Latest Updates
-
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್! -
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ -
ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಕ್ರಮಗಳನ್ನು ಮರೆಯದಿರಿ!
ಭಾರತದ ಯಾವ ಯಾವ ಸಿಟಿ ಯಾವ ಫುಡ್ ಗೆ ಫೇಮಸ್?
ಭಾರತದಲ್ಲಿ ಸಂಸ್ಕೃತಿ, ಆಚಾರ, ವಿಚಾರಗಳು ಪ್ರದೇಶದಿಂದ-ಪ್ರದೇಶಕ್ಕೆ, ಜನಾಂಗದಿಂದ ಜನಾಂಗಕ್ಕೆ ಭಿನ್ನವಾಗಿರುವಂತೆ ಆಹಾರ ಪದ್ಧತಿಗಳೂ ಭಿನ್ನವಾಗಿರುವುದೇ ನಮ್ಮ ನಾಡಿನ ವೈವಿಧ್ಯಮಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಉತ್ತರ ಭಾರತದವರ ಆಹಾರ ಪದ್ಧತಿಗೂ, ದಕ್ಷಿಣ ಭಾರತದವರ ಆಹಾರ ಪದ್ಧತಿಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಉತ್ತರ ಭಾರತದಲ್ಲಿ ದೊರೆಯುವ ಆಹಾರಗಳು ದಕ್ಷಿಣ ಭಾರತದಲ್ಲಿ ದೊರೆಯುತ್ತದೆ. ದಕ್ಷಿಣ ಭಾರತದ ಅಡುಗೆಗಳು ಉತ್ತರ ಭಾರತದಲ್ಲಿ ದೊರೆಯುತ್ತದೆ, ಆದರೆ ಆ ಅಡುಗೆಗಳ ನಿಜವಾದ ಸ್ವಾದ ಸವಿಯಬೇಕೆಂದರೆ ಆಯಾ-ಆಯಾ ಪ್ರದೇಶಕ್ಕೆ ಬರಬೇಕು.
ನನ್ನ ಗೆಳೆಯನೊಬ್ಬ ಮುಂಬಯಿ ಮೂಲದವ. ಬೆಂಗಳೂರಿನಲ್ಲಿ ಎಲ್ಲೇ ಹೋಗಿ ವಡಾ ಪಾವ್ ತಿಂದರೂ , ನಾವೆಲ್ಲಾ "ಸೂಪರ್ ಟೇಸ್ಟ್ ಆಗಿದೆ ಅಲ್ವಾ?" ಅಂದರೆ ಅವನು ಮಾತ್ರ "ಓಕೆ, but ಮುಂಬಯಿಯಲ್ಲಿ ಇದಕ್ಕಿಂತ ರುಚಿಯಲ್ಲಿ ದೊರೆಯುತ್ತದೆ" ಎಂದು ಹೇಳದೆ ಮಾತ್ರ ಇರಲಾರ. ಅದು ನಿಜನೂ ಕೂಡ. ನಾವು ಉತ್ತರ ಭಾರದ ಕಡೆಗೆ ಹೋಗಿ, ಅಲ್ಲಿ ಉಡುಪಿ ಹೋಟೆಲ್ ಎಂಬ ಬೋರ್ಡ್ ನೋಡಿ ಅಲ್ಲಿಗೆ ಹೋಗಿ ಇಡ್ಲಿ, ವಡೆಯ ರುಚಿ ನೋಡಿದರೆ, ಇಲ್ಲಿಯ ಉಡುಪಿ ಹೋಟೆಲ್ ನಲ್ಲಿ ದೊರೆಯುವ ಇಡ್ಲಿ ವಡೆಯಷ್ಟೇ ಆ ಅಡುಗೆಗೆ ಇದೆ ಎಂದು ಅನಿಸುವುದಿಲ್ಲ ಅಲ್ಲವೇ?
ಇಲ್ಲಿ ನಾವು ಕೆಲವು ಆಹಾರಗಳ ಬಗ್ಗೆ ಹೇಳಲಾಗಿದೆ, ಈ ಆಹಾರಗಳು ನಿಮಗೆ ಭಾರತದ ಎಲ್ಲಾ ಕಡೆಗಳಲ್ಲಿ ದೊರೆಯುತ್ತದೆ, ಆದರೆ ಯಾವುದೋ ಒಂದು ಸಿಟಿಯಲ್ಲಿ ಅಥವಾ ಸ್ಥಳಗಳಲ್ಲಿ ತುಂಬಾ ಫೇಮಸ್ಸು ಆಗಿರುತ್ತದೆ. ಬನ್ನಿ ಅವುಗಳತ್ತ ಕಣ್ಣಾಡಿಸೋಣ:

