ಕಾಗದ ಕತ್ತರಿ ಕಲೆಯಲ್ಲಿ ಶ್ರೀ ಕೃಷ್ಣ

By Pramod Shet

ಶ್ರೀಕೃಷ್ಣನ ಹೆಸರಲ್ಲಿ ಅನುಪಮ ಆನಂದದ ಅನುಭವವಿದೆ. ಅವನ ವ್ಯಕ್ತಿತ್ವವೇ ಒಂದು ವರ್ಣಮಯ ಹೂರಾಶಿ. ಆತ ನಮ್ಮವನೆಂಬ ವ್ಯಾಮೋಹ ನಮ್ಮನ್ನು ಸಹಜವಾಗಿ ಆವರಿಸುತ್ತದೆ. ಕೃಷ್ಣ ತನ್ನ ತುಂಟಾಟದಿಂದ ಮತ್ತಷ್ಟು ಮದ್ದಾಗಿ ಕಾಣುತ್ತಾನೆ, ದನಗಾಹಿ ಬಾಲಕ ಕೊಳಲನ್ನೂದುತ್ತಾ ಬೃಂದಾವನದಲ್ಲಿ ಗೋವುಗಳ, ಗೋಪಾಲರ, ಗೋಪಿಯರ ಮನಗೆದ್ದ, ತನ್ನ ತುಂಟಾಟದಿಂದ ಸರ್ವರಿಗೂ ಪ್ರಿಯನಾದ ಆದುದರಿಂದ "ಕೃಷ್ಣ" ಎಂಬುದು ಸಾರ್ವಕಾಲಿಕ ಸರ್ವಮಾನ್ಯ ವ್ಯಕ್ತಿತ್ವ.

ಶ್ರೀಕೃಷ್ಣನ ಬಾಲ್ಯ, ತುಂಟಾಟ, ಕೊಳಲುವಾದನ, ನವರಸವು ಭಾರತೀಯ ಕಲೆಗಳಲ್ಲಿ ಅದರದೇ ಆದ ಮಹತ್ವಸ್ಥಾನ ಹೊಂದಿದೆ. ಶಿಲ್ಪಕಲೆ, ಸಾಹಿತ್ಯ, ಸಂಗೀತ, ಚಿತ್ರಕಲೆ, ನಾಟ್ಯಕಲೆಗಳಲ್ಲಿ ಶ್ರೀಕೃಷ್ಣನ ಲೀಲೆಗಳು ಶತ-ಶತಮಾನಗಳಿಂದಲೂ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಹೀಗಾಗಿಯೇ ಕಲಾವಿದರು ಶ್ರೀಕೃಷ್ಣ ವರ್ಣನೆಯನ್ನು ಅವರದೇ ಆದ ಮಾಧ್ಯಮ ಮತ್ತು ಶೈಲಿಯಲ್ಲಿ ಅಭಿವ್ಯಕ್ತ ಪಡಿಸುತ್ತಾ ಬಂದಿದ್ದಾರೆ. ಅಂತಹ ಕಲೆಗಳಲ್ಲಿ ಸಾಂಝಿ ಕಾಗದ ಕತ್ತರಿ ಕಲೆಯೂ ಒಂದು. ಸಾಂಝಿಕಲೆಯು ಶ್ರೀಕೃಷ್ಣನ ಲೀಲೆಗಳನ್ನು ಆಧರಿಸಿದ ಕಲೆಯಾಗಿದೆ.

ನಮ್ಮ ಪುರಾತನ ಅಪರೂಪದ ಜನಪದ ಕಲಾಪ್ರಕಾರಗಳಲ್ಲಿ ಸಾಂಝಿ(ಕಾಗದಕತ್ತರಿ) ಕಲೆಯೂ ಒಂದು. ಸಾಂಝಿಕಲಾವಿದ ಎಸ್.ಎಫ್.ಹುಸೇನಿ ಮೈಸೂರು ಇವರು ಶ್ರೀಕೃಷ್ಣ ವಿಭಿನ್ನ, ವಿಶೇಷ ಚಿತ್ರಗಳನ್ನು ಬಹುಕಲಾತ್ಮಕವಾಗಿ ಕಾಗದದಲ್ಲಿ ಕತ್ತರಿ ಹಾಗು ಕಟರ್ ಸಹಾಯದಿಂದ ಸೂಕ್ಷ್ಮವಾಗಿ ರಚಿಸಿದ್ದಾರೆ. ಬನ್ನಿ ಈ ಕಲೆಯ ಸೊಬಗನ್ನು ನೋಡೋಣ:

