Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಕಿಡ್ನಾಪರ್ ಬಿಟ್ಟು ಬರಲು ಒಪ್ಪದೆ ಹಠ ಹಿಡಿದ ಮಗು..! ವಿಡಿಯೋ ವೈರಲ್
ಮಕ್ಕಳ ಮನಸ್ಸು ಎಷ್ಟು ಮುಗ್ದತೆಯಿಂದ ಕೂಡಿರುತ್ತೆ ಅನ್ನೋದು ಆಗಾಗ ಹಲವು ಘಟನೆಗಳ ಮೂಲಕ ಸಮಾಜದ ಎದುರು ಬಹಿರಂಗವಾಗೋದು ನಾವು ನೋಡಿದ್ದೇವೆ. ಮಕ್ಕಳ ಮುಗ್ದತೆಯಿಂದ ಎಂತವರ ಹೃದಯವನ್ನು ಗೆಲ್ಲುತ್ತಾರೆ. ಮಕ್ಕಳಿದ್ದರೆ ಮನಸ್ಸಿಗೆ ನೆಮ್ಮದಿ ಎಂಬ ಮಾತಿದೆ. ಮಕ್ಕಳನ್ನ ನಾವು ಹೇಗೆ ಬೆಳೆಸುತ್ತೇವೆ ಅನ್ನೋದು ಸಹ ಮುಖ್ಯವಾಗಿರುತ್ತೆ.
ಆದ್ರೆ ಇಲ್ಲೊಂದು ಘಟನೆಯಲ್ಲಿ ಎಂತವರು ಸಹ ಮಗುವಿನ ಮುಗ್ಧತೆ ಕಂಡು ನಿಬ್ಬೆರಗಾಗಿದ್ದಾರೆ. ಹೌದು ಅಪಹರಣಕ್ಕೆ ಒಳಗಾಗಿದ್ದ ಮಗುವೊಂದು ಅಪಹರಣ ಮಾಡಿದವನ ಬಿಟ್ಟು ಬರಲು ಒಪ್ಪದೆ ಅಳುತ್ತಿರುವ ಘಟನೆ ನಡೆದಿದೆ. ಈ ವಿಡಿಯೋ ನೋಡಿದ ಮಂದಿ ಅಚ್ಚರಿಯ ಜೊತೆಗೆ ಆ ಮಗುವಿನ ಮುಗ್ದತೆ ಕಂಡು ಶಾಕ್ ಸಹ ಆಗಿದ್ದಾರೆ.

ಈ ವಿಡಿಯೋ ನೋಡಿದ ಮಂದಿ ಇದು ಯಾವುದೋ ಸಿನಿಮಾ ಶೂಟಿಂಗ್ ಇರಬಹುದು ಎಂದುಕೊಳ್ಳಬಹುದು. ಆದ್ರೆ ನಿಜವಾಗಿಯೂ ಇಂತಹ ಘಟನೆ ನಡೆದಿದೆ. ಕಿಡ್ನಾಪ್ ಮಾಡಿದ್ದವನನ್ನು ಮಗು ಬಿಟ್ಟು ಬರಲು ಒಪ್ಪದೆ ಬಿಗಿದಪ್ಪಿ ಹಠ ಮಾಡುತ್ತಿರುವ ವಿಡಿಯೋ ಇದಾಗಿದೆ. ಈ ರೀತಿ ಘಟನೆ ನಡೆದಿದ್ದು ಎಲ್ಲಿ, ಏನಿದು ಘಟನೆ ಎಂಬುದನ್ನು ನೋಡಿ.
ಏನಿದು ಘಟನೆ?
