಅದಾಗಿ ಒಂದು ವರ್ಷಕ್ಕೆ ಒಂದು ಮರಿ ಮೊಸಳೆ ಕಣ್ಣಿಗೆ ಬಿದ್ದಾಗ ಎಲ್ಲರಿಗೂ ಅಚ್ಚರಿ ಉಂಟಾಗಿತ್ತು, ಬಬಿಯಾ ಮತ್ತೆ ಬರುತ್ತದೆ ಎಂಬ ಕತೆ ಸತ್ಯವಾಯ್ತು, ಆದರೆ ಈ ಮರಿ ಮೊಸಳೆ ಕೆಲವೇ ಕೆಲವರ ಕಣ್ಣಿಗೆ ಮಾತ್ರ ಬಿದ್ದಿತ್ತು.
ಈ ದೇವಾಲಯದ ಕೊಳದಲ್ಲಿ ಒಂದು ಮೊಸಳೆ ಹೋದರೆ ಮತ್ತೊಂದು ತಾನಾಗಿಯೇ ಬರುತ್ತದೆ ಎಂಬ ಮಾತು ಈ ಮೂಲಕ ಸತ್ಯವಾಯ್ತು
ಬಬಿಯಾ ತುಂಬಾನೇ ಪ್ರಸಿದ್ಧ ಪಡೆದ ಮೊಸಳೆ, ಆದರೆ ಅದಕ್ಕಿಂತ ಮೊದಲು ಮೊಸಳೆಯಿತ್ತು, ಆದರೆ ಆ ಮೊಸಳೆಯನ್ನು ಬ್ರಿಟಿಷರು ಗುಂಡಿಕ್ಕಿ ಕೊಂದರು, ಅದಾದ ಸ್ವಲ್ಪ ದಿನಗಳಲ್ಲಿ ಅಲ್ಲಿ ಮತ್ತೊಂದು ಮೊಸಳೆ ಮರಿ ಕಾಣಿಸಿಕೊಂಡಿತು, ಆ ಮೊಸಳೆಗೆ ಬಬಿಯಾ ಎಂದು ಹೆಸರು ಇಡಲಾಯ್ತು,. ಬಬಿಯಾ ಜನರೊಂದಿಗೆ ಅಷ್ಟು ಚೆನ್ನಾಗಿ ಬರೆಯುತ್ತಿತ್ತು, ಅರ್ಚಕರು ಬಂದು ಬಬಿಯಾ ಅಂತ ಕರೆದರೆ ಸಾಕು, ನೀರಿನಿಂದ ಹೊರ ಬರ್ತಾ ಇತ್ತು, ಅವರ ಅದಯ ಮೈ ಮುಟ್ಟಿ, ನಂತರ ಅದಕ್ಕೆ ಪ್ರಸಾದ ನೀಡುತ್ತಿದ್ದರು, ಮೊಸಳೆಗೆ ಗಂಧದ ಮೊಟ್ಟು ಕೂಡ ಇಡುತ್ತಿದ್ದರು. ಈ ದೃಶ್ಯವನ್ನು ನೋಡಲೆಂದೇ ಭಕ್ತರು ನರೆಯುತ್ತಿದ್ದರು, ಎಲ್ಲರ ಪ್ರೀತಿ ಪಾತ್ರವಾಗಿದ್ದ ಬಬಿತಾ 70ಕ್ಕೂ ಅಧಿಕ ವರ್ಷ ಜೀವಿಸಿತ್ತು. ಬಬಿಯಾ ಇನ್ನಿಲ್ಲ ಎಂದು ಸುದ್ದಿ ತಿಳಿದಾಗ ಭಕ್ತರು, ದೇವಾಸ್ಥಾನ ಸಿಬ್ಬಂದಿಗಳು ಕಣ್ಣೀರು ಹಾಕಿದ್ದರು, ಬಬಿಯಾ ಬಳಿಕ ಪ್ರತಿದಿನವೂ ಬಬಿಯಾವನ್ನು ತುಂಬಾನೇ ಮಿಸ್ ಮಾಡುತ್ತಿದ್ದರು. ಅಲ್ಲಿಯ ಜನರಿಗೆ ಬಬಿಯಾ ಮತ್ತೊಮ್ಮೆ ಜನ್ಮವೆತ್ತಿ ಬರುತ್ತದೆ ಎಂದು ನಂಬಿದ್ದರು, ಆದರೆ ಅವರ ನಂಬಿಕೆ ಹುಸಿಯಾಗಿಲ್ಲ, ಸರಿಯಾಗಿ ಒಂದು ವರ್ಷಕ್ಕೆ ಮರಿ ಮೊಸಳೆ ಕಾಣಿಸಿಕೊಂಡಾಗ ಬಬಿಯಾ ಮರಳಿ ಬಂತು ಅಂತ ಜನರು ಖುಷಿಪಟ್ಟರು.