ಪುರಾತನವಾದ ಕಲೆ

ಪುರಾತನವಾದ ಕಲೆ

ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಸಾಂಝಿ ಕಲೆ ದೇಶ ವಿದೇಶಗಳಿಗೆ ವ್ಯಾಪಿಸಿದ್ದು, ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಾರೆ. ಸಾಂಝಿ ಕಲೆಯು ನಮ್ಮದೇಶದಲ್ಲಿ ಹಲವಾರು ಶತಮಾನಗಳ ಹಿಂದಿನಿಂದಲೂ ನಮ್ಮ ಸಂಪ್ರದಾಯದಲ್ಲಿ ಬಳಕೆಯಲ್ಲಿದೆ. ಉತ್ತರಪ್ರದೇಶದಲ್ಲಿ ರಂಗೋಲಿಯನ್ನು ಸಾಂಝಿ ಎನ್ನುತ್ತಾರೆ. ಸಾಂಝಿ ಎನ್ನುವುದರ ಮೂಲ ಅರ್ಥ ಅಲಂಕಾರ, ಸಿಂಗಾರ. "ಮಥುರ ಸಾಂಝಿಕಲೆಯ ತವರು".

ವಿಶೇಷ ಕಲೆ

ವಿಶೇಷ ಕಲೆ

ಶ್ರೀ ಕೃಷ್ಣನ ಜನ್ಮಸ್ಥಳವೆಂದು ಭಾರತೀಯರು ಪೂಜಿಸುವ ಸ್ಥಳದಲ್ಲಿ ಸಾಂಝಿಕಲೆಯನ್ನು ಕೃಷ್ಣಪರಮಾತ್ಮನ ಲೀಲೆ, ಪವಾಡ, ಗೀತೋಪದೇಶ, ಹೆಚ್ಚಾಗಿ ರಾಧಾಕೃಷ್ಣರ ರಾಸಲೀಲೆ ಮುಂತಾದವುಗಳನ್ನು ತಮ್ಮ ಕಲ್ಪನೆಗೆ ತಕ್ಕಂತೆ ಚಿತ್ರಗಳನ್ನು ರೂಪಿಸಿ ಅವುಗಳನ್ನು ವಿನ್ಯಾಸ ರಚನೆಗೆ, ರಂಗೋಲಿ ವಿನ್ಯಾಸಗಳಿಗಾಗಿ ಒತ್ತುಕಲೆಯಾಗಿ ಸಾಂಝಿಕಲೆಯನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು.

ಸಾಂಝಿ ಕಲೆ ಮತ್ತು ಕೃಷ್ಣ

ಸಾಂಝಿ ಕಲೆ ಮತ್ತು ಕೃಷ್ಣ

ಶ್ರೀ ಕೃಷ್ಣನ ಜನ್ಮಸ್ಥಳವೆಂದು ಭಾರತೀಯರು ಪೂಜಿಸುವ ಸ್ಥಳದಲ್ಲಿ ಸಾಂಝಿಕಲೆಯನ್ನು ಕೃಷ್ಣಪರಮಾತ್ಮನ ಲೀಲೆ, ಪವಾಡ, ಗೀತೋಪದೇಶ, ಹೆಚ್ಚಾಗಿ ರಾಧಾಕೃಷ್ಣರ ರಾಸಲೀಲೆ ಮುಂತಾದವುಗಳನ್ನು ತಮ್ಮ ಕಲ್ಪನೆಗೆ ತಕ್ಕಂತೆ ಚಿತ್ರಗಳನ್ನು ರೂಪಿಸಿ ಅವುಗಳನ್ನು ವಿನ್ಯಾಸ ರಚನೆಗೆ, ರಂಗೋಲಿ ವಿನ್ಯಾಸಗಳಿಗಾಗಿ ಒತ್ತುಕಲೆಯಾಗಿ ಸಾಂಝಿಕಲೆಯನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು.

ದೇವಸ್ಥಾನ ಕಲಾಸಾಂಝಿ

ದೇವಸ್ಥಾನ ಕಲಾಸಾಂಝಿ

ಕಾಲ ಕ್ರಮೇಣ ಆನೇಕ ಕಲಾ ಪ್ರವೀಣರು ವಿವಿಧ ದೇವಾನುದೇವತೆಗಳು, ಹೂಬಳ್ಳಿ, ಪ್ರಕೃತಿಯಂತಹ ಚಿತ್ರಗಳನ್ನು ರಚಿಸಿ ದೇವಸ್ಥಾನ, ರಥ, ರಥಬೀದಿ, ಪಲ್ಲಕ್ಕಿಅಲಂಕಾರ, ದೇವರಉತ್ಸವಕ್ಕೆ ಬಳಸುತ್ತಿದ್ದರಿಂದ ಇದನ್ನು "ದೇವಸ್ಥಾನ ಕಲಾಸಾಂಝಿ" ಎಂದು ಕರೆಯಲಾಗುತಿತ್ತು.