ರಾಜಸ್ಥಾನದ ಜೈಪುರದಲ್ಲಿ ಇಂತಹ ವಿಚಿತ್ರ ಘಟನೆ ನಡೆದಿದೆ. ಸುಮಾರು 14 ತಿಂಗಳ ಹಿಂದೆ ಅಪಹರಣ ಪ್ರಕರಣ ಈಗ ಸುಖಾಂತ್ಯ ಕಂಡಿದೆ. ಆದ್ರೆ ಮಗು ಕಿಡ್ನಾಪರ್ ಬಿಟ್ಟು ಬರಲು ಒಪ್ಪದೆ ಅಳುತ್ತಿದೆ. ಜೈಪುರದ ಪೊಲೀಸ್ ಠಾಣೆಯಲ್ಲಿ ಈ ಹೃದಯ ವಿದ್ರಾವಕ ವಿಡಿಯೋ ರೆಕಾರ್ಡ್ ಮಾಡಲಾಗಿದೆ. 14 ತಿಂಗಳ ಹಿಂದೆ ಈ ಮಗು ಕಿಡ್ನಾಪ್ ಮಾಡಲಾಗಿತ್ತು, ನಿರಂತರ ತನಿಖೆಯ ಬಳಿಕ ಪೊಲೀಸರು ಆತನ ಪತ್ತೆ ಮಾಡಿದ್ದರು. ಆದ್ರೆ ಆತನ ಬಿಟ್ಟು ಬರಲು ಮಗು ಅಳುತ್ತಿದೆ. ಬಳಿಕ ಪೊಲೀಸ್ ಅಧಿಕಾರಿಯೊಬ್ಬರು ಬಲವಂತವಾಗಿ ಮಗುವನ್ನು ತಾಯಿಗೆ ಒಪ್ಪಿಸಿದ್ದಾರೆ.
ಜೈಪುರದ ಸಂಗನೇರ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 14 ತಿಂಗಳ ಹಿಂದೆ ನಡೆದಿದ್ದ ಪೃಥ್ವಿ ಎಂಬ 11 ತಿಂಗಳ ಮಗುವಿನ ಅಪಹರಣ ಪ್ರಕರಣವನ್ನು ಪೊಲೀಸರು ಬುಧವಾರ ಭೇದಿಸಿದ್ದಾರೆ. ಅಚ್ಚರಿ ಅಂದರೆ ಇಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬ ಮಗುವನ್ನು ಕಿಡ್ನಾಪ್ ಮಾಡಿದ್ದ. ಆತನ ಹುಡುಕಿ ಕೊಟ್ಟವರಿಗೆ ಅಥವಾ ಸುಳಿವು ನೀಡಿದವರಿಗೆ 25 ಸಾವಿರ ರೂಪಾಯಿ ಬಹುಮಾನ ಸಹ ಘೋಷಿಸಲಾಗಿತ್ತು.
ಯಾರು ಈ ಕಾನ್ಸ್ ಟೇಬಲ್? ಕಿಡ್ನಾಪ್ ಮಾಡಿದ್ದೇಕೆ?
ಮಗುವನ್ನು ಕಿಡ್ನಾಪ್ ಮಾಡಿದ್ದ ಆತ ತನ್ನ ಗುರುತು ಮರೆ ಮಾಚುವ ಉದ್ದೇಶದಿಂದ ಆತ ಗಡ್ಡ, ಕೂದಲು ಉದ್ದವಾಗಿ ಬಿಟ್ಟುಕೊಂಡಿದ್ದ. ಆರೋಪಿ ತನುಜ್ ಚಾಹರ್ ಉತ್ತರ ಪ್ರದೇಶದ ಆಗ್ರಾದವನಾಗಿದ್ದು, ಅಲಿಗಢ್ (ಯು.ಪಿ.) ರಿಸರ್ವ್ ಪೊಲೀಸ್ ಲೈನ್‌ನಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಪೋಸ್ಟ್ ಆಗಿದ್ದರು ಆದರೆ ಪ್ರಸ್ತುತ ಅಮಾನತುಗೊಳಿಸಲಾಗಿದೆ. ತನುಜ್ ಈ ಹಿಂದೆ ಯುಪಿ ಪೊಲೀಸರ ವಿಶೇಷ ತಂಡ ಮತ್ತು ಕಣ್ಗಾವಲು ತಂಡದ ಭಾಗವಾಗಿದ್ದರು. ಪೊಲೀಸ್ ಕಾರ್ಯವಿಧಾನಗಳನ್ನು ಚೆನ್ನಾಗಿ ತಿಳಿದಿರುವ ಅವರು, ತಲೆಮರೆಸಿಕೊಳ್ಳುವ ಅವಧಿಯಲ್ಲಿ ಮೊಬೈಲ್ ಫೋನ್ ಬಳಸುತ್ತಿರಲಿಲ್ಲ. ಸೆರೆಹಿಡಿಯುವುದನ್ನು ತಪ್ಪಿಸಲು ಅವನು ಆಗಾಗ್ಗೆ ತನ್ನ ಸ್ಥಳವನ್ನು ಬದಲಾಯಿಸುತ್ತಿದ್ದ.
