Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
5 ದಿನದಲ್ಲಿ 330 ಭೂಕಂಪನ-ಜ್ವಾಲಾಮುಖಿ ಸ್ಪೋಟ: ಜಪಾನ್‌ನಲ್ಲಿ ನಿಜವಾಗುತ್ತಿದೆ ಟುತ್ಸುಕಿ ಭವಿಷ್ಯ
ಜಪಾನ್ ಅಂದರೆ ದ್ವೀಪ ರಾಷ್ಟ್ರ. ಸಣ್ಣ ದೇಶ, ಹಾಗೆ ಭೂಕಂಪನಗಳ ನಾಡು ಎಂದು ನೆನಪಾಗುತ್ತದೆ. ಜಪಾನ್‌ನಲ್ಲಿ ಪ್ರತಿ ವರ್ಷ 1500ಕ್ಕೂ ಹೆಚ್ಚು ಭೂಕಂಪನಗಳು ಸಂಭವಿಸುತ್ತದೆ. ಅದ್ರಲ್ಲೂ 2011ರಲ್ಲಿ ಸಂಭವಿಸಿದ್ದ ಸುನಾಮಿಯ ಭೀಕರತೆ ಇಂದಿಗೂ ಭಯ ಹುಟ್ಟಿಸುತ್ತೆ. ಜಪಾನ್ ಟೆಕ್ಟಾನಿಕ್ ಪ್ಲೇಟ್‌ನ ರಿಂಗ್ಸ್ ಆಫ್ ಫೈರ್ ಎಂಬ ಸ್ಥಾನದಲ್ಲಿ ಬರುವ ಕಾರಣ ಅಲ್ಲಿ ಯಾವಾಗಲು ಭೂಕಂಪನ ಉಂಟಾಗುತ್ತಲೇ ಇರುತ್ತದೆ.
ಜಪಾನ್ ಭೂಕಂನದಿಂದ ಅದೆಷ್ಟು ಬಾರಿ ಸಮಸ್ಯೆಗೆ ಒಳಗಾದರು ಅವರು ಮತ್ತೆ ಮತ್ತೆ ಪಟ್ಟಣ, ನಗರಗಳ ಕಟ್ಟುತ್ತಾರೆ, ಮತ್ತೆ ಜೀವನ ನಡೆಸುತ್ತಾರೆ. ಹಾಗೆ ಈಗ ಜಪಾನ್‌ನಲ್ಲಿ ಹೊಸ ರೀತಿಯ ಭಯ ಆತಂಕ ಎದುರಾಗುತ್ತಿದೆ. ಅಲ್ಲಿ ಮತ್ತೆ ಪ್ರಬಲ ಭೂಕಂಪನ ಅಥವಾ ನೈಸರ್ಗಿಕ ವಿಕೋಪ ಸಂಭವಿಸುವ ಕುರಿತ ಆತಂಕ ಎದುರಾಗಿದೆ.

ಈಗ ಜಪಾನ್‌ನ ಮಾಂಗಾ ಕಲಾವಿದೆಯ ಭವಿಷ್ಯವಾಣಿ ನಿಜವಾಗುವ ಆತಂಕ ಎದುರಾಗಿದೆ. ಹೌದು ಬಲ್ಗೇರಿಯಾದ ಅತೀಂದ್ರಿಯ ಶಕ್ತಿ ಹೊಂದಿದ್ದ ಬಾಬಾ ವಂಗಾರಂತೆ ಜಪಾನ್‌ನಲ್ಲಿಯೂ ಮಾಂಗಾ ಕಲಾವಿದೆಯಾಗಿರುವ ಟುತ್ಸುಕಿ ಹೇಳಿರುವ ಭವಿಷ್ಯವೀಗ ನಿಜವಾಗುವ ಆತಂಕ ಎದುರಾಗಿದೆ.
ಸ್ಥಳೀಯ ವರದಿಗಳ ಪ್ರಕಾರ ಮಂಗಳವಾರ ಬೆಳಗ್ಗೆ 4 ಗಂಟೆಯ ನಂತರ 5ರ ತೀವ್ರತೆಯ ಭೂಕಂಪ ಸೇರಿದಂತೆ ಕಳೆದ ಐದು ದಿನಗಳಲ್ಲಿ 330 ಕ್ಕೂ ಹೆಚ್ಚು ಕಂಪನಗಳು ಟೋಕಾರಾ ಸುತ್ತಮುತ್ತ ಸಂಭವಿಸಿದೆ.
ಜಪಾನ್‌ನ ದೂರದ ಟೋಕಾರಾ ದ್ವೀಪಗಳ ಸುತ್ತ ಭೂಕಂಪಗಳ ಸಮೂಹ ಮತ್ತು ಕ್ಯೂಶುದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡಿದೆ. ಈ ಕುರಿತು ದುರಂತಗಳ ಭವಿಷ್ಯ ನುಡಿದಿದ್ದ ಜಪಾನಚ್‌ನ ಟುತ್ಸುಕಿ ಮೊದಲೇ ಹೇಳಿದ್ದಾರೆ. ಜಪಾನ್‌ನಲ್ಲಿ ಮುಂದಿನ ಜುಲೈನಲ್ಲಿ ಬಹುದೊಡ್ಡ ದುರಂತ ಸಂಭವಿಸಬಹುದು. ಅದ್ರಲ್ಲೂ ನೈಸರ್ಗಿಕ ವಿಕೋಪಗಳು ಸಾವು ನೋವಿಗೆ ಕಾರಣವಾಗಬಹುದು ಎಂದು ಅವರು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಕಳೆದ 7 ವರ್ಷಗಳಿಂದಲೂ ಸುಪ್ತಾವಸ್ಥೆಯಲ್ಲಿದ್ದ ಶಿನ್ಮೋ ಜ್ವಾಲಾಮುಖಿ ಏಕಾಏಕಿ ಸ್ಪೋಟಗೊಂಡಿದೆ. ಇದರಿಂದ 500 ಮೀಟರ್ ಎತ್ತರಕ್ಕೂ ಬೂದಿ ಧುಮುಕಿತ್ತು. ಸುತ್ತಲಿನ ಪ್ರದೇಶದಲ್ಲಿ ದಟ್ಟ ಬೂದಿ ಹರಡಿಕೊಂಡಿತ್ತು. ಇದರಿಂದ ಇಡಿ ಜಪಾನ್‌ನಲ್ಲಿ ಆತಂಕದ ವಾತಾವರಣಕ್ಕೆ ಕಾರಣವಾಗಿದೆ.
