Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಗಣೇಶನಿಗೆ ಎಷ್ಟು ಗರಿಕೆ ಅರ್ಪಿಸಬೇಕು? ಬೆಸ ಸಂಖ್ಯೆಯಲ್ಲಿ ಅರ್ಪಿಸುವುದೇಕೆ?
ಗಣೇಶನ ಪೂಜೆಗೆ ನೀವು ಏನೇ ಅರ್ಪಿಸಿ, ಆದರೆ ಗರಿಕೆ ಅರ್ಪಿಸಲಿಲ್ಲ ಎಂದರೆ ಗಣೇಶನ ಪೂಜೆ ಕಂಪ್ಲೀಟ್ ಆಗುವುದಿಲ್ಲ ಎಂದು ಹೇಳಲಾಗುವುದು. ಗಣೇಶನ ಆರಾಧನೆಯಲ್ಲಿ ಗರಿಕೆಗೆ ಏಕಿಷ್ಟು ಮಹತ್ವ? ಎಂದು ನೋಡೋಣ ಬನ್ನಿ:
ಪುರಾಣದ ಪ್ರಕಾರ ಗಣೇಶನಿಗೆ ಗರಿಕೆ ಏಕೆ ಪ್ರಿಯ?
ದೇವಲೋಕದ ಹಾಡುಗಾರ್ತಿ ಶ್ರೀ ಗಣಪತಿಯನ್ನು ಮದುವೆಯಾಗಲು ಬಯಸುತ್ತಾಳೆ, ಆದರೆ ಗಣಪತಿ ಅದನ್ನು ತಿರಸ್ಕರಿಸುತ್ತಾನೆ. ಇದರಿಂದ ಕೋಪಗೊಂಡ ಅವಳು ಗಣೇಶನಿಗೆ ಶಾಪ ನೀಡುತ್ತಾಳೆ. ಇದರಿಂದ ಗಣೇಶನ ಮೈಯೆಲ್ಲಾ ಉರಿ-ಉರಿಯಾಗುತ್ತದೆ. ಈ ಉರಿಯನ್ನು ಸಹಿಸಲಾಗದೆ ಒದ್ದಾಡುತ್ತಿರುವಾಗ ಗರಿಕೆಯನ್ನು ಗಣಪತಿಯ ತಲೆಗೆ ಮೇಲೆ ಇಟ್ಟಾಗ ಉರಿಯೆಲ್ಲಾ ಕಡಿಮೆಯಾಗುವುದು. ಅಂದಿನಿಂದ ಗಣಪತಿಗೆ ಗರಿಕೆಯೆಂದರೆ ತುಂಬಾನೇ ಇಷ್ಟ.

ಆಯುರ್ವೇದಲ್ಲಿ ಗರಿಕೆಯ ಮಹತ್ವದ ಕುರಿತು ಈ ರೀತಿ ಹೇಳಲಾಗಿದೆ
ದೇಹ ಉರಿ-ಉರಿಯಾಗುತ್ತಿದ್ದರೆ ಗರಿಕೆಯ ಜ್ಯೂಸ್ ಕುಡಿದರೆ ಕಡಿಮೆಯಾಗುವುದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.
ಧಾರ್ಮಿಕ ಕಾರಣ
ಗರಿಕೆಯನ್ನು ಗಣಪನ ಮೂರ್ತಿ ಬಳಿ ಇಟ್ಟಾಗ ಆ ಮೂರ್ತಿಯ ದೈವ ಚೈತನ್ಯ ಹೆಚ್ಚಾಗುವುದು ಎಂದು ಹೇಳಲಾಗುವುದು . ನಾವು ಆರಾಧಿಸುವ ದೇವರ ಮೂರ್ತಿಗೆ ದೇವತ್ವವು ಹೆಚ್ಚಾಗಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ದೇವರಿಗೆ ದೇವತೆಗಳ ತತ್ತ್ವವನ್ನು ಹೆಚ್ಚಿಸುವ ವಸ್ತುಗಳನ್ನು ಅರ್ಪಿಸಲಾಗುವುದು. ಗರಿಕೆಯಲ್ಲಿ ಗಣೇಶ ತತ್ತ್ವವನ್ನು ಹೆಚ್ಚಿಸುವ ಆಕರ್ಷಿಸುವ ಅಂಶವಿರುವುದರಿಂದ ಗರಿಕೆಯನ್ನು ಅರ್ಪಿಸಲಾಗುವುದು.
