ಚುಂಬನದ ಬಗ್ಗೆ ಕೆಲ ಇಂಟರೆಸ್ಟಿಂಗ್ ಅಂಶಗಳು

By Super

ಸಂಬಂಧಗಳಲ್ಲಿ ಹಲವಾರು ಘಟ್ಟಗಳಿರುತ್ತವೆ. ಅದರಲ್ಲೂ ಗಂಡ- ಹೆಂಡತಿ, ಪ್ರೇಮಿಗಳ ನಡುವೆ ಬೆಸೆಯುವ ಸಂಬಂಧ ತುಂಬಾ ವಿಶೇಷವಾದದ್ದು ಮತ್ತು ಅನನ್ಯವಾದದ್ದು. ಮಾನಸಿಕ ಸಂಬಂಧದಿಂದ ಹಿಡಿದು ಪರಸ್ಪರ ದೈಹಿಕ ಒಪ್ಪಿಗೆಯವರೆಗೆ ಸಾಕಷ್ಟು ಹೊಂದಾಣಿಕೆಯನ್ನು ಹೊಂದಿರಬೇಕಾಗುತ್ತದೆ.

ಈ ಹೊಂದಾಣಿಕೆಯಿಂದಾಗಿ ಉಂಟಾಗುವ ಪ್ರಥಮ ಚುಂಬನ, ಪ್ರಥಮ ಮಿಲನ, ಇವೆಲ್ಲವೂ ಅತ್ಯಂತ ರೋಮಾಂಚನವಾದದ್ದು! ನಿಮ್ಮ ಸಂಗಾತಿಗೆ ನೀವು ಕಿಸ್ ಮಾಡುವಾಗ ಅಲ್ಲೇನೋ ವಿಶೇಷವಾದ ಆಕರ್ಷಣೆ ಉಂಟಾಗುವುದು ಸಹಜ ತಾನೆ? ಪರಸ್ಪರ 'ಚುಂಬನ' ಎನ್ನುವುದು ಸಂಬಂಧದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.

ಚುಂಬನದಿಂದ ಹೊಸತೊಂದು ಥ್ರಿಲ್ ಉಂಟಾಗುತ್ತದೆ. ಹಾಗೂ ಬೇರೆಯವರು ನಿಮ್ಮ ಜೀವನದಲ್ಲಿ ವಿಶೇಷ ಎನ್ನಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎನ್ನುವ ವಿಷಯ ಸಾಮಾನ್ಯ. ಆದರೆ ಇದಕ್ಕೂ ಮೀರಿ ಚುಂಬನ ವಿನಿಮಯದಿಂದ ಆರೋಗ್ಯ ಲಾಭಗಳೂ ಕೂಡ ಇವೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಅಲವೇ? ಆದರೆ ಇದು ಖಂಡಿತವಾಗಿಯೂ ನಿಜ. ನಿಮ್ಮ ಪ್ರೀತಿಪಾತ್ರರೊಂದಿಗೆ ಚುಂಬನ ಕ್ರಿಯೆ ನಡೆಸುವುದರಿಂದ ಅಜೀರ್ಣದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು! ಇಷ್ಟೇ ಅಲ್ಲ ಚುಂಬನ ಇನ್ನೂ ಹತ್ತಾರು ಆರೋಗ್ಯಕರ ಗುಣಗಳನ್ನು ಹೊಂದಿದೆ! ಆ ಗುಣಗಳತ್ತ ನೋಡೋಣವೇ?

1. ವಿಶ್ರಾಂತಿ ಮತ್ತು ಆರಾಮ

1. ವಿಶ್ರಾಂತಿ ಮತ್ತು ಆರಾಮ

ನೀವು ಮುತ್ತಿಡುವುದರಿಂದ ನಿಮ್ಮ ದೇಹದಲ್ಲಿ ಹಿತಾನುಭವದ ರಾಸಾಯನಿಕಗಳು ಸೃಷ್ಟಿಯಾಗಿ ನಿಮ್ಮ ದೇಹಕ್ಕೆ ವಿಶ್ರಾಂತಿಯ ಅನುಭವ ಸಿಗುವುದು ಎಂಬ ಅಂಶ ನಿಮಗೆ ಗೊತ್ತೇ? ಸಂಶೋಧನೆಯ ಪ್ರಕಾರ. ಚುಂಬನ, ನಮ್ಮ ದೇಹದಲ್ಲಿ ಸಂತೋಷವನ್ನು ಉಂಟು ಮಾಡುವ ನೈಸರ್ಗಿಕ ರಾಸಾಯನಿಕ endorphinsನ ಮಟ್ಟವನ್ನು ಹೆಚ್ಚಿಸುತ್ತದೆ. ಪ್ರಣಯ ಬಾಂಧವ್ಯದ ಭಾವನೆಗಳನ್ನು ಹೆಚ್ಚಿಸುವ ಡೊಪಾಮೈನ್ ಮಟ್ಟವನ್ನೂ ಅಧಿಕಗೊಳಿಸುತ್ತದೆ.

