Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶಿವಾಲಯಕ್ಕೆ ಹೋದಾಗ ಚಂಡಿ ಪ್ರದಕ್ಷಿಣೆ ಮಾತ್ರ ಮಾಡಬೇಕು , ಏಕೆ?
ದೇವಾಲಯಕ್ಕೆ ಹೋದಾಗ ದೇವಾಲಯದ ಸುತ್ತ ಪ್ರದಕ್ಷಿಣೆ ಬರುತ್ತೇವೆ, ದೇವಾಲಯದ ಸುತ್ತ ಸುತ್ತು ಬರುವುದರಿಂದ ಒಂಥರಾ ಭಕ್ತಿ ಭಾವನೆ ಮನಸ್ಸಿನಲ್ಲಿ ಮೂಡುವುದು. ಆದರೆ ನೀವು ಶಿವ ದೇವಾಲಯಕ್ಕೆ ಹೋದಾಗ ನೀವು ಪ್ರದಕ್ಷಣೆ ಬರುವ ಬದಲಿಗೆ ಚಂಡಿ ಪ್ರದಕ್ಷಿಣೆ ಬರಬೇಕಾಗುತ್ತದೆ. ಈ ಚಂಡಿ ಪ್ರದಕ್ಷಿಣೆ ಹೇಗೆ ಮಾಡಬೇಕು? ಏಕೆ ಶಿವನಿಗೆ ಮಾತ್ರ ಚಂಡಿ ಪ್ರದಕ್ಷಿಣೆ ಮಾಡಲಾಗುವುದು ಎಂದು ನೋಡೋಣ ಬನ್ನಿ:

ಶಿವ ದೇವಾಲಯಕ್ಕೆ ಹೋದಾಗ ಈ ನಿಯಮಗಳನ್ನು ಮರೆಯಬಾರದು
ಶಿವನ ದೇವಾಲಯಕ್ಕೆ ಹೋದಾಗ ಸೋಮ ಸ್ತೋತ್ರವನ್ನು ದಾಟಬಾರದು ಎಂದು ಹೇಳಲಾಗುವುದು. ಅಂದರೆ ಶಿವನಿಗೆ ಅಭಿಷೇಕ ಮಾಡಿದಾಗ ಅಭಿಷೇಕಕ್ಕೆ ಬಳಸಿದ ನೀರು, ಹಾಲು ಹೀಗೆ ಪೂಜೆಗೆ ಬಳಸಿದ ವಸ್ತುಗಳು ಹರಿದು ಬಂದು ಬೀಳುವ ಸ್ಥಳವನ್ನು ದಾಟಬಾರದು ಎಂದು ಹೇಳಲಾಗುವುದು.
ಚಂಡಿ ಪ್ರದಕ್ಷಿಣೆ ಎಂದರೇನು?
ಶಿವಲಿಂಗದ ಅಭಿಷೇಕಕ್ಕೆ ಬಳಸಿದ ಸಾಮಗ್ರಿಗಳು ಹರಿದು ಬಂದು ಬೀಳುವ ಸ್ಥಳ ಅದಾಗಿದ್ದು ಅದನ್ನು ದಾಟಬಾರದು ಎಂದು ಹೇಳಲಾಗುವುದು.
ಚಂಡಿ ಪ್ರದಕ್ಷಿಣೆ ಹೇಗೆ ಮಾಡಬೇಕು?
ಧ್ವಜ ಸ್ತಂಭದ ಬಳಿ ನಿಂತು ಬಲ ಭಾಗಕ್ಕೆ ಚಂಡೀಶ್ವರ ಬಳಿ ಬಂದು ನಂತರ ಅಲ್ಲಿಂದ ಸೋಮಸೂತ್ರ ಬಳಿ ಹೋಗಬೇಕು, ನಂತರ ಚಂಡೀಶ್ವರ ಬಳಿ ಬಂದು ನಂತರ ಮತ್ತೆ ಸೋಮ ಸ್ತೋತ್ರ ಬಳಿ ಹೋಗಬೇಕು. ಚಂಡೀಶ್ವರ ಬಳಿ ಬಂದು ನಂತರ ಧ್ವಜ ಸ್ತಂಭದ ಬಳಿಗೆ, ಧ್ವಜ ಸ್ತಂಭದಿಂದ ಚಂಡೀಶ್ವರ ಬಳಿಗೆ 3 ಬಾರಿ ಹೋಗಬೇಕು.
ಎಷ್ಟು ಬಾರಿ ಚಂಡಿಪ್ರದಕ್ಷಿಣೆ ಮಾಡಬೇಕು?
1 ಅಥವಾ 3 ಬಾರಿ ಚಂಡಿ ಪ್ರದಕ್ಷಿಣೆ ಮಾಡಬಹುದು. ಯಾವುದೇ ಕಾರಣಕ್ಕೆ ಸೋಮ ಸ್ತೋತ್ರ ದಾಟಬಾರದು. ಈ ಸೋಮ ಸ್ತೋತ್ರ ತುಂಬಾನೇ ಪವಿತ್ರವಾದದ್ದು. ನೀವು ಎಷ್ಟೇ ಚಿಕ್ಕ ಶಿವಲಿಂಗ ಖರೀದಿಸಿದರೂ ಅದರಲ್ಲಿ ಚಂಡೀಶ್ವರ ಇರುತ್ತದೆ. ಇದನ್ನು ದಾಟಬಾರದು.
ಚಂಡಿ ಪ್ರದಕ್ಷಿಣೆ ಪ್ರಯೋಜನಗಳೇನು?
ಚಂಡ ಪ್ರದಕ್ಷಿಣೆ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುವುದು ಎಂದು ಹೇಳಲಾಗುವುದು.
ಶಿವನ ನೋಡುವ ಮೊದಲಿಗೆ ನಂದಿಗೆ ನಮಸ್ಕರಿಸಬೇಕು?
ನೀವು ಶಿವಾಲಯಕ್ಕೆ ಹೋದಾಗ ಅಲ್ಲೊಂದು ಘಂಟೆ ಇರುತ್ತದೆ. ಅದನ್ನು ಒಂದು ಬಾರಿ ಮಾತ್ರ ಬಡಿಯಬೇಕು, ಅದರಿಂದ ಬರುವ ಶಬ್ದ ಓಂಕಾರದಂತೆ ಕೇಳಿಸುತ್ತದೆ. ನಂತರ ನಂದಿಗೆ ನಮಸ್ಕರಿಸಿ ಶಿವನ ಮೂರ್ತಿ ಬಳಿ ಹೋಗಿ ನಮಸ್ಕರಿಸಬೇಕು. ನಂದಿ ಕಿವಿಗೆ ಇಷ್ಟಾರ್ಥಗಳನ್ನು ಹೇಳಿದರೆ ಶಿವನಿಗೆ ಅದು ಕೇಳಿಸುತ್ತದೆ, ಶಿವ ನಿಮ್ಮ ಇಷ್ಟಾರ್ಥಗಳು ನೆರವೇರುವುದು ಎಂದು ಹೇಳಲಾಗುವುದು.



Click it and Unblock the Notifications
