ಗಣೇಶನನ್ನು ಪೂಜಿಸುವ ಪ್ರಮುಖ ಉದ್ದೇಶ

By Super

ಮಹಾದೇವನಾದ ಶಿವನ ಹಾಗು ಪತ್ನಿ ಪಾರ್ವತಿಯ ಪುತ್ರ ಗಣೇಶ.ಗಣೇಶನ ಸೃಷ್ಟಿಯ ಕಥೆ ತುಂಬಾ ರೋಚಕವಾದದ್ದು.

ಒಮ್ಮೆ ಮಾತೆ ಪಾರ್ವತಿಯು ಸ್ನಾನಕ್ಕಾಗಿ ತರೆಳಿರುತ್ತಾಳೆ.ಯಾರಿಗೂ ಒಳಗೆ ಬಿಡಬಾರದೆಂದು ಶಿವನ ವಾಹನವಾದ ನಂದಿಗೆ ಆಜ್ಞಾಪಿಸಿರುತ್ತಾಳೆ.ಆದರೆ ಶಿವನೇ ಎದುರಿಗೆ ಬಂದಾಗ ನಂದಿಗೆ ಅವನನ್ನು ತಡೆಯಲು ಸಾಧ್ಯವಾಗುವುದಿಲ್ಲ.ಇದರಿಂದ ಬೇಸರಗೊಂಡ ಪಾರ್ವತಿ ತನ್ನ ದೈವೀ ಶಕ್ತಿಯನ್ನು ಉಪಯೋಗಿಸಿ ಮಗನನ್ನ ಸೃಷ್ಟಿಸಿ ಗಣೇಶ ಎಂದು ನಾಮಕರಣ ಮಾಡುತ್ತಾಳೆ.ಒಂದು ದಿನ ಪಾರ್ವತಿ ಸ್ನಾನಕ್ಕೆ ಹೋಗುವಾಗ ಗಣೇಶನಿಗೆ ಒಳಗೆ ಯಾರನ್ನೂ ಬಿಡಬಾರದೆಂದು ಆಜ್ಞಾಪಿಸುತ್ತಳೆ.ಆಗ ಗಣೇಶ ಕಾವಲು ಕಾಯಲು ಶುರು ಮಾಡುತ್ತಾನೆ. ಆಗ ಶಿವನು ಬಂದು ಒಳಗೆ ಪ್ರವೇಶಿಸುವಾಗ ಗಣೇಶ ಅವನನ್ನು ತಡೆಯುತ್ತಾನೆ.

ಇದರಿಂದ ಕೋಪಗೊಂಡ ಶಿವನು ತನ್ನ ತ್ರಿಶೂಲದಿಂದ ಗಣೇಶನ ತಲೆಯನ್ನು ಕತ್ತರಿಸುತ್ತಾನೆ.ಇದನ್ನು ಕಂಡ ಪಾರ್ವತಿ ಅತಿ ದುಃಖಿತಳಾಗಿ ಮಗನನ್ನು ಬದದುಕಿಸಿ ಕೊಡುವುದಾಗಿ ಗೋಗರಿಯುತ್ತಾಳೆ.ಆಗ ಶಿವನು ಉತ್ತರಕ್ಕೆ ತಲೆ ಮಾಡಿ ಮಲಗಿದ ಆನೆಯ ಮುಖವನ್ನು ಕತ್ತರಿಸಿ ತರಿಸಿ ಗಣೇಶನ ದೇಹಕ್ಕೆ ಜೋಡಿಸಿ ಪ್ರಾಣಪ್ರತಿಷ್ಟಾಪನೆ ಮಾಡುತ್ತಾನೆ.ಇದರಿಂದ ಸಮಾದಾನವಾಗದಿರುವ ಪಾರ್ವತಿಯ ಕಂಡು ಶಿವನು ಯಾವುದೇ ಪೂಜೆಗೆ ಮುನ್ನ ಗಣೇಶನ ಪೂಜೆಯನ್ನು ಮೊದಲು ಮಾಡತಕ್ಕದ್ದು ಎಂಬ ವರವನ್ನು ಕೊಡುತ್ತಾನೆ.ಹಾಗೆಯೇ ವಿಘ್ನನಿವಾರಕನಾಗಲೆಂದು ಆಶೀರ್ವಧಿಸುತ್ತಾನೆ.ಯಾರೇ ಆಗಲಿ ಹೊಸ ಕೆಲಸವನ್ನು ಕೈಗೊಂಡಾಗ,ಅದಕ್ಕೆ ಅಂಟಿದ ತೊಡಕು ತೊಂದರೆಗಳೆಲ್ಲಾ ನಿವಾರಣೆಯಾಗಿ ಕೆಲಸ ಯಶಸ್ವಿಗೊಳ್ಳುತ್ತದೆ.ಹೀಗಾಗಿ ವಿಘ್ನನಿವಾರಕನಾದ ಗಣೇಶನನ್ನು ಮೊದಲು ಪೂಜೆ ಮಾಡಬೇಕು.

