Latest Updates
-
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ! -
ಪುಣೆಯಲ್ಲಿ ಮಳೆ ರಜೆ: ವರ್ಕ್ ಫ್ರಮ್ ಹೋಮ್ ಜೊತೆಗೆ ಮಕ್ಕಳನ್ನು ನಿಭಾಯಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಮುಂಬೈ ರೆಡ್ ಅಲರ್ಟ್: ಮಳೆಯಿಂದ ನಿಮ್ಮ ಬಾಡಿಗೆ ಮನೆ ಮತ್ತು ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಮುಂಬೈ ರೆಡ್ ಅಲರ್ಟ್: ಮಳೆಗಾಲದ ಕಾಯಿಲೆಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ!
ಅಯೋಧ್ಯೆಗೆ ಬಂತು 286 ಕೆ.ಜಿ ತೂಕದ ಬಿಲ್ಲು ಬಾಣ: ಇದರ ವಿಶೇಷಗಳೇನು ಗೊತ್ತಾ?
ಹಿಂದೂಗಳಿಗೆ ಬಹಳ ಪವಿತ್ರ ಸ್ಥಳಗಳಲ್ಲಿ ಅಯೋಧ್ಯೆ ಕೂಡ ಒಂದಾಗಿದೆ. ರಾಮ ಜನ್ಮಭೂಮಿಯಿ ಕಾರಣದಿಂದ ಅಲ್ಲಿಗೆ ದಿನವೂ ಸಾವಿರಾರು ಮಂದಿ ಭಕ್ತರು ಭೇಟಿ ನೋಡುತ್ತಾರೆ. ಹಾಗೆ ಅಯೋಧ್ಯೆ ಈಗ ದೇಶದ ಪ್ರಮುಖ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿದೆ. ರಾಮ ಮಂದಿರದಲ್ಲಿ ದಿನವೂ ವಿಶೇಷ ಪೂಜೆ, ಅಲಂಕಾರ, ಕಾರ್ಯಕ್ರಮಗಳು ನಡೆಯುವುದು ನೋಡಬಹುದು, ಇತ್ತೀಚಿಗೆ ದೀಪಾವಳಿಯ ಸಮಯದಲ್ಲಿ ಅಯೋಧ್ಯೆಯಲ್ಲಿ ಲಕ್ಷಾಂತರ ಭಕ್ತರು ಶ್ರೀರಾಮನ ದರ್ಶನ ಪಡೆದಿದ್ದರು.
ಹಾಗೆ ಭಕ್ತರು ರಾಮನಿಗೆ ವಿಶೇಷ ಉಡುಗೊರೆಗಳ ನೀಡುವುದು ನೋಡಿದ್ದೇವೆ. ದೇವಾಲಯ ಉದ್ಘಾಟನೆಗೊಂಡಾಗಿನಿಂದ ಒಂದಲ್ಲಾ ಒಂದು ರೀತಿಯ ದುಬಾರಿ ಉಡುಗೊರೆಗಳು ದೇವಾಲಯಕ್ಕೆ ಹರಿದುಬರುತ್ತಿದೆ. ಆರಂಭದಲ್ಲಿ ಚಿನ್ನದ ಲೇಪನವಿದ್ದ ರಾಮಾಯಣ ಗ್ರಂಥ, ಬೆಳ್ಳಿಯ ಪೊರಕೆ, ಪಾದುಕೆಗಳು ಸಹ ಇದ್ದಕೆ ಸೇರಿದ್ದವು ಆದ್ರೆ ಈಗ ಈ ಸಾಲಿಗೆ ಹೊಸದಾಗಿ ಚಿನ್ನದ ಬಿಲ್ಲು ಬಾಣ ಸಹ ಸೇರಿಕೊಂಡಿದೆ.

ಅಯೋಧ್ಯೆಯ ರಾಮನಿಗೆ ಈಗ ದುಬಾರಿ ಬೆಲೆ ಚಿನ್ನದ ಬಿಲ್ಲು ಬಾಣ ಆಗಮಿಸಿದೆ. ಈ ಬಿಲ್ಲು ಮತ್ತು ಬಾಣವನ್ನು ಒಡಿಶಾದಿಂದ ತರಲಾಗಿದ್ದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಮರ್ಪಿಸಲಾಗಿದೆ. ಈ ಕ್ಷಣವನ್ನು ರಾಮನ ಭಕ್ತರಿಗೆ ಅತ್ಯಂತ ಭಾವನಾತ್ಮಕ ಮತ್ತು ಐತಿಹಾಸಿಕವೆಂದು ಪರಿಗಣಿಸಲಾಗಿದೆ. ಈ ಐದು ಲೋಹದ ಬಿಲ್ಲು ಮತ್ತು ಬಾಣವು ಕೇವಲ ಲೋಹದಿಂದ ಮಾಡಿದ ಬಿಲ್ಲು ಮತ್ತು ಬಾಣವಲ್ಲ, ಆದರೆ ಶಾಶ್ವತ ಸಂಸ್ಕೃತಿ, ಭಕ್ತಿ ಮತ್ತು ಸಂಪ್ರದಾಯದ ಸಂಕೇತವಾಗಿದೆ.