2. ಜೀವಮಾನದ ಚುಂಬನ (ಕಿಸ್ ಆಫ್ ಎ ಲೈಫ್ ಟೈಮ್)

2. ಜೀವಮಾನದ ಚುಂಬನ (ಕಿಸ್ ಆಫ್ ಎ ಲೈಫ್ ಟೈಮ್)

ಬೆಳಗಿನ ಹೊತ್ತು ಮನೆಯಿಂದ ಹೊರಡುವಾಗ ಅಥವಾ ಯಾವುದಾದರೂ ವಿಶೇಷ ದಿನದಂದು ಕೆನ್ನೆಯ ಮೇಲೆ ಅಥವಾ ಹಣೆಯ ಮೇಲೆ ಕೊಡುವ ಚುಂಬನಗಳು ಸಾಮಾನ್ಯ ಆದರೆ ಸಾಮಾನ್ಯವಾಗಿ 20-160 ನಿಮಿಷಗಳ ಕಾಲ ನಿರಂತರವಾಗಿ ಚುಂಬನ ವಿನಿಮಯ ಮಾಡಿಕೊಳ್ಳುವವರಿದ್ದಾರೆ!

3. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಧುರ ಚುಂಬನ!

3. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಧುರ ಚುಂಬನ!

ದೇಹದಲ್ಲಿ ವೈರಸ್ ಆಕ್ರಮಣ ಮಾಡಿದರೆ ನಿಮ್ಮ ರೋಗ ನಿರೋಧಕ ಶಕ್ತಿಯಿಂದ ಅದರಿಂದ ಸಮಸ್ಯೆಗಳಾಗದಂತೆ ತಡೆಯಬಹುದು. ಈ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಆ ಚುಂಬನದಲ್ಲಿದೆ! ಶೀತ ಅಥವಾ ಜ್ವರದಂತಹ ಖಾಯಿಲೆಗಳಿಂದ ನೀವು ದೂರವಿರುವಂತೆ ನಿಮ್ಮನ್ನು ನೀವು ಪ್ರತಿರಕ್ಷಣೆ ಮಾಡಿಕೊಳ್ಳುವುದಕ್ಕೆ ಸಹಾಯ ನಿಮ್ಮ ರೋಮಾಂಚನಕಾರಿ ಚುಂಬನದ ವಿನಿಮಯ !

4. ಜಗಳ ಮತ್ತು ಚುಂಬನ

4. ಜಗಳ ಮತ್ತು ಚುಂಬನ

ಸಾಮಾನ್ಯವಾಗಿ ಹಾಲಿವುಡ್ ಸಿನಿಮಾಗಳಲ್ಲಿ ನೋಡಿರುತ್ತೇವೆ ಸಂಗಾತಿಗಳು ಪರಸ್ಪರ ಮುನಿಸಿಕೊಂಡಿದ್ದರೂ ಅದರ ಕೊನೆಯಲ್ಲಿ ಒಬ್ಬರನ್ನೊಬ್ಬರು ದೀರ್ಘವಾಗಿ ಚುಂಬಿಸುತ್ತಾರೆ. ಹಾಗೆಯೇ ಪ್ರತಿಯೊಬ್ಬ ಹುಡುಗ-ಹುಡುಗಿ ಅವರ ಜಗಳಕ್ಕೆ ಪರಸ್ಪರ ಚುಂಬಿಸುವಿದರ ಮೂಲಕ ಪರದೆಯನ್ನೆಳೆಯಬಹುದು.