ಮುಂಬಯಿ
ಇವೆರಡಕ್ಕೆ ಮುಂಬಯಿ ತುಂಬಾ ಫೇಮಸ್ಸು. ಇಲ್ಲಿಗೆ ಭೇಟಿ ಮಾಡಿದರೆ ಇವೆರಡರ ರುಚಿ ನೋಡದೆ ಮರಳುವವರು ತುಂಬಾ ವಿರಳ. ಅಲ್ಲದೆ ಇಲ್ಲಿ ದೊರೆಯುವ ವಡಾಪಾವ್ ಮತ್ತು ಇರಾನಿ ಟೀಯ ರುಚಿ ಮತ್ತೆಲ್ಲೂ ದೊರೆಯಲು ಸಾಧ್ಯವಿಲ್ಲ.

ದೆಹಲಿ
ದೆಹಲಿ ತಂದೂರಿ ಚಿಕನ್, ಚೋಲೆ ಬಥೂರೆ ಮತ್ತು ಚಾಟ್ಸ್ ಗೆ ಫೇಮಸ್. ಇಲ್ಲಿ ತಂದೂರಿ ಚಿಕನ್ ಗೆ ಸ್ಪೆಷಲ್ ಮಸಾಲೆ ಹಾಕಿ ಮಾಡಲಾಗುವುದು.

ಕೋಲ್ಕತ್ತಾ
ಕೋಲ್ಕತ್ತಾ ರಸಗುಲ್ಲಾ ಮತ್ತು ಇತರ ಸ್ವೀಟ್ಸ್ ಗೆ ತುಂಬಾ ಫೇಮಸ್. ಅಲ್ಲದೆ ಇಲ್ಲಿ ಬೀದಿ ಬದಿಯ ಆಹಾರಗಳು ಕೂಡ ತುಂಬಾ ರುಚಿಯಾಗಿರುತ್ತದೆ.

ದಕ್ಷಿಣ ಭಾರತ
ದಕ್ಷಿಣ ಭಾರರತದಲ್ಲಿ ಇಡ್ಲಿ ದೋಸೆ ಫೇಮಸ್. ಅದರಲ್ಲೂ ಚೆನ್ನೈ ಅಂತೂ ತುಂಬಾ ತುಂಬಾ ಫೇಮಸ್.

ಬೆಂಗಳೂರು
ಬೆಂಗಳೂರು ಬಿಸಿ ಬೇಳೆ ಬಾತ್ ಗೆ ತುಂಬಾ ಫೇಮಸ್. ಬಿಸಿ ಬೇಳೆ ಬಾತ್ ಸ್ಪೆಷಲ್ ಮಸಾಲೆ ಪುಡಿ ತಯಾರಿಸಿ ಮಾಡಲಾಗುವುದು, ಏನಿದ್ದರೂ ಬಿಸಿ ಬೇಳೆ ಬಾತ್ ಮಾಡುವುದರಲ್ಲಿ ಬೆಂಗಳೂರಿನವರದ್ದೇ ಎತ್ತಿದ ಕೈ.

