Latest Updates
-
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ!
ಯೋಗಿನಿ ಏಕಾದಶಿ 2023: ಈ ಏಕಾದಶಿಯ ಮಹತ್ವವೇನು ಗೊತ್ತೆ? ಪಾರಾಣ ಸಮಯ ಯಾವಾಗ?
ಪ್ರತಿವರ್ಷ ಆಷಾಢ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಯೋಗಿನಿ ಏಕಾದಶಿಯೆಂದು ಆಚರಿಸಲಾಗುವುದು. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ. 2023ರಲ್ಲಿ ಯೋಗಿನಿ ಏಕಾದಶಿಯನ್ನು ಯಾವಾಗ ಆಚರಿಸಲಾಗುವುದು? ಈ ಏಕಾದಶಿಯ ಮಹತ್ವವೇನು? ಈ ದಿನ ಪೂಜೆಯ ವಿಧಿ ವಿಧಾನಗಳೇನು? ವ್ರತ ಕತೆಯೇನು ಎಂದು ನೋಡೋಣ ಬನ್ನಿ:

2023ರಲ್ಲಿ ಯೋಗಿನಿ ಏಕಾದಶಿ
ಯೋಗಿನಿ ಏಕಾದಶಿಯನ್ನು ಈ ವರ್ಷ ಜೂನ್ 14ರಂದು ಆಚರಿಸಲಾಗುವುದು. ಯೋಗಿನಿ ಏಕಾದಶಿಯಂದು ಭಗವಾನ್ ವಿಷ್ಣುವನ್ನು ಪೂಜಿಸಿದರೆ ತುಂಬಾನೇ ಮಂಗಳಕರ, ಈ ಏಕಾದಶಿಯನ್ನು ಆಚರಿಸುವುದರಿಂದ ಭಕ್ತರು ತಮ್ಮ ಪಾಪಗಳಿಂದ ಮುಕ್ತಿಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಯಾರು ಯೋಗಿನಿ ಏಕಾದಶಿಯನ್ನು ಆಚರಿಸುತ್ತಾರೋ ಅವರಿನ ಸಾವಿನ ನಂತರ ಮೋಕ್ಷ ಪಡೆಯುತ್ತಾರೆ ಎಂದು ಹೇಳಲಾಗುವುದು.
ಯೋಗಿನಿ ಏಕಾದಶಿ ಉಪವಾಸ ಮತ್ತು ಪೂಜಾ ವಿಧಾನ
* ಯೋಗಿನಿ ಏಕಾದಶಿ ಉಪವಾಸದ ದಿನದಂದು ಬೆಳಗ್ಗೆ ಸ್ನಾನ ಮಾಡಿದ ನಂತರ ಹಳದಿ ಬಟ್ಟೆಯನ್ನು ಧರಿಸಬೇಕು.
* ನಂತರ ಪೂಜಾ ಮನೆಯನ್ನು ಸ್ವಚ್ಛಗೊಳಿಸಬೇಕು, ನಂತೆ ಸಂಕಲ್ಪ ಮಾಡಿ ಶ್ರೀ ವಿಷ್ಣುವನ್ನು ಪೂಜಿಸಿ. ಈ ದಿನ ಶ್ರೀ ವಿಷ್ಣುವಿಗೆ ಹಳದಿ ಹೂಗಳನ್ನು ಅರ್ಪಿಸಿ, ತುಪ್ಪದ ದೀಪ ಹಚ್ಚಿ, ಶ್ರೀ ವಿಷ್ಣುವಿಗೆ ಅರ್ಪಿಸುವ ವೈವೇದ್ಯದಲ್ಲಿ ತುಳಸಿ ಇರಲೇಬೇಕು.
* ಶ್ರೀ ವಿಷ್ಣುವಿಗೆ ಪೂಜೆಯನ್ನು ಮಾಡುವಾಗ "ಓಂ ಭಗವತೇ ವಾಸುದೇವಾಯ ನಮಃ" ಎಂಬ ಮಂತ್ರವನ್ನು ಪಠಿಸಿದರೆ ತುಂಬಾ ಒಳ್ಳೆಯದು. ಈ ದಿನ ವಿಷ್ಣು ಚಾಲೀಸಾ, ವಿಷ್ಣು ಸಹಸ್ರನಾಮ ಇವುಗಳನ್ನು ಪಠಿಸಿದರೆ ತುಂಬಾ ಒಳ್ಳೆಯದು.
* ಈ ದಿನ ಆಹಾರ ಸೇವಿಸಬೇಡಿ, ಹಣ್ಣುಗಳನ್ನು ಸೇವಿಸಬಹುದು. ಪಾರಣ ಸಮಯದವರೆಗೆ ಉಪವಾಸವಿದ್ದು ಈ ಏಕಾದಶಿ ಆಚರಿಸಬೇಕು.
