Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಉಪಾಕರ್ಮ-ಜ್ಞಾನಕ್ಕಾಗಿ ಪ್ರಾರ್ಥಿಸುವ ದಿನ

ಇದನ್ನು ಋಗ್ವೇದವನ್ನು ಆಚರಿಸುವವರು ಶ್ರಾವಣ ಮಾಸದ ಶ್ರವಣ ನಕ್ಷತ್ರದಂದು ಮಾಡಿದರೆ ಯಜುರ್ವೇದವನ್ನು ಆಚರಿಸುವವರು ಶ್ರಾವಣ ಮಾಸದ ಹುಣ್ಣಿಮೆಯೆಂದು ಆಚರಿಸಲಾಗುವುದು. ಸಾಮವೇದಿಗಳು ಮಾತ್ರ ಭಾದ್ರಪದ ಮಾಸದ ನಕ್ಷತ್ರದಲ್ಲಿ ಆಚರಿಸುತ್ತಾರೆ.
ಈ ದಿನ ಪೂಜೆ ಮಾಡಿ ಜನಿವಾರವನ್ನು ಧರಿಸಲಾಗುವುದು, ಈ ಜನಿವಾರ ಪ್ರಣವ-ಓಂಕಾರ ಸೂಚಿಸುತ್ತದೆ. ಇದರಲ್ಲಿರುವ 3 ಸೂಕ್ಷ್ಮ ವಾದ ಎಳೆಗಳು ಮೂರು ವೇದಗಳ ಕುರಿತು ಸೂಚಿಸುತ್ತದೆ. ಬ್ರಹ್ಮಚಾರಿಗಳು 3 ಎಳೆಗಳ ಜನಿವಾರ ಧರಿಸದರೆ, ಗೃಹಸ್ಥರು 6 ಎಳೆಗಳ ಜನಿವಾರ ಧರಿಸುತ್ತಾರೆ. ಗೃಹಸ್ಥರು ಧರಿಸುವ ಹೆಚ್ಚಿನ 3 ಎಳೆಗಳು ಭಕ್ತಿ, ಜ್ಞಾನ, ಕರ್ಮಗಳ ಪಾವಿತ್ರ್ಯತೆಯ ಸಂಕೇತವಾಗಿದೆ. ಸಾಧಕರು 9 ಎಳೆಗಳ ಜನಿವಾರ ಧರಿಸುತ್ತಾರೆ, ಅವು ಅವರ ಸಾಧನೆಯ ಸೋಪಾನವಾದ ಸತ್, ಚಿತ್, ಆನಂದ ಎಂಬ ಮೂರು ಸ್ಥತಿಯನ್ನು ಸೂಚಿಸುತ್ತದೆ.
ಈ ದಿನ ಗಾಯತ್ರಿ ಮಂತ್ರಕ್ಕೆ ಹೊಸ ಸಿದ್ಧಿಯನ್ನು ಪಡೆದುಕೊಳ್ಳುವ ಸಂಕಲ್ಪ ಮಾಡಬೇಕು. ಈ ಜಪವನ್ನು ಆವರ್ತನೆಯಂತೆ ವಿದ್ಯೆ, ಸಿದ್ಧಿ, ಸಂತಾನ, ಕೀರ್ತಿ, ಲಾಭ, ಬ್ರಹ್ಮತೇಜಸ್ಸು, ವೈರಾಗ್ಯಗಳನ್ನು ಗಳಿಸಲು ವಿನಿಯೋಗಿಸಬೇಕು ಎಂದ ಹೇಳಲಾಗಿದೆ. ಈ ಮಂತ್ರವನ್ನು ಆತ್ಮಕಲ್ಯಾಣಕ್ಕೂ, ಲೋಕಕಲ್ಯಾಣಕ್ಕೂ ಬಳಸಬಹುದು.
ಈ ದಿನದಂದು ಲೋಕಮಾತೆಯಾಗಿ ಗಾಯತ್ರಿಯನ್ನು ಆರಾಧಿಸಿ, ಜ್ಞಾನವನ್ನು ನೀಡುವಂತೆ ಪ್ರಾರ್ಥಿಸಲಾಗುವುದು. ಇದನ್ನು ಚೌಡೇಶ್ವರಿ ಹುಣ್ಣಿಮೆಯೆಂದು ದೇವಾಂಗ ಜನಾಂಗದವರು ಆಚರಿಸಿದರೆ, ಕರಾವಳಿ ಭಾಗದಲ್ಲಿ ನಾರಿಕೇಳ ಹುಣ್ಣಿಮೆಯಾಗಿ ಆಚರಿಸಲಾಗುವುದು. ಈ ಸಮಯದಲ್ಲಿ ಕೆಲವು ಕಡೆ ಸಮುದ್ರವನ್ನು ಪೂಜಿಸಿ ನಾವೆಯನ್ನು ಇಳಿ ಬಿಡುವ ಪದ್ಧತಿ ಕೂಡ ಇದೆ.



Click it and Unblock the Notifications