ಕೊಚ್ಚಿ
ಕೇರಳ ಪರೋಟ, ಮೀನು ಖಾದ್ಯಕ್ಕೆ ಫೇಮಸ್. ಕೊಚ್ಚಿ ಕೇರಳ ಪರೋಟ ಮತ್ತು ಮೀನು ಕರಿಗೆ ಫೇಮಸ್ . ಇಲ್ಲಿ ದೊರೆಯುವ ಈ ಅಡುಗೆಗಳ ಸ್ವಾದ ಬೇರೆಲ್ಲೂ ದೊರೆಯುವುದಿಲ್ಲ.

ಲಕ್ನೋ
ಲಕ್ನೋದಲ್ಲಿ ಗಿಲೌಟಿ ಕಬಾಬ್ ಅಂತ ಮಾಡಲಾಗುತ್ತಿದೆ. ಚಿಕನ್ ಪ್ರಿಯರು ಇಲ್ಲಿಗೆ ಬಂದರೆ ಇದರ ರುಚಿಯನ್ನು ಸವಿಯಲು ಮಾತ್ರ ಮರೆಯಬಾರದು.

ಹೈದರಾಬಾದ್
ಹೈದರಾಬಾದ್ ಬಿರಿಯಾನಿಗೆ ಫೇಮಸ್. ಹೈದರಾ ಬಾದ್ ಬಿರಿಯಾನಿ ಭಾರತದಲ್ಲಿಯೇ ಫೇಮಸ್. ಇವರು ಬಿರಿಯಾನಿ ಮಾಡುವ ಸ್ಟೈಲ್ ಇತರ ಬಿರಿಯಾನಿಗಿಂತ ತುಂಬಾ ಭಿನ್ನವಾಗಿದ್ದು, ವಿಭಿನ್ನ ಟೇಸ್ಟ್ ಹೊಂದಿದೆ.

ಬನಾರಸಿ
ಪಾನ್ ಮತ್ತು ರಾಬ್ರಿಗೆ ಫೇಮಸ್, ಅದರಲ್ಲೂ ಮಗೈ ಪಾನ್ ಅಂತೂ ತುಂಬಾ ಜನಪ್ರಿಯತೆ ಹೊಂದಿದೆ.

ಶ್ರೀನಗರ
ಶ್ರೀನಗರಕ್ಕೆ ಹೋದರೆ ಗುಸ್ತಾಬ ಅನ್ನುವ ಸ್ಪೆಷಲ್ ಶ್ರೀನಗರ ಸ್ವೀಟ್ಸ್ ಟೇಸ್ಟ್ ಮಾಡಲು ಮರೆಯಬೇಡಿ.

ಮೈಸೂರ್
ಮೈಸೂರ್ ಪಾಕ್ ಎಂದು ಸ್ವೀಟ್ ನ ಹೆಸರೇ ಇದು ಮೈಸೂರಿನ ಸ್ಪೆಷಲ್ ಫುಡ್ ಎಂದು ಸೂಚಿಸುತ್ತದೆ. ಮೃದುವಾದ ಮೈಸೂರು ಪಾಕ್ ಬಾಯಿಗೆ ಹಾಕಿದರೆ ಅದರ ರುಚಿಗೆ ಮನ ಸೋಲದವರೇ ಇರುವುದಿಲ್ಲ.

ಜೈಪುರ್
ಜೈಪುರ್ ದಾಲ್ ಬಾಟಿ ಚುರ್ಮ ಎಂಬ ಅಡುಗೆಗೆ ಪ್ರಸಿದ್ಧಿಯನ್ನು ಹೊಂದಿದೆ. ತುಪ್ಪ ಮತ್ತು ಮಸಾಲೆ ಹಾಕಿ ಮಾಡುವ ಇದು ತಿನ್ನಲು ಖಾರವಾಗಿ ತುಂಬಾ ರುಚಿಯಾಗಿರುತ್ತದೆ.

ಆಗ್ರಾ
ಆಗ್ರಾಕ್ಕೆ ಹೋದವರು ಮರೆಯದೆ ತರುವ ಸ್ವೀಟ್ ಎಂದರೆ 'ಪೇಟಾ'. ಇದು ಮೊಘಲ್ ಶೈಲಿಯ ಸ್ವೀಟ್ ಆಗಿದ್ದು ತುಂಬಾ ಸಿಹಿಯಾಗಿರುತ್ತದೆ.