5. ಮೊದಲು ಮತ್ತು ನಂತರ

5. ಮೊದಲು ಮತ್ತು ನಂತರ

ಮಹಿಳೆಯರು ಸಂಗಾತಿಯ ಜೊತೆಗೆ ಲೈಂಗಿಕ ಸಂಬಂಧವನ್ನು ಆರಂಭಿಸಿದ ನಂತರವಷ್ಟೇ ಸಂಗಾತಿಯನ್ನು ಮುದ್ದಾಡಲು ಬಯಸುತ್ತಾರೆ. ಅದರಲ್ಲೂ ವಿಶೇಷವಾಗಿ ಲೈಂಗಿಕ ಕ್ರಿಯೆಯ ನಂತರ ಚುಂಬನವನ್ನು ನೀಡಲು ಹೆಂಗಸರು ಹೆಚ್ಚು ಇಷ್ಟಪಡುತ್ತಾರೆ. ಆದರೆ ಬಹಳಷ್ಟು ಪುರುಷರು ಹೆಂಡತಿಯ ಈ ಆಸೆಯನ್ನು ಗಮನಿಸುವುದೇ ಇಲ್ಲ.

6. ಪುರುಷರು ಮತ್ತು ಚುಂಬನ

6. ಪುರುಷರು ಮತ್ತು ಚುಂಬನ

ಮಹಿಳೆಯರು ಸಂಬಂಧಗಳ ಪಾಲುದಾರಿಕೆಯ ಮೌಲ್ಯಮಾಪನವನ್ನು ಹೆಚ್ಚಿಸುವುದಕ್ಕಾಗಿ ಚುಂಬನವನ್ನು ಬಳಸಿದರೆ ಪುರುಷರು ಸರಳ ಉದ್ದೇಶಕ್ಕಾಗಿ ಮಾತ್ರ ಬಳಸುತ್ತಾರೆ. ಪುರುಷರು, ಲೈಂಗಿಕತೆಯ ಸಾಧ್ಯತೆಯನ್ನು ಹೆಚ್ಚಿಸುವುದಕ್ಕಾಗಿ ಚುಂಬನವನ್ನು ಬಳಸುತ್ತಾರೆ. ಆದರೆ ಎಲ್ಲಾ ಪುರುಷರೂ ಚುಂಬನವನ್ನು ಮಾಡುವುದು ಲೈಂಗಿಕತೆಗಾಗಿ ಎಂದೇ ಹೇಳಲಾಗುವುದಿಲ್ಲ.

7. ಮಹಿಳೆ ಮತ್ತು ಚುಂಬನ

7. ಮಹಿಳೆ ಮತ್ತು ಚುಂಬನ

ಚುಂಬನ ಇತರ ವ್ಯಕ್ತಿಯೊಂದಿಗೆ ತಮ್ಮ ಹೊಂದಾಣಿಕೆಯ ಬಗ್ಗೆ ಬಹಳಷ್ಟು ತಿಳಿಸುತ್ತದೆ. ಮಹಿಳೆಯರ ಮುತ್ತಿಡುವ ತೀವ್ರತೆ ಮತ್ತು ಆವರ್ತನದ ಮೂಲಕ ಒಬ್ಬ ವ್ಯಕ್ತಿಯ ಅಲ್ಪಾವಧಿಯ ಸಂಬಂಧ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಚುಂಬನವನ್ನು ಬಳಸುತ್ತಾರೆ. ಮಹಿಳೆಯರು ಅಲ್ಪಾವಧಿಯ ಸಂಬಂಧ ಸುಳಿವು ಇದ್ದರೂ ಕೂಡ ಆ ಸಂಬಂಧವನ್ನುಬೆಳೆಯಲು ಕೂಡ ಚುಂಬನಕ್ಕೆ ಸಹಕಾರ ನೀಡುತ್ತಾರೆ.

8. ದ್ರವ- ವಿನಿಮಯ

8. ದ್ರವ- ವಿನಿಮಯ

ಚುಂಬನ ಮಾಡಿದಾಗ ಇಬ್ಬರ ನಡುವೆ ಪರಸ್ಪರ ಲಾಲಾರಸದ ವಿನಿಮಯವಾಗುವುದಂತೂ ನಿಸ್ಸಂಶಯ. ನಿಮ್ಮ ಉಸಿರಾಟಕ್ಕೆ ಕಾರಣವಾದ ಲಾಲಾರಸದಲ್ಲಿರುವ ಖನಿಜಗಳು, ಲವಣ ಹಾಗೂ ಇತರ ವಸ್ತುಗಳು ಮಹಿಳೆಯರಲ್ಲಿ ಲೈಂಗಿಕತೆಯತ್ತ ಸೆಳೆಯುವಂತೆ ಮಾಡುತ್ತದೆ ಎಂಬುದು ನಿಮಗೆ ಗೊತ್ತೆ?