ಸಾಂಝಿ ಕಲೆ ಒಂದು ಪ್ರತ್ಯೇಕವಾದ ಕಲೆ

ಸಾಂಝಿ ಕಲೆ ಒಂದು ಪ್ರತ್ಯೇಕವಾದ ಕಲೆ

ಕಾಗದದಲ್ಲಿ ಒಳ್ಳೆಯ ಚಿತ್ರಗಳನ್ನು ಕತ್ತರಿಸಿ ನೆಲದ ಮೇಲೆ ಹರಡಿ ಅವುಗಳ ಮೇಲೆ ರಂಗೋಲಿ ಪುಡಿ, ಹೂಗಳನ್ನು ತುಂಬಿ ಕಾಗದತೆಗೆದಾಗ ಬಗೆಬಗೆಯ ಅಲಂಕಾರಿಕ ಚಿತ್ರಗಳು ಮೂಡುತ್ತಿದ್ದದ್ದು ಗೊತ್ತಾಯಿತು. ನಂತರ ತಮಗೆ ಬೇಕಾದ ಹಾಗೆ ಕಾಗದದ ಅಚ್ಚುಗಳನ್ನು ತಯಾರಿಸಿ ಅದನ್ನು ಒಂದು ಪರಿಪೂರ್ಣವಾದ ಕಲೆಯಾಗಿಸುವಷ್ಟು ಪರಿಣಿತಿಯನ್ನು ನಮ್ಮ ಹಿಂದಿನವರು ಪಡೆದಿದ್ದರು. ಹೀಗಾಗಿ ಇಂದೊದು ಪ್ರತ್ಯೇಕ ಕಲೆಯಾಗಿ ಬೆಳೆಯಿತು.

ಕಣ್ಮರೆಯಾಗುತ್ತಿರುವ ಕಲೆ!

ಕಣ್ಮರೆಯಾಗುತ್ತಿರುವ ಕಲೆ!

ಆಧುನಿಕ ಜನರ ಜೀವನಶೈಲಿಬದಲಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಈ ವಿಶೇಷಕಲೆ ಇತ್ತೀಚೆಗೆ ಬಳಕೆಯಾಗದೆ ನಿಧಾನಗತಿಯಲ್ಲಿ ಜನಮಾನಸದಿಂದ ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಅನೇಕ ಕಲಾವಿದರು ಸಾಂಝಿಕಲೆಯನ್ನು ಉಳಿಸುವ, ಜನಪ್ರಿಯಗೊಳಿಸುವ ಕೆಲಸವನ್ನು ದೇಶದಹಲವೆಡೆ ನೆಡೆಸುತ್ತಿದ್ದಾರೆ.

 ಎಸ್.ಎಫ್.ಹುಸೇನಿ -ಸಾಂಝಿ ಕಲೆಗಾರ

ಎಸ್.ಎಫ್.ಹುಸೇನಿ -ಸಾಂಝಿ ಕಲೆಗಾರ

ಅಂತಹವರಲ್ಲಿ ಕರ್ನಾಟಕದ ಕಲಾವಿದ ಎಸ್.ಎಫ್.ಹುಸೇನಿ ಮೈಸೂರು ಸಹ ಒಬ್ಬರು. ಈ ಕಲೆಯ ಪ್ರಚಾರಕ್ಕೆ ರಾಜ್ಯಾದ್ಯಂತ ಸಂಚರಿಸುತ್ತಾ 19 ಜಿಲ್ಲೆಗಳಲ್ಲಿ ಆಸಕ್ತ ಮಕ್ಕಳಿಗೆ, ಮಹಿಳೆಯರಿಗೆ, ಮತ್ತು ಆಸಕ್ತರಿಗೆ ಸಾಂಝಿ ಕಲೆ ಕಾರ್ಯಾಗಾರ ತರಬೇತಿ ಪ್ರದರ್ಶನವನ್ನು ನಡೆಸುತ್ತಿದ್ದಾರೆ. ಈ ಕಲೆಯಲ್ಲಿ ಹುಸೇನಿಯವರ ವಿಶೇಷ ಸರಣಿ ಚಿತ್ರಗಳಾದ ಸಾಂಝಿಗಣಪ, ಸಾಂಝಿರಂಗೋಲಿ, ಸಾಂಝಿಮಾಸ್ಕ್, ಸಾಂಝಿಶಿವ, ಸಂಪ್ರಾದಾಯಕ, ಆಧುನಿಕ, ಜನಪದರೀತಿಯಲ್ಲಿ ಅನೇಕ ಕಲಾಕೃತಿಗಳನ್ನು ರಚಿಸಿ ಆಸಕ್ತರಿಗೆ (9845153277) ಈ ಕಲೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದಾರೆ. ಸಾಂಝಿ ಎಲ್ಲಾ ಜನಪದಕಲೆಗಳ ಹಾಗೆ ಕಾಲಕ್ಕೆ ತಕ್ಕಂತೆ ಮತ್ತು ತನ್ನ ಆಂತರಿಕ ಸಾಮಥ್ರ್ಯದಿಂದ ವಿವಿಧ ರೂಪ ತಳೆದಿದೆ ಹಾಗೂ ತಳೆಯುತ್ತಿದೆ.

X
Desktop Bottom Promotion