ಒಡಿಶಾದ ನುರಿತ ಕುಶಲಕರ್ಮಿಗಳು ಸತತ 8 ತಿಂಗಳ ಕಾಲ ಶ್ರಮಿಸಿ ಈ ಅದ್ಭುತ ಕಲಾತ್ಮಕ ಬಿಲ್ಲನ್ನು ರಚಿಸಿದ್ದಾರೆ. ನಿರ್ಮಾಣದ ಸಮಯದಲ್ಲಿ ಧಾರ್ಮಿಕ ನಂಬಿಕೆಗಳು ಮತ್ತು ಶಾಸ್ತ್ರೀಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯಂತೆ. ಹಾಗೆ ಈ ಬಿಲ್ಲು ಬಾಣವು ಬರೋಬ್ಬರಿ 286 ಕೆ.ಜಿ ತೂಕವಿದೆ. ಸುಮಾರು 8 ಅಡಿ ಅಷ್ಟು ಎತ್ತರವಾಗಿದೆ. ಇದನ್ನು ಚಿನ್ನ, ಬೆಳ್ಳಿ, ತಾಮ್ರ, ಸತು ಮತ್ತು ಕಬ್ಬಿಣ ಸೇರಿಸಿ ಪಂಚಲೋಹದಿಂದ ಮಾಡಲಾಗಿದೆ. ಹಿಂದೂ ಧರ್ಮದಲ್ಲಿ ಈ 5 ಲೋಹಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಹಾಗೆ ಇದನ್ನು ಪವಿತ್ರ ಎಂದು ನಂಬಲಾಗಿದೆ. ಈ ಲೋಹಗಳನ್ನು ದೇವರ ವಿಗ್ರಹ ಕೆತ್ತನೆ, ಹಾಗೆ ದೇವರ ಆಯುಧ ರಚನೆಯ ವೇಳೆ ಬಳಸಲಾಗುತ್ತದೆ.
ಹಾಗೆ ಈ ಬಿಲ್ಲು ಬಾಣದಲ್ಲಿ ಯಾವ ಲೋಹವನ್ನು ಎಷ್ಟು ಪ್ರಮಾಣದಲ್ಲಿ ಬಳಸಲಾಗಿದೆ ಎಂಬುದನ್ನು ಹೇಳಲಾಗಿಲ್ಲ. ಆದ್ರೆ ತೂಕವನ್ನು ಪೂರ್ವನಿರ್ಧರಿತವಾಗಿಸಿ ತಯಾರಿಸಲಾಗಿದೆಯಂತೆ. ಈ ಬಿಲ್ಲು ಮತ್ತು ಬಾಣದ ಸೃಷ್ಟಿಗೆ ಸುಮಾರು 40 ಅನುಭವಿ ಕಲಾವಿದರು ಕೊಡುಗೆ ನೀಡಿದ್ದಾರೆ. ಎಲ್ಲಾ ಕಲಾವಿದರು ಸಾಂಪ್ರದಾಯಿಕ ತಂತ್ರಗಳನ್ನು ಬಳಸಿದರು. ಅಯೋಧ್ಯೆಗೆ ಬಂದ ನಂತರ ಈ ಪಂಚಲೋಹದ ಬಿಲ್ಲು ಬಾಣ, ದೇವಾಲಯದಲ್ಲಿ ಪ್ರತಿಷ್ಠಾಪನೆಯಾಗಲಿದೆ.
30 ಕೋಟಿ ರೂ ಮೌಲ್ಯದ ರಾಮನ ವಿಗ್ರಹ ಉಡುಗೊರೆ
ಕಳೆದೊಂದು ತಿಂಗಳ ಹಿಂದಷ್ಟೇ ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರೊಬ್ಬರು ದುಬಾರಿ ಉಡುಗೊರೆ ನೀಡಿದ್ದರು. ಸುಮಾರು 30 ಕೋಟಿ ರೂಪಾಯೊ ಮೌಲ್ಯದ ರಾಮನ ಮೂರ್ತಿ ನೀಡಿದ್ದರು. ಇದು ಸಂಪೂರ್ಣ ಚಿನ್ನದಿಂದ ಮಾಡಿದ್ದ ಮೂರ್ತಿಯಾಗಿತ್ತು. 30 ಕೋಟಿ ಮೌಲ್ಯದ ಅಮೂಲ್ಯ ರತ್ನಗಳಿಂದ ಕೂಡಿದ 10 ಅಡಿ ಎತ್ತರ, 8 ಅಡಿ ಅಗಲದ ಶ್ರೀರಾಮನ ವಿಗ್ರಹವನ್ನು ಅನಾಮಧೇಯ ಭಕ್ತರೊಬ್ಬರು ದೇವಾಲಯಕ್ಕೆ ಉಡುಗೊರೆಯಾಗಿ ನೀಡಿದ್ದರು.
ಈ ವಿಗ್ರಹವನ್ನು ಕರ್ನಾಟಕದ ಪ್ರಸಿದ್ಧ ಕಲಾವಿದೆ ಜಯಶ್ರೀ ಫಣೀಶ್ ರಚಿಸಿದ್ದರು. ಈ ವಿಗ್ರಹ ರಚನೆಗೆ ಅವರಿಗೆ ಸುಮಾರು 2,800 ಗಂಟೆಗಳ ಸಮಯ ಹಿಡಿದಿತ್ತಂತೆ. ಈ ವಿಗ್ರಹ ಕೂಡ ಟ್ರಸ್ಟ್ ಗೆ ತಲುಪಿತ್ತು. ಆದ್ರೆ ಅದನ್ನು ನೀಡಿದ ದಾನಿ ಯಾರು ಎಂಬುದನ್ನು ಟ್ರಸ್ಟ್ ತಿಳಿಸಿಲ್ಲ.



Click it and Unblock the Notifications