Latest Updates
-
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು! -
ಅನುಷ್ಕಾ ಶರ್ಮಾ ಫ್ಲೋರಲ್ ಲುಕ್: ಸ್ಟೇಡಿಯಂನಲ್ಲಿ ಮಿಂಚಲು ಹೀಗೆ ಮಾಡಿ
ಸನಾತನ ಧರ್ಮ ಎಂದರೇನು? ಅದರ 5 ನಿಯಮಗಳೇನು?
ಸನಾತನ ಧರ್ಮ ಎಂದರೇನು? ಅದೊಂದು ಧರ್ಮವೇ ಎಂದು ನೋಡುವುದಾದರೆ ಅಲ್ಲ, ಸನಾತನ ಧರ್ಮ ಎಂಬುವುದು ಬದುಕು ಹೇಗಿರಬೇಕೆಂದು ಹೇಳುವ ನಿಯಮಗಳಾಗಿವೆ. ಈಗೀನ ಕಾಲದಲ್ಲಿ ನಿಯಮಗಳೆಂದರೆ ಪೋಲಿಸ್, ಕೋರ್ಟ್, ಸಂವಿಧಾನ ಎಂಬುವುದಿದೆ, ಆದರೆ ಆಗೀನ ಕಾಲದಲ್ಲಿ ಈ ಸನಾತನ ಧರ್ಮದಲ್ಲಿ ಕೆಲವೊಂದು ನಿಯಮಗಳನ್ನು ಹೇಳಲಾಗಿತ್ತು, ಆ ನಿಯಮಗಳು ಹೇಗಿರಬೇಕು ಎಂದು ತಿಳಿಸುವಂತಿದೆ, ಅಲ್ಲದೆ ಜಾತಿ-ಧರ್ಮದ ಕಟ್ಟಳೆ ಮೀರಿ ಎಲ್ಲಾ ಮನುಜರಿಗೆ ಅನ್ವಯಿಸುವಂತಿದೆ. ಕಾಲಕಾಲಕ್ಕೆ ತಕ್ಕಂತೆ ಜನರು ತಮಗೆ ಬೇಕಾದಂತೆ ಈ ನಿಯಮಗಳನ್ನು ಬದಲಾಯಿಸುತ್ತಲೇ ಹೋದರು.

ಸನಾತನ ಧರ್ಮದ ನಿಯಮಗಳೇನು ಎಂದು ನೋಡುವುದಾದರೆ....
ಸನಾತನ ಧರ್ಮದ ಜೀವನದ ಈ 5 ಮೌಲ್ಯಗಳನ್ನು ಹೇಳುತ್ತದೆ ಅವುಗಳೆಂದರೆ ತಪಸ್ಸು, ದಾನ, ಅರ್ಜವ, ಅಹಿಂಸಾ, ಸತ್ಯ ವ್ಯಾಖ್ಯಾನ
ತಪಸ್ ಅಥವಾ ತಪಸ್ಸು ಎಂದರೆ ದೇವರಿಗೆ ಅಥವಾ ನಿಮ್ಮ ಕೆಲಸಕ್ಕೆ ನೀವು ನಿಮ್ಮನ್ನು ಸಮರ್ಪಿಸಿ
ದಾನ: ಕೈಯಲ್ಲಾದ ದಾನವನ್ನು ಮಾಡಿ
ಅಹಿಂಸಾ: ಯಾರಿಗೂ ಹಿಂಸೆ ಮಾಡಬೇಡಿ
ಅರ್ಜವ ಎಂದರೆ: ನೇರವಾಗಿ ಮಾತನಾಡಿ
ಸತ್ಯ ವ್ಯಾಖ್ಯಾನ: ಯಾವಾಗಲೂ ಸತ್ಯವನ್ನೇ ಹೇಳಿ
ಇವು ಸನಾತನ ಧರ್ಮದ ಪ್ರಮುಖ ಉದ್ದೇಶಗಳಾಗಿವೆ. ಈ ನಿಯಮಗಳು ಜಾತಿ-ಧರ್ಮವನ್ನು ಮೀರಿ ಎಲ್ಲರಿಗೂ ಅನ್ವಯಿಸುವಂತಿದೆ. ಅಲ್ಲದೆ ಸನಾತನ ಧರ್ಮ 'ದಯೆ'ಯ ಮಹತ್ವವನ್ನು ಹೇಳುತ್ತದೆ. ಯಾವುದೇ ಕೆಟ್ಟ ಕಾರ್ಯಗಳನ್ನು ಮಾಡಬೇಡಿ ಎಂಬುವುದನ್ನು ಈ ಸನಾತನ ಧರ್ಮ ಹೇಳುತ್ತದೆ.
