Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
25 ಅದೃಷ್ಟವಂತಿರಿಗೆ ಸಿಗಲಿದೆ ತಿಮ್ಮಪ್ಪನ ವಿಐಪಿ ದರ್ಶನ ಭಾಗ್ಯ, ಅದಕ್ಕಾಗಿ ಏನು ಮಾಡಬೇಕು ಗೊತ್ತೆ?
ತಿರುಪತಿ ತಿಮ್ಮಪ್ಪನ ದರ್ಶನ ಮಾಡ್ಬೇಕು ಅನ್ನೋ ಆಸೆ ಯಾರಿಗೆ ತಾನೇ ಇರೋದಿಲ್ಲ ಹೇಳಿ. ಜೀವನದಲ್ಲಿ ಒಮ್ಮೆಯಾದ್ರು ಆತನ ದರ್ಶನ ಮಾಡ್ಬೇಕು ಅಂತ ಭಕ್ತರು ಕಾಯ್ತಿರ್ತಾರೆ. ಆದರೆ ಸಾಮಾನ್ಯ ದರ್ಶನ ಮಾಡ್ಬೇಕಂದ್ರೆ ದಿನವಿಡೀ ಕ್ಯೂನಲ್ಲಿ ಕಾಯ್ಬೇಕು.

ಇನ್ನೂ ವಿಐಪಿ ಟಿಕೆಟ್ ಖರೀದಿ ಮಾಡಿದ್ರೆ ಆರಾಮಾಗಿ ದರ್ಶನ ಮಾಡ್ಕೊಂಡು ಬರಬಹುದು. ವಿಐಪಿ ಟಿಕೆಟ್ ಕೊಂಚ ದುಬಾರಿಯಾಗಿರೋದ್ರಿಂದ ಹೆಚ್ಚಿನವರು ಸಾಮಾನ್ಯ ದರ್ಶನವನ್ನೇ ಮಾಡ್ತಾರೆ. ಇದೀಗ ಖುಷಿಯ ಸುದ್ದಿ ಏನಂದ್ರೆ ಟಿಟಿಡಿ ಟ್ರಸ್ಟ್ ಭಕ್ತರಿಗೆ ವಿಐಪಿ ಟಿಕೆಟ್ ಗಳನ್ನು ನೀಡೋದಕ್ಕೆ ನಿರ್ಧರಿಸಿದೆ.
ನೀವೇನಾದರೂ ಅದೃಷ್ಟಶಾಲಿಗಳಾಗಿದ್ರೆ ಖಂಡಿತ ನಿಮಗೆ ಈ ದರ್ಶನ ಭಾಗ್ಯ ಸಿಗಲಿದೆ. ಆದರೆ ನಿಮ್ಮ ವಯಸ್ಸು 25 ವರ್ಷ ದಾಟಿರಬಾರದು. 25 ವರ್ಷದೊಳಗಿನವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅದಕ್ಕೆ ನೀವು ಮಾಡಬೇಕಾಗಿರೋದು ಇಷ್ಟೇ..
25 ವರ್ಷದೊಳಗಿನ ಯುವಕರು ಯಾರು ಗೋವಿಂದ ನಾಮವನ್ನು ಒಂದು ಕೋಟಿ ಕೈ ಬರವಣಿಗೆಯಲ್ಲಿ ಬರೆಯುತ್ತಾರೆಯೋ ಅವರಿಗೆ ವಿಐಪಿ ಟಿಕೆಟ್ ನೀಡೋದಕ್ಕೆ ನಿರ್ಧರಿಸಿದೆ. ಕೇವಲ ಅವರಿಗೆ ಮಾತ್ರವಲ್ಲದೇ ಅವರ ಕುಟುಂಬಕ್ಕೂ ವಿಐಪಿ ದರ್ಶನದ ಅವಕಾಶವನ್ನು ನೀಡಲಾಗುತ್ತೆ ಎಂದು ಟಿಟಿಡಿ ಪ್ರಕಟಣೆಯನ್ನು ಹೊರಡಿಸಿದೆ.
ಇದಿಷ್ಟೇ ಅಲ್ಲದೇ, ಶ್ರೀವಾರಿ ದೇವಸ್ಥಾನದ ಟ್ರಸ್ಟ್ 10,01,116 ಬಾರಿ 'ಗೋವಿಂದ ನಾಮಾವಳಿ'ಯನ್ನು ಬರೆಯುವ ಯುವಕರಿಗೆ ಒಂದು ಬಾರಿ ದರ್ಶನದ ಅವಕಾಶವನ್ನು ನೀಡಲು ನಿರ್ಧರಿಸಿದೆ.
ಈ ಬಗ್ಗೆ ಟಿಟಿಡಿಯ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಮಂಡಳಿಯ ನಿರ್ಣಯಗಳ ಬಗ್ಗೆ ಹೇಳಿದ್ದಾರೆ. ಇನ್ನೂ ಗೋವಿಂದ ನಾಮವಳಿಯನ್ನು ಬರೆಯುವ ಮೊದಲ 25 ಮಂದಿ ಅದೃಷ್ಟವಂತರಿಗೆ ಮಾತ್ರ ಈ ಅವಕಾಶ ಕಲ್ಪಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಪ್ರಕಟನೆಗಳನ್ನು ಹೊರಡಿಸಿಲ್ಲ. ಅಧಿಕೃತ ಪ್ರಕಟನೆಯ ನಂತರವಷ್ಟೇ ನಿಯಮಾವಳಿಗಳ ಬಗ್ಗೆ ಗೊತ್ತಾಗಬೇಕಿದೆ.



Click it and Unblock the Notifications
