Latest Updates
-
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್
ಹಾವಿನ ಕನಸ್ಸು ಬಿದ್ದರೆ ಏನಂತ ಅರ್ಥ?

ನಮ್ಮ ಸುಪ್ತ ಮನಸ್ಸಿನ ಭಾವನೆಗಳು ಕನಸ್ಸಾಗಿ ಬರುತ್ತದೆ ಎಂದು ಮನಶಾಸ್ತ್ರದಲ್ಲಿ ಹೇಳುತ್ತಾರೆ. ನಮಗೆ ಬೀಳುವ ಕನಸ್ಸುಗಳಲ್ಲಿ ಸಾಕಷ್ಟು ಅರ್ಥ ಇದೆ ಎಂದು ಹೆಚ್ಚಿನವರು ನಂಬುತ್ತಾರೆ. ಕನಸ್ಸಿನಲ್ಲಿ ಹೂ ಕಾಣಬಾರದು, ಕೊಳಚೆ ನೀರು ಹರಿಯುವಂತಹ ಕನಸ್ಸು ಬೀಳಬಾರದು, ಯಾರಾದರೂ ಸತ್ತಂತೆ ಕಂಡರೆ ಅವರಿಗೆ ಆಯಸ್ಸು ಜಾಸ್ತಿಯಾಗುವುದು, ಮುಂಜಾನೆ ಕನಸ್ಸು ಬಿದ್ದರೆ ಅದು ಫಲಿಸುತ್ತದೆ ಈ ರೀತಿ ಅನೇಕ ನಂಬಿಕೆಗಳಿವೆ.
ಅದೇ ಹಾವಿನ ಕನಸ್ಸು ಬಿದ್ದರೆ ಕೂಡ ಅನೇಕ ನಂಬಿಕೆಗಳಿವೆ. ಹಾವು ಕಚ್ಚಿದಂತೆ ಬಿದ್ದರೆ ಒಂದು ಅರ್ಥ, ಹಾವು ಅಟ್ಟಿಸಿಕೊಂಡು ಬಂದರೆ ಅದಕ್ಕೊಂದು ಅರ್ಥ ಹೀಗೆ ಹಾವಿನ ಕನಸ್ಸು ಬಿದ್ದರೆ ಸಾಕಷ್ಟು ಅರ್ಥಗಳಿವೆ. ಅವುಗಳಲ್ಲಿ ಕೆಲವೊಂದು ನಂಬಿಕೆಗಳ ಬಗ್ಗೆ ಇಲ್ಲಿ ಹೇಳಾಗಿದೆ ನೋಡಿ:
ಹಾವಿನ ಜೊತೆ ಹೋರಾಡುವುದು: ಕೆಲವರಿಗೆ ತಾವು ಹಾವಿನ ಜೊತೆ ಹೋರಾಡುತ್ತಿರುವಂತೆ ಕನಸ್ಸು ಬೀಳುತ್ತದೆ. ಈ ರೀತಿಯ ಕನಸ್ಸು ಬಿದ್ದರೆ ನೀವು ನಿಮ್ಮ ಭಾವನೆಗಳ ಜೊತೆ ಹೋರಾಡುತ್ತಿದ್ದೀರ, ನಿಮಗೆ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಿಲ್ಲ, ಗೊಂದಲದಲ್ಲಿದ್ದೀರ ಎಂದು ಅರ್ಥ. ಅಲ್ಲದೆ ಈ ರೀತಿಯ ಕನಸ್ಸು ಬಿದ್ದರೆ ಸಂಬಂಧ ಅಥವಾ ಕೆಲಸದಲ್ಲಿ ಏನಾದರೂ ತೊಂದರೆ ಇದ್ದರೆ ಈ ರೀತಿಯ ಕನಸ್ಸು ಬೀಳುತ್ತದೆ.
ಹಾವು ಅಟ್ಟಿಸಿಕೊಂಡು ಬರುವ ಕನಸ್ಸು: ಹಾವು ಅಟ್ಟಿಸಿಕೊಂಡು ಬರುವಂತಹ ಕನಸ್ಸು ಬಿದ್ದರೆ ಏನೋ ಅಪಾಯ ಕಾದಿದೆ ಎಂದು ಭಾವಿಸಿಕೊಂಡು ಜನರು ಭಯಬೀಳುತ್ತಾರೆ. ಮನಸ್ಸಿನಲ್ಲಿರುವ ಭಯದಿಂದ ಆ ರೀತಿಯ ಕನಸ್ಸು ಬೀಳುತ್ತದೆ. ಆದ್ದರಿಂದ ಮನಸ್ಸಿನಲ್ಲಿರುವ ಭಯವನ್ನು ಮೊದಲು ಬಿಡಬೇಕು.
ಹಾವು ಕಚ್ಚಿದಂತಹ ಕನಸ್ಸು: ಹಾವು ಕಚ್ಚಿದಂತಹ ಕನಸ್ಸು ಬಿದ್ದರೆ ಯಾರೋ ಒಬ್ಬರಿಂದ ಅಥವಾ ಯಾವುದೋ ಒಂದು ವಸ್ತುವಿನಿಂದ ಹಾನಿಯಾಗಲಿದೆ ಎಂಬ ನಂಬಿಕೆ ಜನರಲ್ಲಿದೆ.
ಹಾವಿನ ಜೊತೆ ತಿನ್ನುವುದು ಅಥವಾ ನಿದ್ದೆ ಮಾಡುವುದು: ಮನಸ್ಸಿನಲ್ಲಿ ಲೈಂಗಿಕ ಚಟುಚಟಿಕೆ ನಡೆಸಲು ಆಸೆ ಇದ್ದರೆ ಅಥವಾ ಲೈಂಗಿಕ ಅತೃಪ್ತಿ ನಿಮ್ಮಲ್ಲಿದ್ದರೆ ಈ ರೀತಿಯ ಕನಸ್ಸು ಬೀಳುತ್ತದೆ ಎಂದು ಹೇಳುತ್ತಾರೆ.
ಹಾವಿರುವ ಗುಂಡಿಯಲ್ಲಿ ಬೀಳುವುದು : ನೀವು ಒಂದು ಗುಂಡಿಯಲ್ಲಿ ಬಿದ್ದಂತೆ, ಆ ಗುಂಡಿ ತುಂಬಾ ಹಾವುಗಳು ಹರಿದಾಡುತ್ತಿರುವಂತೆ ಕನಸ್ಸು ಕಂಡರೆ ಏನೋ ಅಪಾಯ ಕಾದಿದೆ ಎಂಬ ನಂಬಿಕೆ ಜನರಲ್ಲಿದೆ.



Click it and Unblock the Notifications