Latest Updates
-
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ
ಸಂಪ್ರದಾಯ-ಕಟ್ಟುಪಾಡುಗಳ ಮುರಿದು ಸಾವಿರಾರು ಶವಗಳಿಗೆ ಮುಕ್ತಿ ನೀಡುವ ಮಹಿಳೆ..!!
ಮಹಿಳೆಯರು ಅಂದರೆ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ ಎಂಬ ಕಾಲವೊಂದಿತ್ತು. ಆದರೆ ಈಗ ಎಲ್ಲವರೂ ಬದಲಾಗಿದೆ. ಅವರೂ ಸಹ ಶಿಕ್ಷಣದಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ಪುರುಷರಷ್ಟೇ ಸಮಾನವಾಗಿ ದುಡಿಯುತ್ತಿದ್ದಾರೆ. ಪುರುಷರಿಗೂ ಕಡಿಮೆಯಿಲ್ಲದಂತೆ ಸಾಧಿಸಿ ತೋರಿಸುತ್ತಿದ್ದಾರೆ. ಹೀಗಾಗಿ ಮಹಿಳೆ ಈಗ ಸ್ವಾವಲಂಬಿ ಜೀನದ ರೂಪುರೇಷೆಗಳ ಆಕೆಯೇ ರೂಪಿಸಿಕೊಂಡಿದ್ದಾಳೆ.
ಆದ್ರೆ ಮಹಿಳೆ ಇಷ್ಟೆಲ್ಲಾ ಸಾಧಿಸುವುದು ಅಷ್ಟೊಂದು ಸುಲಭದ ದಾರಿಯಾಗಿರಲಿಲ್ಲ. ಇಲ್ಲಿ ಹತ್ತಾರು ಸಂಪ್ರದಾಯ ಮುರಿಯಬೇಕಾಗಿತ್ತು. ಸಾವಿರಾರು ಬಾಯಿಗಳನ್ನು ಆಕೆ ಮುಚ್ಚಿಸಬೇಕಿತ್ತು. ಜೊತೆಗೆ ಅಡೆತಡೆಗಳ ಮುರಿದು ಆಕೆ ಮುನ್ನುಗ್ಗಬೇಕಿತ್ತು. ಹೀಗೆ ಇಂತಹ ಹಲವು ಸಾಹಸಮಯ ದಾರಿಯನ್ನು ಕ್ರಮಿಸಿದ ಮಹಿಳೆಯರಲ್ಲಿ ಧೃತಿಮಾಲಾ ದೇಕಾ ಸಹ ಒಬ್ಬರು.
ಯಾರು ಈ ಧೃತಿಮಾಲಾ ದೇಕಾ? ನೂರಾರು ವರ್ಷಗಳ ಸಂಪ್ರದಾಯ ಮುರಿದು ಪುರುಷ ಪ್ರಧಾನ ಸಮಾಜವನ್ನ ಆಕೆ ಎದುರಿಸಿದ್ದು ಹೇಗೆ? ಆಕೆಯ ಜೀವನ ಕಥೆ ಏನು ಎಂಬುದನ್ನು ಹೇಳುತ್ತೇವೆ ಕೇಳಿ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಇನ್ನೇನು ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ನಮ್ಮ ನಡುವೆ, ಪುರುಷ ಪ್ರಧಾನ ಸಮಾಜ ಎಂಬ ಗುರುತಿನ ನಡುವೆಯೂ ಸಾಧನೆ ಮಾಡಿರುವ ಒಂದಿಷ್ಟು ಮಹಿಳೆಯರನ್ನು ನೆನೆದು ಅವರಿಗೆ ಗೌರವ ಸಲ್ಲಿಸುವ ಪ್ರಯತ್ನ ಮಾಡೋಣ.
ಈ ಧೃತಿಮಾಲಾ ದೇಕಾ ಎಂಬಾಕೆ ಸಾವಿರಾರು ವರ್ಷಗಳ ಹಿಂದೂ ಸಂಪ್ರದಾಯವಾಗಿದ್ದ ಅಂತ್ಯಕ್ರಿಯಾ ಆಚರಣೆಯ ಮುರಿದು ತಮ್ಮ ಜೀವನವನ್ನು ಸ್ಮಶಾನದಲ್ಲಿ ಕಳೆದ ಗಟ್ಟಿಗಿತ್ತಿ. ಅಂತ್ಯಸಂಸ್ಕಾರ, ಶವ ಸಂಸ್ಕಾರದ ವಿಧಿವಿಧಾನಗಳು ಕೇವಲ ಪುರುಷರಿಗೆ ಸೀಮಿತಿವಾಗಿದ್ದ ಕಾಲದಲ್ಲಿ ಈ ಎಲ್ಲಾ ಸಂಪ್ರದಾಯ ಕಟ್ಟು ಪಾಡುಗಳ ದಾಟಿ ಆಕೆ ಒಬ್ಬಂಟಿಯಾಗಿ ಸ್ಮಶಾನ ನಿರ್ವಹಿಸುವ ಕಾರ್ಯ ಮಾಡಿದ್ದಾಳೆ.