Reasons Why We Worship Lord Ganesha

ಇನ್ನು ಗಜಾನನನನ್ನು ವಿದ್ಯಾಗಣಪತಿ ಎಂತಲೂ ಕರೆಯುತ್ತಾರೆ.ಮಹರ್ಷಿ ವೇದವ್ಯಾಸರು ಹೇಳಿದಂತೆ ಮಹಾಭಾರತದ ಶ್ಲೋಕಗಳನ್ನು ಗಣೇಶನೇ ಬರೆದದ್ದು.ಗಣೇಶ ಬಹಳಬುದ್ಧಿವಂತ ಎಂದು ಹೇಳಲು ಎಂದು ಕಥೆಯೇ ಇದೆ.

ಒಮ್ಮೆ ನಾರದರು ಕೈಲಾಸಕ್ಕೆ ಹೋಗಿ ಶಿವ ಪಾರ್ವತಿಯರ ಪುತ್ರರಾದ ಗಣೇಶ ಹಾಗೂ ಕಾರ್ತಿಕೇಯನ ನಡುವೆ ಒಂದು ಸ್ಪರ್ಧೆಯನ್ನು ಏರ್ಪಾಡು ಮಾಡುತ್ತಾರೆ.ಯಾರು ಮೂರೂ ಲೋಕವನ್ನು ಮೊದಲು ಸುತ್ತಿ ಬರುತ್ತಾರೆಯೋ ಅವರನ್ನು ಹೆಚ್ಚು ಬುದ್ಧಿವಂತರು ಎಂದು ತೀರ್ಮಾನಿಸಲಾಗುತ್ತದೆ ಎಂದು ಹೇಳುತ್ತಾರೆ.ಆಗ ತಕ್ಷಣವೇ ಕಾರ್ತಿಕೇಯನು ತನ್ನ ವಾಹನವಾದ ನವಿಲನ್ನು ಏರಿ ಮೂರೂ ಲೋಕವನ್ನು ಸುತ್ತಲು ಹೊರಡುತ್ತಾನೆ.ಆದರೆ ಗಣೇಶ ಮಾತ್ರ ತನ್ನ ತಂದೆ-ತಾಯಿ ಕುಳಿತ ಜಾಗಕ್ಕೆ ಮೂರು ಸುತ್ತು ಹಾಕಿ ಬಂದು ನಿಲ್ಲುತ್ತಾನೆ. ಗಣೇಶನು ತನ್ನ ತಂದೆ-ತಾಯಿಯರೇ ತನಗೆ ಮೂರು ಲೋಕವಿದ್ದಂತೆ ಎಂದು ಹೇಳಿ ತನ್ನ ಬುದ್ಧಿನಂತಿಕೆಯನ್ನು ಮೆರೆಯುತ್ತಾನೆ.ಕಾರ್ತಿಕೇಯನು ಮೂರೂ ಲೋಕವನ್ನು ಸುತ್ತಿ ಬಂದರೂ ನಾರದರು ಗಣೇಶನನ್ನೇ ಹೆಚ್ಚು ಬುದ್ಧಿವಂತ ಎಂದು ಘೋಷಿಸುತ್ತಾರೆ. ಆದ್ದರಿಂದ ವಿದ್ಯಾ ಬುದ್ದಿಯನ್ನು ದಯಪಾಲಿಸಲು ಪ್ರತಿಯೊಬ್ಬ ವಿದ್ಯಾರ್ಥಿ(ನಿ)ಯರು ಗಣೇಶನನ್ನು ಪೂಜಿಸುತ್ತಾರೆ.