ಮಾಂಗಾ ಕಲಾವಿದೆ ಟುತ್ಸುಕಿ ಪುಸ್ತಕದಲ್ಲಿ ಹೇಳಿರುವುದೇನು?
ರಿಯೋ ಟುತ್ಸುಕಿ ಭವಿಷ್ಯವಾಣಿಗಳನ್ನು ತನ್ನ ಪುಸ್ತಕದಲ್ಲಿ ದಾಖಲಿಸಿ ಇಡುವ ಕೆಲಸ ಮಾಡುತ್ತಾರೆ. ಅವರನ್ನು ಜಪಾನ್‌ನ ಬಾಬಾ ವಂಗಾ ಅಂತಲೂ ಕರೆಯುತ್ತಾರೆ. ಆಕೆ ರಾತ್ರಿ ಕನಸಿನಲ್ಲಿ ಕಾಣುವಂತಹ ದುರಂತಗಳನ್ನು ದಿ ಫ್ಯೂಚರ್ ಆಫ್ ಐ ಸೀ ಇಟ್ ಎಂಬ ಪುಸ್ತಕದಲ್ಲಿ ದಾಖಲಿಸಿರುವುದು ನೋಡಬಹುದು. ಅದರಲ್ಲಿ ಆಕೆ ಭೂಕಂಪನಗಳ ನಾಡು ಎಂದೇ ಕರೆಯಲ್ಪಡುವ ಜಪಾನ್‌ನಲ್ಲಿ ಮತ್ತೆ ಭೂಕಂಪ ಸಂಭವಿಸಲಿದೆ ಎಂದು ತಿಳಿಸಿದ್ದಾಳೆ. ಅದರಲ್ಲೂ ಜುಲೈ 2025ರಲ್ಲಿ ಜಪಾನ್‌ನಲ್ಲಿ ಭೀಕರ ಭೂಕಂಪನ ಸಂಭವಿಸಬಹುದು ಎಂದಿದ್ದಾರೆ. ಹಾಗೆ ಫುಕುಶಿಮಾ ಪರಮಾಣು ಸ್ಥಾವರಕ್ಕೆ ಹಾನಿಯಾಗುವ ಭೀತಿ ಇದೆ ಎಂದು ಆಕೆ ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ.
ಜೂನ್‌ನಲ್ಲಿ ನಾವು ಏರ್ ಇಂಡಿಯಾ ದುರಂತ, ಇರಾನ್ ಇಸ್ರೇಲ್ ನಡುವಿನ ಯುದ್ದದ ಆತಂಕ ನೋಡಿದ್ದೇವೆ. ಹಾಗೆ ಜುಲೈನಲ್ಲಿಯೂ ಕೂಡ ಇಂತಹ ಹಲವು ಘಟನೆಗಳು ನಡೆಯಬಹುದು ಎಂದು ಆಕೆ ಹೇಳಿದ್ದಾರೆ. ಅದ್ರಲ್ಲೂ ಜುಲೈ 5ರಂದು ಜಪಾನ್‌ನಲ್ಲಿ ಬಹುದೊಡ್ಡ ವಿಪತ್ತು ಸಂಭವಿಸಬಹುದು ಎಂದಿದ್ದಾರೆ. ಈ ಭವಿಷ್ಯವಾಣಿಯ ನಡುವೆ ಈಗ ಜಪಾನ್‌ನಲ್ಲಿ ಭೂಕಂಪನ ಹಾಗೂ ಜ್ವಾಲಾಮುಖಿ ಸ್ಪೋಟಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಮೊದಲು ಇಂಗ್ಲೆಂಡ್‌ನ ರಾಜಕುಮಾರಿ ಡಯಾನ ಮರಣ, ಗಾಯಕಿ ಫ್ರೆಡ್ಡಿ ಮರ್ಕ್ಯುರಿ ಸಾವು ಮತ್ತು 2019ರ ಸಮಯದಲ್ಲಿ ಆಘಾತ ತಂದಿದ್ದ ಕೋವಿಡ್ ವೈರಸ್ ಕುರಿತಂತೆಯು ಆಕೆ ಪುಸ್ತಕದಲ್ಲಿ ಉಲ್ಲೇಖಿಸಿರುವುದು ನೋಡಬಹುದು. ಹೀಗಾಗಿ ಆಕೆಯ ಭವಿಷ್ಯವಾಣಿ ನಿಜವಾಗುವ ಆತಂಕ ಈಗ ಮತ್ತಷ್ಟು ಹೆಚ್ಚಾಗಿದೆ. ಇನ್ನು ಟುತ್ಸುಕಿ ಬರೆದಿರುವ ಈ ಪುಸ್ತಕಕ್ಕೆ ಈಗ ಭಾರೀ ಬೇಡಿಕೆಯೂ ಬಂದಿದ್ಯಂತೆ.



Click it and Unblock the Notifications