ಮೊದಲು ಪುಟ್ಟ ಮಗುವಿಗೆ ಕಾಣಿಸಿಕೊಂಡಿದ್ದ ಮೊಸಳೆ
ಈ ಮರಿ ಮೊಸಳೆ ಅಂದರೆ ಬಬಿಯಾ 3 ಮೊದಲು ಕಾಣಿಸಿಕೊಂಡಿದ್ದು ಒಂದು ಮಗುವಿಗಂತೆ. ಕಾಙಂಗಾಡಿನಿಂದ ಒಂದು ಕುಟುಂಬ ದೇವಾಲಯಕ್ಕೆ ಬಂದಿದ್ದರು, ಆವಾಗ ಅವರ ಜೊತೆ ಬಂದಿದ್ದ ಮಗುವಿಗೆ ಅಲ್ಲಿ ಮೊಸಳೆ ಇರುವ ಕತೆ ಯಾರೋ ಹೇಳಿರಬೇಕು, ಹಾಗಾಗಿ ಆ ಮಗು ಅಲ್ಲಿಗೆ ಬಂದಾಗ ನನಗೆ ಮೊಸಳೆ ತೋರಿಸು ಎಂದಿದೆ, ಅದಕ್ಕೆ ಮನೆಯವರು ಈವಾಗ ಮೊಸಳೆ ಇಲ್ಲ ಎಂದಿದ್ದಾರೆ, ಆ ಮಗು ಕೇಳಲಿಲ್ಲ, ಮೊಸಳೆ ನೋಡಲೇಬೇಕು ಎಂದು ಹಠ ಮಾಡಿದೆ. ಆವಾಗ ನೋಡು ನಿನಗೆ ಹೇಳಿದರೂ ಕೇಳಲ್ಲ , ಈಗ ಮೊಸಳೆ ಇಲ್ಲ ಎಂದು ಕೊಳದ ಬಳಿ ಕರೆದುಕೊಂಡು ಹೋದಾಗ ಅಚ್ಚರಿ ಎಂಬಂತೆ ಮರಿ ಮೊಸಳೆ ಆ ಮಗು ಹಾಗೂ ಮನೆಯವರ ಕಣ್ಣಿಗೆ ಬಿದ್ದಿದೆ, ಅವರು ಅದನ್ನು ದೇವಾಲಯದ ಅರ್ಚಕರಿಗೆ ತಿಳಿಸಿದಾಗ ಯಾರೂ ನಂಬಲಿಲ್ಲ, ಏಕೆಂದರೆ ಯಾರಿಗೂ ಆ ಮೊಸಳೆ ಕಂಡು ಬಂದಿರಲಿಲ್ಲ.
ನಂತರ ಈ ಮರಿ ಮೊಸಳೆ ಆಗಾಗ ಕಣ್ಣಿಗೆ ಬಿದ್ದಾಗ ಎಲ್ಲರಿಗೂ ಖುಷಿಯಾಗಿತ್ತು. ಈಗ ನೋಡಿದರೆ ದೇವಾಯದ ಪ್ರಾಂಗಣದವರೆಗೆ ಬಂದಿದೆ. ಬಬಿಯಾನೇ ಬಂದಿದೆ ಎಂಬುವುದರಲ್ಲಿ ಸಂಶಯವೇ ಬೇಡ ಅಲ್ವಾ?
ಇಂಥ ಪವಾಡದಿಂದಲೇ ಈ ದೇವಾಲಯ ಹೆಸರುವಾಸಿಯಾಗಿದೆ.



Click it and Unblock the Notifications