ಸನಾತನ ಎಂಬ ಶಬ್ದ ಭಗವದ್ಗೀತೆಯಲ್ಲಿ ಬಳಸಲಾಗಿದೆ. ಸನಾತನ ಎಂದರೆ ಆತ್ಮ ಎಂದರ್ಥ. ಶ್ರೀಕೃಷ್ಣನು ಅರ್ಜುನನಿಗೆ ಬದುಕಿನ ಸಾರವನ್ನು ತಿಳಿಸಿರುವ ವಿಷಯಗಳು ಭಗವದ್ಗೀತೆಯಲ್ಲಿದೆ. ಸನಾತನ ಧರ್ಮ ಎಂದುವುದು ಸತ್ಯದ ನಡೆ ಹಾಗೂ ಅಹಿಂಸೆಗೆ ಒತ್ತು ಕೊಡುತ್ತದೆ.
ಭಗವದ್ಗೀತೆಯಲ್ಲಿ ಸನಾತನ ಧರ್ಮದ ಉಲ್ಲೇಖವಿದೆ, ಭಗವದ್ಗೀತೆ ಕೂಡ ಎಲ್ಲಾ ಧರ್ಮಗಳನ್ನು ಮೀರಿ ಬದುಕಿನ ಮೌಲ್ಯವನ್ನು ತಿಳಿಸುತ್ತದೆ.
ಭಗವದ್ಗೀತೆಯಲ್ಲಿ ಹೇಳಿರುವ ಅಂಶಗಳೆಂದರೆ
* ತಪ್ಪಾಗಿ ಯೋಚಿಸುವುದೇ ಜೀವನದ ಸಮಸ್ಯೆ
* ಸರಿಯಾದ ಜ್ಞಾನವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ
* ಅಭಿವೃದ್ಧಿ ಹಾಗೂ ಬೆಳವಣಿಗೆಯಾಗಲು ನಿಸ್ವಾರ್ಥವೊಂದೇ ದಾರಿ
* ಧರ್ಮಸಂಸ್ಥಾಪನೆಗೆ ಭಗವಂತ ಅವತಾರ ಎತ್ತುತ್ತಾನೆ
* ಅಹಂಕಾರದಿಂದ ಹೊರಬಂದು ಫಲದಾಸೆವಿಲ್ಲದೆ ಕರ್ಮವನ್ನು ಮಾಡಬೇಕು
* ಧ್ಯಾನಸಾಧಕನಿಗೆ ಕರ್ಮ ಸಾಧನೆ ಮಾಡಲು ಸಾಧ್ಯ
* ಮೊದಲು ನೀನ್ಯಾರು ಎಂಬುವುದನನ್ನು ತಿಳಿದಿಕೋ
* ಪ್ರಯತ್ನ ಬಿಡಬೇಡ
ಇವೆಲ್ಲಾ ಬೋಧನೆಗಳು ಎಲ್ಲಾ ಮನುಜರಿಗೆ ಅನ್ವಯಿಸುತ್ತದೆ. ಆದ್ದರಿಂದ ಹೇಗೆ ಬದುಕಬೇಕು ಎಂಬ ನಿಯಮಗಳೇ ಸನಾತನ ಧರ್ಮ.
ಪ್ರತಿಯೊಂದ ಯುಗದಲ್ಲೂ ಧರ್ಮ ರಕ್ಷಣೆಗೆ ಭಗವಂತ ಅವತರಿಸುತ್ತಾನೆ ಎಂಬ ನಂಬಿಕೆಯಿದೆ, ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳುತ್ತಾನೆ
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
ಯಾವಾಗ ಧರ್ಮದ ಅವನತಿಯಾಗುವುದೋ ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ.
- ಭಗವಾನ್ ಶ್ರೀಕೃಷ್ಣ, ಭಗವದ್ಗೀತೆ.



Click it and Unblock the Notifications