ಒಮ್ಮೆ ಕುಬೇರನನು ಶಿವಪಾರ್ವತಿಯ ಸನ್ನಿಧಾನಕ್ಕೆ ಬಂದು ತನ್ನ ಅರಮನೆಗೆ ಭೋಜನಕ್ಕೆ ಆಮಂತ್ರಿಸುತ್ತಾನೆ.ಇವನ ಶ್ರೀಮಂತಿಕೆಯ ತೋರಿಕೆಯನ್ನು ಮನಗಂಡು ಅವನ ಆಮಂತ್ರಣವನ್ನು ಸ್ವೀಕರಿಸುವುದಿಲ್ಲ,ಬದಲಾಗಿ ತಮ್ಮ ಪುತ್ರನಾದ ಗಣೇಶನನ್ನು ಕಳುಹಿಸುವುದಾಗಿ ಹೇಳುತ್ತಾರೆ. ನಂತರ ಕುಬೇರನ ಮನೆಯಲ್ಲಿ ಗಣೇಶನ ಮುಂದೆ ಎಲ್ಲಾ ವಿಧವಾದ ಭಕ್ಷ್ಯ ಭೋಜನವನ್ನು ಅರ್ಪಿಸಲಾಗುತ್ತದೆ.ಎಲ್ಲವನ್ನೂ ಸ್ವಾಹ ಮಾಡಿದಮೇಲೂ ಅವನ ಹಸಿವು ಇಂಗುವುದಿಲ್ಲ.ಇದರಿಂದ ಗಲಿಬಲಿಗೊಂಡ ಕುಬೇರನು ಊರಲ್ಲಿದ್ದ ಎಲ್ಲಾ ಆಹಾರ ಪದಾರ್ಥಗಳನ್ನು ತರಿಸುತ್ತನೆ.ಆದರೆ ಏನೂ ಪ್ರಯೋಜನವಾಗುವುದಿಲ್ಲ.ಆಗ ಗಣೇಶನು ತನ್ನ ಹಸಿವನ್ನು ಇಂಗಿಸದಿದ್ದರೆ ಕುಬೇರನನ್ನೇ ತಂದುಬಿಡುವುದಾಗಿ ಹೇಳುತ್ತಾನೆ.ಗಾಬರಿಗೊಂಡ ಕುಬೇರನು ತನನ್ನು ರಕ್ಷಿಸಿಕೊಳಲು ಶಿವನ ಬಳಿಗೆ ಬರುತ್ತಾನೆ. ಆಗ ಶಿವನು ಅವನ ಶ್ರೀಮಂತಿಕೆಯ ಮದವನ್ನು ತೊರೆಯುವುದಕ್ಕೆ ಹೇಳಿ ಹಿಡಿ ಅನ್ನವನ್ನು ಕೊಟ್ಟು ಕಳಿಸುತ್ತಾನೆ. ಆ ಅನ್ನವನ್ನು ಗಣೇಶನು ತಿಂದ ನಂತರ ಅವನ ಹಸಿವು ಇಂಗುತ್ತದೆ.ಹೀಗೆ ಗಣೇಶನು ಮನುಷ್ಯನ ಅಹಂಕಾರ, ಗರ್ವವನ್ನು ಮುರಿದು ನಮ್ರವಿನೀತನನ್ನಾಗಿ ಮಾಡುತ್ತಾನೆ.

ಆದಿ ಪೂಜಿತನಾದ ಗಣೇಶನು ವಿಘ್ನಗಳನ್ನು ನಿವಾರಣೆ ಮಾಡಿ,ವಿದ್ಯಾಬುದ್ದಿಯನ್ನು ದಯಪಾಲಿಸಿ,ಅಭಿವೃದ್ಧಿ,ಯಶಸ್ಸು, ಸಂಪತ್ತನ್ನು ಕೊಡುತ್ತಾನೆ.

X
Desktop Bottom Promotion