ತಂದೆಯ ದಾರಿ ಹಿಂಬಾಲಿಸಿದ ಮಗಳು
ತಂದೆ ಸಹ ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದರು. ಚಿಕ್ಕವಳಾಗಿದ್ದಿನಿಂದ ಧೃತಿಮಾಲಾ ಸ್ಮಶಾನಕ್ಕೆ ತೆರಳುವುದು ತಂದೆಯೊಂದಿಗೆ ಕಾಲ ಕಳೆಯುವುದು ಮಾಡುತ್ತಿದ್ದಳು, ಆದರೆ 2011ರಿಂದ ತಂದೆ ಆಕೆಯನ್ನು ಸ್ಮಶಾನಕ್ಕೆ ಬರುವಂತೆ ಒತ್ತಾಯ ಮಾಡುತ್ತಿದ್ದರು. ಆದರೆ ಈ ಒತ್ತಾಯದ ಹಿಂದಿನ ಉದ್ದೇಶ ಆಕೆಗೆ ತಿಳಿದಿರಲಿಲ್ಲವಂತೆ.
ಆಕೆಯ ಬದಲಾಯಿಸಿತು ಈ ಘಟನೆ
ಅದು 2016 ಅಂದು ಸ್ಮಶಾನಕ್ಕೆ ಬಂದಿದ್ದ ಧೃತಿಮಾಲಾಗೆ ಚಿಕ್ಕ ಹೆಣ್ಣು ಮಗುವೊಂದರೆ ತಂದೆ ಮೃತಪಟ್ಟಿರುವುದು ಕಂಡುಬರುತ್ತದೆ. ಆದರೆ ಶವಕ್ಕೆ ಹೆಗಲು ಕೊಡಲು 4 ಜನ ಇದ್ದರೇ ಹೊರತು ಬೇರೆ ಯಾರು ಅಲ್ಲಿರಲಿಲ್ಲ. ಅಂದರೆ ಆ ಶವಕ್ಕೆ ವಿಧಿವಿಧಾನ ನಡೆಸುವವರೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಎಲ್ಲರು ಸಹಾಯಕರಾಗುತ್ತಾರೆ ಎಂಬುದನ್ನು ಆಕೆ ಅರಿತುಕೊಂಡಳು. ಈ ಘಟನೆಯ ಬಳಿಕ ಆಕೆ ನಿರಂತರವಾಗಿ ಸ್ಮಶಾನಕ್ಕೆ ಬರಲು ಆರಂಭಿಸಿದಳು, ಅಂತ್ಯಸಂಸ್ಕಾರ ನಡೆಸಲು ಮುಂದಾದಳು.
ಧೃತಿಮಾಲಾ ಸೇವೆ ಗುರುತಿಸಿದ ಸರ್ಕಾರ
ಧೃತಿಮಾಲಾ ಮಹಿಳೆಯಾಗಿಯೂ ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ತನ್ನ ಜೀವನ ಮುಡುಪಿಟ್ಟ ಕಾರಣ ಅಸ್ಸಾಂ ಸರ್ಕಾರ ಆಕೆಯ ಸೇವೆಯನ್ನು ಗುರುತಿಸಿತು. ಆಕೆಗೆ 'ಅಸ್ಸಾಂ ಗೌರವ್' ಪ್ರಶಸ್ತಿ ನೀಡಿ ಗೌರವಿಸಿದೆ. ಜೊತೆಗೆ ಅವರಂತೆ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗುವ ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಿದೆ.
ಕೊರೊನಾ ಕಾಲವೆಂಬ ಕೆಟ್ಟ ಕನಸು
ಕೊರೊನಾ ಆರಂಭಗೊಂಡಾಗ ಸ್ಮಶಾನಗಳಲ್ಲಿ ಜಾಗವಿಲ್ಲದಷ್ಟು ಹೆಣಗಳ ರಾಶಿ ಬಿದ್ದಿತ್ತಂತೆ. ಈ ಕಾಲದಲ್ಲಿ ನಿರ್ಭೀತಿಯಿಂದ ಅವರು ಕೆಲಸ ನಿರ್ವಹಿಸಿದ್ದರು. ಕಾಯಕವೇ ಕೈಲಾಸವೆಂದು ತಿಳಿದು ಎಲ್ಲಾ ಕೆಲಸಗಳಲ್ಲು ನಿಷ್ಟೇ ತೋರಿದರು. ಕೋವಿಡ್‌ನಿಂದ ಮೃತಪಟ್ಟವರ ಶವವನ್ನೂ ಅವರ ಕುಟುಂಬಸ್ಥರೇ ಮುಟ್ಟಲು ಹಿಂದು ಮುಂದು ನೋಡುವ ಕಾಲದಲ್ಲಿ ಧೃತಿಮಾಲಾ ಅಂತಹ ಶವಗಳಿಗೆ ಸಂಸ್ಕಾರ ನೆರವೇರಿಸಿ ಮುಕ್ತಿ ನೀಡುವ ಕಾರ್ಯ ಮಾಡಿದ್ದರು. ಈ ಕಾರ್ಯದಲ್ಲಿ ತನಗೆ ನೆಮ್ಮದಿ ಸಿಗುತ್ತಿದೆ ಎಂದು ಆಕೆ ಹೇಳಿದ್ದರು.



Click it and Unblock the Notifications