ಯೋಗಿನಿ ಏಕಾದಶಿ ತಿಥಿ ಹಾಗೂ ಪೂಜಾ ಸಮಯ
ಏಕಾದಶಿ ತಿಥಿ ಪ್ರಾರಂಭ ಜೂನ್ 13 ಬೆಳಗ್ಗೆ 09:28ರಿಂದ
ಏಕಾದಶಿ ತಿಥಿ ಮುಕ್ತಾಯ : ಜೂನ್ 14 ಬೆಳಗ್ಗೆ 08:48ಕ್ಕೆ
ಪಾರಣ ಸಮಯ: ಬೆಳಗ್ಗೆ 05:54ರಿಂದ 08:28ರವರೆಗೆ
ವ್ರತ ಕತೆ
ಪೌರಾಣಿಕ ಕತೆಯ ಪ್ರಕಾರ ಸ್ವರ್ಗದ ಅಲಕಾಪುರಿಯಲ್ಲಿ ಕುಬೇರನೆಂಬ ರಾಜನಿದ್ದ. ಅವರು ತುಂಬಾ ಶಿವಭಕ್ತರಾಗಿದ್ದರು ಅವರು ಪ್ರತಿದಿನ ಮಹಾದೇವನನ್ನು ಪೂಜಿಸುತ್ತಿದ್ದರು. ಹೇಮ್ ಎಂಬ ಮಾಲಿ ಶಿವನ ಪೂಜೆಗೆ ಹೂವನ್ನು ಕೊಡುತ್ತಿದ್ದ. ಹೇಮಿಯ ಹೆಂಡತಿ ವಿಶಾಲಾಕ್ಷಿ, ತುಂಬಾ ಸುಂದರವಾಗಿದ್ದಳು. ಒಂದು ದಿನ ಹೆಮ್ ಮಾನಸ ಸರೋವರದಿಂದ ಹೂವುಗಳನ್ನು ತಂದು ಹೂಗಳನ್ನು ರಾಜನಿಗೆ ತಲುಪಿಸದೆ ತನ್ನ ಪತ್ನಿ ಜೊತೆ ಶೃಂಗಾರ ಲೀಲೆಯಲ್ಲಿ ಮಗ್ನನಾಗುತ್ತಾನೆ. ಆದರೆ ಇತ್ತ ರಾಜನು ಹೂವುಗಳಿಗಾಗಿ ಹೇಮ್‌ಗಾಗಿ ಕಾಯುತ್ತಿದ್ದನು. ಮಧ್ಯಾಹ್ನದವರೆಗೂ ಹೇಮ್ ಬರದಿದ್ದಾಗ ತನ್ನ ಸೈನಿಕರನ್ನು ಕಳುಹಿಸುತ್ತಾನೆ.
ಆತನ ಮನೆಗೆ ಬಂದ ಸೈನಿಕರು ಮರಳಿ, ಆತ ತನ್ನ ಪತ್ನಿ ಜೊತೆ ಸಮಯ ಕಳೆಯುತ್ತಿದ್ದಾನೆ ಎಂಬುವುದಾಗಿ ಹೇಳುತ್ತಾರೆ. ಆಗ ಕೋಪಗೊಂಡ ರಾಜ ಕುಬೇರನು ಹೇಮ್‌ನನ್ನು ಆಸ್ಥಾನಕ್ಕೆ ಕರೆದನು. ಆಗ ರಾಜನು ನೀನು ಶಿವ ಪೂಜೆಗೆ ಹೂ ತರಲಿಲ್ಲ, ಪಾಪಿ ನೀನು, ನಿನಗೆ ಕುಷ್ಟರೋಗ ಬಂದು ಪತ್ನಿಯಿಂದ ದೂರಾಗುತ್ತೀಯ ಎಂದು ಶಾಪ ನೀಡುತ್ತಾನೆ. ಹೇಮ್ ಭೂಮಿಯ ಮೇಲೆ ಕುಷ್ಠ ರೋಗಿಯಾಗಿ ಅಲಿಯುತ್ತಾನೆ. ಒಂದು ದಿನ ಮಾರ್ಕಂಡೇಯ ಋಷಿಯ ಆಶ್ರಮವನ್ನು ತಲುಪಿದನು.
ಮಾರ್ಕಂಡೇಯ ಋಷಿಯು ಅವನಿಗೆ ಹಳೆಯ ಕತೆ ನೆನಪಿಸುತ್ತಾನೆ. ಆಗ ಹೇಮ್‌ನು ಮಾರ್ಕಂಡೇಯ ಋಷಿಗಳ ಬಳಿ ಮೋಕ್ಷಕ್ಕೆ ದಾರಿ ಕೇಳಿದಾಗ ಯೋಗಿನಿ ಏಕಾದಶಿಯ ಮಹತ್ವದ ಬಗ್ಗೆ ತಿಳಿಸುತ್ತಾರೆ. ಅದರಂತೆ ಹೇಮ್ ಆಷಾಢ ಕೃಷ್ಣ ಏಕಾದಶಿಯ ವ್ರತವನ್ನು ಕ್ರಮಬದ್ಧವಾಗಿ ಆಚರಿಸಿದಾಗ ಅವನ ಕುಷ್ಠರೋಗವು ವಾಸಿಯಾಗಿ ಮೊದಲಿನ ರೂಪ ಪಡೆಯುತ್ತಾನೆ, ಮತ್ತೆ ತ್ತೆ ತನ್ನ ಹೆಂಡತಿ ವಿಶಾಲಾಕ್ಷಿಯೊಂದಿಗೆ ಸ್ವರ್ಗದಲ್ಲಿ ಸುಖವಾಗಿ ಬಾಳತೊಡಗಿದ.



Click it and Unblock the Notifications