ಅಮೃತಸರ
'ಮೆಕ್ಕೆ ದಿ ರೋಟಿ ಮತ್ತು ಸರ್ಸನ್ ದ ಸಾಗ್ ' ಅಮೃತಸರದಲ್ಲಿ ಫೇಮಸ್ ಆಹಾರ. ಮೆಕ್ಕೆ ಜೋಳದಿಂದ ಮಾಡುವ ರೊಟ್ಟಿ, ಅದನ್ನು ನೆಚ್ಚಿಕೊಂಡು ತಿನ್ನಲು ಕೊಡುವ ಕಡು ಹಸಿರು ಬಣ್ಣದ ಸಾರು ತುಂಬಾ ಫೇಮಸ್ಸು.

ಭುವನೇಶ್ವರ
ಭುವನೇಶ್ವರದಲ್ಲಿ ದಾಲ್ಮಾ ಎಂಬ ಒಡಿಸ್ಸಾ ಶೈಲಿ ಅಡುಗೆ ಫೇಮಸ್. ಅಲ್ಲದೆ ಈ ಅಡುಗೆ ಭಾರತದ ಇತರ ಭಾಗದಲ್ಲಿ ದೊರೆಯುವುದು ತುಂಬಾ ಕಡಿಮೆ.

ಗೋವಾ
ಪ್ರಾನ್ ಗಸ್ಸಿಗೆ ಗೋವಾ ತುಂಬಾ ಫೇಮಸ್. ಅದಲ್ಲದೆ ಇಲ್ಲಿ ಸಮುದ್ರಾಹಾರಗಳು ತುಂಬಾ ರುಚಿಕರವಾಗಿ ದೊರೆಯುವುದು. ಅದರಲ್ಲೂ ಗಸ್ಸಿ ಅನ್ನುವುದು ಇಲ್ಲಿಯ ಸ್ಪೆಷಲ್ ಪ್ರಾನ್ ಸಾರು.

ಚಂಡೀಘಢ
ಚಂಡೀಘಡ ಪಂಜಾಬಿ ಶೈಲಿಯ ಅಡುಗೆಗೆ ತುಂಬಾ ಫೇಮಸ್ಸು. ಅದರಲ್ಲೂ ದಾಲ್ ಮಖಾನಿಯಂತೂ ಇಲ್ಲಿಯ ಫೇಮಸ್ ಅಡುಗೆಯಾಗಿದೆ.

ಪಾಟ್ನಾ
ಲಿಟಿ ಚೋಕ ಎಂಬ ಬೀದಿ ಬದಿಯ ಆಹಾರ ಪಾಟ್ನಾದಲ್ಲಿ ತುಂಬಾ ಫೇಮಸ್. ಆಲೂಗಡ್ಡೆಯಿಂದ ಈ ಬೀದಿ ಬದಿಯ ಆಹಾರವನ್ನು ತಯಾರಿಸಲಾಗುವುದು.

ಅಹ್ಮದಾಬಾದ್
ಅಹ್ಮದಾಬಾದ್ ದೋಕ್ಲಾ ಅಡುಗೆಗ ಫೇಮಸ್. ಕಡಲೆ ಹಿಟ್ಟಿನಿಂದ ತಯಾರಿಸುವ ಈ ದೋಕ್ಲಾ ತಿನ್ನಲು ತುಂಬಾ ರುಚಿಯಾಗಿರುತ್ತೆ.

ಪೋರ್ಕ್
ಕೊಡಗಿನಲ್ಲಿ ಪಂದಿ ಕರಿ ಅಂದರೆ ಪೋರ್ಕ್ ತುಂಬಾ ಫೇಮಸ್. ಇಲ್ಲಿ ಮದುವೆ ಸಂಭ್ರಮಗಳಲ್ಲಂತೂ ಇದರ ಅಡುಗೆ ಇದ್ದೇ ಇರುತ್ತದೆ.



Click it and Unblock the Notifications