Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ದೇವತೆಗಳು ಸಂಚರಿಸುವ ಈ ವಾಹನಗಳ ಸಂಕೇತವೇನು?
ಹಿಂದೂ ಧರ್ಮದಲ್ಲಿ ಪ್ರಾಣಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಿಂದೂ ಧರ್ಮದಲ್ಲಿ ನಾವು ಹಸುವನ್ನು ಪೂಜಿಸುತ್ತೇವೆ. ಏಕೆಂದರೆ ಹಸುವಿನ ಒಂದೊಂದು ಭಾಗದಲ್ಲಿಯೂ ದೇವತೆಗಳು ನೆಲಿಸಿದ್ದಾರೆ ಎಂಬ ನಂಬಿಕೆಯಿದೆ ಆದ್ದರಿಂದ ಗೋಮಾತೆಯನ್ನು ತಾಯಿಯ ಸಮಾನವಾಗಿ ನೋಡುತ್ತೇವೆ. ಇನ್ನೂ ಪ್ರತಿಯೊಂದು ದೇವಾಲಯಗಳಲ್ಲಿ ಆ ದೇವರಿಗೆ ತುಂಬಾ ಆಪ್ತವಾದ ಪ್ರಾಣಿ-ಪಕ್ಷಿಯ ಶಿಲ್ಪವಿರುತ್ತದೆ. ಉದಾರಣೆಗೆ ಗಣಪನ ಮೂರ್ತಿಯ ಪಕ್ಕ ಮೂಸಿಕ ಇರುತ್ತದೆ, ಶಿವನ ಪಕ್ಕ ನಂದಿ.
ದೇವರು ತಮ್ಮವಾಹನವಾಗಿ ಪ್ರಾಣಿ, ಪ್ಕಷಿಗಳನ್ನು ಬಳಸುತ್ತಿದ್ದರು , ಈ ಕುರಿತಂತೆ ಅನೇಕ ಕಥೆಗಳು ಪುರಾಣದಲ್ಲಿದೆ.
ಇಲ್ಲಿ ನಾವು ಕೆಲವು ಪ್ರಾಣಿ-ಪಕ್ಷಿಗಳ ಬಗ್ಗೆ ಹೇಳಿದ್ದೇವೆ. ಈ ಪ್ರಾಣಿಗಳನ್ನು ದೇವತೆಗಳು ತಮ್ಮ ವಾಹನವಾಗಿ ಬಳಸಿದ್ದಿರ ಹಿಂದಿನ ಸಂಕೇತವೇನು ಎಂದು ನೋಡೋಣ ಬನ್ನಿ:

ಇಲಿ
ಮೂಸಿಕ ಗಣಪನ ವಾಹನವಾಗಿದ್ದು ಶತ್ರುಗಳನ್ನು ನಾಶ ಪಡಿಸುವುದರ ಸಂಕೇತ ಈ ಪ್ರಾಣಿ ಎಂದು ಪುರಾಣದಲ್ಲಿ ಹೇಳಲಾಗಿದೆ.

ನಂದಿ
ಶಿವನ ವಾಹನ ನಂದಿಯಾಗಿದೆ. ಪ್ರತಿಯೊಂದು ಶಿವ ದೇವಾಲಯದಲ್ಲಿ ನಂದಿಯ ಶಿಲ್ಪ ಇರುತ್ತದೆ. ಶಿವ ಹಾಗೂ ನಂದಿಗೆ ಸಂಬಂಧಿಸಿದ ಅನೇಕ ಕಥೆಗಳು ಪುರಾಣದಲ್ಲಿದೆ. ನಂದಿ ಸಂತಾನ ಭಾಗ್ಯದ ಸಂಕೇತವಾಗಿದೆ.