ಎಂಥ ಗರಿಕೆಯನ್ನು ಗಣಪತಿಗೆ ಅರ್ಪಿಸಬೇಕು?
ನೀವು ಗಣಪತಿಗೆ ಗರಿಗೆಯನ್ನು ಅರ್ಪಿಸುವಾಗ 3, 5 ಅಥವಾ 7, 21 ಗರಿಕೆಯನ್ನು ಅರ್ಪಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು. ನೀವು ಎಳೆ ಗರಿಕೆಯನ್ನು ಗಣಪನಿಗೆ ಅರ್ಪಿಸಬೇಕು, ಬಲಿತಿರುವ ಗರಿಕೆ ಹುಲ್ಲಿನಂತೆ ಇರುತ್ತದೆ, ಆದ್ದರಿಂದ ಗಿಡ್ಡವಾದ, ಎಳೆ ಗರಿಕೆಯನ್ನು ಬಳಸಲಾಗುವುದು. ಗರಿಕೆಯನ್ನು ಒಟ್ಟಿಗೆ ಕಟ್ಟಿ ದೇವರಿಗೆ ಅರ್ಪಿಸಲಾಗುವುದು. ದೂರ್ವೆಗಳನ್ನು ಒಟ್ಟಿಗೆ ಕಟ್ಟುವುದರಿಂದ ಗರಿಕೆಯ ಸುಗಂಧ ತುಂಬಾ ಸಮಯ ಉಳಿಯುತ್ತದೆ. ನೀವು ಗರಿಕೆ ತುಂಬಾ ಸಮಯ ತಾಜಾವಾಗಿರಲು ನೀರಿನಲ್ಲಿ ಅದ್ದಿ ಬಳಸಿದರೆ ಒಳ್ಳೆಯದು.
ಗಣಪತಿಗೆ ಗರಿಕೆಯನ್ನು ಹೇಗೆ ಅರ್ಪಿಸಬೇಕು?
ನೀವು ಗಣಪತಿಯ ಮುಖ ಬಿಟ್ಟು ಇಡೀ ಮೈಯನ್ನು ಗರಿಕೆಯಿಂದ ಅಲಂಕರಿಸಬಹುದು. ಗರಿಕೆಯ ಸುವಾಸನೆ ಮೂರ್ತಿಯ ಸುತ್ತಲೂ ಹರಡುವುದು. ನೀವು ಗಣಪತಿಗೆ ಗರಿಕೆಯನ್ನು ಅರ್ಪಿಸಿದರೆ ದಿನಾ ಬದಲಾಯಿಸುವ ಅಗ್ಯತವಿಲ್ಲ, 3 ದಿನಕ್ಕೊಮ್ಮೆ ಬದಲಾಯಿಸಿದರೆ ಸಾಕು.
ಗಣೇಶನಿಗೆ ಗರಿಕೆಯನ್ನು ಬೆಸ ಸಂಖ್ಯೆಯಲ್ಲಿ ಬಳಸಲು ಕಾರಣವೇನು?
ಬೆಸ ಸಂಖ್ಯೆಗಳಲ್ಲಿ ಶಕ್ತಿ ಹೆಚ್ಚು ಎಂದು ಹೇಳಲಾಗುವುದು. ಬೆಸ ಸಂಖ್ಯೆಯಲ್ಲಿ ಗರಿಕೆಯನ್ನು ಅರ್ಪಿಸುವುದರಿಂದ ಮೂರ್ತಿಯಲ್ಲಿ ಶಕ್ತಿ ಹೆಚ್ಚಾಗುವುದು. ಗಣಪನಿಗೆ ಹೆಚ್ಚಾಗಿ 21 ಗರಿಕೆಗಳನ್ನು ಅರ್ಪಿಸಲಾಗುವುದು. 21 ಅಂದರೆ ಸಂಖ್ಯಾಶಾಸ್ತ್ರ ಪ್ರಕಾರ ನೋಡುವುದಾದರೆ 2+1=3 ಸಂಖ್ಯೆ ಬರುತ್ತದೆ. ಗಣಪತಿಯು 3 ಸಂಖ್ಯೆ ಸಂಬಂಧಿಸಿದ್ದಾಗಿದೆ, ಆದ್ದರಿಂದ ಬೆಸ ಸಂಖ್ಯೆಯಲ್ಲಿ ಗಣಪನಿಗೆ ಗರಿಕೆಯನ್ನು ಅರ್ಪಿಸಲಾಗುವುದು.



Click it and Unblock the Notifications