9. ಮುಖದ ಕೆಲಸ

9. ಮುಖದ ಕೆಲಸ

ನಾವು ನಮ್ಮ ದೇಹದ ದೃಢತೆಗಾಗಿ ಸಾಕಷ್ಟು ವ್ಯಾಯಾಮವನ್ನು ಮಾಡುತ್ತೇವೆ. ಆದರೆ ಮುಖದ ಸ್ನಾಯುಗಳಿಗೆ ಸಂಬಂಧಪಟ್ಟ ವ್ಯಾಯಾಮಗಳಲ್ಲಿ ನಮಗಿರುವ ಆಸಕ್ತಿ ಅಷ್ಟಕ್ಕಷ್ಟೇ! ನಿರಂತರ ಚುಂಬನ ಮುಖದ ಸ್ನಾಯುಗಳ ವ್ಯಾಯಾಮಕ್ಕೆ ಸಹಕಾರಿ. ನಮ್ಮ ಗಲ್ಲ ಸ್ಥಿರವಾಗಿರುತ್ತವೆ. ಆದರೆ ಚುಂಬನದಿಂದಾಗಿ ಸುಮಾರು 30 ವಿಧದ ಮುಖದ ಸ್ನಾಯು ವ್ಯಾಯಾಮವನ್ನು ಮಾಡಿದಂತಾಗುತ್ತದೆ!

10. ಬಂಧ

10. ಬಂಧ

ಚುಂಬನ ಎನ್ನುವುದು ವ್ಯಕ್ತಿಗಳಲ್ಲಿ ಪರಸ್ಪರ ಭಾವನಾತ್ಮಕ ಸಂಬಂಧವನ್ನು ಏರ್ಪಡಿಸುವುದರಲ್ಲಿ ಸಂಶಯವಿಲ್ಲ. ಕಡಿಮೆ ಅವಧಿಯ ಸಂಬಂಧವನ್ನು ಹೊಂದಿರುವ ಲೈಂಗಿಕತೆಯ ಸಂತರ ಸಂಬಂಧವನ್ನು ಬಿಡಬೇಕೆಂದಿರುವ ಪುರುಷರಲ್ಲಿಯೂ ಸಹ ಭಾವನಾತ್ಮಕತೆಯನ್ನು ಹುಟ್ಟುಹಾಕಬಲ್ಲದು ನಿಮ್ಮಿಬ್ಬರ ಪ್ರೀತಿಯ ಚುಂಬನ.

11. ಆರೋಗ್ಯಕರವಾದ ಚುಂಬನ

11. ಆರೋಗ್ಯಕರವಾದ ಚುಂಬನ

ಒಬ್ಬ ವ್ಯಕ್ತಿಯ ಬಾಯಿಯ ವಾಸನೆ ಮತ್ತು ರುಚಿ ಆರೋಗ್ಯಕ್ಕೆ ಸಂಬಂಧಿಸಿದ ವಿಷಯವಾಗಬಹುದು. ಮಹಿಳೆಯೊಬ್ಬಳು ಒಬ್ಬ ಆರೋಗ್ಯಕರ ಸಂಗತಿಯನ್ನು ಕಂಡುಕೊಂಡರೆ ಆಕೆಯ ಮುಂದಿನ ಮಕ್ಕಳ/ಸಂತತಿ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಹಾಗೆಯೇ ಪುರುಷನೂ ಕೂಡ ಆರೋಗ್ಯಪೂರ್ಣ ಮಹಿಳೆಯ ಜೊತೆ ಸಂಬಂಧ ಬೆಳೆಸುವುದರಿಂದ ತನ್ನ ಸಂತತಿಯನ್ನು ಆರೋಗ್ಯಕರವಾಗಿ ಬೆಳೆಸಬಲ್ಲ.