ಆರೋಪಿಯು ಎಷ್ಟು ಚಾಣಾಕ್ಷನಾಗಿದ್ದನೆಂದರೆ, ಅವನು ಒಂದೇ ಪರಿಚಯಸ್ಥನನ್ನು ಎರಡು ಬಾರಿ ಭೇಟಿಯಾಗಲಿಲ್ಲ. ತನ್ನ ಗುರುತನ್ನು ಮರೆಮಾಡಲು, ಅವನು ಕೆಲವೊಮ್ಮೆ ಗಡ್ಡವನ್ನು ಬೆಳೆಸಿದನು ಅಥವಾ ಅವನ ಬಿಳಿ ಗಡ್ಡಕ್ಕೆ ಬಣ್ಣ ಹಾಕಿದನು. ಹೊಸ ವ್ಯಕ್ತಿಗಳಿಗೆ ತನ್ನನ್ನು ತಾನು ಪರಿಚಯಿಸಿಕೊಳ್ಳದೆ ಪೃಥ್ವಿಯನ್ನು ತನ್ನ ಸ್ವಂತ ಮಗನೆಂದು ಹೇಳಿಕೊಳ್ಳುತ್ತಿದ್ದ.
ಆಗಸ್ಟ್ 22 ರಂದು, ತನುಜ್ ಚಾಹರ್ ಅವರನ್ನು ಬಂಧಿಸಲು ವಿಶೇಷ ತಂಡವು ಮಥುರಾ, ಆಗ್ರಾ ಮತ್ತು ಅಲಿಗಢವನ್ನು ತಲುಪಿತು. ವೃಂದಾವನದ ಯಮುನಾ ನದಿ ಬಳಿಯ ಪರಿಕ್ರಮ ಮಾರ್ಗದ ಗುಡಿಸಲಿನಲ್ಲಿ ಆತ ಸನ್ಯಾಸಿಯಂತೆ ವೇಷ ಬದಲಿಸಿಕೊಂಡಿದ್ದ. ಆತನ ಹಿಡಿಯಲೆಂದು ಪೊಲೀಸರ ತಂಡ ಸಹ ಸನ್ಯಾಸಿಗಳಂತೆ ವೇಷ ಧರಿಸಿ ಹೋಗಿದ್ದರು. ಹೀಗಾಗಿ ಆತನಿಗೆ ಅನುಮಾನ ಬರಲಿಲ್ಲ.
ಈ ವೇಳೆ ಆತನ ಭೇಟಿಯಾಗಿದ್ದ ತಂಡ ಆತನನ್ನು ಬಂಧಿಸಲು ಮುಂದಾಗಿರಲಿಲ್ಲ. ಆದರೆ ಆಗಸ್ಟ್ 27ರಂದು ಆತ ಅಲೀಗಢಕ್ಕೆ ತೆರಳಿರುವ ಮಾಹಿತಿ ಸಿಕ್ಕಿತ್ತು, ಬಂಧಿಸಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದ ಪೊಲೀಸರು ಪ್ಲಾನ್ ಮಾಡಿದ್ದರು. ಆದ್ರೆ ಕೊನೆ ಗಳಿಗೆಯಲ್ಲಿ ಆತನಿಗೆ ಪೊಲೀಸರ ಸುಳಿವು ಸಿಕ್ಕಿತ್ತು. ಆತ ಮಗುವನ್ನು ಹಿಡಿದು ಓಡಲು ಆರಂಭಿಸಿದ್ದ, ಬರೋಬ್ಬರಿ 8 ಕಿ.ಮೀ ಬೆನ್ನಟ್ಟಿ ಆತನ ಹಿಡಿಯಲಾಗಿತ್ತು.
ಆತ ಹಣದ ಆಸೆಯಿದ ಮಗುವನ್ನು ಕಿಡ್ನಾಪ್ ಮಾಡಿದ್ದ, ಆದ್ರೆ ಪೊಲೀಸರ ಕೈಗೆ ಸಿಕ್ಕಿ ಬೀಳುವ ಭಯದಿಂದ ಸ್ಥಳ ಬದಲಿಸುತ್ತಿದ್ದ. ಹಣದ ಆಸೆಯನ್ನೂ ಬಿಟ್ಟಿದ್ದ. ಆದರೆ ಮಗುವಿನ ತಂದೆಗೆ ಯಾವಾಗಲು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ. ಆದ್ರೆ ಕೊನೆಯಲ್ಲಿ ಮಗು ಆತನ ಬಿಟ್ಟು ಬರಲು ಹಿಂಜರಿದಿದ್ದು ಅಚ್ಚರಿಗೆ ಕಾರಣವಾಗಿತ್ತು.



Click it and Unblock the Notifications