ಹುಲಿ
ಹುಲಿ ದುರ್ಗಾಮಾತೆಯ ಹಾಗೂ ಅಯ್ಯಪ್ಪ ಸ್ವಾಮಿಯ ವಾಹನವಾಗಿದೆ. ದುರ್ಗಾಮಾತೆ ದುಷ್ಟರ ಸಂಹಾರಕ್ಕೆ ಹುಲಿಯ ಮೇಲೆ ಬರುತ್ತಿದ್ದಳು, ಅಯ್ಯಪ್ಪ ಸ್ವಾಮಿ ಹುಲಿಯ ಹಾಲನ್ನು ತನ್ನ ಮಲತಾಯಿಗೆ ಕೊಡಲು ಹುಲಿಯ ಮೇಲೆ ಬಂದ ಎಂಬ ಕಥೆ ಇದೆ. ಹುಲಿ ಕರುಣೆ, ಕೋಪ, ಪ್ರತಿಷ್ಠೆಯ ಸಂಕೇತವಾಗಿದೆ.

ನವಿಲು
ನವಿಲು ಸರಸ್ವತಿ ಹಾಗೂ ಸುಬ್ರಮಣ್ಣಯ ಸ್ವಾಮಿಯ ವಾಹನವಾಗಿದೆ. ನವಿಲು ಬಾಹ್ಯ ಸೌಂದರ್ಯಕ್ಕಿಂತ, ಆಂತರಿಕ ಸೌಂದರ್ಯ ಅವಶ್ಯಕ ಅನ್ನುವುದರ ಸಂಕೇತವಾಗಿದೆ.

ಗೂಬೆ
ಗೂಬೆ ಲಕ್ಷ್ಮಿ ದೇವಿಯ ವಾಹನವಾಗಿದೆ. ಗೂಬೆ ಆಧ್ಯಾತ್ಮಿಕ ಜ್ಞಾನದ ಸಂಕೇತವಾಗಿದೆ. ಗೂಬೆಯ ಕುರುಡತನ ಪ್ರಪಂಚದಲ್ಲಿ ಐಶ್ವರ್ಯದ ಮದದಲ್ಲಿ ಆಧ್ಯಾತ್ಮಿಕ ಜ್ಞಾನವನ್ನು ಮರೆಯಬಾರದು ಅನ್ನುವುದರ ಎಚ್ಚರಿಕೆಯಾಗಿದೆ.

ಹಂಸಾ
ಹಂಸಾ ಬ್ರಹ್ಮಾ ದೇವರ ವಾಹನವಾಗಿದೆ. ಹಂಸಾ ಹಾಲು ಹಾಗೂ ನೀರನ್ನು ಪ್ರತ್ಯೇಕಿಸುವ ಸಾಮರ್ಥ್ಯವಿದೆ. ಇದು ಜ್ಞಾನ ದ ಸಂಕೇತವಾಗಿದೆ.

ಆನೆ
ಆನೆ ಇಂದ್ರನ ವಾಹನವಾಗಿದೆ. ಇದು ಘನತೆ, ಶಕ್ತಿ, ಐಶ್ವರ್ಯ, ಪ್ರತಿಷ್ಠೆಯ ಸಂಕೇತವಾಗಿದೆ.

ಮೊಸಳೆ
ಮೊಸಳೆ ವರುಣಾ ದೇವತೆಯ ವಾಹನವಾಗಿದೆ. ಮೊಸಳೆ ಘನತೆ, ಶಕ್ತಿ, ವೇಗ, ಧೈರ್ಯ, ಮೋಸ ಇವುಗಳ ಸಂಕೇತವಾಗಿದೆ.

ಕುದುರೆ
ಕುದುರೆ ದೇವತೆ ಸೂರ್ಯನ ವಾಹನವಾಗಿದೆ. ಸೂರ್ಯ ಏಳು ಕುದುರೆಗಳಲ್ಲಿ ಸವಾರಿ ಮಾಡುತ್ತಾನೆ. ಕಾಮನ ಬಿಲ್ಲು ಇದರ ಸಂಕೇತವೆಂದು ಹೇಳಲಾಗುತ್ತಿದೆ.



Click it and Unblock the Notifications