12. ಬರ್ನಿಂಗ್ ಫ್ಯಾಟ್

12. ಬರ್ನಿಂಗ್ ಫ್ಯಾಟ್

ಹಲವಾರು ದೈಹಿಕ ಚಟುವಟಿಕೆಗಳಂತೆ, ಚುಂಬನ ಕೂಡ ಕ್ಯಾಲರಿ ಕರಗಿಸಬಲ್ಲ ಕ್ರಿಯೆ. ಒಂದು ತ್ವರಿತ ರೊಮ್ಯಾಟಿಂಕ್ 2-3 ಕ್ಯಾಲರಿಯನ್ನು ಕರಗಿಸಿದರೆ, ಭಾವೋದ್ರೇಕದ ಚುಂಬನ 5 ಕ್ಯಾಲರಿಗಳಷ್ಟು ಕರಗಿಸಬಲ್ಲದು. ಅಂದರೆ ದೀರ್ಘವಾದ ಹಾಗೂ ಉದ್ರೇಕಕಾರಿಯಾದ ಚುಂಬನ ಹೆಚ್ಚು ಹೆಚ್ಚು ಕ್ಯಾಲೋರಿಯನ್ನು ಕರಗಿಸಬಲ್ಲದು!

13. ಮೇಕ್ ಆರ್ ಬ್ರೇಕ್ (ಬೆಸೆ ಅಥವಾ ಮುರಿ)

13. ಮೇಕ್ ಆರ್ ಬ್ರೇಕ್ (ಬೆಸೆ ಅಥವಾ ಮುರಿ)

ಚುಂಬನ ಎನ್ನುವುದು 'ಸಂಬಂಧ ಬೆಸುಗೆಯನ್ನು ಅಳೆಯುವ' ಉತ್ತಮವಾದ ಸಾಧನ. ನಾವಿಬ್ಬರೂ ಕೂಡಿ ಬಾಳಬಹುದು ಎನ್ನುವಂತಹ ಸಂಗಾತಿಯನ್ನು ಚುಂಬನವೇ ಆಯ್ಕೆ ಮಾಡಿಕೊಡಬಲ್ಲದು. ಆದ್ದರಿಂದಲೇ ಮೊದಲ ಚುಂಬನವೇ ಸಂಬಂಧಗಳು ಮುಂದೆ ಬೆಸೆಯಬಲ್ಲದೋ ಇಲ್ಲವೂ ಎನ್ನುವುದನ್ನು ತೀರ್ಮಾನಿಸಿಬಿಡುತ್ತದೆ. ಇಬ್ಬರ ನಡುವಿನ ಹೊಂದಾಣಿಕೆಯ ಸಾಧ್ಯ-ಅಸಾಧ್ಯತೆಗಳು ತಿಳಿದುಬಿಡುತ್ತವೆ.

14. ಹಾರ್ಮೋನ್ ಗಳ ಭದ್ರತೆ

14. ಹಾರ್ಮೋನ್ ಗಳ ಭದ್ರತೆ

ತೆರೆದ ಬಾಯಿ ಚುಂಬನದಿಂದಾಗಿ ಪುರುಷನಿಂದ ಮಹಿಳೆಯರಿಗೆ ಹಾರ್ಮೋನ್ ಗಳು ವರ್ಗಾವಣೆಯಾಗುತ್ತದೆ ಎಂದು ಊಹಿಸಿದ್ದೀರೆ? ಚುಂಬಿಸಿದಾಗ ಮಹಿಳೆಯರಲ್ಲಿ ಪುರುಷರ ಟೆಸ್ಟೋಸ್ಟಿರೋನ್ (testosterone) ಎಂಬ ಹಾರ್ಮೋನ್ ಸೇರುತ್ತದೆ. ಇದು ಮಹಿಳೆಯರಲ್ಲಿ ಲೈಂಗಿಕತೆಯ ಬಗ್ಗೆ ಆಸಕ್ತಿಯನ್ನು ಮೂಡಿಸುತ್ತದೆ.

ಚುಂಬನದ ಬಗ್ಗೆ ಹೇಳುವುದಕ್ಕೆ ಸ್ವಲ್ಪ ಮುಜುಗರವಾಗಬಹುದು. ಆದರೆ ಆ ಬಿಸಿಯಪ್ಪುಗೆಯ ಚುಂಬನದಿಂದ ಇಷ್ಟೊಂದು ಪ್ರಯೋಜನಗಳೂ ಇವೆಯೆಂದಾದರೆ ನಿಮ್ಮ ಸಂಗಾತಿಯೊಂದಿಗೆ ಈಗಲೇ ಯಾಕೆ ಚುಂಬಿಸಬಾರದು!?

X
Desktop Bottom Promotion