Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅತ್ಯಂತ ಶುಭಯೋಗದಲ್ಲಿ ಬಂದಿದೆ ಕೃಷ್ಣ ಜನ್ಮಾಷ್ಟಮಿ: ರಾತ್ರಿ ಈ ಶುಭ ಮುಹೂರ್ತದಲ್ಲಿ ಪೂಜೆ ಮಾಡಿ
ಈ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 6 ಮತ್ತು 7ರಂದು ಆಚರಿಸಲಾಗುವುದು. ಈ ವರ್ಷದ ಕೃಷ್ಣ ಜನ್ಮಾಷ್ಟಮಿ ತುಂಬಾನೇ ವಿಶೇಷವಾಗಿದೆ, ಏಕೆಂದರೆ ಹಲವು ವರ್ಷಗಳ ಬಳಿಕ ರೋಹಿಣಿ ನಕ್ಷತ್ರದಲ್ಲಿ ಕೃಷ್ನ ಜನ್ಮಾಷ್ಟಮಿ ಬಂದಿದೆ. ಅದಲ್ಲದೆ ಸರ್ವಾರ್ಥ ಸಿದ್ದಿ ಯೋಗ ಕೂಡ ಏರ್ಪಟ್ಟಿದೆ. ಈ ಮೂರು ಕಾರಣದಿಂದ ಈ ವರ್ಷ ನಾವು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಶುಭಯೋಗದಲ್ಲಿ ಆಚರಿಸುವ ಯೋಗ ಬಂದಿದೆ.
ಈ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಅಷ್ಟಮಿ ತಿಥಿ ರೋಹಿಣಿ ನಕ್ಷತ್ರದಲ್ಲಿ ಬಂದಿದ್ದು, ಸರ್ವಾರ್ಥ ಸಿದ್ಧಿ ಯೋಗ ಸೃಷ್ಟಿಯಾಗುತ್ತಿದೆ, ಈ ಸರ್ವಾರ್ಥ ಸಿದ್ಧಿಯೋಗದ ಮಹತ್ವವೇನು? ಏಕೆ ಈ ವರ್ಷ ರೋಹಿಣಿ ನಕ್ಷತ್ರದಲ್ಲಿ ಜನ್ಮಾಷ್ಟಮಿ ಬಂದಿರುವುದು ವಿಶೇಷ ಎಂದು ಹೇಳಲಾಗುತ್ತಿದೆ ಎಂದು ನೋಡೋಣ ಬನ್ನಿ:

ಸರ್ವಾರ್ಥ ಸಿದ್ಧಿಯೋಗ ಎಂದರೇನು?
ಕೆಲವೊಂದು ನಕ್ಷತ್ರ ಕೆಲವೊಂದು ದಿನ ಬಂದರೆ ಸರ್ವಾರ್ಥ ಸಿದ್ಧಿ ಯೋಗ ಏರ್ಪಡುವುದು, ಈ ಅವಧಿಯಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಲು ಈ ಯೋಗ ಶುಭವಾಗಿದೆ. ಏನಾದರೂ ಆಸ್ತಿ ಖರೀದಿಸುವುದಾದರೆ, ಗಾಡಿ ಖರೀದಿಸುವುದಾದರೆ ಈ ಯೋಗ ತುಂಬಾನೇ ಶುಭವಾಗಿದೆ. ಸೆಪ್ಟೆಂಬರ್ ರಂದು ಬೆಳಗ್ಗೆ 09:20ರಿಂದ ಸೆಪ್ಟೆಂಬರ್ 7 ಬೆಳಗ್ಗೆ 06:14ರವರೆಗೆ ಸರ್ವಾರ್ಥ ಸಿದ್ಧಿಯೋಗವಿದೆ.
ರವಿಯೋಗವೂ ಏರ್ಪಟ್ಟಿದೆ
ಜ್ಯೋತಿಷ್ಯದಲ್ಲಿ ರವಿಯೋಗವನ್ನು ಕೂಡ ಅತ್ಯಂತ ಶುಭಯೋಗ ಎಂದು ಪರಿಗಣಿಸಲಾಗಿದೆ. ಇಂದು ರಾತ್ರಿ 09:20ರವರೆಗೆ ರವಿಯೋಗವಿದೆ.
ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರ
ಈ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ, ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರ ಮಧ್ಯರಾತ್ರಿ ಬಂದಿದೆ. ರೋಹಿಣಿ ನಕ್ಷತ್ರವು ಸೆಪ್ಟೆಂಬರ್ 6 ರಂದು ಬೆಳಿಗ್ಗೆ 9.20 ರಿಂದ ಸೆಪ್ಟೆಂಬರ್ 7 ರ ಬೆಳಿಗ್ಗೆ 10.25 ರವರೆಗೆ ಇರಲಿದೆ. ಪೌರಾಣಿಕ ಕಥೆಯ ಪ್ರಕಾರ ಶ್ರೀಕೃಷ್ಣನು ಭಾದ್ರಪದ ಮಾಸದ ದಕ್ಷಿಣ ಭಾರತದಲ್ಲಿ ಶ್ರಾವಣ ಮಾಸದ ಅಷ್ಟಮಿ ತಿಥಿಯಂದು ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಈ ವರ್ಷ ಅಂಥದ್ದೇ ಮುಹೂರ್ತ ರೂಪುಗೊಂಡಿರುವುದರಿಂದ ತುಂಬಾನೇ ವಿಶೇಷವಾಗಿದೆ.
ಶ್ರೀ ಕೃಷ್ಣನನ್ನು ಹೇಗೆ ಪೂಜಿಸಬೇಕು?
ಅಷ್ಟಮಿ ತಿಥಿಯು ಸೆಪ್ಟೆಂಬರ್ 6 ಬುಧವಾರದಂದು ಮಧ್ಯಾಹ್ನ 3.37 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 7 ರಂದು ಸಂಜೆ 4.14 ಕ್ಕೆ ಕೊನೆಗೊಳ್ಳುತ್ತದೆ. ಜನ್ಮಾಷ್ಟಮಿ ಪೂಜೆಗೆ ಶುಭ ಮುಹೂರ್ತವು ರಾತ್ರಿ 11.44 ರಿಂದ 12.29 ರವರೆಗೆ ಇರುತ್ತದೆ. ಈ ಶುಭ ಸಮಯದಲ್ಲಿ ಬಾಲ ಗೋಪಾಲನನ್ನು ಪೂಜಿಸಿ.
ಜನ್ಮಾಷ್ಟಮಿ ಶುಭ ಯೋಗದ 3 ಪ್ರಮುಖ ಪ್ರಯೋಜನಗಳು
* ಈ ದಿನ ಉಪವಾಸವಿದ್ದು ನೀವು ಕೃಷ್ಣನ ಪೂಜೆ ಮಾಡಿದರೆ ಎಲ್ಲಾ ಪಾಪಗಳಿಂದ ಮುಕ್ತಿ ದೊರೆಯಲಿದೆ.
* ಈ ದಿನ ಶ್ರೀಕೃಷ್ಣನ ಪೂಜೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರಲಿದೆ, ಸಂಪತ್ತು ವೃದ್ಧಿಸಲಿದೆ
* ಅಲ್ಲದೆ ಅತ್ಯಂತ ಶುಭ ಯೋಗದಲ್ಲಿ ಕೃಷ್ಣ ಜಯಂತಿ ಇರುವುದರಿಂದ ನೀವು ಈ ದಿನ ಮಾಡುವ ವ್ರತಕ್ಕೆ ಹೆಚ್ಚಿನ ಫಲ ಸಿಗಲಿದೆ.
ಈ ದಿನ ಮಕ್ಕಳ ಅಪೇಕ್ಷಿತ ದಂಪತಿ ಸಂತಾನ ಗೋಪಾಲ ಸ್ತೋತ್ರ ಪಠಿಸಿ.
ಯಾರು ಶ್ರದ್ಧೆಯಿಂದ ಈ ಮಂತ್ರವನ್ಉ ಪಠಿಸುತ್ತಾರೋ ಅವರಿಗೆ ಖಂಡಿತವಾಗಲು ಸಂತಾನ ಭಾಗ್ಯ ದೊರೆಯಲಿದೆ ಎಂಬುವುದು ಬಲವಾದ ನಂಬಿಕೆ.



Click it and Unblock the Notifications
